Search
  • Follow NativePlanet
Share
» »ಕರ್ನಾಟಕದ 7 ಅತ್ಯಂತ ಪೂಜ್ಯನೀಯವಾದ ಯಾತ್ರಾಸ್ಥಳಗಳು

ಕರ್ನಾಟಕದ 7 ಅತ್ಯಂತ ಪೂಜ್ಯನೀಯವಾದ ಯಾತ್ರಾಸ್ಥಳಗಳು

ಶತಮಾನಗಳಿಂದಲೂ ಭಾರತವು ವಿವಿಧ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಜನರು ಉತ್ಸವಗಳು ಮತ್ತು ಹಬ್ಬಗಳ ರೂಪದಲ್ಲಿ ಅಥವಾ ಇನ್ನಿತರ ಧಾರ್ಮಿಕ ಮಹತ್ವಗಳ ರೂಪದಲ್ಲಿ ಆಚರಿಸುತ್ತಾ ಬಂದಿದ್ದಾರೆ. ಆದುದರಿಂದ ಭಾರತದ ಕೆಲವು ಸ್ಥಳಗಳು ದಟ್ಟಣೆಯಿಂದ ಕೂಡಿದ ಹಲವಾರು ದೇವಾಲಯಗಳಿಗೆ ಪ್ರಸಿದ್ದಿಯನ್ನು ಪಡೆದಿದೆ.

ಕರ್ನಾಟಕವೂ ಸಹ ಮೌರ್ಯ, ಚಾಲುಕ್ಯರು, ವಿಜಯನಗರ ಸಾಮ್ರಾಜ್ಯದಂತಹ ಹಲವಾರು ಬಲಿಷ್ಟ ರಾಜವಂಶಗಳ ಆಳ್ವಿಕೆಯ ಅಡಿಯಲ್ಲಿ ಆಳಲ್ಪಟ್ಟಿದೆ. ಈ ರಾಜರುಗಳು ತಮ್ಮ ಹಿಂದೆ ಹಲವಾರು ಸುಂದರವಾದ ವಾಸ್ತುಶಿಲ್ಪಗಳನ್ನು ಬಿಟ್ಟು ಹೋಗಿದ್ದು ಇಂದು ಇವುಗಳಲ್ಲಿ ಕೆಲವು ಸ್ಥಳಗಳು ಪ್ರಮುಖವಾದ ಯಾತ್ರಾಸ್ಥಳಗಳಾಗಿವೆ. ಪ್ರತಿ ವರ್ಷ, ಸಾವಿರಾರು ಯಾತ್ರಿಕರು ಈ ಸ್ಥಳಗಳಿಗೆ ಪ್ರಯಾಣವನ್ನು ಯೋಜಿಸುತ್ತಾರೆ. ನಿಮ್ಮ ರಜೆಯಲ್ಲಿ ಆಧ್ಯಾತ್ಮಿಕ ಅನುಭವಕ್ಕಾಗಿ, ಕರ್ನಾಟಕದ ಈ ಜನಪ್ರಿಯ ಸ್ಥಳಗಳಿಗೆ ಭೇಟಿ ನೀಡಿ.

ಧರ್ಮಸ್ಥಳ

ಧರ್ಮಸ್ಥಳ

ಧರ್ಮಸ್ಥಳವು ಅತ್ಯಂತ ಪ್ರಸಿದ್ದ ದೇವಾಲಯ ಪಟ್ಟಣವಾಗಿದ್ದು ನೇತ್ರಾವತಿ ನದಿ ದಡದಲ್ಲಿ ಈ ಪಟ್ಟಣವು ನೆಲೆಸಿದೆ. ಇದು ಬೆಂಗಳೂರಿನಿಂದ ಸುಮಾರು 300 ಕಿ.ಮೀ ದೂರದಲ್ಲಿದೆ ಮತ್ತು ಇಲ್ಲಿಯ ಧರ್ಮಸ್ಥಳ ದೇವಾಲಯಕ್ಕೆ ಜನಪ್ರಿಯವಾಗಿದೆ. ಈ ದೇವಾಲಯವು ಶಿವ, ಚಂದ್ರನಾಥ ಮಂಜುನಾಥ ಇತ್ಯಾದಿ ದೇವರುಗಳಿಗೆ ಅರ್ಪಿತವಾದ ದೇವಾಲಯಗಳನ್ನು ಹೊಂದಿದೆ.

ಧರ್ಮಸ್ಥಳಕ್ಕೆ ಭೇಟಿ ಕೊಡಲು ಉತ್ತಮ ಸಮಯವೆಂದರೆ ನವೆಂಬರ್ ನಿಂದ ಡಿಸೆಂಬರ್ ಮಧ್ಯದಲ್ಲಿ ಈ ಸಮಯದಲ್ಲಿ ಇಲ್ಲಿಯ ಅತ್ಯಂತ ವೈಭವೋಪೇತ ಲಕ್ಷದೀಪೋತ್ಸವ ಹಬ್ಬವು ಜರಗುತ್ತದೆ. ಈ ಸಮಯದಲ್ಲಿ ದೇವಾಲಯಕ್ಕೆ ಪ್ರತಿದಿನ ಸುಮಾರು 10,000 ಕ್ಕಿಂತಲೂ ಹೆಚ್ಚಿನ ಭಕ್ತರು ಭೇಟಿ ನೀಡುತ್ತಾರೆ.

ಗೋಕರ್ಣಾ

ಗೋಕರ್ಣಾ

ಹೆಚ್ಚು ಕಡಿಮೆ ಕರ್ನಾಟಕದ ಗಡಿಯಲ್ಲಿರುವ ಗೋಕರ್ಣಾವು ಇತ್ತೀಚೆಗೆ ತನ್ನಲ್ಲಿಯ ಬೀಚ್ ಗಳಿಗಾಗಿ ಜನರ ಗಮನ ಸೆಳೆಯುತ್ತಿವೆಯಾದರೂ ಕೂಡಾ ಇದು ಕರ್ನಾಟಕ್ಕದ ಅತ್ಯಂತ ಜನಪ್ರಿಯ ದೇವಾಲಯ ನಗರವಾಗಿದೆ. ಶಿವನಿಗೆ ಅರ್ಪಿತವಾದ ಮಹಾಬಲೇಶ್ವರ ದೇವಾಲಯವು ಈ ಪಟ್ಟಣದ ಅತ್ಯಂತ ಮುಖ್ಯವಾದ ದೇವಾಲಯವಾಗಿದೆ.

ಗೋಕರ್ಣದಲ್ಲಿ ನೀವು ಭೇಟಿ ನೀಡಲೇಬೇಕಾದ ಇತರ ಕೆಲವು ದೇವಾಲಯಗಳೆಂದರೆ ಭದ್ರಕಾಳಿ ದೇವಸ್ಥಾನ, ವೆಂಕಟ್ರಮಣ ದೇವಸ್ಥಾನ, ಮಹಾ ಗಣಪತಿ ದೇವಸ್ಥಾನ, ಇತ್ಯಾದಿ. ನೀವು ಗೋಕರ್ಣದಲ್ಲಿ ಓಂ ಬೀಚ್, ಕುಡ್ಲೆ ಬೀಚ್ ಮುಂತಾದ ಸ್ಥಳಗಳಿಗೆ ಬೀಚ್-ಭೇಟಿಗೆ ಹೋಗಬಹುದು.

ಉಡುಪಿ

ಉಡುಪಿ

ಉಡುಪಿಯು ಸುಂದರ ಕರಾವಳಿ ಪಟ್ಟಣವಾಗಿದ್ದು ಇದು ಇಲ್ಲಿಯ ವಿಭಿನ್ನ ಪಾಕಪದ್ದತಿ ಮತ್ತು ದೇವಾಲಯಗಳಿಗೆ ಹೆಸರುವಾಸಿಯಾಗಿದೆ. ಕೃಷ್ಣ ದೇವಾಲಯವು ಇಲ್ಲಿಯ ಅತ್ಯಂತ ಪ್ರಮುಖ ದೇವಾಲಯಗಳಲ್ಲೊಂದಾಗಿದ್ದು, ಉಡುಪಿ ಶ್ರೀಕೃಷ್ಣ ಮಠವೆಂದೂ ಕರೆಯಲ್ಪಡುತ್ತದೆ. ಇಲ್ಲಿರುವ ಅಷ್ಟ ಮಠಗಳು ಈ ದೇವಾಲಯದ ನಿತ್ಯ ಕೈಕಂರ್ಯವನ್ನು ನಿರ್ವಹಿಸುತ್ತವೆ. ಪರ್ಯಾಯವು ಜನವರಿ ತಿಂಗಳಲ್ಲಿ ನಡೆಯುವ ವಾರ್ಷಿಕ ಉತ್ಸವವಾಗಿದ್ದು, ಈ ಸಮಯದಲ್ಲಿ ಸಾವಿರಾರು ಭಕ್ತರು ಪಟ್ಟಣದಲ್ಲಿ ಕಿಕ್ಕಿರಿದು ಸೇರುತ್ತಾರೆ. ಉಡುಪಿಯ ರುಚಿಕರವಾದ ಪಾಕಪದ್ಧತಿಯನ್ನು ಪ್ರಯತ್ನಿಸಿ ಹಾಗೂ ಈ ಪಟ್ಟಣಕ್ಕೆ ಭೇಟಿ ನೀಡಿದಾಗ ಕಾಪು ಬೀಚ್, ಮಲ್ಪೆ ಬೀಚ್, ಸೇಂಟ್ ಮೇರಿಸ್ ದ್ವೀಪ ಮುಂತಾದ ಸ್ಥಳಗಳಿಗೆ ಭೇಟಿ ನೀಡಿ.

ಮುರುಡೇಶ್ವರ

ಮುರುಡೇಶ್ವರ

ಅರಬ್ಬೀ ಸಮುದ್ರದ ಕರಾವಳಿ ಭಾಗದಲ್ಲಿ ನೆಲೆಸಿರುವ ಮುರುಡೇಶ್ವರವು ಜಗತ್ತಿನ ಎರಡನೇ ಅತ್ಯಂತ ಎತ್ತರದ ಶಿವನ ಪ್ರತಿಮೆಗೆ ನೆಲೆಯಾಗಿರುವುದಕ್ಕೆ ಪ್ರಸಿದ್ದಿಯನ್ನು ಪಡೆದಿದೆ. ಈ ಪ್ರತಿಮೆಯು 123 ಅಡಿ ಎತ್ತರವಿದ್ದು, ದೇವಾಲಯದಲ್ಲಿ 20 ಅಂತಸ್ತಿನ ಗೋಪುರವನ್ನು ನಿರ್ಮಿಸಲಾಗಿದೆ. ಇದು ಕರ್ನಾಟಕ ಮತ್ತು ಕೇರಳದ ಪ್ರವಾಸಿಗರಿಗೆ ಉತ್ತಮ ರಜಾದಿನಗಳನ್ನು ಕಳೆಯುವ ತಾಣವಾಗಿದೆ.

ಮುರುಡೇಶ್ವರದಲ್ಲಿ ನೀವು ಭೇಟಿ ನೀಡಬೇಕಾದ ಇತರ ಕೆಲವು ಸ್ಥಳಗಳೆಂದರೆ ಪ್ರಶಾಂತವಾದ ಮುರುಡೇಶ್ವರ ಬೀಚ್, ನೇತ್ರಾಣಿ ದ್ವೀಪ, ಕೋಟೆ, ಇತ್ಯಾದಿಗಳು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X