Search
  • Follow NativePlanet
Share
ಮುಖಪುಟ » ಸ್ಥಳಗಳು » ಕಾಸರಗೋಡು » ಹವಾಮಾನ

ಕಾಸರಗೋಡು ಹವಾಮಾನ

ಕಾಸರಗೋಡಿಗೆ ಸೆಪ್ಟೆಂಬರ್ ನಿಂದ ಅಕ್ಟೋಬರ್ ತಿಂಗಳುಗಳ ನಡುವಿನ ಅವಧಿಯಲ್ಲಿ ಭೇಟಿ ಕೊಡುವುದು ಉತ್ತಮ ಕಾಲವಾಗಿದೆ. ಈ ಅವಧಿಯಲ್ಲಿ ಇಲ್ಲಿನ ವಾತಾವರಣ ಬಿಸಿಲು ಅಲ್ಲದೆ ಮತ್ತು ಚಳಿಯು ಅಲ್ಲದೆ ಅತ್ಯಂತ ಆಹ್ಲಾದಕರವಾಗಿರುತ್ತದೆ. ಹಾಗಾಗಿ ಸೆಪ್ಟೆಂಬರ್ ತಿಂಗಳಿನಲ್ಲಿ ಕಾಸರಗೋಡಿನ ಪರಂಪರೆ ಮತ್ತು ಸಂಸ್ಕೃತಿಯನ್ನು ಕಣ್ತುಂಬಿಕೊಳ್ಳಲು ನಿಮ್ಮ ಪ್ರವಾಸದ ಬ್ಯಾಗ್‍ಗಳನ್ನು ಸಜ್ಜುಗೊಳಿಸಿ. ಈ ವಿಚಾರದಲ್ಲಿ ಈ ಸಣ್ಣ ಪಟ್ಟಣ ನಿಮ್ಮನ್ನು ಎಂದಿಗು ನಿರಾಸೆಗೊಳಿಸುವುದಿಲ್ಲ.

ಬೇಸಿಗೆಗಾಲ

ಬೇಸಿಗೆಕಾಲವು ಕಾಸರಗೋಡಿನಲ್ಲಿ ತುಂಬ ಬಿಸಿಲಿನಿಂದ ಕೂಡಿರುತ್ತದೆ. ಹಾಗಾಗಿ ಈ ಕಾಲದಲ್ಲಿ ಇಲ್ಲಿಗೆ ಭೇಟಿ ಕೊಡುವುದು ಅಷ್ಟೊಂದು ಸಮಂಜಸವಲ್ಲ. ಮಾರ್ಚ್ ಮತ್ತು ಮೇ ತಿಂಗಳುಗಳಲ್ಲಿ ಇಲ್ಲಿ ಸಾಮಾನ್ಯವಾಗಿ 20 -30 ಡಿಗ್ರಿ ಸೆಲ್ಶಿಯಸ್ ಉಷ್ಣಾಂಶವಿರುತ್ತದೆ.  ಮೇ ಇಲ್ಲಿ ಅತ್ಯಂತ ಬಿಸಿಲಿನಿಂದ ಕೂಡಿದ ತಿಂಗಳಾಗಿದೆ.

ಮಳೆಗಾಲ

ಜೂನ್‍ನಲ್ಲಿ ಕಾಸರಗೋಡಿನಲ್ಲಿ ನೈಋತ್ಯ ಮಾನ್ಸೂನ್ ಮಾರುತಗಳ ಕಾರಣದಿಂದ ಭಾರೀ ವರ್ಷಧಾರೆಯು ಸುರಿಯುತ್ತದೆ. ಇಲ್ಲಿ ಸರಾಸರಿ 3500 ಮಿ.ಮೀ ಮಳೆಯಾಗುತ್ತದೆ. ಮಳೆಗಾಲವು ಇಲ್ಲಿ ಜೂನ್‍ನಲ್ಲಿ ಪ್ರಾರಂಭವಾಗಿ ಆಗಸ್ಟ್ ನಲ್ಲಿ ಅಂತ್ಯವಾಗುತ್ತದೆ. ಆಗಸ್ಟ್ ಅಂತ್ಯಭಾಗದಲ್ಲಿ ಇಲ್ಲಿನ ಹವೆಯು ಅತ್ಯಂತ ಆಹ್ಲಾದಕರವಾಗಿರುತ್ತದೆ.

ಚಳಿಗಾಲ

ಚಳಿಗಾಲವು ಕಾಸರಗೋಡಿನಲ್ಲಿ ಡಿಸೆಂಬರ್ ನಲ್ಲಿ ಪ್ರಾರಂಭವಾಗಿ ಮಾರ್ಚ್ ವರೆಗೆ ಇರುತ್ತದೆ. ಈ ಅವಧಿಯು ಇಲ್ಲಿ ತುಂಬಾ ಚಳಿಯಿಂದ ಕೂಡಿರುತ್ತದೆ. ಚಳಿಗಾಲದಲ್ಲಿ ಇಲ್ಲಿನ ಉಷ್ಣಾಂಶವು 18 ರಿಂದ 25 ಡಿಗ್ರಿ ಸೆಲ್ಶಿಯಸ್‍ವರೆಗು ಇರುತ್ತದೆ. ಈ ಸಮಯದಲ್ಲಿ ಇಲ್ಲಿನ ಹವೆಯು ತಂಪಾಗುತ್ತದೆ. ಈ ಕಾಲದಲ್ಲಿ ಇಲ್ಲಿಗೆ ಭೇಟಿಕೊಡುವುದರಿಂದ ಮೈಮನಗಳಿಗೆ ಮುದ ನೀಡಬಹುದು.