Search
  • Follow NativePlanet
Share
ಮುಖಪುಟ » ಸ್ಥಳಗಳು» ಶೃಂಗೇರಿ

ಶೃಂಗೇರಿ - ಪವಿತ್ರತೆಯ ಸಂಕೇತ

48

ಪರಮ ಪೂಜ್ಯ ಹಿಂದೂ ಸಂತ ಶ್ರೀ ಶಂಕರಾಚಾರ್ಯರು ಮೊದಲ ಮಠವನ್ನು ತುಂಗಾ ನದಿಯ ದಡದಲ್ಲಿರುವ ಈ ಪ್ರಶಾಂತ ಪಟ್ಟಣದಲ್ಲಿ ಸ್ಥಾಪಿಸಿದರು. ಅಂದಿನಿಂದಲೂ, ವರ್ಷ ಪೂರ್ತಿ ಭೇಟಿ ಕೊಡುವ ಸಾವಿರಾರು ಪುಣ್ಯ ಕ್ಷೇತ್ರ ಯಾತ್ರಿಗಳಿಗೆ ಶೃಂಗೇರಿಯು  ಒಂದು ಮುಖ್ಯವಾದ ಸ್ಥಳವಾಗಿದೆ.

 

 ಐತಿ‍ಹ್ಯ ಮತ್ತು ಸ್ಥಳ ಪುರಾಣ

ಶೃಂಗೇರಿ, ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯಲ್ಲಿರುವ, ಒಂದು ಶ್ರೀಮಂತ ಹಸಿರು ಭೂಮಿ. ಪುರಾಣದ  ಪ್ರಕಾರ, ಆದಿ ಶಂಕರಾಚಾರ್ಯರು ಶೃಂಗೇರಿ ಗೆ ಕಾಲಿಟ್ಟ ಗಳಿಗೆಯೇ ಕಂಡ ಒಂದು ಅವಿಸ್ಮರಣೀಯ ದೃಶ್ಯದಿಂದ ಪ್ರೇರಿತರಾಗಿ ಈ ಸ್ಥಳದಲ್ಲಿ ತಮ್ಮ ಮಠ  ಸ್ಥಾಪಿಸಲು ನಿರ್ಧರಿಸಿದರು.

ಒಮ್ಮೆ ಶಂಕರಾಚಾರ್ಯರು ತುಂಗಾ ನದಿ ತೀರದಲ್ಲಿ ಸಂಚರಿಸುತ್ತಿರುವಾಗ, ಒಂದು ಘಟ ಸರ್ಪ ತನ್ನ ಹೆಡೆಯನ್ನು ಬಿಚ್ಚಿ ಒಂದು ಗರ್ಭಿಣಿ  ಕಪ್ಪೆಯನ್ನು ಸೂರ್ಯನ ಬಿಸಿಲಿನಿಂದ  ಕಾಪಾಡುವುದನ್ನು ಕಂಡರು. ತನ್ನ ನೈಸರ್ಗಿಕ ವೈರಿ ಆದ ಕಪ್ಪೆಗೆ ಅದು ತೋರುತ್ತಿರುವ ಔದಾರ್ಯವನ್ನು ಕಂಡು ಮೂಕವಿಸ್ಮಿತರಾದ ಅವರಿಗೆ ಶೃಂಗೇರಿ ನಿಜವಾಗಿಯೂ ಒಂದು ವಿಶಿಷ್ಟ ಸ್ಥಳ ಎನಿಸಿತು. ಇಂದು ಅವರ ಶಾರದಾ ಪೀಠಕ್ಕೆ  ದಿನಂಪ್ರತಿ ಸಾವಿರಾರು ಯಾತ್ರಿಗಳು ಭೇಟಿ ಕೊಡುತ್ತಾರೆ.

ವಿದ್ಯಾಶಂಕರ ಮತ್ತು ಶಾರದಾಂಬ ದೇವಸ್ಥಾನಗಳು ಶೃಂಗೇರಿಯಲ್ಲಿ ಭೇಟಿ ಕೊಡಬೇಕಾದ  ಮತ್ತೆರಡು ಪ್ರಸಿದ್ದ ಸ್ಥಳಗಳು. ಅದರಲ್ಲೂ ವಿದ್ಯಾಶಂಕರ ದೇವಸ್ಥಾನವು ಅಲ್ಲಿರುವ 12 ರಾಶಿಗಳನ್ನು ಪ್ರತಿನಿಧಿಸುವ  12 ಕಂಬಗಳಿಂದ ವಿಖ್ಯಾತವಾಗಿದೆ. ಜೊತೆಗೆ, ದೇವಸ್ಥಾನವನ್ನು ಖಗೋಳ  ಶಾಸ್ತ್ರದ ಕಲ್ಪನೆಗನುಸಾರವಾಗಿ ಕಟ್ಟಲಾಗಿದೆ.

 ಶೃಂಗೇರಿಯ ಆಹ್ಲಾದಕರ ವಾತಾವರಣ ವರ್ಷಪೂರ್ತಿ ಒಂದೇ ತೆರನಾಗಿರುವುದು ಇನ್ನೊಂದು ಗಮನಿಸಬೇಕಾದ ವಿಷಯ. ಇಲ್ಲಿಗೆ ಸಮೀಪದ ವಿಮಾನ ನಿಲ್ದಾಣ ಮಂಗಳೂರಿನಲ್ಲಿದೆ. ಇದು ಬೆಂಗಳೂರಿನಿಂದ ಸುಮಾರು 340 ಕಿಲೋಮೀಟರು ದೂರದಲ್ಲಿದೆ ಮತ್ತು ಉತ್ತಮ ಸಾರಿಗೆ ಸಂಪರ್ಕವಿದೆ. ಶಿವಮೊಗ್ಗ ಮತ್ತು ಕಡೂರು ಹತ್ತಿರದ ರೈಲ್ವೆ ನಿಲ್ದಾಣಗಳು.

ಶೃಂಗೇರಿ ಪ್ರಸಿದ್ಧವಾಗಿದೆ

ಶೃಂಗೇರಿ ಹವಾಮಾನ

ಉತ್ತಮ ಸಮಯ ಶೃಂಗೇರಿ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಶೃಂಗೇರಿ

  • ರಸ್ತೆಯ ಮೂಲಕ
    ಶೃಂಗೇರಿಯು ಶಿವಮೊಗ್ಗ, ಮಂಗಳೂರು, ಬೆಂಗಳೂರು, ಉಡುಪಿ, ಚಿಕ್ಕಮಗಳೂರು ಹಾಗು ಇನ್ನಿತರೆ ಪಟ್ಟಣಗಳೊಂದಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ. ಯಾತ್ರಿಗಳು ಕ ರಾ ರ ಸಾ ಸಂ (ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ) ಅಥವಾ ಇತರೆ ಲಕ್ಸೂರಿ ಬಸ್ಸುಗಳ ಮೂಲಕ ಶೃಂಗೇರಿಗೆ ತಲುಪಬಹುದು.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಉಡುಪಿ ರೈಲು ನಿಲ್ದಾಣವು ಶೃಂಗೇರಿಗೆ ಹತ್ತಿರದ ನಿಲ್ದಾಣವಾಗಿದ್ದು 98 ಕಿ.ಮೀ ದೂರದಲ್ಲಿದೆ. ಉಡುಪಿ ರೈಲು ನಿಲ್ದಾಣವು ಚಿಕ್ಕಮಗಳೂರು ಹಾಗು ಇತರೆ ಮಹಾನಗರಗಳೊಂದಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ. ಯಾತ್ರಿಗಳು ಇಲ್ಲಿಂದ ಬಾಡಿಗೆ ಟ್ಯಾಕ್ಸಿಗಳ ಮುಖಾಂತರ ಶೃಂಗೇರಿಗೆ ತಲುಪಬಹುದು.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ಶೃಂಗೇರಿಗೆ ಹತ್ತಿರದ ನಿಲ್ದಾಣವಾಗಿದೆ. ಇದು ಬಜ್ಪೆ ನಿಲ್ದಾಣವೆಂದೂ ಹೆಸರುವಾಸಿಯಾಗಿದ್ದು ಶೃಂಗೇರಿಯಿಂದ 100 ಕಿ.ಮೀ ದೂರದಲ್ಲಿದೆ. ಮಧ್ಯಪ್ರಾಚ್ಯ ರಾಷ್ಟ್ರಗಳು ಹಾಗು ಭಾರತದ ಇತರೆ ಭಾಗಗಳಿಂದ ಪ್ರವಾಸಿಗರು ಶೃಂಗೇರಿಗೆ ಸರಳವಾಗಿ ತಲುಪಬಹುದಾಗಿದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri