Search
  • Follow NativePlanet
Share
ಮುಖಪುಟ » ಸ್ಥಳಗಳು» ತಿರುಚ್ಚಿ

ತಿರುಚ್ಚಿ - ಸಾಂಪ್ರದಾಯಿಕತೆಗೆ ಮೆರುಗು ಕೊಟ್ಟ ಆಧುನಿಕತೆ

18

ತಿರುಚ್ಚಿ ಅಥವಾ ತಿರುಚನಾಪಳ್ಳಿಯು ದಕ್ಷಿಣ ಭಾರತೀಯ ರಾಜ್ಯವಾದ ತಮಿಳುನಾಡಿನಲ್ಲಿ ಕಂಡು ಬರುವ ಒಂದು ಪ್ರಮುಖ ಕೈಗಾರಿಕಾ ಮತ್ತು ಶೈಕ್ಷಣಿಕ ನಗರವಾಗಿದೆ. ತಿರುಚ್ಚಿ ಅದೇ ಹೆಸರಿನ ಜಿಲ್ಲೆಯ ಆಡಳಿತಾತ್ಮಕ ಕೇಂದ್ರಸ್ಥಾನವಾಗಿಯೂ ಕಾರ್ಯ ನಿರ್ವಹಿಸುತ್ತಿದೆ. ಕಾವೇರಿ ನದಿ ತೀರದಲ್ಲಿರುವ ಈ ನಗರವು  ತಮಿಳುನಾಡಿನ ನಾಲ್ಕನೇ ಅತಿದೊಡ್ಡ ಪುರಸಭೆ ಮತ್ತು ನಗರೀಕರಣತೆಯನ್ನು ಹೊಂದಿದೆ. ಈ ಸ್ಥಳದ ಹೆಸರಿನ ಮೂಲದ ಕುರಿತು ಹಲವಾರು ಚಿಂತನೆಗಳು ಇವೆ.

ತಿರುಚನಾಪಳ್ಳಿ ಈ ಹೆಸರು ಸಂಸ್ಕೃತ ಶಬ್ದವಾದ ’ತ್ರಿಶಿರಾಪುರಂ’ ನಿಂದ ಹುಟ್ಟಿಕೊಂಡಿದೆ. ಈ ಪದವು 'ತ್ರಿಶಿರಾ' ಮತ್ತು 'ಪುರಂ' ಎಂಬ ಎರಡು ಶಬ್ದಗಳನ್ನು ಹೊಂದಿದ್ದು, ತ್ರಿಶಿರಾ ಎಂದರೆ ಮೂರು ತಲೆಗಳು ಎಂದರ್ಥ. ಪಲ್ಲಿ ಅಥವಾ ಪುರಂ ಎಂದರೆ ನಗರ ಎಂದರ್ಥ. ಮೂರು ತಲೆಯುಳ್ಳ ರಾಕ್ಷಸನೊಬ್ಬ ಈ ನಗರದ ಹತ್ತಿರದಲ್ಲಿದ್ದ ಅರಣ್ಯದಲ್ಲಿ ತಪಸ್ಸಿಗೆ ಕೂತು ಶಿವನನ್ನು ಪ್ರಾರ್ಥಿಸಿ ವರವನ್ನು ಪಡೆದನಂತೆ. ಆದ್ದರಿಂದ ಈ ನಗರಕ್ಕೆ ತಿರುಚನಾಪಳ್ಳಿ ಎಂಬ ಹೆಸರು ಬಂದಿತು ಎಂಬ ನಂಬಿಕೆಯೂ ಇದೆ.

ತೆಲುಗು ಪಂಡಿತರಾದ ಸಿ.ಪಿ ಬ್ರೌನ್ ಪ್ರಕಾರ, ತಿರುಚನಾಪಳ್ಳಿ ಈ ಹೆಸರು ’ಚಿರುತ ಪಳ್ಳಿ’ ಎಂಬ ಹೆಸರಿನಿಂದ ಹುಟ್ಟಿಕೊಂಡಿತು. ಚಿರುತ ಪಳ್ಳಿ ಎಂದರೆ ’ಸಣ್ಣ ನಗರ’ ಎಂದರ್ಥ. ಹದಿನಾರನೇಯ ಶತಮಾನದ ಒಂದು ಶಿಲಾ ಶಾಸನದ ದಲ್ಲಿ ತಿರುಚನಾಪಳ್ಳಿಯನ್ನು ತಿರು-ಸ್ಸಿಲಾ-ಪಳ್ಳಿ ಎಂದು ಉಲ್ಲೇಖಿಸಲಾಗಿದೆ. ತಿರು-ಸ್ಸಿಲಾ-ಪಳ್ಳಿ ಎಂದರೆ ಪವಿತ್ರ ಶಿಲಾ ಪಟ್ಟಣ ಎಂದರ್ಥ.

ಕೆಲವು ಪಂಡಿತರ ಹೇಳಿಕೆಯ ಪ್ರಕಾರ, ’ತಿರುಚನಾಪಳ್ಳಿ” ಈ ಹೆಸರು ತಿರು-ಚಿನ್ನ-ಪಳ್ಳಿ ಎಂಬ ಹೆಸರಿನಿಂದ ಹುಟ್ಟಿಕೊಂಡಿದೆ. ಇದರ ಅರ್ಥ ಪವಿತ್ರ ಚಿಕ್ಕ ನಗರ. ಈ ಹೆಸರಿನ ಕುರಿತು ಮದ್ರಾಸ ಗ್ಲೋಸರಿ ಹೇಳುವುದು ಏನೆಂದರೆ ’ತಿರುಚನಾ ಪಳ್ಳಿ ಈ ಹೆಸರು ತಿರುಸ್ಸಿನಪಳ್ಳಿ ಎಂಬ ಹೆಸರಿನಿಂದ ಉತ್ಪತ್ತಿಯಾಗಿದೆ. ಇದರ ಅರ್ಥ ಷಿನಾ ಸಸ್ಯಗಳ ಪವಿತ್ರ ಹಳ್ಳಿ ಎಂದರ್ಥ. ಬ್ರಿಟಿಷರ ಆಡಳಿತದ ಅವಧಿಯಲ್ಲಿ ತಿರುಚನಾಪಳ್ಳಿಯನ್ನು ತ್ರಿಚಿನೊಪೊಳಿ ಎಂದು ಉಲ್ಲೇಖಿಸಲಾಗುತ್ತಿತ್ತು. ಮುಂದೆ ಅದು ತ್ರಿಚಿ ಅಥವಾ ತಿರುಚ್ಚಿ ಎಂದು ಸಂಕ್ಷಿಪ್ತ ರೂಪವನ್ನು ಪಡೆಯಿತು.

ಇತಿಹಾಸದ ಪುಟಗಳಿಂದ

ತಿರುಚ್ಚಿ ನಗರವು ತಮಿಳುನಾಡಿನ ಅತ್ಯಂತ ಹಳೆಯ ಪ್ರದೇಶಗಳಲ್ಲಿ ಒಂದಾಗಿದೆ. ಇಲ್ಲಿ ಪುರಾತನಕಾಲದಿಂದಲೂ ಜನವಾಸ್ತವ್ಯ ಇತ್ತು ಎನ್ನಲು ಅನೇಕ ಸಾಕ್ಷಿಗಳಿವೆ. ಈ ನಗರವು  ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿದ್ದು, ಅನೇಕ ಮಹಾನ ಸಾಮ್ರಾಜ್ಯಗಳ ಏರಿಳಿತವನ್ನು ಕಂಡಿದೆ. ಕ್ರಿಸ್ತಶಕ ಪೂರ್ವ 2 ನೇ ಸಹಸ್ರಮಾನದಲ್ಲಿದ್ದ ಅನೇಕ ಪಳಿಯುಳಿಕೆಗಳು, ವಸ್ತುಗಳು ಈ ನಗರದಲ್ಲಿ ಪತ್ತೆಯಾಗಿವೆ. ಇವುಗಳನ್ನೇ ಅತ್ಯಂತ ಪ್ರಮುಖ ದಾಖಲೆಗಳು ಎಂದು ಹೇಳಬಹುದು.

ಕ್ರಿಸ್ತಶಕ ಪೂರ್ವ 3 ನೇ ಶತಮಾನದಲ್ಲಿ ಈ ಪ್ರದೇಶವು ಆರಂಭಿಕ ಚೋಳ ರಾಜರಿಂದ ಆಳಲ್ಪಟ್ಟಿತು. ಮಧ್ಯಕಾಲೀನ ಅವಧಿಯಲ್ಲಿ ಅನೇಕ ರಾಜರ ಆಡಳಿತವನ್ನು ಈ ಪ್ರದೇಶ ಕಂಡಿದೆ. ಕ್ರಿಸ್ತ ಶಕ ಆರನೇ ಶತಮಾನದಲ್ಲಿ ಈ ಪ್ರದೇಶವನ್ನು ಪಲ್ಲವರ ದೊರೆಯಾದ ಒಂದನೇ ಮಹೇಂದ್ರವರ್ಮನನು ಆಳಿದನು.  ಅವನು ಇಲ್ಲಿ ಅನೇಕ ಕಲ್ಲಿನ ಕೋಟೆಗಳನ್ನು ಮತ್ತು ಗುಹಾದೇವಾಲಯಗಳನ್ನು ನಿರ್ಮಿಸಿದನು. ಪಲ್ಲವರ ನಂತರ ಈ ಪ್ರದೇಶವು ಮಧ್ಯಕಾಲೀನ ಚೋಳರ ಕೈವಶವಾಯಿತು. ಅವರು ಈ ಪ್ರದೇಶವನ್ನು ಕ್ರಿಸ್ತ ಶಕ ಹದಿಮೂರನೇ ಶತಮಾನದವರೆಗೂ ಆಳಿದರು.

ಮಧ್ಯಕಾಲೀನ ಚೋಳರ ನಂತರ ಈ ಪ್ರದೇಶವನ್ನು ಪಾಂಡ್ಯರು 1216 ರಿಂದ 1311 ರವರೆಗೆ ಆಳಿದರು. ನಂತರ ದೆಹಲಿ ಸುಲ್ತಾನರ ಸೇನಾಧಿಪತಿಯಾಗಿದ್ದ ಮಲಿಕ್ ಕಾಫರನು ಪಾಂಡ್ಯರನ್ನು ಸೋಲಿಸಿ ತಿರುಚ್ಚಿಯನ್ನು ತನ್ನದಾಗಿಸಿಕೊಂಡನು. ನಂತರ ಈ ಪ್ರದೇಶವನ್ನು 1311ರಿಂದ 1338 ರವರೆಗೆ ದೆಹಲಿ ಮತ್ತು ಮಧುರೈ ಸುಲ್ತಾನರು ಆಳಿದರು. ಸುಲ್ತಾನರ ನಂತರ ಈ ಪ್ರದೇಶವು ವಿಜಯನಗರ ಸಾಮ್ರಾಜ್ಯದ ವಶಕ್ಕೆ ಬಂದಿತು.

ಮುಂದೆ 1736 ರ ವರೆಗೆ ಇದು ಮಧುರೈ ನಾಯಕ ಸಾಮ್ರಾಜ್ಯದ ಆಧೀನದಲ್ಲಿತ್ತು. ನಂತರ ಮಧುರೈ ನಾಯಕ ಸಾಮ್ರಾಜ್ಯದ ರಾಣಿಯಾದ ಮೀನಾಕ್ಷಿಯು ಆತ್ಮಹತ್ಯೆಯನ್ನು ಮಾಡಿಕೊಂಡ ಬಳಿಕ ಈ ಪ್ರದೇಶವು ಕರ್ನಾಟಿಕ ಸಾಮ್ರಾಜ್ಯದ ಚಾಂದ ಸಾಹೀಬನ ಕೈವಶವಾಯಿತು. ಚಾಂದ ಸಾಹಿಬನು ಈ ಪ್ರದೇಶವನ್ನು 1736 ರಿಂದ 1741 ರವರೆಗೆ ಆಳಿದನು. ಚಾಂದ ಸಾಹಿಬನು ಇದನ್ನು ಕರ್ನಾಟಿಕ್ ಸಾಮ್ರಾಜ್ಯದಲ್ಲಿ ವಿಲೀನ ಮಾಡುವುದಕ್ಕಿಂತ ಮುಂಚೆಯೇ ಮರಾಠರು ಮತ್ತು ಜನರಲ್ ಮುರಳಿರಾವ ತಿರುಚ್ಚಿಯನ್ನು ಆಕ್ರಮಿಸಿ ಅದನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡರು.

ಇವರು ಈ ಪ್ರದೇಶವನ್ನು 1741ರಿಂದ 1743 ರವರೆಗೂ ಅಳಿದರು. ಅದಾಗ್ಯೂ 1751 ರಲ್ಲಿ ಚಾಂದ ಸಾಹಿಬನು ಕರ್ನಾಟಿಕ ನವಾಬನನ್ನು ಅಧಿಕಾರದಿಂದ ಕೆಳಗಿಳಿಸಿದನು. ಎರಡನೇಯ ಕರ್ನಾಟಿಕ ಯುದ್ಧದಲ್ಲಿ ಈ ಸಂಘರ್ಷ ಉತ್ತುಂಗಕ್ಕೇರಿತು. ಒಂದು ಬದಿಯಲ್ಲಿ ಬ್ರಿಟಿಷರು ಮತ್ತು ಕರ್ನಾಟಿಕದ ನವಾಬನಾದ ಮೊಹಮ್ಮದ ಅಲಿ ಖಾನ ಇದ್ದರೆ, ಇನ್ನೊಂದು ಬದಿಯಲ್ಲಿ ಚಾಂದ ಸಾಹಿಬ ಮತ್ತು ಫ್ರೆಂಚರು ಹೋರಾಟಕ್ಕೆ ಇಳಿದಿದ್ದರು. ಈ ಯುದ್ಧದಲ್ಲಿ ಬ್ರಿಟೀಷರು ವಿಜಯಶಾಲಿಗಳಾದರು.

ಮೊಹಮ್ಮದ ಅಲಿ ಖಾನ್ ನನ್ನು ಕರ್ನಾಟಿಕ ನವಾಬನನ್ನಾಗಿ ಮಾಡಿ ಸಿಂಹಾಸನದ ಮೇಲೆ ಕೂಡಿಸಿದರು. ತಿರುಚ್ಚಿಯು ಈಗ ಕರ್ನಾಟಿಕ ಸಾಮ್ರಾಜ್ಯದ ಭಾಗವಾಗಿತ್ತು. ಮುಂದೆ 1801 ರಲ್ಲಿ ಕರ್ನಾಟಿಕ್ ಸಾಮ್ರಾಜ್ಯವನ್ನು ಬ್ರಿಟೀಷರು ತಮ್ಮ ಕೈವಶ ಮಾಡಿಕೊಂಡು ಅದನ್ನು ಮದ್ರಾಸ್ ಪ್ರಾಂತ್ಯದಲ್ಲಿ ವಿಲಿನಗೊಳಿಸಿದರು. ಬ್ರಿಟೀಷರ ಆಡಳಿತದ ಅವಧಿಯಲ್ಲಿ ತಿರುಚ್ಚಿಯು ಒಂದು ಪ್ರಮುಖ ಮತ್ತು ಅತ್ಯಂತ ಜನಪ್ರಿಯ ನಗರವಾಗಿ ಹೊರಹೊಮ್ಮಿತು.

ತಿರುಚ್ಚಿ ನಗರದ ಸುತ್ತಮುತ್ತಲಿರುವ ಆಕರ್ಷಣೆಗಳು

ತಿರುಚ್ಚಿ ನಗರವು ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ಸಾಂಪ್ರದಾಯಿಕತೆಯನ್ನು ಹೊಂದಿದ್ದು, ಅದರ ಪರಿಣಾಮವಾಗಿ ನೀವು ಈ ನಗರದಲ್ಲಿ ಅತ್ಯದ್ಭುತ ಐತಿಹಾಸಿಕ ಧಾರ್ಮಿಕ ಸ್ಥಳಗಳು ಮತ್ತು ಕೋಟೆಗಳನ್ನು ನೀವು ನೋಡಬಹುದು. ವೀರ ಮಲೈ ಮುರುಗನ್ ದೇವಸ್ಥಾನ, ಕಲ್ಲಿನ ಕೋಟೆಯ ದೇವಸ್ಥಾನ, ಶ್ರೀ ರಂಗನಾಥ ಸ್ವಾಮಿಯ ದೇವಸ್ಥಾನ, ಶ್ರೀ ಜಂಬುಕೇಶ್ವರ ದೇವಸ್ಥಾನ, ವೆಕ್ಕಾಲಿ ಅಮ್ಮನ ದೇವಸ್ಥಾನ, ಗುಣಶೀಲಮ್ ವಿಷ್ಣು ದೇವಸ್ಥಾನ, ನಾದಿರ್ ಷಾ ಮಸೀದಿ, ಸೆಂಟ್ ಜಾನ್ ಚರ್ಚ್  ಮತ್ತು ಸೆಂಟ್ ಜೊಸೆಫ್ ಚರ್ಚ ಇವೆಲ್ಲವೂ ತ್ರಿಚಿ ನಗರದ ಶ್ರೀಮಂತ ಇತಿಹಾಸದ ಕೊಡುಗೆಗಳಾಗಿವೆ.

ನವಾಬನ ಅರಮನೆ,ಕಲ್ಲಿನೈ ಆಣೆಕಟ್ಟು ಮತ್ತು ಮುಕ್ಕೊಂಬು ಆಣೆಕಟ್ಟು ಇವುಗಳು ಅತ್ಯಂತ ಹಳೆಯದಾಗಿದ್ದು , ತ್ರಿಚಿ ನಗರದ ಅತ್ಯಂತ ಮಹತ್ವದ ಆಕರ್ಷಣೆ ಮತ್ತು ಕೊಡುಗೆಗಳಾಗಿವೆ. ತಿರುಚ್ಚಿ ನಗರದಲ್ಲಿ ಪೊಂಗಲ್, ತಮಿಳು ನೂತನ ವರ್ಷ, ಆದಿ ಪೆರುಕ್ಕು,ವೈಕುಂಠ ಏಕಾದಶಿ,ನವರಾತ್ರಿ,ಬಕ್ರಿದ್, ಶ್ರೀ ರಂಗಂ ಕರ್ ಹಬ್ಬ. ದೀಪಾವಳಿ ಮತ್ತು ಹೋಳಿಹಬ್ಬ ಸೇರಿದಂತೆ ಇನ್ನು ಅನೇಕ ಹಬ್ಬಗಳನ್ನು ಇಲ್ಲಿ ಹೆಚ್ಚು ವೈಭವ ಮತ್ತು ಸಂಭ್ರಮದಿಂದ ಆಚರಿಸುತ್ತಾರೆ.

ಈ ಹಬ್ಬಗಳು ತ್ರಿಚಿ ನಗರಕ್ಕೆ ವಿಶೇಷ ಆಕರ್ಷಣೆಯನ್ನು ತಂದುಕೊಡುತ್ತವೆ. ನಗರದಲ್ಲಿ ಸ್ಥಳೀಯ ಕರಕುಶಲ ಮತ್ತು ಆಭರಣಗಳು ನಿಮಗೆ ಒಳ್ಳೆಯ ಶಾಪಿಂಗ್ ಅನುಭವವನ್ನು ಮಾಡಿಸುತ್ತದೆ ಎಂಬುದರಲ್ಲಿ ಸಂಶಯವಿಲ್ಲ. ಈ ಎಲ್ಲ ಕಾರಣಗಳಿಂದ ತ್ರಿಚಿ ನಗರವನ್ನು ಪ್ರವಾಸಿಗರ ಸ್ವರ್ಗ ಎಂದು ಕರೆದರೆ ತಪ್ಪಿಲ್ಲ.

ತಿರುಚ್ಚಿಯೆಡೆಗೆ ಪ್ರಯಾಣ

ತಿರುಚ್ಚಿ ನಗರಕ್ಕೆ ದೇಶದ ಎಲ್ಲ ಭಾಗಗಳಿಂದಲೂ ನೀವು ಸುಲಭವಾಗಿ ತಲುಪಬಹುದು. ವಾಯು ಸಾರಿಗೆ, ರೈಲ್ವೆ, ಬಸ್ ಸಾರಿಗೆಯ ಮೂಲಕ ನೀವು ತಿರುಚ್ಚಿ ನಗರವನ್ನು ಆರಾಮದಾಯಕವಾಗಿ ತಲುಪಬಹುದು. ತಿರುಚನಾಪಳ್ಳಿ ವಿಮಾನ ನಿಲ್ದಾಣವು ಅಂತರಾಷ್ಟ್ರೀಯ ವಿಮಾನ ನಿಲ್ದಾಣವಾಗಿದ್ದು, ಇದು ಚೆನ್ನೈ,ಬೆಂಗಳೂರು,ಶ್ರೀಲಂಕಾ, ಕೌಲಾಲಾಲಂಪೂರಗಳೊಂದಿಗೆ ಸಂಪರ್ಕವನ್ನು ಹೊಂದಿದೆ.

ತಿರುಚ್ಚಿಯು ರಾಷ್ಟ್ರೀಯ ಹೆದ್ದಾರಿಗಳಾದ NH 45, NH 45B, 67, 210 and NH 227 ಗಳೊಂದಿಗೆ ಸಂಪರ್ಕವನ್ನು ಹೊಂದಿದೆ. ಆದ್ದರಿಂದ ಇಲ್ಲಿ ಬಸ್  ಅನುಕೂಲವು ತುಂಬಾ ಚೆನ್ನಾಗಿದೆ. ತಮಿಳುನಾಡಿನ ಎಲ್ಲ ಪ್ರಮುಖ ನಗರಗಳಿಗೆ ತಿರುಚ್ಚಿ ನಗರದಿಂದ ಬಸ್ ಸೌಲಭ್ಯವಿದೆ. ತಿರುಚ್ಚಿಯು ಭಾರತದ ಅನೇಕ ಪ್ರಮುಖ ನಗರಗಳೊಂದಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ ಮತ್ತು ದಕ್ಷಿಣ ಭಾರತದ ಅನೇಕ ನಗರಗಳಿಗೆ ನೇರ ರೈಲ್ವೆ ಸೌಲಭ್ಯವನ್ನು ಹೊಂದಿದೆ.

ತಿರುಚ್ಚಿ ನಗರದ ಹವಾಮಾನವು ಉಷ್ಣತೆ ಮತ್ತು ಶುಷ್ಕತೆಯಿಂದ ಕೂಡಿರುತ್ತದೆ. ಬೇಸಿಗೆ ಕಾಲದಲ್ಲಂತೂ ಉಷ್ಣತೆ ಹೇಳ ತೀರದು. ಬೇಸಿಗೆ ಕಾಲದಲ್ಲಿ ದಿನದ ಸಮಯದಲ್ಲಿ ಹೆಚ್ಚು ಬಿಸಿಲಿದ್ದರೆ, ಸಂಜೆಯ ಸಮಯದಲ್ಲಿ ಸ್ವಲ್ಪ ತಂಪಾದ ವಾತಾವರಣ ಇರುತ್ತದೆ. ಇಲ್ಲಿ ಮಳೆಗಾಲ ಎಂದರೆ ಹಬ್ಬ. ಏಕೆಂದರೆ ಮಳೆಗಾಲವು ಭಾರಿ ಮಳೆಯನ್ನು ತಂದು ಇಲ್ಲಿನ ಉಷ್ಣತೆ ಮತ್ತು ಶುಷ್ಕತೆಯಿಂದ ಕೂಡಿರುವ ವಾತಾವರಣವನ್ನು ಬಹುಮಟ್ಟಿಗೆ ತಂಪಾಗಿ ಮಾಡುತ್ತದೆ. ತಿರುಚ್ಚಿ ನಗರದಲ್ಲಿ ಚಳಿಗಾಲವು ತುಂಬಾ ಆಹ್ಲಾದಕರ ಮತ್ತು ಹಿತಕರವಾಗಿರುತ್ತದೆ. ನವಂಬರ್ ತಿಂಗಳಿನಿಂದ ಫೆಬ್ರುವರಿ ತಿಂಗಳು ವರೆಗೂ ಚಳಿಗಾಲ ಇರುತ್ತದೆ. ತಿರುಚ್ಚಿ ನಗರಕ್ಕೆ ಭೇಟಿ ನೀಡಲು ಇದು ತುಂಬಾ ಉತ್ತಮ ಮತ್ತು ಯೋಗ್ಯವಾದ ಸಮಯವಾಗಿರುತ್ತದೆ.

ತಿರುಚ್ಚಿ ಪ್ರಸಿದ್ಧವಾಗಿದೆ

ತಿರುಚ್ಚಿ ಹವಾಮಾನ

ಉತ್ತಮ ಸಮಯ ತಿರುಚ್ಚಿ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ತಿರುಚ್ಚಿ

  • ರಸ್ತೆಯ ಮೂಲಕ
    ತಿರುಚ್ಚಿ ನಗರವು ಉತ್ತಮ ರಾಜ್ಯ ಬಸ್ ಸಾರಿಗೆಯ ಸೌಲಭ್ಯವನ್ನು ಹೊಂದಿದೆ. ತಿರುಚ್ಚಿ ನಗರದಿಂದ ತಮಿಳುನಾಡಿನ ಇತರೆ ಪ್ರಮುಖ ನಗರಗಳಾದ ಕನ್ಯಾಕುಮಾರಿ, ಚೆನ್ನೈ ಮತ್ತು ಮಧುರೈಗಳಿಗೆ ನಿಯಮಿತವಾಗಿ ರಾಜ್ಯ ಬಸ್ ಸಾರಿಗೆಯ ಬಸ್ಸುಗಳು ಹೊರಡುತ್ತವೆ. ಇಲ್ಲಿ ಖಾಸಗಿ ಬಸ್ ಸೌಲಭ್ಯವು ಉಂಟು. ತ್ರಿವೇಂದ್ರಂ ಮತ್ತು ಬೆಂಗಳೂರು ನಂತಹ ನಗರಗಳಿಗೆ ನಿಯಮಿತವಾಗಿ ಖಾಸಗಿ ಬಸಗಳ ಸೌಲಭ್ಯವಿದೆ. ಇವುಗಳ ದರವೂ ಕಡಿಮೆ ಜೊತೆಗೆ ಆರಾಮದಾಯಕವು ಹೌದು. ತ್ರಿಚಿ ನಗರಕ್ಕೆ ಬಸ್ ಸಾರಿಗೆಯ ಮೂಲಕ ಭೇಟಿ ಕೊಡುವುದು ಕೂಡ ಒಂದು ಉತ್ತಮ ಆಯ್ಕೆಯಾಗಿದೆ. ಇಲ್ಲಿನ ಬಸ ದರವೂ ಕಡಿಮೆ, ಜೊತೆಗೆ ಆರಾಮದಾಯಕವು ಹೌದು.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ದಕ್ಷಿಣ ಭಾರತದ ಪ್ರಮುಖ ರೈಲ್ವೆ ನಿಲ್ದಾಣಗಳಲ್ಲಿ ತ್ರಿಚಿ ಜಂಕ್ಷನ್ ಕೂಡ ಒಂದಾಗಿದೆ. ತಿರುಚ್ಚಿ ನಗರದಿಂದ ಮಧುರೈ, ಚೆನೈ, ಬೆಂಗಳೂರು, ಮುಂಬೈ ಮತ್ತು ತಿರುಪತಿಗೆ ಹೊರಡಲು ನಿಯಮಿತ ರೈಲ್ವೆ ಸಾರಿಗೆಯ ಸೌಲಭ್ಯ ಲಭ್ಯವಿದೆ. ತಿರುಚ್ಚಿ ನಗರಕ್ಕೆ ರೈಲ್ವೆ ಸಾರಿಗೆಯ ಮೂಲಕ ಭೇಟಿ ಕೊಡುವುದು ಒಂದು ಉತ್ತಮ ಆಯ್ಕೆಯಾಗಿದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ತಿರುಚ್ಚಿ ವಿಮಾನ ನಿಲ್ದಾಣವು ಚೆನ್ನೈ ಮತ್ತು ಬೆಂಗಳೂರು ಸೇರಿದಂತೆ ಶ್ರೀಲಂಕಾ ಮತ್ತು ಕೌಲಲಾಲುಂಪುರ ವಿಮಾನ ನಿಲ್ದಾಣಗಳೊಂದಿಗೆ ಸಂಪರ್ಕವನ್ನು ಸಾಧಿಸಿದೆ. ತಿರುಚ್ಚಿ ವಿಮಾನ ನಿಲ್ದಾಣದಿಂದ ಚೆನ್ನೈನ ವಿಮಾನ ನಿಲ್ದಾಣವು 330 ಕೀ.ಮಿ ದೂರದಲ್ಲಿದ್ದರೆ, ಬೆಂಗಳೂರು ವಿಮಾನ ನಿಲ್ದಾಣವು 331 ಕೀ.ಮಿ ದೂರದಲ್ಲಿದೆ. ಈ ಎರಡು ವಿಮಾನ ನಿಲ್ದಾಣಗಳ ಮೂಲಕ ತಿರುಚ್ಚಿ ನಗರವು ಭಾರತದ ಪ್ರಮುಖ ನಗರಗಳು ಮತ್ತು ಪಟ್ಟಣಗಳೊಂದಿಗೆ ಹಾಗೂ ವಿದೇಶ ರಾಷ್ಟ್ರಗಳೊಂದಿಗೆ ಸಂಪರ್ಕವನ್ನು ಸಾಧಿಸುತ್ತದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat