Search
  • Follow NativePlanet
Share
» »ಸ್ಟ್ರೀಟ್ ಶಾಪಿಂಗ್ ಮಾಡೋದಂದ್ರೆ ಇಷ್ಟನಾ? ಹಾಗಾದ್ರೆ ಇಲ್ಲಿಗೆ ಹೋಗ್ಲೇ ಬೇಕು

ಸ್ಟ್ರೀಟ್ ಶಾಪಿಂಗ್ ಮಾಡೋದಂದ್ರೆ ಇಷ್ಟನಾ? ಹಾಗಾದ್ರೆ ಇಲ್ಲಿಗೆ ಹೋಗ್ಲೇ ಬೇಕು

ಶಾಪಿಂಗ್ ಮಾಡೋದಂದ್ರೆ ಸಣ್ಣ ಮಕ್ಕಳಿಂದ ಹಿಡಿದು ಮುದುಕರವರೆಗೂ ಇಷ್ಟವಾಗುತ್ತೆ. ಆದ್ರೆ ಶಾಪಿಂಗ್ ಮಾಲ್‌ನಲ್ಲಿ ದುಬಾರಿ ಬಟ್ಟೆಗಳನ್ನು ಖರೀದಿಸೋದು ಬಹಳಷ್ಟು ಜನರಿಗೆ ಇಷ್ಟ ಆಗೋದಿಲ್ಲ. ಅದಕ್ಕಾಗಿ ಅವರ ಆಯ್ಕೆ ಯಾವಾಗಲೂ ಸ್ಟ್ರೀಟ್ ಶಾಪಿಂಗ್ ಆಗಿರುತ್ತದೆ.

ಕೈಯಲ್ಲಿ ಕಾಸಿಲ್ವಾ? ಕಡಿಮೆ ಬಜೆಟ್‌ನಲ್ಲಿ ಎಲ್ಲೆಲ್ಲಾ ತಿರುಗಾಡಬಹುದು ಗೊತ್ತಾ?

ಕಮರ್ಶಿಯಲ್ ಸ್ಟ್ರೀಟ್ ಬೆಂಗಳೂರು

ಕಮರ್ಶಿಯಲ್ ಸ್ಟ್ರೀಟ್ ಬೆಂಗಳೂರು

PC: wikipedia

ಬೆಂಗಳೂರಿನ ಫೇಮಸ್ ಸ್ಟ್ರೀಟ್ ಶಾಪಿಂಗ್ ಸ್ಥಳವೆಂದರೆ ಅದು ಕಮರ್ಶೀಯಲ್ ಸ್ಟ್ರೀಟ್. ಹಾಗೆಂದರೆ ಎಂಜಿ ರೋಡ್, ಬ್ರಿಗೆಡ್ ರೋಡ್, ಚಿಕ್ಕಪೇಟೆಯಲ್ಲೂ ಸ್ಟ್ರೀಟ್ ಶಾಪಿಂಗ್ ಇದೆ. ರಸ್ತೆ ಬದಿ ವ್ಯಾಪಾರಸ್ಥರಿಂದ ಸಾಮಾನು ಖರೀದಿಸುವುದರಲ್ಲಿ ಸಾಕಷ್ಟು ಮಹಿಳೆಯರಿಗೆ ಖುಷಿ ನೀಡುತ್ತದೆ.

ಅರ್ಪೋರ ಸ್ಯಾಟರ್ಡೆ ನೈಟ್ , ಗೋವಾ

ಅರ್ಪೋರ ಸ್ಯಾಟರ್ಡೆ ನೈಟ್ , ಗೋವಾ

PC: Klaus Nahr
ಮುಂದೆ ಎಂದಾದರೂ ನೀವು ಗೋವಾಕ್ಕೆ ಹೋದಾಗ ಅಲ್ಲಿ ಬೀಚ್ ವಾಕ್ ಮಾಡುವುದರ ಜೊತೆಗೆ ರಾತ್ರಿ ಹೊತ್ತಲ್ಲಿ ಸ್ಟ್ರೀಟ್ ಶಾಪಿಂಗ್ ಮಾಡಿ. ನಿಮಗೆ ಸ್ಟ್ರೀಟ್ ಶಾಪಿಂಗ್ ಮಾಡೋದು ಇಷ್ಟವಿಲ್ಲವೆಂದರೂ ಒಮ್ಮೆಯಾದರೂ ನೀವು ಇದನ್ನು ಟ್ರೈ ಮಾಡಲೇ ಬೇಕು.

ಫ್ಯಾಶನ್ ಸ್ಟ್ರೀಟ್ ಪುಣೆ

ಫ್ಯಾಶನ್ ಸ್ಟ್ರೀಟ್ ಪುಣೆ

PC:Vedant Gulati
ಎಫ್‌ಸಿ ರೋಡ್‌ನಲ್ಲಿ ತಿರುಗಾಡಿದ ನಂತರ ಫ್ಯಾಶನ್ ಸ್ಟ್ರೀಟ್‌ಗೆ ಹೋಗಿ ಎಲ್ಲಾ ಅಂಗಡಿಗಳನ್ನು ನೋಡಿ ನಂತರ ಅಲ್ಲಿ ತಿನ್ನದೇ ಇರಲಿಕ್ಕಾಗುತ್ತಾ. ಇಲ್ಲಿ ಹೋಗುವ ಪ್ರತಿಯೊಂದು ಗಂಡಂದಿರ ಜೇಬಿಗೆ ಕತ್ತರಿ ಬೀಳೋದರಲ್ಲಿ ಯಾವುದೇ ಸಂದೇಹವಿಲ್ಲ.

ಬಾಪು ಬಜಾರ್, ಜೈಪುರ್

ಬಾಪು ಬಜಾರ್, ಜೈಪುರ್

PC:Daniel Villafruela
ನೀವು ಜೈಪುರ್‌ಗೆ ಹೋಗಿ ಅಲ್ಲಿಯ ಲೆಹಂಗಾ ಚೋಲಿ ತೆಗೆದುಕೊಳ್ಳದೆ ಇರುತ್ತೀರಾ? ಲೆಹಂಗಾ ತೆಗೆದುಕೊಳ್ಳಲು ಬೆಸ್ಟ್ ಸ್ಥಳವೆಂದರೆ ಬಾಪು ಬಜಾರ್. ಪುರುಷ, ಹಾಗು ಮಹಿಳೆಯರ ಸಾಂಪ್ರದಾಯಿಕ ಉಡುಗೆ ತೊಡುಗೆ ಇಲ್ಲಿ ಸಿಗುತ್ತದೆ.

 ಚಾರ್ಮಿನಾರ್, ಹೈದರಾಬಾದ್

ಚಾರ್ಮಿನಾರ್, ಹೈದರಾಬಾದ್

PC: Mouryan
ಚಾರ್ಮಿನಾರ್ ಬಜಾರ್, ಬೇಗಂ ಬಜಾರ್, ಕೋಟಿ ಇವೆಲ್ಲಾ ಹೈದರಾಬಾದ್‌ನಲ್ಲಿರುವ ಮುಖ್ಯ ಸ್ಟ್ರೀಟ್ ಶಾಪಿಂಗ್ ಸ್ಥಳಗಳು. ಮುತ್ತನ್ನು ಕೊಳ್ಳಲು ಉತ್ತಮ ಆಯ್ಕೆಯಾಗಿದೆ. ಬಾರ್ಗೇಯ್‌ನಿಂಗ್ ಮಾಡಲು ಬರುವವರಿಗೆ ಉತ್ತಮ ಸ್ಟ್ರೀಟ್ ಶಾಪಿಂಗ್ ಆಯ್ಕೆ ಇದಾಗಿದೆ.

ಸರೋಜಿನಿ ಮಾರ್ಕೇಟ್, ದೆಹಲಿ

ಸರೋಜಿನಿ ಮಾರ್ಕೇಟ್, ದೆಹಲಿ

PC: youtube

ಸರೋಜಿನಿ ಮಾರ್ಕೇಟ್ ದೆಹಲಿಯ ಫೇಮಸ್ ಸ್ಟ್ರೀಟ್ ಶಾಪಿಂಗ್ ಸ್ಥಳವಾಗಿದೆ. ಇಲ್ಲಿ ಬೇರೆ ಅಂಗಡಿ ಮಳಿಗೆಗಳಿಗೆ ಹೋಲಿಸಿದರೆ ಬಹಳ ಚೀಪ್ ಹಾಗೂ ಬೆಸ್ಟ್ ಬಟ್ಟೆಗಳು ದೊರೆಯುತ್ತದೆ. ಇತರ ಶಾಪ್‌ಗಳಿಗೆ ಹೋಲಿಸಿದರೆ ಇಲ್ಲಿನ ಬೆಲೆ ಬಹಳ ಕಡಿಮೆ ಇರುತ್ತದೆ. ಹಾಗಾಗಿ ಸಾಕಷ್ಟು ಯುವಕ, ಯುವತಿಯರು ಸರೋಜಿನಿ ಮಾರ್ಕೇಟ್‌ನ್ನೇ ತಮ್ಮ ಶಾಪಿಂಗ್ ಸೆಂಟರ್ ಆಗಿಸಿದ್ದಾರೆ.

ನ್ಯೂ ಮಾರ್ಕೇಟ್, ಕೋಲ್ಕತ್ತಾ

ನ್ಯೂ ಮಾರ್ಕೇಟ್, ಕೋಲ್ಕತ್ತಾ

PC: youtube
ಇಲ್ಲಿನ ವಿಶೇಷತೆ ಏನೆಂದರೆ ಇಡೀ ಶಾಪಿಂಗ್ ಸ್ಟ್ರೀಟ್ ಬಾರ್ಗೇನಿಂಗ್‌ನಿಂದ ಕೂಡಿದೆ. ಇಲ್ಲಿ ಯಾವುದೇ ವಾಹನಗಳ ಕಿರಿಕಿ ಇಲ್ಲ. ಗ್ರಾಹಕರು ಆರಾಮವಾಗಿ ಶಾಪಿಂಗ್ ಮಾಡಬಹುದು.

Read more about: india market
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X