Search
  • Follow NativePlanet
Share
» »ಚಳಿಗಾಲದಲ್ಲಿ ಭೇಟಿ ಕೊಡಬಹುದಾದಂತಹ ಕರ್ನಾಟಕದ ಅಪೂರ್ವ 8 ಚಳಿಗಾಲದ ತಾಣಗಳು

ಚಳಿಗಾಲದಲ್ಲಿ ಭೇಟಿ ಕೊಡಬಹುದಾದಂತಹ ಕರ್ನಾಟಕದ ಅಪೂರ್ವ 8 ಚಳಿಗಾಲದ ತಾಣಗಳು

ಚಳಿಗಾಲದಲ್ಲಿ ಕರ್ನಾಟಕದಲ್ಲಿ ಪ್ರವಾಸ ಮಾಡಲು ಅತ್ಯುತ್ತಮವಾದ ಸ್ಥಳಗಳ ಹುಡುಕಾಟದಲ್ಲಿದ್ದಿರಾ?

ರಜಾದಿನವು ದಿನನಿತ್ಯದ ಸದ್ದು ಗದ್ದಲಗಳಿಂದ ಕೂಡಿದ ಬ್ಯುಸಿ ಜೀವನದ ದಿನಚರಿಯಿಂದ ಮುಕ್ತಗೊಳ್ಳಲು ಇರುವಂತಹ ಹಾಗೂ ವಿಶ್ರಾಂತಿ ಪಡೆಯಲು ಎಲ್ಲರೂ ಕಾಯುತ್ತಿರುವ ದಿನವಾಗಿರುತ್ತದೆ. ಪ್ರಾಪಂಚಿಕ ಕೆಲಸದಿಂದ ವಿರಾಮ ತೆಗೆದುಕೊಳ್ಳುತ್ತಾ ನಿಮ್ಮ ಕುಟುಂಬದವರು ಮತ್ತು ನಿಮ್ಮ ಸ್ನೇಹಿತರೊಡನೆ ಕೆಲವು ಉತ್ತಮ ಸಮಯವನ್ನು ಕಳೆಯುವುದು ಖಂಡಿತವಾಗಿಯೂ ಬಹಳ ಮುಖ್ಯವಾದದ್ದಾಗಿದೆ. ನೀವು ಒಮ್ಮೆಗೆ ಕರ್ನಾಟಕದಲ್ಲಿ ಚಳಿಗಾಲದಲ್ಲಿ ಭೇಟಿ ನೀಡಲು ಸೂಕ್ತವಾದಂತಹ ಸ್ಥಳಗಳು ಹೆಚ್ಚಿನ ಸಂಖ್ಯೆಯಲ್ಲಿ ಎಂದು ತಿಳಿದಿರಬಹುದು ಅಲ್ಲವೆ? ಕರ್ನಾಟಕವು ಪ್ರಯಾಣಿಸಲು ಅಥವಾ ಪ್ರವಾಸ ಮಾಡಲು ಇಷ್ಟಪಡುವವರಿಗೆ ಗಮ್ಯಸ್ಥಾನಗಳ ಅಮೂಲ್ಯವಾದ ಮಿಶ್ರಣವನ್ನು ಹೊಂದಿದೆ.

ನಿಮ್ಮ ರಜಾದಿನಗಳನ್ನು ಅವಿಸ್ಮರಣೀಯಗೊಳಿಸಲು, ಕರ್ನಾಟಕದಲ್ಲಿ ಅತ್ಯುತ್ತಮವಾದ ಹಾಗೂ ಅಪೂರ್ವವಾದ 8 ಚಳಿಗಾಲದ ತಾಣಗಳಿದ್ದು, ಇವುಗಳಿಗೆ ಭೇಟಿ ಕೊಡಲೇಬೇಕು ಎನ್ನುವಂತಹುದಾಗಿವೆ.

ಚಿಕ್ಕಮಗಳೂರು

ಚಿಕ್ಕಮಗಳೂರು

ಚಿಕ್ಕಮಗಳೂರು ಕರ್ನಾಟಕದ ಅತ್ಯಂತ ಪ್ರಸಿದ್ದ ಗಿರಿಧಾಮವಾಗಿದ್ದು, ಇದರ ತಾಜಾ ಮತ್ತು ಪ್ರಶಾಂತವಾದ ಪರಿಸರವು ಅತ್ಯುತ್ತಮವಾದ ಚಳಿಗಾಲದ ತಾಣವನ್ನಾಗಿಸಿದೆ. ನೀವು ಇಲ್ಲಿ ವಿರಾಮದ ಸಮಯದಲ್ಲಿ ಬೆಟ್ಟಗಳ ಮೇಲೆ ಟ್ರಕ್ಕಿಂಗ್, ಅಥವಾ ಹೈಕಿಂಗ್ ಮಾಡಬಹುದು ಅದರ ಜೊತೆಗೆ ಇಲ್ಲಿ ಉತ್ತಮವಾದ ಆಹಾರವನ್ನು ಪಡೆಯಬಹುದು ಅಥವಾ ಕುದುರೆಮುಖ ರಾಷ್ಟ್ರೀಯ ಉದ್ಯಾನವನಕ್ಕೆ ಒಂದು ದಿನದ ಪ್ರವಾಸ ಆಯೋಜಿಸಿ.ಮತ್ತು ಭದ್ರ ನದಿಯಲ್ಲಿ ರಾಪ್ಟಿಂಗ್ ಮಾಡಿ. ನೀವು ಬೆಂಗಳೂರಿಗರಾಗಿದ್ದಲ್ಲಿ, ಸುದೀರ್ಘ ವಾರಾಂತ್ಯದಲ್ಲಿ ಎಲ್ಲಾದರೂ ಹೋಗಬೇಕೆಂದುಕೊಂಡಿದ್ದಲ್ಲಿ, ಚಿಕ್ಕಮಗಳೂರು ನಿಮಗಾಗಿ ಅತ್ಯುತ್ತಮ ತಾಣವಾಗಿದ್ದು ನಿಮ್ಮ ಪ್ರೀತಿ ಪಾತ್ರರೊಡನೆ ಉತ್ತಮ ಸಮಯವನ್ನು ಕಳೆಯಲು ಸೂಕ್ತವಾದ ಸ್ಥಳವಾಗಿದೆ.

ಸಾವಣದುರ್ಗ

ಸಾವಣದುರ್ಗ

ಸಾವಣದುರ್ಗವು ಏಷ್ಯಾದಲ್ಲೇ ಅತ್ಯಂತ ಪ್ರಭಾವಶಾಲಿಯಾದ ಏಕಶಿಲಾ ರಚನೆ ಎನಿಸಿದೆ. ಇದು ನಗರವಾಸಿಗಳಲ್ಲಿ ಟ್ರಕ್ಕಿಂಗ್ ಗಾಗಿ ಹೆಸರುವಾಸಿಯಾಗಿದೆ. ಈ ಬೆಟ್ಟದ ತುತ್ತತುದಿಗೆ ಹತ್ತುವುದು ಸವಾಲಿನ ಕೆಲಸವಾಗಿದ್ದು ಈ ಬೆಟ್ಟದ ತುದು ತಲುಪಲು ಸುಮಾರು ಸುಮಾರು ಕನಿಷ್ಟ 2-3 ತಾಸುಗಳು ಬೇಕಾಗುವುದು. ಈ ಬಂಡೆಯಿರುವ ಸ್ಥಳದ ಭೇಟಿಯು ನಿಮ್ಮ ಆಸೆಯನ್ನು ಪೂರೈಸುವುದರಲ್ಲಿ ಸಂಶಯವೇ ಇಲ್ಲ ಹಾಗೂ ನಿಮ್ಮ ದಿನ ನಿತ್ಯದ ಕೆಲಸದಿಂದ ಹೆಚ್ಚು ಅಗತ್ಯವಿರುವ ವಿರಾಮವನ್ನು ನೀಡುತ್ತದೆ.

ಸಕಲೇಶಪುರ

ಸಕಲೇಶಪುರ

ಈ ಮಂಜುಭರಿತ ಗಿರಿಧಾಮವು ಪ್ರಕೃತಿಯ ಒಂದು ಮಾಯೆ ಎನ್ನಬಹುದು. ಪ್ರಕೃತಿಯ ಮಡಿಲಲ್ಲಿ ಹಾಗೂ ನಿಸರ್ಗದ ಸಂಗೀತವನ್ನು ಆಲಿಸುತ್ತಾ ಸಮಯ ಕಳೆಯಲು ಬಯಸುವ ಪ್ರಕೃತಿ ಪ್ರೇಮಿಗಳಿಗೆ ಈ ಸ್ಥಳವು ಒಂದು ವರವೆನ್ನಬಹುದು. ಹಳ್ಳಿಗಾಡಿನ ಆಕರ್ಷಣೆಯ ನಡುವೆ ಅನೇಕ ಬೆರಗುಗೊಳಿಸುವ ನೈಸರ್ಗಿಕ ಅಡಗುತಾಣಗಳೊಂದಿಗೆ ಬೆಸೆದುಕೊಂಡಿರುವ ಈ ತಾಣವು ಕರ್ನಾಟಕದಲ್ಲಿ ಚಳಿಗಾಲದಲ್ಲಿ ಭೇಟಿ ಕೊಡಲು ಪರಿಪೂರ್ಣ ತಾಣವಾಗಿದ್ದು, ಈ ಗಿರಿಧಾಮದ ನೈಸರ್ಗಿಕ ಸೌಂದರ್ಯಕ್ಕೆ ಯಾವುದೇ ಪ್ರತಿಸ್ಪರ್ಧಿ ಇಲ್ಲ.

 ಮಡಿಕೇರಿ

ಮಡಿಕೇರಿ

ಮಡಿಕೇರಿಯು ಒಂದು ವಿಶಾಲವಾಗಿ ಹರಡಿಕೊಂಡಿರುವ ಬೆಟ್ಟಗಳಿಂದ ಕೂಡಿದ ಸ್ವರ್ಗವಾಗಿದ್ದು ಪ್ರಕೃತಿಯ ಮಧ್ಯದಲ್ಲಿ ಹಲವಾರು ಪ್ರಶಾಂತವಾದ ತಾಣಗಳನ್ನು ನಿಮಗಾಗಿ ಒದಗಿಸಿಕೊಡುತ್ತದೆ. ಟ್ರೆಕ್ಕಿಂಗ್, ಹೈಕಿಂಗ್, ಮತ್ತು ರಿವರ್ ರಾಫ್ಟಿಂಗ್ ನಂತಹ ಹಲವಾರು ಸಾಹಸಿ ಚಟುವಟಿಕೆಗಳನ್ನು ಒದಗಿಸಿಕೊಡುತ್ತದೆ. ಮಡಿಕೇರಿಯು ನಿಮ್ಮ ಸಾಹಸಿ ಮನೋಭಾವವನ್ನು ತಣಿಸುವ ಒಂದು ಉತ್ತಮವಾದ ಸ್ಥಳವಾಗಿದೆ. ಮಡಿಕೇರಿಯು ವರ್ಷವಿಡೀ ತಣ್ಣನೆಯ ಹವಾಮಾನವನ್ನು ಹೊಂದಿದ್ದರೂ ಸಹ ಚಳಿಗಾಲದಲ್ಲಿ ಮಡಿಕೇರಿಯು ತನ್ನ ನಿಜವಾದ ಜೀವಂತಿಕೆ ಕಳೆಯನ್ನು ತೋರಿಸುತ್ತದೆ. ಆದ್ದರಿಂದ ಕರ್ನಾಟಕದಲ್ಲಿ ಚಳಿಗಾಲದ ಸಮಯದಲ್ಲಿ ಅತ್ಯಂತ ಹೆಚ್ಚಾಗಿ ಭೇಟಿ ಕೊಡಲ್ಪಡುವ ಸ್ಥಳಗಳಲ್ಲಿ ಒಂದೆನಿಸಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X