ಅರುಣಾಚಲ ಪ್ರದೇಶ : ಆರ್ಕಿಡ್ ಗಳ ತವರು

ಮುಖಪುಟ » ಸ್ಥಳಗಳು » » ಮುನ್ನೋಟ

ನಳನಳಿಸುವ ಆರ್ಕಿಡ್, ಹಿಮಾವೃತಗೊಂಡು ಹೊಳೆಯುತ್ತಿರುವ ಪರ್ವತ ಶ್ರೇಣಿಗಳು, ನಿಷ್ಕಳಂಕ ಕಣಿವೆಗಳು, ಕಾಡಿನಲ್ಲಿ ಹಸಿರೆಲೆಗಳ ಮರ್ಮರ ಧ್ವನಿ, ಅಗಲ ಕಿರಿದಾದ ಭೂಭಾಗದಲ್ಲಿ ಅಂಕುಡೊಂಕಾಗಿ ಹರಿಯುತ್ತಿರುವ ನೀರಿನ ಕಾಲುವೆ, ಬೌದ್ಧ ಸನ್ಯಾಸಿಗಳ ಮಂತ್ರಪಠಣ ಮತ್ತು ಜನರ ಆತಿಥ್ಯ - ನೀವು ಇವೆಲ್ಲವನ್ನೂ ಅನುಭವಿಸಬೇಕಾದರೆ ನೀವು ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಲೇಬೇಕು. ಈ ರಾಜ್ಯದಲ್ಲಿನ ಅದ್ಭುತ ಮರಗಿಡ ಪ್ರಾಣಿಪಕ್ಷಿ ಸಂಕುಲತೆ ನಿಮಗೆ ಎಂದೂ ಮರೆಯದ ಅನುಭವವಾಗಿರುತ್ತದೆ.

ಅರುಣಾಚಲ ಪ್ರದೇಶದ ಭೂವಿವರಣೆ

ಅರುಣಾಚಲ ಪ್ರದೇಶದ ಭೂಪ್ರದೇಶದ ಲಕ್ಷಣಗಳೇ ಇಲ್ಲಿನ ಪ್ರವಾಸೋದ್ಯಮದಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಇದು ಇಲ್ಲಿನ ಪ್ರವಾಸಿಗರಿಗೆ ವಿವಿಧ ತರವಾದ ಪ್ರಾಕೃತಿಕ ಸೊಬಗನ್ನು ಪರಿಚಯಿಸುತ್ತದೆ. ಭಾರತದ ಪೂರ್ವ ಭಾಗದಲ್ಲಿರುವ ಅರುಣಾಚಲ ಪ್ರದೇಶವು ಸೂರ್ಯ ಉದಯಿಸುವ ನಾಡು ಎಂದೂ ಕರೆಯಲ್ಪಡುತ್ತದೆ.

ಈ ಸ್ಥಳ ಹಿಮಾಲಯ ಪರ್ವತ ಶ್ರೇಣಿಗಳಿಂದ ಆವೃತವಾಗಿದ್ದು, ಸಿಯಾಂಗ್, ಸುಬಂಸಿರಿ, ಕಮೆಂಗ್, ತಿರಪ್ ಮತ್ತು ಲೋಹಿತ್ ಎಂಬ ಐದು ನದೀ ಕಣಿವೆಗಳಾಗಿ ವಿಂಗಡಿಸಲಾಗಿದೆ. ಈ ಸುಂದರ ಕಣಿವೆಗಳು ಹಚ್ಚ ಹಸುರಿನ ಸುಂದರವಾದ ಕಾಡುಗಳಿಂದ ಆವರಿಸಲ್ಪಟ್ಟಿದೆ.

ಆರ್ಕಿಡ್ ಗಳ ಸ್ವರ್ಗ

ಅರುಣಾಚಲ ಪ್ರದೇಶವು ಭಾರತದ "ಆರ್ಕಿಡ್ ಗಳ ಸ್ವರ್ಗ" ಎಂದು ಅರಿಯಲ್ಪಡುತ್ತದೆ. ಇಲ್ಲಿ 500 ಕ್ಕೂ ಹೆಚ್ಚು ಬಗೆಯ ಆರ್ಕಿಡ್ ಗಳಿದ್ದು, ಇದು ಭಾರತದಲ್ಲಿ ಕಂಡು ಬರುವ ಒಟ್ಟು ತಳಿಗಳ ಅರ್ಧ ಭಾಗದಷ್ಟು ಆಗಿದೆ.  ಇದರಲ್ಲಿ ವಿನಾಶದಂಚಿನಲ್ಲಿರುವ ಹಾಗೂ ಅಪರೂಪದ ತಳಿಗಳೂ ಸೇರಿವೆ. ಅರುಣಾಚಲ ಪ್ರದೇಶದಲ್ಲಿ ಆರ್ಕಿಡ್ ರಿಸರ್ಚ್ ಅಂಡ್ ಡೆವಲಪ್ಮೆಂಟ್ ಸ್ಟೇಷನ್ ಎಂಬ ಸರಕಾರಿ ಸ್ಥಾಪನೆಯೂ ಇದೆ. ಸ್ಟೇಟ್ ರಿಸರ್ಚ್ ಫಾರೆಸ್ಟ್ ಇನ್ಸ್ಟಿಟ್ಯೂಟ್  ನ ಆರ್ಕಿಡ್ ಸೆಂಟರ್ ಗಳು ಇಟಾನಗರ್, ಸೆಸ್ಸಾ, ಟಿಪಿ, ದರಂಗ್, ರೊಯಿಂಗ್ ಮತ್ತು ಜೆನ್ಗಿಂಗ್ ಮುಂತಾದ ಸ್ಥಳಗಳಲ್ಲಿದ್ದು, ಇಲ್ಲಿ ಹೈಬ್ರಿಡ್ ಹಾಗೂ ಆಲಂಕಾರಿಕ ತಳಿಗಳನ್ನು ಕಾಣಬಹುದು.

ಸೆಸ್ಸಾ ಆರ್ಕಿಡ್ ಸೆಂಟರ್ ಇಲ್ಲಿನ ದೊಡ್ಡ ಸಂಖ್ಯೆಯ ಆರ್ಕಿಡ್ ತಳಿಗಳಿಗೆ ಪ್ರಖ್ಯಾತವಾಗಿದೆ. ಆರ್ಕಿಡ್ ಗಳ ವಿಧ ವಿಧವಾದ ಬಣ್ಣಗಳು ಅರುಣಾಚಲ ಪ್ರದೇಶವನ್ನು ಒಂದು ಸುಂದರ ಚಿತ್ರವಾಗಿ ಕಂಗೊಳಿಸುವಂತೆ ಮಾಡುತ್ತದೆ.

ಅರುಣಾಚಲ ಪ್ರದೇಶದ ಸಾಹಸ ಪ್ರವಾಸೋದ್ಯಮ

ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡುವ ಸಾಹಸ ಪ್ರಿಯ ಯಾತ್ರಿಗಳಿಗೆ ಇಲ್ಲಿ ಸಂಭ್ರಮಭರಿತ ಸಮಯವನ್ನು ನಿರೀಕ್ಷಿಸಬಹುದು. ಟ್ರೆಕಿಂಗ್ , ರಿವರ್ ರಾಫ್ಟಿಂಗ್ ಹಾಗೂ ಅನ್ಗ್ಲಿಂಗ್ ಇಲ್ಲಿನ ಮುಖ್ಯ ಆಕರ್ಷಣೆಗಳಾಗಿವೆ. ಅರುಣಾಚಲ ಪ್ರದೇಶದ ಹಲವು ಸ್ಥಳಗಳು ಟ್ರೆಕಿಂಗ್ ಗೆ ಸೂಕ್ತವಾಗಿವೆ. ಕಮೆಂಗ್, ಸುಬಂಸಿರಿ, ದಿಬಂಗ್ ಹಾಗೂ ಸಿಅಂಗ್ ನದಿಗಳಲ್ಲಿ ವೈಟ್ ವಾಟರ್ ರಿವರ್ ರಾಫ್ಟಿಂಗ್ ಟ್ರಿಪ್ ಗಳನ್ನು ಸಾಹಸಿಗ ಪ್ರವಾಸಿಗಳಿಗೆ ಸಂಘಟಿಸಲಾಗುತ್ತದೆ. ಅನ್ಗ್ಲಿಂಗ್ ಪ್ರೇಮಿಗಳಿಗೆ ಇಲ್ಲಿ ಅನ್ಗ್ಲಿಂಗ್ ಹಬ್ಬವನ್ನು ಆಚರಿಸಲಾಗುತ್ತದೆ.

ಅರುಣಾಚಲ ಪ್ರದೇಶದ ಜನರು ಹಾಗೂ ಇಲ್ಲಿನ ಸಂಸ್ಕೃತಿ

ಅರುಣಾಚಲ್ ಪ್ರದೇಶದ ಜನರು ಸರಳ ಹಾಗೂ ಆತಿಥ್ಯ ಪ್ರಿಯರು. ರಾಜ್ಯದಲ್ಲಿ ಸುಮಾರು 26 ಕ್ಕೂ ಅಧಿಕ ಬುಡಕಟ್ಟು ಪಂಗಡಗಳಿದ್ದು, ಇಲ್ಲಿನ ಜನರು ಅವರ ಸಂಸ್ಕೃತಿ ಹಾಗೂ ಕಲೆಗೆ ತುಂಬಾ ಹತ್ತಿರವಾಗಿದ್ದಾರೆ. ಅಪತಾನಿ, ಅಕಾ, ಬೋರಿ, ಗಳೋ, ಅಡಿ, ತಗಿನ್, ನ್ಯಿಷಿ ಇತ್ಯಾದಿಗಳು ಇಲ್ಲಿನ ಪ್ರಮುಖ ಪಂಗಡಗಳಾಗಿವೆ. ಇಲ್ಲಿ ಬಹಳಷ್ಟು ಭಾಷೆಗಳನ್ನು ಮಾತನಾಡಲಾಗುತ್ತದೆ. ಹಲವಾರು ಬುಡಕಟ್ಟಿನ ಹಬ್ಬಗಳನ್ನು ನೃತ್ಯ ಹಾಗೂ ಸಂಗೀತದ ಮೂಲಕ ವರ್ಷಪೂರ್ತಿ ಇಲ್ಲಿ ಆಚರಿಸಲಾಗುತ್ತದೆ.

ಹೊಸ ವರ್ಷಾಚರಣೆಯ ಸಮಯದಲ್ಲಿ ತವಾಂಗ್ ಜನರು ಲೋಸರ್ ಹಬ್ಬವನ್ನು ವಿಜ್ರಮ್ಭಣೆಯಿನ್ದ ಆಚರಿಸುತ್ತಾರೆ. ಡ್ರೀ, ಸೊಲುಂಗ್ ಹಾಗೂ ರೆಹ್ ಹಬ್ಬಗಳನ್ನು ಬಹಳ ವೈಭವದಿಂದ ಆಚರಿಸಲಾಗುತ್ತದೆ.

ಅರುಣಾಚಲ ಪ್ರದೇಶದ ಸುತ್ತಲಿನ ಆಕರ್ಷಕ ಸ್ಥಳಗಳು

ಅರುಣಾಚಲ ಪ್ರದೇಶದ ಪ್ರವಾಸೋದ್ಯಮ ಇಲ್ಲಿನ ವೈವಿಧ್ಯಮಯ ಸಂಸ್ಕೃತಿ, ಜನರು, ಪ್ರಾಕೃತಿಕ ಸೌಂದರ್ಯ ಹಾಗೂ ಭಾಷೆಗಳ ಪರಿಚಯವನ್ನು ಯಾತ್ರಿಗಳಿಗೆ ಮಾಡಿಕೊಡುತ್ತದೆ. ಇಲ್ಲಿನ ರಾಜಧಾನಿಯಾದ ಇತನಗರ್ ನಲ್ಲಿ ಇತನಗರ್ ವನ್ಯಜೀವಿ ಅಭಯಧಾಮ ಹಾಗೂ ಇತ ಕೋಟೆ ಪ್ರಸಿದ್ಧವಾಗಿದೆ. ಅರುಣಾಚಲ ಪ್ರದೇಶದ ಇತರ ಆಕರ್ಷಣೆಗಳು ತವಾಂಗ್, ಅಲೊಂಗ್, ಶಿರೊ, ಬೋಮ್ಬ್ದಿಲ್ಲ, ಪಸಿಘತ್ ಇತ್ಯಾದಿಗಳಾಗಿವೆ. ಇದಲ್ಲದೆ, ನಂ ದಫಾ ರಾಷ್ಟ್ರೀಯ ಉದ್ಯಾನವನ, ಈಗಲ್ ನೆಸ್ಟ್ ವನ್ಯಜೀವಿ ಸಂರಕ್ಷಣ ಕೇಂದ್ರ, ದಯಿಂಗ್ ಎರಿಂಗ್ ವನ್ಯಜೀವಿ ಸಂರಕ್ಷಣ ಕೇಂದ್ರ ಮುಂತಾದುವುಗಳು ಅರುಣಾಚಲ ಪ್ರದೇಶದ ಇತರ ಪ್ರೇಕ್ಷಣೀಯ ಸ್ಥಳಗಳಾಗಿವೆ.

ಅರುಣಾಚಲ ಪ್ರದೇಶದ ಹವಾಮಾನ

ಅರುಣಾಚಲ ಪ್ರದೇಶದ ಹವಾಮಾನ ತುಂಬಾ ಬದಲಾವಣೆಗಳಿಂದ ಕೂಡಿದ್ದು, ಎತ್ತರಕ್ಕೆ ಅನುಗುಣವಾಗಿ ಬದಲಾಗುತ್ತದೆ. ಹಿಮಾಲಯದ ಮೇಲಿನ ಬದಿಯಲ್ಲಿ ಟುಂಡ್ರಾ ಹವಾಮಾನವಿದೆ. ಮಧ್ಯ ಹಿಮಾಲಯದಲ್ಲಿ ಸಮಶೀತೋಷ್ಣ ಹವಾಮಾನವಿದ್ದು, ಹಿಮಾಲಯದ ಕೆಳಗೆ ಉಷ್ಣವಲಯದ ಹವಾಮಾನವಿರುತ್ತದೆ. ಮೇ ತಿಂಗಳಿಂದ ಸೆಪ್ಟೆಂಬರ್ ತಿಂಗಳವರೆಗೆ ಅರುಣಾಚಲ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತದೆ.  

Please Wait while comments are loading...