Search
  • Follow NativePlanet
Share
» »ಗಣಪನ ಕೆಲವು ಪ್ರಮುಖ ದೇವಾಲಯಗಳು

ಗಣಪನ ಕೆಲವು ಪ್ರಮುಖ ದೇವಾಲಯಗಳು

By Vijay

ತ್ರಿಮೂರ್ತಿಗಳಲ್ಲಿ ಒಬ್ಬನಾದ ಪರಮೇಶ್ವರ ಹಾಗೂ ಜಗನ್ಮಾತೆಯಾದ ಪಾರ್ವತಿ ದೇವಿಯರ ಮಗನಾಗಿ, ಜನಮನಗಳ ಪ್ರೀಯ ದೇವನಾಗಿ, ಬುದ್ಧಿಯ ದೇವನಾಗಿ, ಸಕಲ ವಿಘ್ನಗಳ ವಿನಾಶಕನಾಗಿ, ಯಾವುದೇ ಶುಭ ಕಾರ್ಯಗಳಲ್ಲಿ ಮೊದಲಿಗೆ ಪೂಜಿಸಲ್ಪಡುವವನಾಗಿ, ಬೇಡಿದವರ ಬಯಕೆಯ ತಿರಿಸುವವನಾಗಿ, ಮೂಷಕ ಅರ್ಥಾತ್ ಇಲಿಯ ಮೇಲೆ ಆಸೀನನಾಗಿ, ಭೋಜನ ಪ್ರಿಯನಾಗಿ ಎಲ್ಲರ ಮನಗಳಲ್ಲಿ ರಾಜನಾಗಿ ಮೆರೆಯುತ್ತಿರುವ ಗಣಪತಿಯು ಹಿಂದೂ ಧರ್ಮದ ಪ್ರಮುಖ ದೇವರುಗಳಲ್ಲಿ ಒಬ್ಬನು.

ಗಣಪತಿಗೆಂದೆ ಮುಡಿಪಾದ ಸಾಕಷ್ಟು ದೇವಾಲಯಗಳು ನಮ್ಮ ನಾಡಿನ ಮೂಲೆ ಮೂಲೆಗಳಲ್ಲಿರುವುದನ್ನು ಕಾಣಬಹುದು. ಕೆಲ ದೇವಾಲಯಗಳಲ್ಲಿ ಗಣಪ ವರಸಿದ್ಧಿ ವಿನಾಯಕನಾಗಿ ಕಂಗೊಳಿಸಿದರೆ, ಇನ್ನು ಕೆಲವುಗಳಲ್ಲಿ ಶಕ್ತಿ ಗಣಪತಿಯಾಗಿ, ವಿಘ್ನ ವಿನಾಶಕನಾಗಿ, ಬುದ್ಧಿ ಗಣಪನಾಗಿ, ಕಂಕಣ ಭಾಗ್ಯ ಕರುಣಿಸುವವನಾಗಿ, ಅಷ್ಟೈಶ್ವರ್ಯ ವೃದ್ಧಿಸುವವನಾಗಿ ಹೀಗೆ ನಾನಾ ವಿಧಗಳಲ್ಲಿ, ರೂಪಗಳಲ್ಲಿ ನಮ್ಮ ಗಣಪ ಮಿಂಚುತ್ತಿದ್ದಾನೆ. ಅಗಾಧ ಪ್ರಮಾಣದ ಫ್ಯಾನ್ ಫೊಲೊವಿಂಗ್ ಹೊಂದಿರುವ ಗಣಪನ ಸಹಸ್ರಾರು ದೇವಾಲಯಗಳ ಪೈಕಿ ಕೆಲ ಪ್ರಮುಖವಾದ ದೇವಾಲಯಗಳನ್ನು ಇಲ್ಲಿ ನೀಡಲಾಗಿದೆ.

ಗಣೇಶನ ದೇವಾಲಯಗಳು:

ಗಣೇಶನ ದೇವಾಲಯಗಳು:

ಬಿಕ್ಕಾವೋಲು ಮಹಾಗಣಪತಿ ದೇವಸ್ಥಾನ: ಆಂಧ್ರಪ್ರದೇಶ ರಾಜ್ಯದ ಪೂರ್ವ ಗೋದಾವರಿ ಜಿಲ್ಲೆಯಲ್ಲಿರುವ ಬಿಕ್ಕಾವೋಲು ಎಂಬ ಗ್ರಾಮವು ಮಹಾಗಣಪತಿಯ ದೇವಸ್ಥಾನಕ್ಕೆ ಪ್ರಸಿದ್ಧಿ ಪಡೆದಿದೆ. ಇಲ್ಲಿನ ಗಣಪತಿಯನ್ನು ಬಿಕ್ಕಾವೋಲು ಮಹಾಗಣಪತಿ ಎಂಬ ಹೆಸರಿನಿಂದಲೆ ಕರೆಯಲಾಗುತ್ತದೆ. ಸಾಕಷ್ಟು ಜನ ಭಕ್ತಾದಿಗಳು ವಿಶೇಷವಾಗಿ ಗಣೇಶ ಚತುರ್ಥಿಯ ಹಬ್ಬದಂದು ಇಲ್ಲಿಗೆ ಭೇಟಿ ನೀಡುತ್ತಾರೆ.

ಚಿತ್ರಕೃಪೆ: Adityamadhav83

ಗಣೇಶನ ದೇವಾಲಯಗಳು:

ಗಣೇಶನ ದೇವಾಲಯಗಳು:

ಕಾಣಿಪಾಕಂ ವಿನಾಯಕ ದೇವಾಲಯ/ವರಸಿದ್ಧಿ ವಿನಾಯಕ ದೇವಸ್ಥಾನ: ಆಂಧ್ರದ ಚಿತ್ತೂರು ಪಟ್ಟಣದಿಂದ 11 ಕಿ.ಮೀ ದೂರದಲ್ಲಿರುವ ಕಾಣಿಪಾಕಂ ಎಂಬಲ್ಲಿದೆ ಗಣಪನಿಗೆ ಮುಡಿಪಾದ ಈ ಐತಿಹಾಸಿಕ ದೇವಾಲಯ. ರೋಚಕ ಹಿನ್ನಿಲೆಯನ್ನು ಹೊಂದಿರುವ ಈ ದೇವಸ್ಥಾನದ ಗಣಪನು ಸ್ವಯಂಭು ಎಂದು ಹೇಳಲಾಗುತ್ತದೆ.

ಗಣೇಶನ ದೇವಾಲಯಗಳು:

ಗಣೇಶನ ದೇವಾಲಯಗಳು:

ದೊಡ್ಡ ಗಣೇಶ ಗುಡಿ: ಬೆಂಗಳೂರಿನ ಬಸವನಗುಡಿ ಪ್ರದೇಶದಲ್ಲಿರುವ ದೊಡ್ಡ ಗಣಪತಿಯ ದೇವಸ್ಥಾನವು ಅಪಾರವಾದ ಖ್ಯಾತಿಯನ್ನು ಪಡೆದಿದೆ. ಬೇಡಿದ ಬಯಕೆಯನು ತೀರಿಸುವ ಗಣಪನೆಂದು ಖಾತಿ ಪಡೆದಿರುವ ದೇಗುಲದ ಗಣಪನು ಕಲ್ಲಿನಲ್ಲಿ ಸ್ವಯಂ ಆಕಾರ ಪಡೆದ ಗಣೇಶ ಎನ್ನಲಾಗಿದೆ.

ಗಣೇಶನ ದೇವಾಲಯಗಳು:

ಗಣೇಶನ ದೇವಾಲಯಗಳು:

ಕಡಲೆಕಾಳು ಗಣೇಶ: ವಿಜಯ ನಗರ ಸಾಮ್ರಾಜ್ಯದ ಅತ್ಯದ್ಭುತವಾದ ವೈಭವವನ್ನು ಸಾರುವ ವಿಶಿಷ್ಟ ಐತಿಹಾಸಿಕ ಪ್ರಮುಖ ಹಾಗೂ ಜಗದ್ವಿಖ್ಯಾತ ಪಟ್ಟಣವಾದ ಹಂಪಿಯಲ್ಲಿ ಕಡಲೆಕಾಳು ಗಣೇಶನನ್ನು ನೋಡಬಹುದು.

ಚಿತ್ರಕೃಪೆ: Gopal Vijayaraghavan

ಗಣೇಶನ ದೇವಾಲಯಗಳು:

ಗಣೇಶನ ದೇವಾಲಯಗಳು:

ಸಾಸಿವೆಕಾಳು ಗಣೇಶ: ಇದೂ ಕೂಡ ಹಂಪಿ ಪಟ್ಟಣದಲ್ಲೆ ನೆಲೆಸಿದೆ.

ಚಿತ್ರಕೃಪೆ: Jean-Pierre Dalbéra

ಗಣೇಶನ ದೇವಾಲಯಗಳು:

ಗಣೇಶನ ದೇವಾಲಯಗಳು:

ಕೊಟ್ಟಾರಕ್ಕರಾ ಶ್ರೀ ಮಹಾಗಣಪತಿ ದೇವಸ್ಥಾನ: ದಕ್ಷಿಣ ಭಾರತದ ಪ್ರಸಿದ್ಧ ಶ್ರೀಕ್ಷೇತ್ರಗಳ ಪೈಕಿ ಒಂದಾಗಿರುವ ಕೊಟ್ಟಾರಕ್ಕರಾ ಮಹಾಗಣಪತಿ ದೇವಸ್ಥಾನವು ಕೇರಳ ರಾಜ್ಯದ ಕೊಲ್ಲಂ ಜಿಲ್ಲೆಯ ಕೊಟ್ಟರಕ್ಕರಾ ಎಂಬ ಪಟ್ಟಣದಲ್ಲಿದೆ.

ಗಣೇಶನ ದೇವಾಲಯಗಳು:

ಗಣೇಶನ ದೇವಾಲಯಗಳು:

ಮಧುರ ದೇವಸ್ಥಾನ: ಕೇರಳದ ಕಾಸರಗೋಡು ಪಟ್ಟಣದಿಂದ ಏಳು ಕಿ.ಮೀ ದೂರದಲ್ಲಿ ಮಧುರ ಗಣಪತಿ ದೇವಸ್ಥಾನವಿದೆ. ಸ್ಥಳಪುರಾಣದ ಪ್ರಕಾರ, ಒಮ್ಮೆ ಮಾದ ಸಮುದಾಯದ ಮಹಿಳೆಯೊಬ್ಬಳು ಇಲ್ಲಿ ಸ್ವಯಂಭು ಲಿಂಗವನ್ನು ಶೋಧಿಸಿದಳು ನಂತರ ಇದು ಮಾಧನಾಥೇಶ್ವರ ದೇವಾಲಯವಾಯಿತು. ತರುವಾಯ ಬ್ರಾಹ್ಮಣ ಹುಡುಗನೊಬ್ಬ ಗರ್ಭಗೃಹದ ಗೋಡೆಯ ಮೇಲೆ ಗಣಪನ ಚಿತ್ತಾರ ಬಿಡಿಸಿದ. ದಿನ ಕಳೆದಂತೆ ಗಣಪನ ವಿಗ್ರಹವು ಬೆಳೆಯಿತು ಹಾಗೂ ಪ್ರಸ್ತುತ ಗಣಪನಿಗೆ ಮುಡಿಪಾದ ರೋಚಕ ದೇಗುಲ ಇದಾಗಿದೆ.

ಚಿತ್ರಕೃಪೆ: Vinayaraj

ಗಣೇಶನ ದೇವಾಲಯಗಳು:

ಗಣೇಶನ ದೇವಾಲಯಗಳು:

ಪಳವಂಗಡಿ ಗಣಪತಿ ದೇವಸ್ಥಾನ: ಕೇರಳದ ತಿರುವನಂತಪುರ ನಗರದ ಪೂರ್ವ ಕೋಟೆಯಲ್ಲಿ ಗಣೇಶನ ಈ ದೇವಸ್ಥಾನವಿದೆ. ಈ ದೇವಸ್ಥಾನದಲ್ಲಿ ಗಣಪನ 32 ವಿಭಿನ್ನ ರೂಪಗಳನ್ನು ಕಾಣಬಹುದಾಗಿದೆ.

ಚಿತ್ರಕೃಪೆ: Jithindop

ಗಣೇಶನ ದೇವಾಲಯಗಳು:

ಗಣೇಶನ ದೇವಾಲಯಗಳು:

ಖಜ್ರಾನಾ ಗಣೇಶ ದೇವಾಲಯ: ಮಧ್ಯಪ್ರದೇಶ ರಾಜ್ಯದ ಇಂದೋರ್ ನಗರದಲ್ಲಿರುವ ಖಜ್ರಾನಾ ಗಣೇಶನ ದೇವಾಲಯವು ಸರ್ಕಾರದ ಸುಪರ್ದಿಯಲ್ಲಿರುವ ಗಣೇಶನಿಗೆ ಮುಡಿಪಾದ ಪ್ರಸಿದ್ಧ ದೇವಾಲಯವಾಗಿದೆ. ಪ್ರಸ್ತುತ ಭಟ್ ಪರಿವಾರದವರಿಂದ ನಿರ್ವಹಿಸಲ್ಪಡುತ್ತಿದೆ. ಹಿಂದೆ ಔರಂಗಜೇಬನ ಆಕ್ರಮಣದಿಂದ ತಡೆಯಲು ದೇಗುಲದ ಮೂಲ ವಿಗ್ರಹವನ್ನು ಬಾವಿಯಲ್ಲಿ ಇರಿಸಲಾಗಿತ್ತು. ನಂತರ 1735 ರಲ್ಲಿ ಹೋಲ್ಕರ್ ಮನೆತನದ ಅಹಿಲ್ಯಾಬಾಯಿ ಹೋಲ್ಕರ್ ಬಾವಿಯಿಂದ ವಿಗ್ರಹವನ್ನು ಹೊರತೆಗೆಸಿ ದೇಗುಲವನ್ನು ಪುನರ್ಸ್ಥಾಪಿಸಿದರು.

ಚಿತ್ರಕೃಪೆ: Ssanjayjain

ಗಣೇಶನ ದೇವಾಲಯಗಳು:

ಗಣೇಶನ ದೇವಾಲಯಗಳು:

ಖರಗೋನ ಗಣೇಶ ಮಂದಿರ: ಮಧ್ಯಪ್ರದೇಶ ರಾಜ್ಯದ ಖರಗೋನ ಜಿಲ್ಲೆಯ ಖರಗೋನ್ ಪಟ್ಟಣದಲ್ಲಿರುವ ದೇವಾಲಯಗಳಲ್ಲಿ ಗಣೇಶ ಮಂದಿರವು ಪ್ರಸಿದ್ಧಿ ಪಡೆದಿದೆ.

ಚಿತ್ರಕೃಪೆ: Prasoonpadhye

ಪ್ರಖ್ಯಾತಿಪಡೆದ ಅಷ್ಟವಿನಾಯಕರ ದೇವಸ್ಥಾನಗಳು:

ಪ್ರಖ್ಯಾತಿಪಡೆದ ಅಷ್ಟವಿನಾಯಕರ ದೇವಸ್ಥಾನಗಳು:

ಮೋರೇಶ್ವರ ದೇವಾಲಯ: ಪುಣೆ ಜಿಲ್ಲೆಯ ಮೋರ್ಗಾಂವ್ ನಗರದಲ್ಲಿದೆ ಗಣಪತಿಗೆ ಸಮರ್ಪಿತವಾದ ಮೋರೇಶ್ವರ ದೇವಾಲಯ. ಪುಣೆ ನಗರದಿಂದ 80 ಕಿ.ಮೀ ದೂರದಲ್ಲಿರುವ ಮಯೂರೇಶ್ವರ ಎಂತಲೂ ಕರೆಯಲ್ಪಡುವ ಈ ದೇವಾಲಾಯವು ಅಷ್ಟ ವಿನಾಯಕ ದೇವಾಲಯಗಳ ಪೈಕಿ ಒಂದಾಗಿದೆ.

ಚಿತ್ರಕೃಪೆ: Redtigerxyz

ಪ್ರಖ್ಯಾತಿಪಡೆದ ಅಷ್ಟವಿನಾಯಕರ ದೇವಸ್ಥಾನಗಳು:

ಪ್ರಖ್ಯಾತಿಪಡೆದ ಅಷ್ಟವಿನಾಯಕರ ದೇವಸ್ಥಾನಗಳು:

ಸಿದ್ಧಿವಿನಾಯಕ ದೇವಾಲಯ: ಮಹಾರಾಷ್ಟ್ರದ ಅಹ್ಮದ್ ನಗರ ಜಿಲ್ಲೆಯ ಸಿದ್ಧತೇಕ್ ನಲ್ಲಿ ಅಷ್ಟವಿನಾಯಕ ದೇವಾಲಯಗಳ ಪೈಕಿ ಒಂದಾದ ಈ ಸಿದ್ಧಿ ವಿನಾಯಕನ ಮಂದಿರವಿದೆ. ಭೀಮಾ ನದಿಯ ಉತ್ತರ ದಿಕ್ಕಿನ ದಂಡೆಯಲ್ಲಿ ನೆಲೆಸಿರುವ ಈ ದೇವಾಲಯವು ಕರ್ಜಾತ್ ತಾಲೂಕಿನಲ್ಲಿದೆ.

ಚಿತ್ರಕೃಪೆ: Borayin Maitreya Larios

ಪ್ರಖ್ಯಾತಿಪಡೆದ ಅಷ್ಟವಿನಾಯಕರ ದೇವಸ್ಥಾನಗಳು:

ಪ್ರಖ್ಯಾತಿಪಡೆದ ಅಷ್ಟವಿನಾಯಕರ ದೇವಸ್ಥಾನಗಳು:

ಬಲ್ಲಾಳೇಶ್ವರ ದೇವಾಲಯ: ಮಹಾರಾಷ್ಟ್ರದ ಕರ್ಜಾತ್ ನಿಂದ ಕೇವಲ 30 ಕಿ.ಮೀ ದೂರದಲ್ಲಿರುವ ಪಾಲಿ ಎಂಬ ಹಳ್ಳಿಯಲ್ಲಿ ಗಣಪತಿಗೆ ಸಮರ್ಪಿತವಾದ ಹಾಗು ಅಷ್ಟವಿನಾಯಕರಲ್ಲೊಬ್ಬನಾದ ಬಲ್ಲಾಳೇಶ್ವರ ದೇವಾಲಯವಿದೆ.

ಚಿತ್ರಕೃಪೆ: Borayin Maitreya Larios

ಪ್ರಖ್ಯಾತಿಪಡೆದ ಅಷ್ಟವಿನಾಯಕರ ದೇವಸ್ಥಾನಗಳು:

ಪ್ರಖ್ಯಾತಿಪಡೆದ ಅಷ್ಟವಿನಾಯಕರ ದೇವಸ್ಥಾನಗಳು:

ವರದವಿನಾಯಕ ದೇವಾಲಯ: ಅಷ್ಟವಿನಾಯಕರಲ್ಲಿ ಒಬ್ಬನಾದ ವರದವಿನಾಯಕನ ದೇವಸ್ಥಾನವು ಕರ್ಜಾತ್ ಬಳಿಯಿರುವ ಮಹಾಡ್ ಎಂಬ ಹಳ್ಳಿಯಲ್ಲಿ ಸ್ಥಿತವಿದೆ. ಭಕ್ತಿಯಿಂದ ಬೇಡಿದವರಿಗೆ ವರವನ್ನು ಕರುಣಿಸುವ ಈ ವಿನಾಯಕನ ದೇವಸ್ಥಾನವು ಮಾಘಿ ಉತ್ಸವದ ಸಮಯದಲ್ಲಿ ಭಕ್ತಾದಿಗಳಿಂದ ತುಂಬಿರುತ್ತದೆ.

ಪ್ರಖ್ಯಾತಿಪಡೆದ ಅಷ್ಟವಿನಾಯಕರ ದೇವಸ್ಥಾನಗಳು:

ಪ್ರಖ್ಯಾತಿಪಡೆದ ಅಷ್ಟವಿನಾಯಕರ ದೇವಸ್ಥಾನಗಳು:

ಚಿಂತಾಮಣಿ ದೇವಾಲಯ: ಪುಣೆಯಿಂದ 25 ಕಿ.ಮೀ ದೂರದಲ್ಲಿರುವ ತಿಯೂರ್ ಎಂಬಲ್ಲಿ ಈ ಗಣೇಶನ ದೇವಸ್ಥಾನವಿದೆ. ಇಷ್ಟಾರ್ಥಗಳನ್ನು ಪೂರೈಸುವ ಚಿಂತಾಮಣಿ ಎಂಬ ರತ್ನವನ್ನು ಗಣ ಎಂಬ ಕ್ರೂರ ರಾಜನಿಂದ ಯಾವ ರೀತಿ ಗಣೆಶನು ಹಿಂಪಡೆದ ಹಾಗು ತನ್ನ ಭಕ್ತನಾದ ಋಷಿ ಕಪಿಲನಿಗೆ ಪ್ರದಾನಿಸಿದ ಕುರಿತು ವಿಷಯವನ್ನು ಈ ದೇವಾಲಯ ಹೊಂದಿದೆ.

ಚಿತ್ರಕೃಪೆ: Borayin Maitreya Larios

ಪ್ರಖ್ಯಾತಿಪಡೆದ ಅಷ್ಟವಿನಾಯಕರ ದೇವಸ್ಥಾನಗಳು:

ಪ್ರಖ್ಯಾತಿಪಡೆದ ಅಷ್ಟವಿನಾಯಕರ ದೇವಸ್ಥಾನಗಳು:

ಗಿರಿಜಾತ್ಮಜ ದೇವಾಲಯ: ಪುಣೆ ನಗರದಿಂದ 94 ಕಿ.ಮೀ ದೂರವಿರುವ ನಾರಾಯಣಗಾಂವ್ ನಿಂದ ಕೇವಲ 12 ಕಿ.ಮೀ ದೂರದಲ್ಲಿರುವ ಲೇನ್ಯಾದ್ರಿ ಎಂಬಲ್ಲಿ ಕಂಡುಬರುವ 18 ಬೌದ್ಧ ಗುಹೆಗಳಲ್ಲಿ ಎಂಟನೆಯ ಗುಹೆಯಲ್ಲಿ ಈ ಗಣಪತಿಯ ದೇವಸ್ಥಾನವನ್ನು ಕಾಣಬಹುದು.

ಚಿತ್ರಕೃಪೆ: Magiceye

ಪ್ರಖ್ಯಾತಿಪಡೆದ ಅಷ್ಟವಿನಾಯಕರ ದೇವಸ್ಥಾನಗಳು:

ಪ್ರಖ್ಯಾತಿಪಡೆದ ಅಷ್ಟವಿನಾಯಕರ ದೇವಸ್ಥಾನಗಳು:

ವಿಘ್ನಹರ ಗಣಪತಿ: ಅಷ್ಟವಿನಾಯಕರಲ್ಲಿ ಒಬ್ಬನಾದ ವಿಘ್ನ ವಿನಾಶಕನ ಈ ದೇವಸ್ಥಾನವಿರುವುದು ಒಜರ್ ಎಂಬ ಪ್ರದೇಶದಲ್ಲಿ. ಇದು ಪುಣೆಯಿಂದ 85 ಕಿ.ಮೀ ದೂರವಿದ್ದು ಪುಣೆ-ನಾಶಿಕ್ ರಸ್ತೆಯಲ್ಲಿರುವ ನಾರಾಯಣಗಾಂವ್ ನ ಉತ್ತರಕ್ಕೆ ಕೇವಲ 9 ಕಿ.ಮೀ ದೂರದಲ್ಲಿದೆ.

ಚಿತ್ರಕೃಪೆ: Borayin Maitreya Larios

ಪ್ರಖ್ಯಾತಿಪಡೆದ ಅಷ್ಟವಿನಾಯಕರ ದೇವಸ್ಥಾನಗಳು:

ಪ್ರಖ್ಯಾತಿಪಡೆದ ಅಷ್ಟವಿನಾಯಕರ ದೇವಸ್ಥಾನಗಳು:

ಮಹಾಗಣಪತಿ ದೇವಸ್ಥಾನ: ಅಷ್ಟ ವಿನಾಯಕನ ದೇವಸ್ಥಾನಗಳ ಪೈಕಿ ಒಂದಾದ ಈ ಮಹಾಗಣಪತಿ ದೇವಸ್ಥಾನವು ಮಹಾರಾಷ್ಟ್ರದ ರಂಜನಗಾಂವ್ ಎಂಬಲ್ಲಿ ಸ್ಥಿತವಿದೆ. ಇದು ಪುಣೆಯಿಂದ 50 ಕಿ.ಮೀ ದೂರವಿದ್ದು, ಪುಣೆಯಿಂದ ಕೋರೇಗಾಂವ್ ಗೆ ಹೋಗುವ ಹಾದಿಯಲ್ಲಿ ಶಿಕ್ರಾಪುರ್ ಮೂಲಕ ಇದನ್ನು ತಲುಪಬಹುದು.

ಚಿತ್ರಕೃಪೆ: Palaviprabhu

ಗಣೇಶನ ದೇವಾಲಯಗಳು:

ಗಣೇಶನ ದೇವಾಲಯಗಳು:

ರತ್ನಾಗಿರಿ ಪಟ್ಟಣದಿಂದ ಕೇವಲ 25 ಕಿ.ಮೀ ದೂರದಲ್ಲಿರುವ ಗಣಪತಿಪುಳೆ ಎಂಬ ಕಡಲ ತಡಿಯ ಗ್ರಾಮವು ಒಂದು ಆಕರ್ಷಕ ಹಾಗೂ ಮಹತ್ವ ಪಡೆದ ಪುಣ್ಯ ಕ್ಷೇತ್ರವಾಗಿದೆ. ಹೆಸರೆ ಸೂಚಿಸುವಂತೆ ಈ ಗ್ರಾಮವು ಸಮುದ್ರ ತೀರದಲ್ಲೆ ಇರುವ ಗಣೇಶನ ದೇವಸ್ಥಾನಕ್ಕೆ ಪ್ರಸಿದ್ಧಿ ಪಡೆದಿದೆ.

ಚಿತ್ರಕೃಪೆ: Kprateek88

ಗಣೇಶನ ದೇವಾಲಯಗಳು:

ಗಣೇಶನ ದೇವಾಲಯಗಳು:

ರೇಡಿ ಗಣಪತಿ ದೇವಸ್ಥಾನ: ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ವೆಂಗುರ್ಲಾ ಬಳಿಯಿರುವ ರೇಡಿ ಎಂಬ ಕರಾವಳಿ ಹಳ್ಳಿಯು ವಿಶಿಷ್ಟ ರೂಪದ ಗಣಪತಿಯ ದೇವಸ್ಥಾನಕ್ಕೆ ಬಹು ಖ್ಯಾತಿ ಗಳಿಸಿದೆ.

ಗಣೇಶನ ದೇವಾಲಯಗಳು:

ಗಣೇಶನ ದೇವಾಲಯಗಳು:

ಮುಂಬೈ ನಗರದ ಅತಿ ಶ್ರೀಮಂತ ದೇವಾಲಯವಾದ ಸಿದ್ದಿ ವಿನಾಯಕನ ದೇವಸ್ಥಾನವು ಅತಿ ಪ್ರಮುಖವಾದ ನಗರದ ದೇವಸ್ಥಾನವೂ ಹೌದು. ನಗರದ ಪ್ರಭಾದೇವಿ ಎಂಬ ಪ್ರದೇಶದಲ್ಲಿ ಗಣಪನಿಗೆ ಮುಡಿಪಾದ ಈ ದೇವಾಲಯವಿದೆ.

ಚಿತ್ರಕೃಪೆ: Darwininan

ಗಣೇಶನ ದೇವಾಲಯಗಳು:

ಗಣೇಶನ ದೇವಾಲಯಗಳು:

ಇಡಗುಂಜಿ ಮಹಾಗಣಪತಿ ದೇವಸ್ಥಾನ: ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಬಳಿಯಿರುವ ಇಡಗುಂಜಿ ಗ್ರಾಮವು ಮಹಾಗಣಪತಿಯ ದೇವಸ್ಥಾನಕ್ಕೆ ಬಹು ಪ್ರಖ್ಯಾತಿ ಪಡೆದಿದೆ. ಭಕ್ತಾದಿಗಳು ಲಕ್ಷಾಂತರ ಸಂಖ್ಯೆಯಲ್ಲಿ ಇಡಗುಂಜಿ ಗಣಪನ ದರುಶನ ಕೋರಿ ಈ ಕ್ಷೇತ್ರಕ್ಕೆ ಬರುತ್ತಾರೆ.

ಗಣೇಶನ ದೇವಾಲಯಗಳು:

ಗಣೇಶನ ದೇವಾಲಯಗಳು:

ಮನಕುಳ ವಿನಾಯಕರ್ ದೇವಸ್ಥಾನ: ಭಾರತದ ಕೇಂದ್ರಾಡಳಿತ ಪ್ರದೇಶಗಳ ಪೈಕಿ ಒಂದಾದ ಪುದುಚೆರಿ ಅಥವಾ ಪಾಂಡಿಚೆರಿಯಲ್ಲಿ ಗಣೇಶನ ಈ ಪ್ರಮುಖ ದೇವಸ್ಥಾನವಿದೆ. ತಮಿಳಿನಲ್ಲಿ ಮನಲ್ ಅಂದರೆ ಮರಳು ಕುಳಂ ಎಂದರೆ ಕೊಳ ಎಂದಾಗುತ್ತದೆ. ಅಂತೆಯೆ ಇದಕ್ಕೆ ಮನಕುಳಂ ವಿನಾಯಕ ದೇವಸ್ಥಾನ ಎಂಬ ಹೆಸರು ಬಂದಿದೆ.

ಚಿತ್ರಕೃಪೆ: Jonas Buchholz

ಗಣೇಶನ ದೇವಾಲಯಗಳು:

ಗಣೇಶನ ದೇವಾಲಯಗಳು:

ರಣಥಂಬೋರ್ ಗಣೇಶ ದೇವಾಲಯ: ರಾಜಸ್ಥಾನ ರಾಜ್ಯದ ಸವಾಯಿ ಮಾಧೋಪುರ ಜಿಲ್ಲೆಯ ರಣಥಂಬೋರ್ ಕೋಟೆಯಲ್ಲಿದೆ ಈ ದೇವಸ್ಥಾನ. ಸಾಕಷ್ಟು ಜನ ಪ್ರವಾಸಿಗರು, ಭಕ್ತಾದಿಗಳು ಗಣೇಶನ ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ.

ಚಿತ್ರಕೃಪೆ: Jpmeena

ಗಣೇಶನ ದೇವಾಲಯಗಳು:

ಗಣೇಶನ ದೇವಾಲಯಗಳು:

ಕರ್ಪಕಾ ವಿನಾಯಕರ್ ದೇವಸ್ಥಾನ/ಪಿಳ್ಳಯಾರ್ಪಟ್ಟಿ ದೇವಸ್ಥಾನ: ತಮಿಳುನಾಡಿನ ಶಿವಗಂಗೈ ಜಿಲ್ಲೆಯ ತಿರಪತ್ತೂರಿನಲ್ಲಿರುವ ಕರ್ಪಕಾ ವಿನಾಯಕನ ದೇವಸ್ಥಾನವು ಬಹು ಖ್ಯಾತಿ ಪಡೆದ ಗಣಪನ ದೇವಸ್ಥಾನವಾಗಿದೆ. ದೇವಾಲಯದ ಗರ್ಭಗೃಹವು ಒಂದು ಗುಹೆಯಾಗಿದ್ದು ಆರು ಅಡಿಗಳಷ್ಟು ಎತ್ತರದ ಬಂಡೆಯಲ್ಲಿ ಕೆತ್ತಲಾದ ವಿನಾಯಕನ ವಿಗ್ರಹವನ್ನು ಹೊಂದಿದೆ.

ಗಣೇಶನ ದೇವಾಲಯಗಳು:

ಗಣೇಶನ ದೇವಾಲಯಗಳು:

ಉಚ್ಚಿ ಪಿಳ್ಳಯಾರ್ ಗಣೇಶನ ದೇವಾಲಯ: ತಮಿಳುನಾಡಿನ ತಿರುಚ್ಚಿಯಲ್ಲಿರುವ ಕಲ್ಲಿನ ಕೋಟೆಯ ಮೇಲೆ ಗಣೇಶನಿಗೆ ಮುಡಿಪಾದ ಈ ಸುಪ್ರಸಿದ್ಧ ದೇವಾಲಯವಿದೆ. ಪೌರಾನಿಕತೆಯ ಪ್ರಕಾರ, ಈ ಒಂದು ಸ್ಥಳದಲ್ಲಿ ಗಣೇಶನು ಶ್ರೀರಂಗಂನಲ್ಲಿ ರಂಗನಾಥನ ವಿಗ್ರಹವನ್ನು ಪ್ರತಿಷ್ಠಾಪಿಸಿದ ನಂತರ ವಿಭಿಷಣನಿಂದ ತಪ್ಪಿಸಿಕೊಳ್ಳುತ್ತಾನೆ.

ಚಿತ್ರಕೃಪೆ: Neilsatyam

ಗಣೇಶನ ದೇವಾಲಯಗಳು:

ಗಣೇಶನ ದೇವಾಲಯಗಳು:

ಗಣೇಶ ಮಂದಿರ: ಉತ್ತರಪ್ರದೇಶ ರಾಜ್ಯದ ಝಾನ್ಸಿ ಪಟ್ಟಣದಲ್ಲಿ ಗಣೇಶನಿಗೆ ಮುಡಿಪಾದ ಈ ಭವ್ಯ ದೇವಾಲಯವಿದೆ. ಪ್ರತಿ ಬುಧವಾರಗಳಂದು ಭಕ್ತರು ತಂಡೋಪ ತಂಡವಾಗಿ ಗಣೇಶನ ದರುಶನ ಕೋರಿ ಇಲ್ಲಿಗೆ ಭೇಟಿ ನೀಡುತ್ತಾರೆ. ಇದೊಂದು ಪುರಾತನ ಮಂದಿರವಾಗಿದೆ.

ಚಿತ್ರಕೃಪೆ: Prasann kanade

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X