Search
 • Follow NativePlanet
Share
» »ಕೈಯಲ್ಲಿ ಕಾಸಿಲ್ವಾ? ಕಡಿಮೆ ಬಜೆಟ್‌ನಲ್ಲಿ ಎಲ್ಲೆಲ್ಲಾ ತಿರುಗಾಡಬಹುದು ಗೊತ್ತಾ?

ಕೈಯಲ್ಲಿ ಕಾಸಿಲ್ವಾ? ಕಡಿಮೆ ಬಜೆಟ್‌ನಲ್ಲಿ ಎಲ್ಲೆಲ್ಲಾ ತಿರುಗಾಡಬಹುದು ಗೊತ್ತಾ?

ಎಲ್ಲಾದರೂ ಪ್ರವಾಸ ಹೋಗುವಾಗ ಎಲ್ಲರಿಗೂ ಕಾಡೋದು ಬಜೆಟ್ ಚಿಂತೆ. ಕೈಯಲ್ಲಿ ಬೇಕಾದಷ್ಟು ಹಣ ಇಟ್ಟುಕೊಳ್ಳದೇ ಪ್ರವಾಸ ಕೈಗೊಳ್ಳಲೂ ಆಗೋದಿಲ್ಲ. ಅಂತಹ ಸಂದರ್ಭದಲ್ಲಿ ಕಡಿಮೆ ಬಜೆಟ್‌ನ ಪ್ರವಾಸದ ಪ್ಲ್ಯಾನ್ ಮಾಡೋದು ಒಳ್ಳೆಯದು. ಹಾಗಾದ್ರೆ ಕಡಿಮೆ ಬಜೆಟ್‌ನಲ್ಲಿ ಹೋಗುವಂತಹ ಸ್ಥಳಗಳು ಯಾವ್ಯಾವು ಇವೆ ಅನ್ನೋದನ್ನು ನಾವು ನಿಮಗೆ ತಿಳಿಸಿ ಕೊಡ್ತೀವಿ.

 

ಡಾರ್ಜೇಲಿಂಗ್ , ಪಶ್ಚಿಮ ಬಂಗಾಳ

ಡಾರ್ಜೇಲಿಂಗ್ , ಪಶ್ಚಿಮ ಬಂಗಾಳ

PC:Suprabha Kumari
ಪಶ್ಚಿಮ ಬಂಗಾಳದಲ್ಲಿರುವ ಡಾರ್ಜಲಿಂಗ್ ಒಂದು ಹಿಲ್‌ಸ್ಟೇಶನ್ ಆಗಿದ್ದು, ರಜಾ ಮಜಾ ಕಳೆಯಲು ಬರುವ ಪ್ರತಿಯೊಬ್ಬರಿಗೂ ನೆಮ್ಮದಿಯನ್ನು ನೀಡುತ್ತದೆ. ಇದು ದೊಡ್ಡ ಟೀ ಎಸ್ಟೇಟ್‌ಗೆ ಹೆಸರುವಾಸಿಯಾಗಿದೆ. ಬೆಟ್ಟ ಹತ್ತುವುದು, ಇನ್ನಿತರ ಸಾಹಸಮಯ ಕ್ರೀಡೆಗಳಿಗೆ ಪ್ರಸಿದ್ಧಿಯಾಗಿದೆ. ಕೊಲ್ಕತ್ತಾದಿಂದ ನ್ಯೂ ಜಲಪೈಗುರಿಗೆ ರೈಲಿನಲ್ಲಿ 350ರೂಪಾಯಿಯಲ್ಲಿ ಪ್ರಯಾಣಿಸಬಹುದು. ನಂತರ ಅಲ್ಲಿಂದ ಡಾರ್ಜಲಿಂಗ್‌ಗೆ ಶೇರಿಂಗ್ ಆಟೋ ಸಿಗುತ್ತದೆ. 100ರಿಂದ 200ರೂ. ತೆಗೆದುಕೊಳ್ಳೂತ್ತಾರೆ. 1000-2000 ರೂ.ಗೆ ರೂಮ್ ಸೌಲಭ್ಯ ಹಾಗೂ ಊಟ ಕೂಡಾ ದೊರೆಯುತ್ತದೆ.

ನೋಡಬೇಕಾಂದತಹ ಸ್ಥಳಗಳು

ನೋಡಬೇಕಾಂದತಹ ಸ್ಥಳಗಳು

PC: Srikumar74

ಪದ್ಮಜ ನಾಯ್ಡು ಹಿಮಾಲಯನ್ ಝೂವಲಾಜಿಕಲ್ ಪಾರ್ಕ್
ಜಪಾನೀಸ್ ಪೀಸ್ ಪಗೋಡಾ
ಮಹಾಕಲ್ ದೇವಾಲಯ
ಕೆಟ್ಟ ಲೂಪ್
ಟೈಗರ್ ಹಿಲ್
ಚಹಾ ತೋಟ


  ಅಲಪ್ಪಿ, ಕೇರಳ

  ಅಲಪ್ಪಿ, ಕೇರಳ

  PC: Shameer Thajudeen
  ಕೇರಳದ ಅಲಪ್ಪಿ ಹೌಸ್‌ ಬೋಟ್‌ಗಳಿಗೆ ಹಾಗೂ ಸೀ ಫುಡ್‌ಗಳಿಗೆ ಹೆಸರುವಾಸಿಯಾಗಿದೆ. ಇದು ಬೆಂಗಳೂರಿನಿಂದ ಸುಮಾರು 594 ಕಿ.ಮೀ ದೂರದಲ್ಲಿದೆ. ಕಡಿಮೆ ಬಜೆಟ್‌ನಲ್ಲಿ ಹೆಚ್ಚಿನ ಎಂಜಾಯ್‌ಮೆಂಟ್‌ನ್ನು ಪಡೆಯಬಲ್ಲದಾದ ಒಂದು ಸ್ಥಳವಾಗಿದೆ.

  ಹೋಗುವುದು ಹೇಗೆ?

  ಹೋಗುವುದು ಹೇಗೆ?

  PC:Mpmanoj
  ಬೆಂಗಳೂರಿನಿಂದ ಅಲಪ್ಪಿಗೆ ಹೋಗಬೇಕಾದರೆ ರೈಲು ಪ್ರಯಾಣವೇ ಬೆಸ್ಟ್, ಸುಮಾರು 400ರೂ.ಯಲ್ಲಿ ನೀವು ಅಲಪ್ಪಿ ತಲುಪಬಹುದು.
  ಹೋಂ ಸ್ಟೇ, ರೆಸಾರ್ಟ್‌ಗೆ ಸುಮಾರು 300ರಿಂದ 900 ರೂ. ತಗುಲುತ್ತದೆ.
  ನೀವು ಕಡಿಮೆ ಬಜೆಟ್‌ನಲ್ಲಿ ಟ್ರಿಪ್ ಮಾಡುತ್ತಿದ್ದೀರೆಂದಾರೆ ಊಟಕ್ಕೆ ಸ್ಟ್ರೀಟ್‌ ಫುಡ್ ತಿನ್ನಬಹುದು. ಇಲ್ಲಿ ಆರೋಗ್ಯಕರ ಸೀ ಫುಡ್ 150-200 ರೂ.ಗೆ ಸಿಗುತ್ತದೆ.

  ಹಂಪಿ, ಕರ್ನಾಟಕ

  ಹಂಪಿ, ಕರ್ನಾಟಕ

  PC:Akash.nakka
  ಬೆಂಗಳೂರಿನಿಂದ ಸುಮಾರು 256 ಕಿ.ಮೀ ದೂರದಲ್ಲಿದೆ. ನಿಮ್ಮ ವೀಕೆಂಡ್ ಪ್ಲ್ಯಾನ್‌ಗೆ ಉತ್ತಮವಾದ ಆಯ್ಕೆ ಇದಾಗಿದೆ. ಐತಿಹಾಸಿಕ ಮಂದಿರಗಳು, ಸ್ಮಾರಕಗಳು ಕಾಣಸಿಗುತ್ತೆ. ಐತಿಹಾಸಿಕ ಸ್ಥಳವಾಗಿರುವುದರಿಂದ ನೋಡಲೇ ಬೇಕಾದ ಸ್ಥಳವಾಗಿದೆ. ಕಡಿಮೆ ಖರ್ಚಿನಲ್ಲೂ ಆಗುತ್ತದೆ. ಹಂಪಿಗೆ ಹೋಗಲು ಬಹಳ ಕಡಿಮೆ ಬೆಲೆಯ ಪ್ರಯಾಣವೆಂದರೆ ರೈಲು ಪ್ರಯಾಣ. ಬೆಂಗಳೂರಿನಿಂದ ರೈಲು ಹತ್ತಿ ಹೊಸಪೇಟೆಯಲ್ಲಿ ಇಳಿಯಬೇಕು. ರೈಲಿಗೆ ಟಿಕೇಟು ದರ 150 ರೂ. ಹೊಸಪೇಟೆಯಿಂದ ಹಂಪಿಗೆ ಬಸ್ ಮೂಲಕ ಹೋಬಬಹುದು. ಇಲ್ಲಿ ಉಳಿಯಲು ಹೋಮ್‌ಸ್ಟೇ ಗೆಸ್ಟ್ ಹೌಸ್ ಸುಮಾರು 500ರಿಂದ 600ರೂ. ಒಳಗೆ ಸಿಗುತ್ತದೆ. ಒಂದು ಇಡೀ ದಿನದ ಊಟ ಸೇರಿ 600ರೂ. ಆಗುತ್ತದೆ.

  ಹಂಪಿಯಲ್ಲಿ ನೋಡಬೇಕಾದ ಸ್ಥಳಗಳು

  ಹಂಪಿಯಲ್ಲಿ ನೋಡಬೇಕಾದ ಸ್ಥಳಗಳು

  PC:DEEPAK PRAKASH
  ವಿಟಲ್ ದೇವಾಲಯ
  ವಿರುಪಾಕ್ಷ ದೇವಾಲಯ
  ಸನ್‌ಪುರ್ ಸರೋವರ
  ಎಲಿಫೆಂಟ್ ಸ್ಟೇಬಲ್ಸ್
  ದರೋಜಿ ಕರಡಿ ಅಭಯಾರಣ್ಯ
  ಕ್ವೀನ್ಸ್ ಬಾತ್

  ಕುರ್ಸೆಯಾಂಗ್, ಪಶ್ಚಿಮ ಬಂಗಾಳ

  ಕುರ್ಸೆಯಾಂಗ್, ಪಶ್ಚಿಮ ಬಂಗಾಳ

  PC:Munmun
  ಕುರ್ಸೆಯಾಂಗ್ ಪಶ್ಚಿಮ ಬಂಗಾಳದಲ್ಲಿನ ಹಿಲ್‌ಸ್ಟೇಶನ್ ಆಗಿದೆ. ತನ್ನ ನೈಸರ್ಗಿಕ ಸೌಂದರ್ಯದ ಮೂಲಕ ಜನರನ್ನು ಸೆಳೆಯುತ್ತದೆ. ಉತ್ತಮ ಟ್ರೆಕ್ಕಿಂಗ್ ಪ್ಲೇಸ್ ಆಗಿದೆ. ಕಡಿಮೆ ಖರ್ಚಿನ ಪ್ರವಾಸಕ್ಕೆ ಸೂಕ್ತವಾಗಿದೆ. ಕೊಲ್ಕತ್ತಾದಿಂದ ನ್ಯೂ ಜಲಪೈಗುರಿಗೆ ರೈಲಿನಲ್ಲಿ ಪ್ರಯಾಣಿಸಬಹುದು. ನಂತರ ಅಲ್ಲಿಂದ ಕ್ಯಾಬ್ ಬುಕ್ ಮಾಡೋದು ಒಳ್ಳೆಯದು. ಇಲ್ಲಿ 600ರಿಂದ 1500ರೂ. ಬಜೆಟ್ ಹೋಟೆಲ್‌ಗಳು ಸಿಗುತ್ತದೆ. ಊಟ ಕೂಡಾ ದಿನಕ್ಕೆ 300ರೂ. ಆಗಬಹುದು.

  ನೋಡಬೇಕಾದ ಸ್ಥಳಗಳು

  ನೋಡಬೇಕಾದ ಸ್ಥಳಗಳು

  PC: Shahnoor Habib Munmun
  ಟೀ ಗಾರ್ಡನ್
  ಈಗಲ್ಸ್ ಕ್ರೇಗ್
  ಫಾರೆಸ್ಟ್ ಮ್ಯೂಸಿಯಂ
  ಡೀರ್ ಪಾರ್ಕ್
  ಚರ್ಚುಗಳು
  ನೇತಾಜಿ ಸುಭಾಷ್ ಚಂದ್ರ ಬೋಸ್ ಮ್ಯೂಸಿಯಂ

  ರಾಮೇಶ್ವರಂ , ತಮಿಳುನಾಡು

  ರಾಮೇಶ್ವರಂ , ತಮಿಳುನಾಡು

  PC:S N Barid
  ಹಿಂದೂಗಳ ಪವಿತ್ರವಾದ ಸ್ಥಳಗಳಲ್ಲಿ ಇದೂ ಒಂದು. ಚಾರ್‌ಧಾಮ್ ಯಾತ್ರದಲ್ಲಿ ರಾಮೇಶ್ವರಂ ಕೂಡಾ ಸೇರುತ್ತದೆ. ರಾಮ ಸೀತಾಳನ್ನು ಕರೆತರಲು ಲಂಕೆಗೆ ಸೇತುವೆ ಕಟ್ಟಿದ್ದು ರಾಮೇಶ್ವರದಲ್ಲೇ ಎನ್ನಲಾಗುತ್ತದೆ. ಚೆನ್ನೈಂನಿಂದ ರಾಮೇಶ್ವರಕ್ಕೆ ಬಹಳ ಕಡಿಮೆ ಖರ್ಚಿನಲ್ಲಿ ಪ್ರಯಾಣಿಸಬಹುದು. ಚೆನ್ನೈನಿಂದ ರಾಮೇಶ್ವರಕ್ಕೆ ಸಾಕಷ್ಟು ಬಸ್‌ ವ್ಯವಸ್ಥೆ ಇದೆ, 200ರಿಂದ 300 ರೂ. ಟಿಕೇಟ್‌ ದರವಿರುತ್ತದೆ. ಇನ್ನು ರಾಮೇಶ್ವರಂನಲ್ಲಿ ಸಾಕಷ್ಟು ರೆಸ್ಟೋರೆಂಟ್‌ಗಳಿವೆ ವಾಸ್ಥವ್ಯ ಹಾಗೂ ಊಟ ಸೇರಿ 1500ರಿಂದ 3000 ವರೆಗೆ ಇರುತ್ತದೆ.

  ರಾಮೇಶ್ವರಂನಲ್ಲಿ ನೋಡಬೇಕಾಗಿರುವ ಸ್ಥಳಗಳು

  ರಾಮೇಶ್ವರಂನಲ್ಲಿ ನೋಡಬೇಕಾಗಿರುವ ಸ್ಥಳಗಳು

  PC:Rohit.fnds1

  ರಾಮನಾಥಸ್ವಾಮಿ ದೇವಸ್ಥಾನ
  ಧನಶೋದಿ ಬೀಚ್
  ಪಂಬನ್ ಸೇತುವೆ
  ಅಗ್ನಿಧರ್ಥಂ
  ರಾಮ್ ಸೇತು
  ಹನುಮಾನ್ ದೇವಾಲಯ

  ಮ್ಯಾಕ್ಲಿಯೋಡ್ ಗಂಜ್ , ಹಿಮಾಚಲ ಪ್ರದೇಶ

  ಮ್ಯಾಕ್ಲಿಯೋಡ್ ಗಂಜ್ , ಹಿಮಾಚಲ ಪ್ರದೇಶ

  PC:Derek Blackadder
  ಮ್ಯಾಕ್ಲಿಯೋಡ್ ಗಂಜ್ ದೆಹಲಿಯಿಂದ ಸುಮಾರು448ಕಿ.ಮೀ ದೂರದಲ್ಲಿದೆ. ಇದೊಂದು ಹಿಲ್ ಸ್ಟೇಶನ್ ಆಗಿದ್ದು, ಮನಸ್ಸಿಗೆ ಶಾಂತಿ ಸಿಗುವಂತಹ ಸ್ಥಳವಾಗಿದೆ. ಇಲ್ಲಿ ಯಾವುದೇ ವಾಹನಗಳ ಸದ್ದಿಲ್ಲ, ಕಿರಿಕಿರಿ ಇಲ್ಲ ಪ್ರಶಾಂತವಾಗಿ ಕಾಲ ಕಳೆಯಬಹುದು. ಸ್ವಲ್ಪ ಸಮಯಕ್ಕಾದರೂ ಜೀವನದ ತೊಂದರೆಗಳನ್ನೆಲ್ಲಾ ಬದಿಗಿಟ್ಟು ನೆಮ್ಮದಿಯಿಂದ ಕಾಲಕಳೆಯಬಹುದು.

  ಇಲ್ಲಿ ನೋಡಬೇಕಾದ ಸ್ಥಳಗಳು

  ಇಲ್ಲಿ ನೋಡಬೇಕಾದ ಸ್ಥಳಗಳು

  PC:Aleksandr Zykov

  ಬಗಾಸು ಫಾಲ್ಸ್
  ತ್ರಿಉಂಡ್ ಹಿಲ್
  ಧರ್ಮಶಾಲ
  ಟಿಬೇಟಿಯನ್ ಮ್ಯೂಸಿಯಂ
  ಕಾಲಚಕ್ರ ದೇವಾಲಯ

  ಇಷ್ಟೆಲ್ಲಾ ಸ್ಥಳ ನೋಡಬೇಕಾದರೆ ಸಾಕಷ್ಟು ಖರ್ಚಾಗಬಹುದು ಎಂದು ನೀವು ಯೋಚಿಸಿರಬಹುದು. ಆದರೆ ಈ ಸ್ಥಳಗಳನ್ನು ಬಹಳ ಕಡಿಮೆ ಬಜೆಟ್‌ನಲ್ಲಿ ತಿರುಗಾಡಿ ಬರಬಹುದು.
  ಟ್ರಾನ್ಸ್‌ಪೋಟೇಶನ್: ಎಲ್ಲಕ್ಕಿಂತ ಕಡಿಮೆಯಲ್ಲಿ ಆಗುವ ಪ್ರಯಾಣವೆಂದರೆ ಬಸ್. 1000ರೂ ,
  ಲಾಡ್ಜಿಂಗ್: 150ರಿಂದ 500 ರೂ.
  ಊಟ: 300ರಿಂದ 700 ರೂ.

  ಪಾಂಡಿಚೇರಿ , ತಮಿಳುನಾಡು

  ಪಾಂಡಿಚೇರಿ , ತಮಿಳುನಾಡು

  PC:Bernard Gagnon
  ಪಾಂಡಿಚೇರಿಗೆ ಪ್ರವಾಸ ಕೈಗೊಳ್ಳಲು ಹಲವಾರು ಕಾರಣಗಳಿವೆ. ಇಲ್ಲಿನ ಬೀಚ್‌, ಬೋಟಿಂಗ್ ಇವೆಲ್ಲಾ ಜನರನ್ನು ತನ್ನತ್ತ ಆಕರ್ಷಿಸುತ್ತದೆ. ಜೊತೆಗೆ ಇಲ್ಲಿ ಆಲ್ಕೋಹಾಲ್ ಕೂಡಾ ತುಂಬಾ ಕಡಿಮೆ ಸಿಗುತ್ತದೆ. ಇಲ್ಲಿ ನೀವು ಸೈಕಲ್‌ನ್ನು ಬಾಡಿಗೆಗೆ ತೆಗೆದುಕೊಂಡು ಸುತ್ತಾಡ ಬಹುದು.

  ಇಲ್ಲಿ ನೋಡಬಹುದಾದ ಸ್ಥಳಗಳು

  ಇಲ್ಲಿ ನೋಡಬಹುದಾದ ಸ್ಥಳಗಳು

  PC:Bernard Gagnon

  ಆರೋವಿಲ್
  ಪ್ಯಾರಡೈಸ್ ಬೀಚ್
  ಬೆಸಿಲಿಕಾ ಆಫ್ ದಿ ಸೇಕ್ರೆಡ್ ಹಾರ್ಟ್ ಆಫ್ ಜೀಸಸ್
  ಸೆರೆನಿಟಿ ಬೀಚ್
  ಎಗ್ಲೀಸ್ ಡೆ ನೊಟ್ರೆ ಡೇಮ್ ಡೆಸ್ ಏಂಜೆಸ್
  ಇಮ್ಯಾಕ್ಯುಲೇಟ್ ಕಾನ್ಸೆಪ್ಷನ್ ಕ್ಯಾಥೆಡ್ರಲ್

  ಚೆನ್ನೈಯಿಂದ ಪಾಂಡಿಚೇರಿಗೆ ರೈಲಿನಲ್ಲಿ ಹೋಗುವುದು ಬಹಳ ಕಂಫರ್ಟೇಬಲ್ ಹಾಗೂ ಕಡಿಮೆ ಬೆಲೆಗೆ ಆಗುತ್ತದೆ. ಇಲ್ಲಿ ಸಾಕಷ್ಟು ಮಧ್ಯಮ ಬಜೆಟ್‌ನ ಹೋಟೇಲ್‌ಗಳಿವೆ. ರುಚಿಯಾದ ಸ್ಟ್ರೀಟ್ ಫುಡ್ ಸುಮಾರು 200 ರೂ. ಒಳಗೆ ಸಿಗುತ್ತದೆ.

  ಕೊಡೈಕೆನಲ್, ತಮಿಳುನಾಡು

  ಕೊಡೈಕೆನಲ್, ತಮಿಳುನಾಡು

  PC:RAGAVAN P
  ನಿಮಗೆ ನಿಮ್ಮ ಸಿಟಿ ಜೀವನದಲ್ಲಿಂದ ಬ್ರೇಕ್ ಬೇಕು ಎಂದು ಅನಿಸಿದ್ದರೆ ಅದಕ್ಕೆ ಬೆಸ್ಟ್ ಆಪ್ಷನ್ ತಮಿಳುನಾಡಿನ ಕೊಡೈಕೆನಾಲ್. ಇಲ್ಲಿಗೆ ಅತ್ಯಂತ ಕಡಿಮೆ ದರದಲ್ಲಿ ಪ್ರಯಾಣ ಬೆಳೆಸಬಹುದು. ಬೆಂಗಳೂರಿನಿಂದ ಸುಮಾರು 650ರಿಂದ 700 ರೂ. ಒಳಗೆ ಕೊಡೈಕೆನಾಲ್ ತಲುಪಬಹುದು. ಅಲ್ಲಿ ಗೆಸ್ಟ್‌ ಹೌಸ್‌ಗೆ 500ರಿಂದ 1000ರೂ. ಇದೆ. ಇನ್ನು ಕೊಡೈಕೆನಾಲ್‌ನಲ್ಲಿ ಟೇಸ್ಟಿಯಾಗಿರುವ ಸ್ಟ್ರೀಟ್ ಫುಡ್ ಸಿಗುತ್ತದೆ. ಅದು ಒಂದು ಪ್ಲೇಟ್‌ಗೆ 100 ರೂ. ಇರುತ್ತದೆ.

  ಆಕರ್ಷಣೀಯ ಸ್ಥಳಗಳು

  ಆಕರ್ಷಣೀಯ ಸ್ಥಳಗಳು

  PC:Googlesuresh

  ಕೊಡೈಕೆನಾಲ್ ಸರೋವರ
  ಪೈನ್ ಫಾರೆಸ್ಟ್
  ಬೆರಿಜಮ್ ಸರೋವರ
  ಪಿಲ್ಲರ್ ರಾಕ್ಸ್
  ಕುರಂಜಿ ಅಂಡವರ್ ದೇವಾಲಯ

   ದುರ್ಷೇಟ್, ಮಹಾರಾಷ್ಟ್ರ

  ದುರ್ಷೇಟ್, ಮಹಾರಾಷ್ಟ್ರ

  ದಕ್ಷಿಣ ಮುಂಬೈಯಿಂದ 76ಕಿ.ಮೀ ದೂರದಲ್ಲಿರು ದುರ್ಷೇಟ್ ಇದೆ. ಹಚ್ಚಹಸಿರಿನಿಂದ ಕೂಡಿರುವ ಈ ಪ್ರದೇಶ ಚಾರಣ ಪ್ರೀಯರಿಗೆ ಉತ್ತಮವಾಗಿದೆ. ಸಾಹಸ ಪ್ರೀಯರಿಗೆ ಇಲ್ಲಿ ಅಂಬಾ ವಾಟರ್ ಫಾಲ್ಸ್ ಕೂಡಾ ಇದೆ.
  ದುರ್ಷೇಟ್ ಮುಂಬೈಯಿಂದ ಹೆಚ್ಚು ದೂರವೇನೂ ಇಲ್ಲ. ನೀವು ಅಲ್ಲಿಂದ ಕ್ಯಾಬ್‌ನ್ನು ಬುಕ್ ಮಾಡಬಹುದು. ಇಲ್ಲಿನ ಹೋಟೆಲ್‌ಗಳಲ್ಲಿ ಉಳಿಯಲು ಒಂದು ರಾತ್ರಿಗೆ1000 ರೂ. ಗಿಂತ ಹೆಚ್ಚು ಇರೋದಿಲ್ಲ. ಇನ್ನು ಆಹಾರಕ್ಕೆ ಇಲ್ಲೂ ಕೂಡಾ ರುಚಿಕರ ಸ್ಟ್ರೀಟ್ ಫುಡ್ ಸಿಗುತ್ತದೆ.

  ಮಾವಲ್, ಮಹಾರಾಷ್ಟ್ರ

  ಮಾವಲ್, ಮಹಾರಾಷ್ಟ್ರ

  ನಿಮಗೆ ನಿಮ್ಮ ಸಿಟಿಯಲ್ಲಿ ಬೋರ್ ಆಗಿದೆ. ಎಲ್ಲಾದರೂ ಹೋಗಿ ಸ್ವಲ್ಪ ಕಾಲ ಕಳೆಯಬೇಕೆಂದೆನಿಸಿದ್ದಲ್ಲಿ ಹೆಚ್ಚೇನು ಪ್ರಸಿದ್ಧಿಯಾಗಿಲ್ಲದ ಸ್ಥಳವನ್ನು ಆಯ್ಕೆ ಮಾಡುವುದು ಒಳ್ಳೆಯದು. ಪ್ರಸಿದ್ಧಿಹೊಂದಿರುವ ಸ್ಥಳಕ್ಕೆ ಖರ್ಚು ಹೆಚ್ಚಾಗುತ್ತದೆ ಆದರೆ ಪ್ರಸಿದ್ಧಿ ಹೊಂದಿಲ್ಲದ ಸ್ಥಳಕ್ಕೆ ಭೇಟಿ ನೀಡುವುದರಿಂದ ಖರ್ಚು ಕೂಡಾ ಕಡಿಮೆಯಾಗುತ್ತದೆ. ಸಹ್ಯಾದ್ರಿ ಬೆಟ್ಟದ ನಡುವೆ ಇರುವುದರಿಂದ ಅನೇಕ ಸಾಹಸಮಯ ಕ್ರೀಡೆಗಳನ್ನು ಮಾಡಬಹುದಾಗಿದೆ.

  ಮಾವಲ್‌ ಗುಹೆ

  ಮಾವಲ್‌ ಗುಹೆ

  PC:Ramnath Bhat
  ಮಾವಲ್‌ಗೆ ಕ್ಯಾಬ್ ಮೂಲಕ ಹೋಗುವುದಾದರೆ ಸುಮಾರು 750ರೂ. ಆಗುತ್ತದೆ. ಲಾಡ್ಜಿಂಗ್‌ಗೆ 500ರಿಂದ 1000ರೂ. ಆಗುತ್ತದೆ . ಮಹಾರಾಷ್ಟ್ರ ಸ್ಟ್ರೀಟ್ ಫುಡ್ ಹಾಗೂ ಫಾಸ್ಟ್ ಫುಡ್‌ಗೆ ಹೆಸರುವಾಸಿಯಾಗಿದೆ. ಹಾಗಾಗಿ ನೀವು ಕಡಿಮೆ ಬೆಲೆಯಲ್ಲಿ ಸ್ಟ್ರೀಟ್ ಫುಡ್ ಆಹಾರ ಸೇವಿಸಬಹುದು.

  ಫ್ರೆಂಡ್ಸ್‌ಜೊತೆ ಕಾಲ ಕಳೆಯೋಕೆ ಚೀಪ್ & ಬೆಸ್ಟ್ ಹ್ಯಾಂಗ್‌ಔಟ್ ಸ್ಪಾಟ್

  Read more about: travel india

  ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more