Search
  • Follow NativePlanet
Share
» »2020ರಲ್ಲಿ ಹೋಳಿ ಹಬ್ಬವನ್ನು ಭಾರತದಲ್ಲಿ ಅತ್ಯಂತ ಉತ್ಸಾಹದಿಂದ ಆಚರಿಸಲು ಇರುವ ಅತ್ಯುತ್ತಮ ಸ್ಥಳಗಳು

2020ರಲ್ಲಿ ಹೋಳಿ ಹಬ್ಬವನ್ನು ಭಾರತದಲ್ಲಿ ಅತ್ಯಂತ ಉತ್ಸಾಹದಿಂದ ಆಚರಿಸಲು ಇರುವ ಅತ್ಯುತ್ತಮ ಸ್ಥಳಗಳು

ಸಂಗೀತ ಕಚೇರಿಗಳು, ಬೀದಿ ಬೀದಿಗಳಲ್ಲಿ ಜನರು ಒಬ್ಬರ ಮೇಲೆ ಒಬ್ಬರೆನ್ನುವಂತೆ ಬಣ್ಣ ಬಣ್ಣದ ಪುಡಿಗಳು ಮತ್ತು ನೀರಿನಿಂದ ಸ್ನಾನ ಮಾಡುತ್ತಾ ಎರಚಾಡುತ್ತಾ ಮುಂತಾದ ಮನೋರಂಜನೆಗಳನ್ನು ಒಳಗೊಂಡಿರುವ ಈ ಹಬ್ಬದಲ್ಲಿ ಪಾಲ್ಗೊಳ್ಳಿ.

ಇಷ್ಟೇ ಅಲ್ಲದೆ ಬಂಗಾಳದಂತ ಆಧ್ಯಾತ್ಮಿಕ ಹಿನ್ನೆಲೆಯಿರುವ ಸ್ಥಳಗಳಲ್ಲಿ 'ಹೋಲಿಕಾ ದಹನ'ದಂತಹ ಒಂದು ಅದ್ಭುತ ಅನುಭವವನ್ನು ಪಡೆಯಬಹುದು. 2020ರ ಈ ವರ್ಷದಲ್ಲಿ ಭಾರತವು ಹೋಳಿಯನ್ನು ವಿಭಿನ್ನ ರೀತಿಯಲ್ಲಿ ಆಚರಿಸಲು ಸಜ್ಜಾಗಿದೆ. ಅಲ್ಲದೆ ಈ ಹಬ್ಬವನ್ನು ದೇಶದ ವಿವಿಧ ಭಾಗಗಳಲ್ಲಿ ವಿವಿಧ ರೀತಿಯಲ್ಲಿ ಆಚರಿಸಲಾಗುತ್ತದೆ.

ವಿಶ್ವದ ಅತಿ ದೊಡ್ಡ ಬಣ್ಣದ ಹಬ್ಬವಾಗಿರುವ ಹೋಳಿಯು ಪ್ರೀತಿ, ಭರವಸೆ ಮತ್ತು ಸಂತೋಷದ ಸಂಕೇತವಾಗಿ ಆಚರಿಸುವ ಹಬ್ಬವಾಗಿದ್ದು ವಸಂತ ಋತುವಿನ ಆಗಮನ ಕಾಲದಲ್ಲಿ ಆಚರಣೆಮಾಡಲಾಗುತ್ತದೆ. ಸಾಂಪ್ರದಾಯಿಕವಾಗಿ ಈ ಹಬ್ಬವನ್ನು ಹಿಂದೂ ಕ್ಯಾಲಂಡರ್ ನ ಪ್ರಕಾರ ಫೆಬ್ರವರಿ ಮತ್ತು ಮಾರ್ಚ್ ತಿಂಗಳುಗಳಲ್ಲಿ ಆಚರಿಸಲಾಗುತ್ತದೆ.

ಈ ಹಬ್ಬದ ದಿನಾಂಕ ವರ್ಷದಿಂದ ವರ್ಷಕ್ಕೆ ಬದಲಾಗುತ್ತದೆ. ಈ ಹಬ್ಬವು ಸಾಮಾನ್ಯವಾಗಿ ಹುಣ್ಣಿಮೆಯ ಸಮಯದಲ್ಲಿ ವಸಂತ ಋತುವಿನ ವಿಷುವತ್ ಸಂಕ್ರಾಂತಿಯ ಮುಂಚೆ ಬರುತ್ತದೆ. ಈ ವರ್ಷ ಮಾರ್ಚ್ ತಿಂಗಳ 9 ಮತ್ತು 10ರಂದು ಹೋಳಿ ಹುಣ್ಣಿಮೆಯನ್ನು ಆಚರಿಸಲಾಗುತ್ತಿದೆ.

ಈ ವರ್ಷದ ವಾರದ ದಿನಗಳಲ್ಲಿ ಹೋಳಿ ಹಬ್ಬವು ಬಿದ್ದಿದ್ದರೂ ಕೂಡಾ ಕೆಲವು ದಿನಗಳ ರಜೆ ತೆಗೆದುಕೊಂಡು, ಮೋಜಿನ ಹೋಳಿ ಆಚರಣೆಗಳಿಗಾಗಿ ಭಾರತದ ಈ ಕೆಲವು ಸ್ಥಳಗಳಿಗೆ ಪ್ರಯಾಣಿಸುವುದು ಉತ್ತಮ. ಈ ಹೋಳಿ ಹಬ್ಬದ ಸಂದರ್ಭದಲ್ಲಿ ಸಂತೋಷದ ಸಮಯವನ್ನು ಕಳೆಯಲು ಈ ಪಟ್ಟಿಯಲ್ಲಿ ಯಾವ ಸ್ಥಳವನ್ನು ಆರಿಸಿಕೊಂಡರೂ, ಈ ಅಸಾಧಾರಣವಾದ ಹಬ್ಬದಿಂದ ಬಯಸಿದ್ದಕ್ಕಿಂತ ಹೆಚ್ಚಿನದನ್ನು ಪಡೆಯುವಿರಿ ಎಂಬುದು ಖಚಿತ.

1. ಮಥುರಾ ಮತ್ತು ವೃಂದಾವನ

1. ಮಥುರಾ ಮತ್ತು ವೃಂದಾವನ

ಸಾಂಪ್ರದಾಯಿಕ ಹೋಳಿ ಹಬ್ಬವನ್ನು ಆಚರಿಸಬೇಕೆಂದಿದ್ದಲ್ಲಿ, ಅವಳಿ ನಗರಗಳಾದ ಮಥುರಾ ಮತ್ತು ವೃಂದಾವನಗಳಿಗೆ ಭೇಟಿ ಕೊಡಿ. ಮಥುರಾ ಮತ್ತು ವೃಂದಾವನವು ದೇವಾಲಗಳ ಪಟ್ಟಣವೆಂದೇ ಹೆಸರುವಾಸಿ. ಈ ಸ್ಥಳವು ಶ್ರೀ ಕೃಷ್ಣ ದೇವರ ಜನಿಸಿದ ಹಾಗೂ ಬೆಳೆದ ಸ್ಥಳವಾಗಿದೆ.

ಆದುದರಿಂದ ಈ ಸ್ಥಳಗಳಲ್ಲಿ ಶ್ರೀಕೃಷ್ಣ ದೇವರಿಗೆ ಗೌರವಾರ್ಥವಾಗಿ ಬಹಳ ಪ್ರೀತಿಯಿಂದ ಎರಡು ದಿನಗಳ ಹೊರತಾಗಿ, ಹದಿನೈದು ದಿನಗಳಿಗಿಂತ ಹೆಚ್ಚಿನ ಕಾಲ ಆಚರಿಸಲಾಗುತ್ತದೆ. ಹೋಳಿ ಹಬ್ಬದ ಸಮಯದಲ್ಲಿ ನೀವು ಮಥುರಾ ಮತ್ತು ವೃಂದಾವನದ ಕಡೆಗೆ ಪ್ರವಾಸ ಮಾಡುವವರಿದ್ದಲ್ಲಿ, ನೀವು ಇಲ್ಲಿಯ ವಿಶೇಷವಾದ ಪೂಜೆಗಳಲ್ಲಿ ಪಾಲ್ಗೊಳ್ಳಬಹುದಾಗಿದೆ.

ಅಲ್ಲದೇ, ಇದರ ಜೊತೆಗೆ ಅನೇಕ ಸಾಂಪ್ರದಾಯಿಕ ಪದ್ದತಿಗಳು ಮತ್ತು ಆಚರಣೆಗಳನ್ನು ನೋಡಬಹುದು. ಹೆಸರೇ ಹೇಳುವಂತೆ ಮಕ್ಕನ್ ಚೋರ್ ಅಥವಾ ಬೆಣ್ಣೆ ಕಳ್ಳ ಕೃಷ್ಣ ಎಂದು ಪ್ರೀತಿಯಿಂದ ಕರೆಯಲ್ಪಡುವ ಕೃಷ್ಣ ದೇವರ ಗೌರವಾರ್ಥವಾಗಿ ಇಲ್ಲಿ ಆಚರಣೆಗಳನ್ನು ನಡೆಸಲಾಗುತ್ತದೆ.

2. ಶಾಂತಿ ನಿಕೇತನ ,ಪಶ್ಚಿಮ ಬಂಗಾಳ

2. ಶಾಂತಿ ನಿಕೇತನ ,ಪಶ್ಚಿಮ ಬಂಗಾಳ

ಬಸಂತ್ ಉತ್ಸಬ್ ಅಥವಾ ವಸಂತ್ ಉತ್ಸವ್ ( ವಸಂತ ಹಬ್ಬ) ವನ್ನು ಪಶ್ಚಿಮ ಬಂಗಾಳದ ಬೋಲ್ಪುರ್ ಪಕ್ಕದ ಶಾಂತಿ ನಿಕೇತನದಲ್ಲಿ ಆಚರಿಸಲಾಗುತ್ತದೆ. ಈ ಹಬ್ಬವು ಭಾರತದ ಪ್ರಸಿದ್ದ ಕವಿ ರಬೀಂದ್ರನಾಥ್ ಠಾಗೋರ್ ಅವರಿಂದ ಪರಿಚಯಿಸಲ್ಪಟ್ಟಿತು.

ಹಾಗಾಗಿ, ಈ ಹಬ್ಬವು ಬಂಗಾಳಿ ಸಂಪ್ರದಾಯದ ಒಂದು ಅವಿಭಾಜ್ಯ ಅಂಗವೆನಿಸಿದೆ. ಆದುದರಿಂದ ಬಸಂತ ಉತ್ಸವ್ ನ ಸಮಯವು ಶಾಂತಿಯ ಪ್ರತಿರೂಪವಾದ ಶಾಂತಿ ನಿಕೇತನ ಪಟ್ಟಣಕ್ಕೆ ಭೇಟಿ ಕೊಡುವುದಕ್ಕೆ ಸೂಕ್ತ ಸಮಯವಾಗಿದ್ದು, ಇಲ್ಲಿ ಕೇವಲ ಇಲ್ಲಿಯ ಹೋಳಿ ಹಬ್ಬದ ಸಂತೋಷದಲ್ಲಿ ಪಾಲ್ಗೊಳ್ಳುವುದು ಮಾತ್ರವಲ್ಲದೆ ಬಂಗಾಳಿ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನೂ ಸಹ ತಿಳಿಯಬಹುದಾಗಿದೆ.

ರವೀಂದ್ರನಾಥ ಠಾಗೋರ್ ಅವರು ಸ್ಥಾಪಿಸಿದ ಶಾಂತಿನಿಕೇತನ ವಿಶ್ವಭಾರತಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಶುಭ್ರವಾದ ಬೇಸಿಗೆ ಉಡುಪುಗಳನ್ನು ಧರಿಸಿ, ಠಾಗೋರ್ ಅವರ ಕೃತಿಗಳು ಹಾಗೂ ಇತರ ಹಾಡುಗಾರಿಕೆ ಮತ್ತು ನೃತ್ಯ ಸೇರಿದಂತೆ ಅನೇಕ ಅದ್ಭುತ ಸಾಂಸ್ಕೃತಿಕ ಪ್ರದರ್ಶನಗಳನ್ನು ಆಯೋಜಿಸಲಾಗುತ್ತದೆ.

3.ಮುಂಬೈ , ಮಹಾರಾಷ್ಟ್ರ

3.ಮುಂಬೈ , ಮಹಾರಾಷ್ಟ್ರ

ಹಬ್ಬಗಳು ಅಥವಾ ಆಚರಣೆಗಳ ವಿಷಯ ಬಂದಾಗ ಮುಂಬೈ ಹಿಂದೆ ಉಳಿಯಲು ಸಾಧ್ಯವೇ? ಮಹಾರಾಷ್ಟ್ರದ ಜೀವನಾಡಿ ಎನಿಸಿರುವ ಮುಂಬೈ ನಗರವು ಜೀವಂತಿಕೆ ಮತ್ತು ಉತ್ಸಾಹಕ್ಕೆ ಹೆಸರುವಾಸಿಯಾದುದಾಗಿದ್ದು, ಈ ನಗರವು ಹಬ್ಬಗಳನ್ನು ಆಚರಿಸುವುದರಲ್ಲೂ ಎತ್ತಿದ ಕೈ. ಅವುಗಳಲ್ಲಿ ಹೋಳಿ ಹಬ್ಬವೂ ಒಂದು.

ಈ ಹಬ್ಬವು ನಗರಕ್ಕೆ ಸುಂದರ ಮೆರುಗನ್ನು ತಂದು ಕೊಡುತ್ತದೆ. ತಮ್ಮ ತಮ್ಮ ಆಯ್ಕೆಗಳು ಮತ್ತು ಆದ್ಯತೆಗಳಿಗೆ ಅನುಗುಣವಾಗಿ ನಗರದಾದ್ಯಂತ ಅನೇಕ ಸ್ಥಳಗಳಲ್ಲಿ ವರ್ಣರಂಜಿತ ಮತ್ತು ಸಂಗೀತ ಹೋಳಿ ಕೂಟಗಳಲ್ಲಿ ಭಾಗವಹಿಸಿ.ಹೆಚ್ಚಿನ ಸ್ಥಳಗಳಲ್ಲಿ ಡಿಜೆ, ಆಹಾರ ಮಳಿಗೆಗಳು, ಮಳೆ ನೃತ್ಯ, ಅಲ್ಪಬೆಲೆಯ ಮಾರುಕಟ್ಟೆಗಳು, ಮೋಜಿನ ಆಟಗಳು ಮತ್ತು ಮಕ್ಕಳು ಮತ್ತು ವಯಸ್ಕರಿಗೆ ಸಾಕಷ್ಟು ಚಟುವಟಿಕೆಗಳು ನಡೆಯಲಿವೆ.

ನೀವು ಸಮಾಜದ ದುರ್ಬಲ ವರ್ಗಗಳಿಗೆ ಸಹಾಯ ಮಾಡುವುದರಲ್ಲಿ ನಂಬಿಕೆಯಿಡುವವರಾಗಿದ್ದರೆ, ಧಾರಾವಿಯು ಸೂಕ್ತ ಸ್ಥಳವಾಗಿದ್ದು ಇಲ್ಲಿಗೂ ಹಬ್ಬದ ಸಮಯದಲ್ಲಿ ಭೇಟಿ ನೀಡಬಹುದಾಗಿದೆ. ಈ ಸ್ಥಳವು ಮುಂಬೈನ ಅತೀ ದೊಡ್ಡ ಕೊಳೆಗೇರಿ (ಸ್ಲಂ) ಪ್ರದೇಶವಾಗಿದ್ದು, ಹಬ್ಬದ ಸಮಯದಲ್ಲಿ ಈ ಸ್ಥಳವು ಬಣ್ಣಗಳಿಂದ ವರ್ಣಮಯವಾಗಿರುತ್ತದೆ.

ಇಲ್ಲಿ ವಂಚಿತ ಸಮುದಾಯದ ಜನರಿದ್ದು, ಇಂತಹ ಜನರಿಗೆ ಕೂಟಗಳನ್ನು ನಡೆಸಲಾಗುತ್ತದೆ. ಈ ಸಮಯದಲ್ಲಿ ಪ್ರವಾಸಿಗರು ಖರ್ಚು ಮಾಡುವ 80% ರಷ್ಟು ಹಣವನ್ನು ಈ ಕೊಳೆಗೇರಿ ನಿವಾಸಿಗಳ ಶಿಕ್ಷಣ ಮತ್ತು ಜೀವನಶೈಲಿ ಸುಧಾರಣೆಗೆ ನೀಡಲಾಗುತ್ತದೆ. ಹೀಗಾಗಿ, ನಿಮ್ಮ ಹೋಳಿಯನ್ನು ಇಲ್ಲಿ ಕಳೆಯುವುದರಿಂದ ನಿಮಗೆ ಮನಸ್ಸಿನ ಶಾಂತಿ ಸಿಗುತ್ತದೆ ಮತ್ತು ನಿಮ್ಮ ಬಗ್ಗೆ ನಿಮಗೆ ಧನ್ಯತಾ ಭಾವವನ್ನು ಇಲ್ಲಿ ಪಡೆಯಬಹುದಾಗಿದೆ.

4. ಉದಯ್ ಪುರ್, ರಾಜಸ್ಥಾನ

4. ಉದಯ್ ಪುರ್, ರಾಜಸ್ಥಾನ

ಉದಯಪುರವು ತನ್ನ ಎಲ್ಲಾ ರಾಜವಂಶದ ನಡವಳಿಕೆ ಮತ್ತು ಜೀವನ ಶೈಲಿಯೊಂದಿಗೆ ಹೋಳಿಯ ದಿನದಂದು ಸಂಪೂರ್ಣವಾಗಿ ಅದ್ಭುತವಾಗಿರುತ್ತದೆ. ಅವಿಸ್ಮರಣೀಯ ಅನುಭವಕ್ಕಾಗಿ ಹೋಳಿಯ ದಿನವು ಭೇಟಿ ಯೋಗ್ಯವಾದ ಸಮಯವಾಗಿದ್ದು ಪ್ರಾದೇಶಿಕ ಅನುಭವಕ್ಕಾಗಿ ಮೇವಾರ್ ರಾಜ ಮನೆತನದ ಆಚರಣೆಗಳಲ್ಲಿ ಭಾಗವಹಿಸಿ. ಹೋಳಿಯ ಮುಂಚಿನ ದಿನದಂದು ಜನರು ದೀಪೋತ್ಸವಗಳನ್ನು ನಡೆಸಲಾಗುತ್ತದೆ.

ಸ್ಥಳೀಯರು ಇದನ್ನು 'ಹೋಲಿಕಾ ದಹನ್' ಎಂದು ಕರೆಯುತ್ತಾರೆ ದುಷ್ಟ ಶಕ್ತಿಗಳನ್ನು ದೂರ ಮಾಡಿ, ದುಷ್ಟತನದ ಮೇಲೆ ಜಯ ಸಾಧಿಸುವ ಸಂಕೇತವಾಗಿ ಇದನ್ನು ಆಚರಿಸಲಾಗುತ್ತದೆ. ಮೇವಾರ್ ಕುಟುಂಬದ ರಾಜ ನಿವಾಸದಿಂದ ಮಾಣಿಕ್ ಚೌಕ್‌ನ ಹಾದಿಗಳಲ್ಲಿ ವಿಸ್ತಾರವಾಗಿ ನಡೆಯುವ ಹಾಗೂ ಅಲಂಕಾರಗೊಂಡ ಕುದುರೆಗಳೊಂದಿಗೆ ಭವ್ಯವಾದ ಅರಮನೆಯ ಮೆರವಣಿಗೆಯಲ್ಲಿ ಪಾಲ್ಗೊಳ್ಳಬಹುದಾಗಿದೆ.

5. ಪುರುಲಿಯ, ಪಶ್ಚಿಮ ಬಂಗಾಳ

5. ಪುರುಲಿಯ, ಪಶ್ಚಿಮ ಬಂಗಾಳ

ಪಶ್ಚಿಮ ಬಂಗಾಳದ ಪುರುಲಿಯಾದಲ್ಲಿ ನಡೆಯುವ ಹೋಳಿ ಹಬ್ಬವು ಮೂರು ದಿನಗಳ ಕಾಲ ನಡೆಯುವ ಉತ್ಸವವಾಗಿದ್ದು, ಈ ವರ್ಷ ಅಂದರೆ 2020 ರ ಮಾರ್ಚ್ 9 ರಿಂದ ಪ್ರಾರಂಭವಾಗಿ ಮಾರ್ಚ್ 10ರಂದು ಈ ಹಬ್ಬವು ಕೊನೆಗೊಳ್ಳುತ್ತದೆ.

ಇಲ್ಲಿಯ ಸ್ಥಳೀಯರು ಮತ್ತು ಬುಡಕಟ್ಟು ಕಲಾವಿದರಿಂದ ನಡೆಸಲಾಗುವ ಅದ್ಬುತವಾದ ಚಾವು ನೃತ್ಯ, ದರ್ಬಾರಿ ಜುಮರ್, ನಾಚ್ವಾ ನೃತ್ಯ ಮತ್ತು ಗಮನ ಸೆಳೆಯುವಂತಹ ಹಾಡುಗಳನ್ನೊಳಗೊಂಡ ಆಚರಣೆಯಲ್ಲಿ ಪಾಲ್ಗೊಳ್ಳಿ. ಇದಲ್ಲದೆ ಬೌಲ್ ಸಂಗೀತಗಾರರ ಹಾಡುಗಾರಿಕೆಯನ್ನು ಆನಂದಿಸಿ ಅಲ್ಲದೆ ಮೂಲಭೂತ ಅಭಿವ್ಯಕ್ತಿಗಳನ್ನು ಬಳಸಿಕೊಂಡು ಜೀವನದ ತತ್ತ್ವಶಾಸ್ತ್ರದ ಬಗ್ಗೆ ಅಸಾಧಾರಣವಾಗಿ ಹಾಡುವ ಆಧ್ಯಾತ್ಮಿಕ ಅಲೆದಾಡುವ ಹಾಡುಗಾರರನ್ನು ಇಲ್ಲಿ ಕಾಣಬಹುದಾಗಿದೆ.

ಬಸಂತ್ ಉತ್ಸವದಂತಹ ಜನಪದ ಉತ್ಸವದ ಮೂಲಕ ಪುರುಲಿಯಾದಲ್ಲಿ ಬಂಗಾಳದ ಒಂದು ಅಸಾಧಾರಣ ಅನುಭವವನ್ನು ಪಡೆಯಬಹುದಾಗಿದೆ. ಈ ಹಬ್ಬವನ್ನು ಹಳ್ಳಿಯ ಜನರು ತಮ್ಮ ಸಂಪ್ರದಾಯಗಳನ್ನು ಉಳಿಸಿಕೊಳ್ಳುವ ಸಲುವಾಗಿ ಆಯೋಜಿಸುತ್ತಾರೆ.

6. ಜೈಪುರ, ರಾಜಸ್ಥಾನ

6. ಜೈಪುರ, ರಾಜಸ್ಥಾನ

ಹೋಳಿ ಹಬ್ಬದಂದು ಒಂದು ವಿಭಿನ್ನವಾದ ಅನುಭವವನ್ನು ಪಡೆಯಬೇಕಿದ್ದಲ್ಲಿ ಜೈಪುರ ಸೂಕ್ತವಾದ ಸ್ಥಳವಾಗಿದೆ. ಪ್ರತೀವರ್ಷ ಹೋಳಿ ಹಬ್ಬದ ಮುಂಚಿನ ದಿನದಂದು ಆನೆ ಮೆರವಣಿಗೆಯೊಂದಿಗೆ ಅಭೂತಪೂರ್ವವಾಗಿ ಪ್ರಾರಂಭವಾಗುತ್ತದೆ.

ಉತ್ಸವವು ಕೇವಲ ಉತ್ಸಾಹಭರಿತ ಮೆರವಣಿಗೆಗಳಿಂದ ಮಾತ್ರವಲ್ಲದೆ ಆನೆಗಳ ಸೌಂದರ್ಯ ಸ್ಪರ್ಧೆಗಳನ್ನೂ ಆಯೋಜಿಸುತ್ತದೆ, ಅಚ್ಚರಿ ಪಡಬೇಡ ಬೇಕಾಗಿಲ್ಲ, ಇದು ನಿಜ! ವಿಸ್ತಾರವಾದ ಪ್ರದೇಶದಲ್ಲಿ ಸ್ಥಳೀಯ ಆಹಾರಗಳ ಅಂಗಡಿಗಳು, ರಾತ್ರಿಯಲ್ಲಿ ಆಕಾಶದಲ್ಲಿ ಪಟಾಕಿ ಸಿಡಿಸುವುದು, ಸ್ಥಳೀಯರ ಸುಂದರ ಪ್ರದರ್ಶನಗಳ ಗಲಭೆ, ಮುಂತಾದುವುಗಳನ್ನು ಈ ಸಮಯದಲ್ಲಿ ಕಾಣಬಹುದಾದ ಜೈಪುರವು ಭಾರತದಲ್ಲಿ ಹೋಳಿ ಹಬ್ಬವನ್ನು ಆಚರಿಸಲು ಅತ್ಯಂತ ಉತ್ತಮವಾದ ಸ್ಥಳವಾಗಿದೆ.

7 ಹಂಪಿ , ಕರ್ನಾಟಕ

7 ಹಂಪಿ , ಕರ್ನಾಟಕ

ಸರಳವಾಗಿ ಹೋಲಿಯನ್ನು ಆಚರಿಸುವವರಿಗಾಗಿ ಹಂಪಿಯು ಸೂಕ್ತವಾದ ಸ್ಥಳವಾಗಿದೆ. ಈ ಹಬ್ಬವು ಉತ್ತರ ಭಾರತದಲ್ಲಿಯ ಪ್ರಮುಖವಾದ ಹಬ್ಬವಾದುದರಿಂದ ದಕ್ಷಿಣ ಭಾರತದಲ್ಲಿ ಈ ಹಬ್ಬವನ್ನು ತನ್ನದೇ ಆದ ಶೈಲಿಯಲ್ಲಿ ಆಚರಿಸಲಾಗುತ್ತದೆ.

ಹಂಪಿಯು ಈ ಪಟ್ಟಿಯಲ್ಲಿ ಒಂದು ಪ್ರತ್ಯೇಕವಾಗಿದ್ದು, ಭವ್ಯವಾದ ವಿಜಯನಗರದ ಸಾಮ್ರಾಜ್ಯದ ಅವಶೇಷಗಳ ನಡುವೆ ಇರುವ ಈ ಇಡೀ ಪಟ್ಟಣದಲ್ಲಿ ಈ ಹಬ್ಬವನ್ನು ವಿಶೇಷವಾಗಿ ಡ್ರಮ್ಮಿಂಗ್, ನೃತ್ಯ, ಮತ್ತು ಬಣ್ಣಗಳನ್ನು ಒಬ್ಬರಿಗೊಬ್ಬರು ಎರಚಾಡುವುದರ ಮೂಲಕ ಸಂತೋಷದಿಂದ ಆಚರಿಸಲಾಗುತ್ತದೆ.

8. ನವ ದೆಹಲಿ

8. ನವ ದೆಹಲಿ

ಬಣ್ಣಗಳ ವಿಷಯಕ್ಕೆ ಬಂದಾಗ ಹೋಳಿ ಹಬ್ಬವನ್ನು ರಾಜಧಾನಿ ದೆಹಲಿಯಲ್ಲಿ ವಿಶೇಷವಾಗಿ ಆಚರಿಸಲಾಗುತ್ತದೆ. ವಿವಿಧ ರೋಮಾಂಚಕ ಬಣ್ಣಗಳು ಅಥವಾ ವರ್ಣಗಳಲ್ಲಿ ಮಿಂದೇಳುವ ಈ ನಗರವು ಈ ಹಬ್ಬದ ಸಮಯದಲ್ಲಿ ಉಲ್ಲಾಸದಿಂದ ಹುಚ್ಚೆದ್ದು ಕುಣಿಯುತ್ತದೆ.

ಈ ಹೋಳಿಯ ಸಮಯದಲ್ಲಿ ವಿಭಿನ್ನವಾಗಿ ಆಚರಿಸಲು ಬಯಸುವವರಿದ್ದರೆ, ಹೆಚ್ಚು ಪ್ರಚಲಿತದಲ್ಲಿರುವ ಹಿಂದೆ ಹೋಳಿ ಹಸು (ಕೌ) ಉತ್ಸವ ಎಂದು ಕರೆಯಲಾಗುತ್ತಿದ್ದ ಹೋಳಿ ಉತ್ಸವದಲ್ಲಿ ಭಾಗಿಯಾಗಬಹುದು.

ಅಲ್ಲದೆ ಹೋಳಿಯ ಸಂಭ್ರಮವನ್ನು ಇನ್ನೂ ಇಮ್ಮಡಿಗೊಳಿಸಲು ಮೋಜ಼ಿಕ್ ಉತ್ಸವದಲ್ಲಿ ಭಾಗಿಯಾಗಿ ಇಲ್ಲಿ ವಿಷಕಾರಿಯಲ್ಲದ ಬಣ್ಣಗಳು, ಭಾಂಗ್, ಬೀದಿ ಆಹಾರ ಮತ್ತು 40 ಕ್ಕೂ ಹೆಚ್ಚು ಭಾರತೀಯ ಮತ್ತು ಅಂತರರಾಷ್ಟ್ರೀಯ ಪ್ರದರ್ಶಕರ ಅದ್ಭುತ ತಂಡ ಇತ್ಯಾದಿಗಳ ಅನುಭವ ಪಡೆಯಬಹುದಾಗಿದೆ.

9. ಬೆಂಗಳೂರು , ಕರ್ನಾಟಕ

9. ಬೆಂಗಳೂರು , ಕರ್ನಾಟಕ

ಆಧುನಿಕ ಮಾದರಿಯಲ್ಲಿ ಬಣ್ಣದ ಹಬ್ಬ ಹೋಳಿ ಹಬ್ಬವನ್ನು ಆಚರಿಸಲು ಬಯಸುವಿರಾದರೆ ಬೆಂಗಳೂರು ಸೂಕ್ತವಾದ ಸ್ಥಳವಾಗಿದೆ. ಹೋಳಿ ಹಬ್ಬದ ಅಂಗವಾಗಿ ಅನೇಕ ಕೂಟಗಳನ್ನು ಏರ್ಪಡಿಸಲಾಗುತ್ತದೆ. ಅದರ ನಮೂದುಗಳನ್ನು ವೈಯಕ್ತಿಕ ಮಟ್ಟದಲ್ಲಿ ಅಥವಾ ಜೋಡಿಗಳಿಗಾಗಿಯೋ ಎಂಬುದನ್ನು ಖಚಿತಪಡಿಸಿಕೊಳ್ಳಬಹುದು.

ಈ ಕೂಟಗಳ ಸಂಘಟಕರು ಎಲ್ಲರಿಗೂ ಸಾಕಷ್ಟು ಬಣ್ಣಗಳು ಮತ್ತು ಆಹಾರಗಳ (ಮತ್ತು ಕೆಲವು ಸಂದರ್ಭಗಳಲ್ಲಿ ಆಲ್ಕೊಹಾಲ್ ಕೂಡ) ಸರಬರಾಜಿನ ಬಗ್ಗೆ ಖಚಿತಪಡಿಸಿಕೊಳ್ಳುತ್ತಾರೆ ಮತ್ತು ಮೆರ್ರಿ ಮೇಕಿಂಗ್ ಒಟ್ಟಿಗೆ ಗಂಟೆಗಳವರೆಗೆ ಮುಂದುವರಿಯುತ್ತದೆ. ಈ ಕೂಟಗಳು ಹೆಚ್ಚಾಗಿ ಇಂದಿರಾನಗರ ಮತ್ತು ಕೋರಮಂಗಲದಲ್ಲಿ ಆಯೋಜಿಸಲಾಗುತ್ತದೆ.

10 ಆನಂದಪುರ್ ಸಾಹಿಬ್

10 ಆನಂದಪುರ್ ಸಾಹಿಬ್

ಬಣ್ಣಗಳ ಸಾಮಾನ್ಯ ಪ್ರದರ್ಶನಕ್ಕಿಂತ ಭಿನ್ನವಾಗಿ, ಪಂಜಾಬ್‌ನ ಆನಂದಪುರ ಸಾಹಿಬ್‌ನಲ್ಲಿ ನಡೆಯುವ ವಾರ್ಷಿಕ ಜಾತ್ರೆಯಲ್ಲಿ ಶಕ್ತಿ ಪ್ರದರ್ಶನಕ್ಕಿಡಲಾಗುತ್ತದೆ. ಇಲ್ಲಿ ಪಟ್ಟಣದ ಪುರುಷರು ವಿವಿಧ ರೀತಿಯ ಕುಸ್ತಿ ಮತ್ತು ಸಮರ ಕಲೆಗಳಲ್ಲಿ ಪಾಲ್ಗೊಳ್ಳುತ್ತಾರೆ.

ಹೀಗಾಗಿ, ಇಂತಹ ವಿಷಯಗಳನ್ನು ಇಷ್ಟಪಡುವವರಾಗಿದ್ದರೆ, ಹೋಳಿ ಆಚರಣೆಗಳಿಗಾಗಿ ಈ ಸ್ಥಳದಲ್ಲಿರುವುದು ಹೆಚ್ಚು ಉತ್ತಮ ಇದರಿಂದ ಮನಸ್ಸನ್ನು ಸಂತೃಪ್ತಗೊಳಿಸುವುದಲ್ಲದೆ, ಇದು ಜೀವಿತಾವಧಿಯ ಅವಿಸ್ಮರಣೀಯ ಅನುಭವಗಳಲ್ಲಿ ಒಂದಾಗುವುದು ಖಂಡಿತ.

11 ಬರ್ಸಾನಾ, ಉತ್ತರ ಪ್ರದೇಶ

11 ಬರ್ಸಾನಾ, ಉತ್ತರ ಪ್ರದೇಶ

ಲಾತ್ಮಾರ್ ಹೋಳಿಯಂತಹ ವಿಶೇಷವಾದ ಆಚರಣೆಯ ಮೂಲಕ ಉತ್ತರಪ್ರದೇಶದಲ್ಲಿಯ ಬರ್ಸಾನಾ ಹೋಳಿ ಹಬ್ಬವನ್ನು ಆಚರಿಸಲು ಒಂದು ಅತ್ಯುತ್ತಮ ಹಾಗೂ ಜನಪ್ರಿಯ ಆಯ್ಕೆಯಾಗಿದೆ. ಈ ಹಬ್ಬವನ್ನು ಸಾಂಪ್ರದಾಯಿಕ ಲಾಥ್ ಅಥವಾ ಕೋಲಿನ ಮೂಲಕ ಆಡಲಾಗುತ್ತದೆ.

ಲಾತ್ಮಾರ್ ಹಬ್ಬಕ್ಕೆ ರಾಧಾ ಮತ್ತು ಕೃಷ್ಣರ ದಂತಕಥೆಯೊಂದಿಗೆ ಸಂಬಂಧವಿದೆ. ಭಗವಾನ್ ಕೃಷ್ಣನು ತನ್ನ ಪ್ರೇಯಸಿ ರಾಧಾಳನ್ನು ಭೇಟಿ ಮಾಡಲು ನಂದಗಾಂವ್‌ನಿಂದ ಪ್ರಯಾಣಿಸುತ್ತಿದ್ದಾಗ, ಅವನು ರಾಧಾ ಮತ್ತು ಇತರ ಗೋಪಿಕಾ ಸ್ರ್ತೀಯರು ಅಥವಾ ಹಾಲು ಮಾರುವ ಹೆಂಗಸರನ್ನು ತಮಾಷೆಯಾಗಿ ಲೇವಡಿ ಮಾಡಿದ ಕಾರಣ, ಅವನನ್ನು ಓಡಿಸಲು, ಗೋಪಿಕಾ ಸ್ತ್ರೀಯರು ಲಾಥ್ಗಳನ್ನು (ಕೋಲು) ಬಳಸಿದರು ಎಂದು ಹೇಳಲಾಗುತ್ತದೆ.

ನಿಜವಾದ ಹೋಳಿಗೆ ಒಂದು ವಾರ ಮೊದಲು ಲಾಥ್ಮಾರ್ ಹೋಳಿ ನಂದಗಾಂವ್ ಮತ್ತು ಬರ್ಸಾನದಲ್ಲಿ ನಡೆಯುತ್ತದೆ. ಈ ವರ್ಷ, ಲಾಥ್ಮಾರ್ ಹೋಳಿ 4 ಮಾರ್ಚ್ 2020 ರಂದು ನಡೆಯಲಿದೆ. ನಿಮ್ಮ ಮೇಲೆ ಬೀಳುವ ಲಾತ್‌ಗಳ ಬಗ್ಗೆ ಜಾಗರೂಕರಾಗಿರಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X