Search
  • Follow NativePlanet
Share
» »ಈ ಬೀಚ್‌ಗಳಿಗೆ ಹೋದ್ರೆ ಗೋವಾಕ್ಕೆ ಹೋಗೋ ಅಗತ್ಯನೇ ಇಲ್ಲ

ಈ ಬೀಚ್‌ಗಳಿಗೆ ಹೋದ್ರೆ ಗೋವಾಕ್ಕೆ ಹೋಗೋ ಅಗತ್ಯನೇ ಇಲ್ಲ

ಕೇವಲ ಭಾರತೀಯಷ್ಟೇ ಅಲ್ಲ. ವಿದೇಶಿಯರೂ ಕೂಡಾ ತುಂಬಾ ಇಷ್ಟ ಪಟ್ಟು ಭೇಟಿ ನೀಡುವ ತಾಣವೆಂದರೆ ಅದು ಗೋವಾ. ಗೋವಾದ ಜೀವನ ಶೈಲಿ, ಗೋವಾದ ಬೀಚ್‌ ಎಲ್ಲರನ್ನು ತನ್ನತ್ತ ಸೆಳೆಯುತ್ತದೆ. ಹೀಗಿರುವಾಗ ಅದು ಯಾವಾಗಲೂ ಜನಜಂಗುಳಿಯಿಂದ ಕೂಡಿರುತ್ತದೆ. ಅಷ್ಟೊಂದು ಜನರಿಂದ ತುಂಬಿದ್ದಾಗ ಅಲ್ಲಿ ಸರಿಯಾಗಿ ಬೀಚ್‌ನ್ನು ಎಂಜಾಯ್ ಮಾಡೋಕ್ಕಾಗೋದು ಸ್ವಲ್ಪ ಕಷ್ಟಾನೇ ಸರಿ.

ಅಬ್ಬಾ, ಉತ್ತರ ಕರ್ನಾಟಕದಲ್ಲಿ ಇಷ್ಟೊಂದು ಜಲಪಾತಗಳಿವೆಯೇ!

ಗೋವಾದ ಆ ಜನಜಂಗುಳಿಯಿಂದ ಕೂಡಿದ ಬೀಚ್‌ಗಳಿಂದ ನಿಮಗೆ ಸಾಕಾಗಿಬಿಟ್ಟಿದ್ದರೆ, ಬೀಚ್‌ಗಾಗಿ ಮತ್ತೆ ಮತ್ತೆ ಗೋವಾಕ್ಕೆ ಹೋಗಬೇಕೆಂದೇನಿಲ್ಲ. ಬದಲಾಗಿ ಗೋವಾಕ್ಕೆ ಸರಿಸಮನಾದ ಬೀಚ್‌ಗಳು ಮಹಾರಾಷ್ಟ್ರ ಹಾಗೂ ಕರ್ನಾಟಕದಲ್ಲೂ ಇವೆ. ಹಾಗಾದ್ರೆ ಯಾವುದು ಆ ಬೀಚ್‌ಗಳು ಅನ್ನೋದನ್ನು ನೋಡೋಣವಾ..

ಹರಿಹರೇಶ್ವರ ಬೀಚ್

ಹರಿಹರೇಶ್ವರ ಬೀಚ್

PC: Vaibhav Madhav Naikare

ತಂಪಾದ ಗಾಳಿ, ನಯವಾದ ಮರಳು, ಶಾಂತಯುತವಾದ ನೀರು ಇದರೊಂದಿಗೆ ಸೀ ಫುಡ್ ಹಾಗೂ ಬೀಚ್‌ನ ಬದಿಯಲ್ಲಿ ತಂಗಲು ಸ್ಥಳ ಇವೆಲ್ಲವನ್ನು ಊಹಿಸುವಾಗಲೇ ಎಷ್ಟೊಂದು ಖುಷಿಯಾಗುತ್ತದೆ ಅಲ್ಲವೆ. ಮಹಾರಾಷ್ಟ್ರದ ಹರಿಹರೇಶ್ವರ ಬೀಚ್‌ನಲ್ಲಿ ನೀವು ನಿಮಗಿಷ್ಟ ಬಂದಂತೆ ಸಮಯ ಕಳೆಯಬಹುದು

ತಾರ್ಕಾರ್ಲಿ

ತಾರ್ಕಾರ್ಲಿ

PC:Sballal

ಬಿಳಿ ಮರಳು ಮತ್ತು ನೀಲಿ ನೀರಿನಿಂದ ಕೂಡಿರುವ ತಾರ್ಕಾರ್ಲಿ ಕಡಲತೀರವು ಮಾಲ್ವಾನಿ ಮಸಾಲೆ ಪದಾರ್ಥವನ್ನು ಸವಿಯಲು ಉತ್ತಮ ಸ್ಥಳವಾಗಿದೆ. ಇಲ್ಲಿ ತಾಜಾ ಸಮುದ್ರಾಹಾರವನ್ನು ಸಾಕಷ್ಟು ಬಳಸಲಾಗುತ್ತದೆ. ಮಹಾರಾಷ್ಟ್ರದಲ್ಲಿರುವ ಸುಂದರ ಬೀಚ್‌ಗಳಲ್ಲಿ ಇದೂ ಒಂದು.

ಕೊಯಮತ್ತೂರು-ಬೆಂಗಳೂರಿಗೆ ಬಂದಿದೆ ಡಬಲ್ ಡೆಕ್ಕರ್ ರೈಲು

ಗೋಕರ್ಣ

ಗೋಕರ್ಣ

ಕರ್ನಾಟದ ಉತ್ತರ ಕನ್ನಡದಲ್ಲಿರುವ ಗೋಕರ್ಣ ಕಡಲ ಕಿನಾರೆಯು ಕರ್ನಾಟಕದ ಪ್ರಸಿದ್ಧ ಕಡಲಕಿನಾರೆಗಳಲ್ಲಿ ಒಂದಾಗಿದೆ. ಮಾರ್ಗೊವಿನಿಂದ 130 ಕಿ.ಮೀ ದೂರದಲ್ಲಿರುವ ಗೋಕರ್ಣವು ಭಾರತದ ಅತ್ಯಂತ ಪ್ರಾಚೀನ ಕಡಲ ತೀರವಾಗಿದೆ. ಇಲ್ಲಿ ಸಮೀಪದಲ್ಲಿ ಮುರುಡೇಶ್ವರ ದೇವಸ್ಥಾನವೂ ಇದೆ. ಕಾರವಾರದಿಂದ ಸುಮಾರು 65 ಕಿ.ಮಿ. ದೂರದಲ್ಲಿದೆ. ಗೋಕರ್ಣದಲ್ಲಿ 3 ಸಮುದ್ರ ತೀರಗಳಿದ್ದು ನೋಡಲು ತುಂಬಾ ರಮಣೀಯವಾಗಿದೆ.

ದೇವೆಘರ್, ರಾಯ್‌ಘಡ್‌

ದೇವೆಘರ್, ರಾಯ್‌ಘಡ್‌

PC: Pankaj Dhande

ರಾಯ್‌ಘಡ್ ದೇವೇಘರ್ ಬಹಳ ಶಾಂತವಾದ ಬೀಚ್ ಆಗಿದ್ದು, ನಗರ ಜೀವನದಿಂದ ಎಲ್ಲಾದರೂ ಶಾಂತ ಸ್ಥಳಕ್ಕೆ ಹೋಗಿ ಕಾಲಕಳೆಯಬೇಕೆನ್ನುವವರಿಗೆ ಇದು ಉತ್ತಮವಾದ ತಾಣವಾಗಿದೆ.

ಗಣಪತಿ ಪುಲೆ

ಗಣಪತಿ ಪುಲೆ

PC: Dmpendse

ರತ್ನಗಿರಿಯಲ್ಲಿರುವ ಸಣ್ಣ ನಗರ ಇದಾಗಿದೆ. ಕೊಂಕಣ ಕರಾವಳಿಯಲ್ಲಿರುವ ಅತ್ಯಂತ ಪ್ರಸಿದ್ಧ ಬೀಚ್ ಇದಾಗಿದೆ. ಬೀಚ್ ಸ್ವಚ್ಛವಾಗಿದ್ದು, ತೆಂಗಿನಮರಗಳಿಂದ ಸುತ್ತುವರಿದಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X