Search
  • Follow NativePlanet
Share
» »ದಸರಾ ರಜೆಯಲ್ಲಿ ಫ್ರೆಂಡ್ಸ್‌ ಜೊತೆ ಸುತ್ತಾಡೋಕೆ ಇಲ್ಲಿದೆ ಬೆಸ್ಟ್‌ ಪ್ಲ್ಯಾನ್

ದಸರಾ ರಜೆಯಲ್ಲಿ ಫ್ರೆಂಡ್ಸ್‌ ಜೊತೆ ಸುತ್ತಾಡೋಕೆ ಇಲ್ಲಿದೆ ಬೆಸ್ಟ್‌ ಪ್ಲ್ಯಾನ್

ರಜೆ ಅಂದ್ರೆ ಯಾರಿಗೆ ತಾನೇ ಬೇಡ ಹೇಳಿ. ಇನ್ನೇನು ದಸರಾ ರಜೆ ಬರುತ್ತಿದೆ. ವಾರಾಂತ್ಯವನ್ನೂ ಸೇರಿಸಿ ಲಾಂಗ್ ವೀಕೆಂಡ್ ಸಿಗುತ್ತದೆ. ಹಾಗಾಗಿ ಈ ರಜಾದಿನಗಳಲ್ಲಿ ಸ್ನೇಹಿತರ ಜೊತೆ ಸೇರಿಕೊಂಡು ಎಲ್ಲಿಗಾದರೂ ಹೋಗುವ ಪ್ಲ್ಯಾನ್ ಹಾಕಿಕೊಳ್ಳಬಹುದು. ಅದಕ್ಕಾಗಿ ಈಗಿನಿಂದಲೇ ಟ್ರೈನ್ ಟಿಕೇಟ್ ಬುಕ್ ಮಾಡಿದ್ರೆ ಒಳ್ಳೆಯದು. ನಿಮ್ಮ ಟಿಕೇಟ್ ಕನ್ಫರ್ಮ್ ಆಗಿರುತ್ತದೆ.

ದಸರಾ ರಜೆ

ದಸರಾ ರಜೆ

PC: youtube

ಈ ದಸರಾ ರಜೆಗೆ ಎಲ್ಲಿಗೆ ಸುತ್ತಾಡೋಕೆ ಹೋಗೋದು ಅನ್ನೋ ಕನ್ಫ್ಯೂಷನ್ ನಿಮಗೆ ಇದ್ದೇ ಇರುತ್ತದೆ. ಅದಕ್ಕಾಗಿ ನಾವು ತಿಳಿಸಲಿದ್ದೇವೆ ಕೆಲವು ಉತ್ತಮ ಪ್ರವಾಸಿ ತಾಣಗಳನ್ನು. ಇಲ್ಲಿ ನೀವು ನಿಮ್ಮ ಸ್ನೇಹಿತರ ಜೊತೆ, ಸಂಗಾತಿಯ ಜೊತೆ ಉತ್ತಮ ಸಮಯ ಕಳೆಯಬಹುದು.

ಹಂಪಿ, ಕರ್ನಾಟಕ

ಹಂಪಿ, ಕರ್ನಾಟಕ

PC:Apadegal

ಬಳ್ಳಾರಿ ಜಿಲ್ಲೆಯಲ್ಲಿರುವ ಹಂಪಿಯೂ ಒಂದು ಪ್ರಮುಖ ಪ್ರವಾಸಿ ತಾಣವಾಗಿದೆ. ಐತಿಹಾಸಿಕ ಹಾಗೂ ಸಾಂಸ್ಕೃತಿಕ ಲೋಕವನ್ನು ಇಲ್ಲಿ ಕಾಣಬಹುದು. ಇದು ಮಧ್ಯಕಾಲಿನ ಹಿಂದೂ ರಾಜ್ಯ ವಿಜಯನಗರದ ರಾಜಧಾನಿಯಾಗಿತ್ತು. ಆ ಕಾಲದ ಹಲವಾರು ಮಂದಿಗಳ ಅವಶೇಷಗಳು ಇಂದಿಗೂ ಇಲ್ಲಿ ಕಾಣಸಿಗುತ್ತದೆ.

ನೀವು ಇಷ್ಟಪಟ್ಟವರನ್ನೇ ಬಾಳ ಸಂಗಾತಿಯನ್ನಾಗಿ ಕರುಣಿಸುವ ದೇವಾಲಯ ಇದು !

ಪಚ್‌ಮರಿ, ಮಧ್ಯಪ್ರದೇಶ

ಪಚ್‌ಮರಿ, ಮಧ್ಯಪ್ರದೇಶ

PC: Abhayashok

ಇದು ಮಧ್ಯಪ್ರದೇಶದ ಏಕೈಕ ಹಿಲ್‌ಸ್ಟೇಶನ್ ಆಗಿದೆ. ಇಲ್ಲಿ ಸುತ್ತಲೂ ಹಚ್ಚಹಸಿರಿನ ಮಧ್ಯೆ ಗುಹೆಗಳಿಂದ ಹಿಡಿದು ಕೆರೆ, ಜಲಪಾತಗಳನ್ನೂ ಕಾಣಬಹುದು. ಇಲ್ಲಿನ ಹಿಲ್‌ಸ್ಟೇಶನ್‌ನಲ್ಲಿ ಸೂರ್ಯೋದಯವನ್ನು ನೋಡುವುದು ಒಮದು ವಿಭಿನ್ನ ಅನುಭವವನ್ನು ನೀಡುತ್ತದೆ. ಇಲ್ಲಿ ನೀವು ಸಾತ್‌ಪುಡಾ ನ್ಯಾಷನಲ್ ಪಾರ್ಕ್‌ನ್ನು ನೋಡಬಹುದು.

ಅರುಣಾಚಲ ಪ್ರದೇಶದ ಝೀರೋ ವ್ಯಾಲಿ

ಅರುಣಾಚಲ ಪ್ರದೇಶದ ಝೀರೋ ವ್ಯಾಲಿ

ಝೀರೋ ಘಾಟಿ ತನ್ನ ಪ್ರಾಕೃತಿಕ ಸೌಂದರ್ಯಕ್ಕೆ ಪ್ರಸಿದ್ಧವಾಗಿದೆ. ಇಲ್ಲಿ ನೀವು ಟ್ಯಾಲಿ ಘಾಟಿ ಅಭಯಾರಣ್ಯ, ಮೇಘನಾ ಗುಹಾ ಮಂದಿರ, ಡೋಲೋ-ಮಂಡೋ ಸುತ್ತಾಡಬಹುದು. ಇಲ್ಲಿ ನೀವು ಮನಸ್ಸಿಗೆ ನೆಮ್ಮದಿಯನ್ನು ಪಡೆಯುತ್ತೀರಿ.

ಹೆಚ್ಚಿನ ವಿವಾಹಗಳು ಈ ಗುರುವಾಯೂರಪ್ಪನ ಸನ್ನಿಧಿಯಲ್ಲಿ ನಡೆಯುತ್ತೇ ಯಾಕೆ ಗೊತ್ತಾ?

ಋಷಿಕೇಶ್, ಉತ್ತರಾಖಂಡ

ಋಷಿಕೇಶ್, ಉತ್ತರಾಖಂಡ

PC:meg and rahul

ಋಷಿಕೇಶ್‌ ಧಾರ್ಮಿಕತೆಯನ್ನು ಹೊಂದಿರುವುದರ ಜೊತೆಗೆ ರೋಮಾಂಚಕ ತಾಣವೂ ಆಗಿದೆ. ಇಲ್ಲಿ ದೇವಸ್ಥಾನಗಳೂ ಇವೆ, ಹಾಗೆಯೇ ಸಾಹಸಮಯ ಕ್ರೀಡೆಗಳೂ ಇವೆ. ಯುವಕರಿಗೂ, ವಯಸ್ಸಾದವರಿಗೂ ಸೂಕ್ತವಾದ ಪ್ರವಾಸಿ ತಾಣವಾಗಿದೆ.

ಉತ್ತರಾಖಂಡ್

ಉತ್ತರಾಖಂಡ್

PC: Livefree2013

ಉತ್ತರಾಖಂಡ್, ಸ್ಥಳೀಯವಾಗಿ ದೇವಭೂಮಿ ಎಂದು ಕರೆಯಲ್ಪಡುತ್ತದೆ. ಅತ್ಯಂತ ಹೆಚ್ಚಿನ ಸಂಖ್ಯೆಯ ಹಿಂದೂ ದೇವಾಲಯಗಳ ಉಪಸ್ಥಿತಿಯ ಕಾರಣದಿಂದಾಗಿ, ಹಿಮಾಲಯ ಪ್ರದೇಶವು ಉತ್ತರ ಭಾರತದ ಸಣ್ಣ ರಾಜ್ಯವಾಗಿದೆ. ಉತ್ತರಾಖಂಡದ ನಾಲ್ಕು ಪ್ರಸಿದ್ಧ ಮತ್ತು ಸುಂದರವಾದ ದೇವಾಲಯಗಳು ಬದ್ರಿನಾಥ್, ಕೇದಾರನಾಥ್, ಯಮುನೋತ್ರಿ ಮತ್ತು ಗಂಗೋತ್ರಿ ಇಲ್ಲೇ ಇರುವುದು.

ಮತ್ತೆ ಪ್ರವಾಸಿಗರಿಗೆ ತೆರೆದಿದೆ ಎಡಕಲ್ಲು ಗುಹೆ

ಕೇರಳ

ಕೇರಳ

PC: Bhoomi

ಕೇರಳವನ್ನು ದೇವರ ಸ್ವಂತ ನಾಡು ಎನ್ನುತ್ತಾರೆ . ಇಲ್ಲಿ ಸಾಕಷ್ಟು ದೇವಸ್ಥಾನಗಳೂ ಇವೆ. ಈ ದಕ್ಷಿಣ ಭಾರತದ ರಾಜ್ಯದಲ್ಲಿ ನೈಸರ್ಗಿಕ ಸೌಂದರ್ಯದ ಹರಿವನ್ನು ನೀಡುತ್ತದೆ. ವಿಲಕ್ಷಣ ಹಿಲ್ ಸ್ಟೇಷನ್‌ಗಳು, ಅದ್ಭುತ ಹಿನ್ನೀರು ಮತ್ತು ಸುಂದರ ಕಡಲತೀರಗಳು ಈ ರಾಜ್ಯವನ್ನು ಪ್ರವಾಸಿ ಸ್ವರ್ಗದಂತೆ ಮಾಡುತ್ತವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more