Search
  • Follow NativePlanet
Share
» »ದೀಪಾವಳಿಯ ಸಡಗರ ಇಲ್ಲಿ ಬಲು ಅಬ್ಬರ

ದೀಪಾವಳಿಯ ಸಡಗರ ಇಲ್ಲಿ ಬಲು ಅಬ್ಬರ

By Vijay

ಈ ಲೇಖನ ಓದುತ್ತಿರುವ ಪ್ರೀಯ ಓದುಗರೆಲ್ಲರಿಗೂ ಮೊದಲಿಗೆ ಬರುತ್ತಿರುವ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು. ದೀಪಾವಳಿಯ ಹಬ್ಬದ ಕುರಿತು ಬಹುತೇಕ ಎಲ್ಲರಿಗೂ ತಿಳಿದಿರುವುದರಿಂದ ಇದರ ಹಿನ್ನಿಲೆಯ ಕುರಿತು ಹೆಚ್ಚಾಗಿ ಹೇಳಬೇಕಾಗಿಲ್ಲ. ಆದರೂ ನಮ್ಮ ದೇಶದ ತುಂಬೆಲ್ಲ ವಿವಿಧ ರಾಜ್ಯಗಳಲ್ಲಿ ದೀಪಾವಳಿಯನ್ನು ಒಂದು ದಿನದಿಂದ ಹಿಡಿದು ಕೆಲ ದಿನಗಳವರೆಗೆ ವೈವಿಧ್ಯಮಯ ರೀತಿಯಲ್ಲಿ ವಿಶಿಷ್ಟವಾಗಿ ಆಚರಿಸಲಾಗುತ್ತದೆ.

ಒಂದು ಹಿನ್ನಿಲೆಯ ಪ್ರಕಾರ, ಹಿಂದೆ ರಾಮನು ವನವಾಸವನ್ನು ಅನುಭವಿಸಿ ಕೊನೆಗೆ ರಾಕ್ಷಸ ರಾಜ ರಾವಣನನ್ನು ಸಂಹರಿಸಿ ಅರ್ಧಾಂಗಿ ಸೀತೆ ಹಾಗೂ ಸಹೋದರ ಲಕ್ಷ್ಮಣನ ಜೊತೆ ವಿಜಯಿಯಾಗಿ ಬಂದುದರಿಂದ ರಾಮನ ರಾಜ್ಯದ ನಿವಾಸಿಗಳು ಎಣ್ಣೆಯ ದೀಪಗಳನ್ನು ಎಲ್ಲೆಡೆ ಬೆಳಗಿ, ಬಾಣ ಬಿರುಸುಗಳನ್ನು ಹೊಡೆದು ರಾಮನನ್ನು ತುಂಬು ಹೃದಯದಿಂದ ಸ್ವಾಗತಿಸಿದರ ಸಂಕೇತವಾಗಿ ಆಚರಿಸಲಾದರೆ ಕೆಲ ಪ್ರದೇಶಗಳಲ್ಲಿ ವಿಷ್ಣು ಹಾಗೂ ಲಕ್ಷ್ಮಿ ದೇವಿಯರ ವಿವಾಹದ ಸಂಭ್ರಮಾಚರಣೆ ಇದಾಗಿದೆ.

ಕಥೆ, ದಂತ ಕಥೆ, ಹಿನ್ನಿಲೆ ಏನೆ ಇರಲಿ ಆದರೆ ದೀಪಾವಳಿ ಹಬ್ಬವಂತು ಹಿರಿಯ ಕಿರಿಯರೆನ್ನದೆ ಎಲ್ಲರ ಮನಗಳಲ್ಲಿ ಸಂತಸ, ಉತ್ಸಾಹಗಳನ್ನು ತುಂಬುವುದಂತೂ ನಿಜ. ಕಿರಿಯರಿಗೆ ಬಾಯಲ್ಲಿ ನೀರೂರಿಸುವಂತಹ ತಿಂಡಿ ತಿನಿಸುಗಳು ತಿನ್ನುವುದು, ಪಟಾಕಿ ಹೊಡೆಯುವುದು ಖುಷಿ ನೀಡಿದರೆ, ಹಿರಿಯರಿಗೆ ನೆಂಟರೊಂದಿಗೆ ಬೆರೆತು ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಿಕೊಳ್ಳುವಂತಹ, ಆನಂದದಿಂದ ಸಮಯ ಕಳೆಯುವಂತಹ ಅವಕಾಶ ಒದಗಿ ಬರುತ್ತದೆ. ರಾತ್ರಿ ಕಳೆದ ಬಳಿಕ ಬರುವ ಬೆಳುಕು ಹೇಗಿ ಚೈತನ್ಯ ತುಂಬುವುದೊ ಅದೇ ರೀತಿ ದೀಪಾವಳಿ ಎಲ್ಲರಲ್ಲೂ ಚೈತನ್ಯ ತುಂಬುವುದು.

ಭಾರತದಲ್ಲಿ ಎಲ್ಲೆಡೆ ದೀಪಾವಳಿಯನ್ನು ಆಚರಿಸಲಾಗುತ್ತದಾದರೂ ಕೆಲ ಸ್ಥಳಗಳು ಈ ಸಂದರ್ಭದಲ್ಲಿ ಅತಿ ಹೆಚ್ಚಿನ ಮೆರುಗನ್ನು ಪಡೆಯುತ್ತವೆ. ಲವ ಲವಿಕೆ ತನ್ನಿಂತಾನೆ ದ್ವಿಗುಣಗೊಳ್ಳುತ್ತದೆ. ಇಡೀ ನಗರವು ಬಣ್ಣ ಬಣ್ಣದ ಬೆಳುಕುಗಳಿಂದ ಪ್ರಕಾಶಿತವಾಗಿ ಜೀವನೋತ್ಸಾಹವನ್ನು ವೃದ್ಧಿಸುತ್ತದೆ. ಎಷ್ಟೋ ವಿದೇಶಿ ಪ್ರವಾಸಿಗರು ದೀಪಾವಳಿಯ ಈ ಸಂದರ್ಭವನ್ನು ತಮ್ಮ ಕಣ್ಣಾರೆ ಸವಿಯಲೆಂದೆ ಈ ಸ್ಥಳಗಳಿಗೆ ಬರುತ್ತಾರೆ. ಹಾಗಾದರೆ ಬನ್ನಿ ಭಾರತದ ಕೆಲ ಪ್ರಮುಖ ಸ್ಥಳಗಳು ದೀಪಾವಳಿಗೆ ಯಾವ ರೀತಿಯಲ್ಲಿ ಸಿಂಗರಿಸಿಕೊಂಡು ಜನರನ್ನು ಆಕರ್ಷಿಸುತ್ತವೆ ಎಂಬುದರ ಕುರಿತು ತಿಳಿಯೋಣ.

ದೀಪಾವಳಿಯ ಸಂದರ್ಭದಲ್ಲಿರಬೇಕಾದ ಕೆಲ ಪ್ರಮುಖ ನಗರಗಳು:

ಬೆಂಗಳೂರು ಮುಂಬೈ ದೆಹಲಿ ಜೈಪುರ ವಾರಣಾಸಿ ಚೆನ್ನೈ ಉದೈಪುರ

ನೀವು ಓದಲು ಬಯಸಬಹುದಾದ ಲೇಖನ : ವಿವಿಧ ರಾಜ್ಯಗಳ ವೈವಿಧ್ಯಮಯ ದೀಪಾವಳಿ

ಬೆಂಗಳೂರು:

ಬೆಂಗಳೂರು:

ಕರ್ನಾಟಕ ರಾಜಧಾನಿ ಬೆಂಗಳೂರು ದೇಶದ ಪ್ರಭಾವಿ ನಗರವಾಗಿದ್ದು ತ್ವರಿತಗತಿಯಲ್ಲಿ ಬೆಳೆಯುತ್ತಿದೆ. ಕನ್ನಡಿಗರೊಂದಿಗೆ ಇತರೆ ಸಮುದಾಯದವರೂ ಸಹ ನೆಲೆಸಿರುವ ಬೆಂಗಳೂರಿನಲ್ಲಿ ದೀಪಾವಳಿಯನ್ನು ಬಹು ಉತ್ಸಾಹದಿಂದ ಆಚರಿಸಲಾಗುತ್ತದೆ.

ಚಿತ್ರಕೃಪೆ: Saad Faruque

ಬೆಂಗಳೂರು:

ಬೆಂಗಳೂರು:

ರಾತ್ರಿ ಆಯಿತೆಂದರೆ ಸಾಕು, ಆಗಸವು ತುಂಬಾ ಕಾರ್ಯನಿರತವಾಗಿಬಿಡುತ್ತದೆ. ಅಲ್ಲಲ್ಲಿ ಆಗಸದ ತುಂಬೆಲ್ಲ ಬೆಳಕಿನ ಚಿತ್ತರಗಳು ಮನಸಿಗೆ ರಾಚುವಂತೆ ಕಾಣುತ್ತವೆ.

ಚಿತ್ರಕೃಪೆ: Subharnab Majumdar

ಬೆಂಗಳೂರು:

ಬೆಂಗಳೂರು:

ಮನೆಯ ಮಾಳಿಗೆಗೆ ಬಂದರೆ ಸಾಕು...ಅಲ್ಲಿ ನೋಡಲೋ...ಇಲ್ಲಿ ನೋಡಲೋ ಎಂದನ್ನಿಸದೆ ಇರಲಾರದು.

ಚಿತ್ರಕೃಪೆ: Saad Faruque

ಬೆಂಗಳೂರು:

ಬೆಂಗಳೂರು:

ಹಬ್ಬದ ಸಂದರ್ಭದಲ್ಲಿ ಬೀದಿ ಬೀಗಳಲ್ಲೂ ಲವಲವಿಕೆ ಇರುತ್ತದೆ. ಸಂಜೆಯಾಗುತ್ತಿದ್ದಂತೆ ರಸ್ತೆ ಬೀದಿಗಳು ಥಳುಕುತ್ತ ಬಳುಕುತ್ತ ಸಿಂಗರಿಸಿಕೊಳ್ಳುತ್ತವೆ.

ಚಿತ್ರಕೃಪೆ: Barry Pousman

ಬೆಂಗಳೂರು:

ಬೆಂಗಳೂರು:

ದೀಪಾವಳಿಯ ಸಂದರ್ಭದಲ್ಲಿ ಮನೆಗಳು ಸಿಂಗರಿಸಿಕೊಳ್ಳುವ ರೀತಿ..

ಚಿತ್ರಕೃಪೆ: Kishore BK

ಬೆಂಗಳೂರು:

ಬೆಂಗಳೂರು:

ಮನಸೂರೆಗೊಳ್ಳುವ ಆಗಸದಿ ಆಕರ್ಷಕ ಚಿತ್ತಾರ.

ಚಿತ್ರಕೃಪೆ: Subharnab Majumdar

ಮುಂಬೈ:

ಮುಂಬೈ:

ಮುಂಬೈ ಭಾರತದ ಮಹಾನಗರಗಳ ಪೈಕಿ ಒಂದಾಗಿರುವುದು ಅಲ್ಲದೆ ಪ್ರಮುಖ ವಾಣಿಜ್ಯ ನಗರವೂ ಹೌದು. ದೀಪಾವಳಿಯ ಸಂದರ್ಭದಲ್ಲಿ ಮುಂಬೈ ಮಹಾನಗರವು ಜೀವ ಕಳೆ ಪಡೆಯುತ್ತದೆ. ರಾತ್ರಿಯಲ್ಲಿ ನಗರವು ಭೂಮಿ ಆಕಾಶವೆನ್ನದೆ ಶೋಭಾಯಮಾನವಾಗಿ ಜಗಮಗಿಸುತ್ತದೆ. ಸಡಗರ, ಸಂಭ್ರಮ, ಬೆರೆಯುವುದು, ಪಟಾಕಿ, ಬೆಳುಕು ಇಷ್ಟವಿರುವವರು ಮುಂಬೈನಲ್ಲಿ ದೀಪಾವಳಿಯನ್ನು ಸುಂದರವಾಗಿ ಆಚರಿಸಬಹುದು.

ಚಿತ್ರಕೃಪೆ: Ashwin John

ಮುಂಬೈ:

ಮುಂಬೈ:

ಮುಂಬೈ ದೀಪಾವಳಿಯ ಸಂದರ್ಭದಲ್ಲಿ....ಸ್ಲಮ್ಮುಗಳೂ ಕೂಡ ಪ್ರಕಾಶಮಾನವಾಗಿ ಬೆಳಗುತ್ತವೆ.

ಚಿತ್ರಕೃಪೆ: godwin d

ಮುಂಬೈ:

ಮುಂಬೈ:

ಮುಂಬೈ ದೀಪಾವಳಿಯ ಸಂದರ್ಭದಲ್ಲಿ....

ಚಿತ್ರಕೃಪೆ: godwin d

ಮುಂಬೈ:

ಮುಂಬೈ:

ಮುಂಬೈ ದೀಪಾವಳಿಯ ಸಂದರ್ಭದಲ್ಲಿ....

ಚಿತ್ರಕೃಪೆ: godwin d

ಚೆನ್ನೈ:

ಚೆನ್ನೈ:

ದೇಶದ ಮಹಾನಗರಗಳ ಪೈಕಿ ಒಂದಾದ ಚೆನ್ನೈ ನಗರದಲ್ಲೂ ಸಹ ದೀಪಾವಳಿ ಹಬ್ಬವನ್ನು ಅತಿ ಅದ್ದೂರಿಯಿಂದ ಆಚರಿಸಲಾಗುತ್ತದೆ.

ಚಿತ್ರಕೃಪೆ: soumyajit pramanick

ಚೆನ್ನೈ:

ಚೆನ್ನೈ:

ನಗರವು ರಾತ್ರಿಯಾಗುತ್ತಿದ್ದಂತೆ ಹೆಚ್ಚಿನ ಮೆರುಗನ್ನು ಪಡೆಯುತ್ತದೆ. ಆಗಸದಲ್ಲಿ ಬಾಣ ಬಿರುಸುಗಳು ಚುರುಕುಗೊಳ್ಳುತ್ತವೆ.

ಚಿತ್ರಕೃಪೆ: cprogrammer

ಚೆನ್ನೈ:

ಚೆನ್ನೈ:

ದೀಪಾವಳಿ ಹಬ್ಬದ ರಾತ್ರಿ ಚೆನ್ನೈನಲ್ಲಿ ಕಣ್ಣಿಗೆ ಹಬ್ಬ ಉಂಟಾಗುವುದು ಖಾತ್ರಿ....

ಚಿತ್ರಕೃಪೆ: McKay Savage

ಚೆನ್ನೈ:

ಚೆನ್ನೈ:

ದೀಪಾವಳಿ ಹಬ್ಬದ ರಾತ್ರಿ ಚೆನ್ನೈನಲ್ಲಿ ಕಣ್ಣಿಗೆ ಹಬ್ಬ ಉಂಟಾಗುವುದು ಖಾತ್ರಿ....

ಚಿತ್ರಕೃಪೆ: Vinoth Chandar

ಚೆನ್ನೈ:

ಚೆನ್ನೈ:

ದೀಪಾವಳಿ ಹಬ್ಬದ ರಾತ್ರಿ ಚೆನ್ನೈನಲ್ಲಿ ಕಣ್ಣಿಗೆ ಹಬ್ಬ ಉಂಟಾಗುವುದು ಖಾತ್ರಿ....

ಚಿತ್ರಕೃಪೆ: Simply CVR

ಚೆನ್ನೈ:

ಚೆನ್ನೈ:

ದೀಪಾವಳಿ ಹಬ್ಬದ ರಾತ್ರಿ ಚೆನ್ನೈನಲ್ಲಿ ಕಣ್ಣಿಗೆ ಹಬ್ಬ ಉಂಟಾಗುವುದು ಖಾತ್ರಿ....

ಚಿತ್ರಕೃಪೆ: Sriram Jagannathan

ಜೈಪುರ:

ಜೈಪುರ:

ರಾಜಸ್ಥಾನ ರಾಜ್ಯದ ರಾಜಧಾನಿ ನಗರ ಜೈಪುರದಲ್ಲಿ ದೀಪಾವಳಿ ಹಬ್ಬವು ಇನ್ನಿಲ್ಲದ ಸಡಗರ ಸಂಭ್ರಮ ಉಂಟು ಮಾಡುತ್ತದೆ. ಎಲ್ಲೆಡೆ ದೀಪಗಳು ಪ್ರಕಾಶಿಸುತ್ತವೆ.

ಚಿತ್ರಕೃಪೆ: Pati-G [Pati Gaitan]

ಜೈಪುರ:

ಜೈಪುರ:

ನಗರದ ಹಾದಿ ಬೀದಿಗಳೆಲ್ಲ ನವ ವಧುವಿನಂತೆ ಸಿಂಗರಿಸಿಕೊಂಡು ಹೋಗು ಬರುವವರಲ್ಲಿ ಸಂತಸ, ಉತ್ಸಾಹ ಮೂಡಿಸುತ್ತದೆ.

ಚಿತ್ರಕೃಪೆ: Os Rúpias

ದೆಹಲಿ:

ದೆಹಲಿ:

ದೀಪಾವಳಿ ಹಬ್ಬವು ದೆಹಲಿಯಲ್ಲೂ ಕೂಡ ಸಡಗರ ಸಂಭ್ರಮದಿಂದ ಆಚರಿಸಲ್ಪಡುತ್ತದೆ.

ಚಿತ್ರಕೃಪೆ: Harsh Agrawal

ದೆಹಲಿ:

ದೆಹಲಿ:

ಕುಟುಂಬದವರೆಲ್ಲಾ ಒಂದಾಗಿ ಬೆರೆತು ಈ ಹಬ್ಬವನ್ನು ತನು ಮನದಿಂದ ಆಚರಿಸುತ್ತಾರೆ.

ಚಿತ್ರಕೃಪೆ: Sean Ellis

ವಾರಣಾಸಿ:

ವಾರಣಾಸಿ:

ದೇಶದ ಪ್ರಮುಖ ನದಿಯಾದ ಗಂಗೆಯು ಹರಿದಿರುವ ಹಾಗೂ ಹಿಂದೂ ಧರ್ಮದವರ ಪಾಲಿಗೆ ಅತಿ ಪವಿತ್ರ ತಾಣವಾಗಿರುವ ಕಾಶಿ ಅಥವಾ ವಾರಣಾಸಿಯಲ್ಲಿ ದೀಪಾವಳಿ ಹಬ್ಬವನ್ನು ಅತಿ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. [ವಾರಣಾಸಿ ಮಹಿಮೆ]

ಚಿತ್ರಕೃಪೆ: Matt Zimmerman

ವಾರಣಾಸಿ:

ವಾರಣಾಸಿ:

ಈ ಸಂದರ್ಭದಲ್ಲಿ ದೇಶದ ಮೂಲೆ ಮೂಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ವಿಶೇಷವಾದ ದೀಪಾವಳಿ ಹಬ್ಬದ ಪ್ರಯುಕ್ತವಾಗಿ ಕಾಶಿ ವಿಶ್ವೇಶ್ವರನ ದರುಶನ ಕೋರಿ ವಾರಣಾಸಿಗೆ ಆಗಮಿಸುತ್ತಾರೆ. ಸಂಜೆಯ ಸಮಯದಲ್ಲಿ ಜರುಗುವ ಗಂಗಾ ಆರತಿಯು ಅತಿ ಪ್ರಮುಖ ಆಕರ್ಷಣೆಯಾಗಿರುತ್ತದೆ.

ಚಿತ್ರಕೃಪೆ: Matt Zimmerman

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X