Search
  • Follow NativePlanet
Share
ಮುಖಪುಟ » ಸ್ಥಳಗಳು » ಮದುರೈ » ಆಕರ್ಷಣೆಗಳು
  • 01ಮೀನಾಕ್ಷಿ ಆಮ್ಮನ್ ದೇವಸ್ಥಾನ

    ಮೀನಾಕ್ಷಿ ಆಮ್ಮನ್ ದೇವಸ್ಥಾನ ಅಥವಾ ಮೀನಾಕ್ಷಿ ದೇವಸ್ಥಾನವು ಮಹಾದೇವನಾದ ಶಿವ ಮತ್ತು ಮಹಾದೇವಿಯಾದ ಪಾರ್ವತಿಗೆ ಮೀಸಲಾಗಿರುವ ದೇವಸ್ಥಾನವಾಗಿದೆ.ಪಾರ್ವತಿಗೆ ಮೀನಾಕ್ಷಿ ಎಂಬ ಹೆಸರು ಇದೆ. ಈ ದೇವಸ್ಥಾನವು ಭಾರತದ ಮತ್ತು ಮಧುರೈ ನಗರದ ಅತ್ಯಂತ ಪ್ರಮುಖ ಪ್ರವಾಸಿ ಸ್ಥಳಗಳಲ್ಲಿ ಮಹತ್ವದ ಸ್ಥಾನವನ್ನು ಪಡೆದಿದೆ. ಇದು ಧಾರ್ಮಿಕ...

    + ಹೆಚ್ಚಿಗೆ ಓದಿ
  • 02ಮೀನಾಕ್ಷಿ ಆಮ್ಮನ್ ದೇವಸ್ಥಾನ ಮ್ಯೂಸಿಯಮ್

    ಮೀನಾಕ್ಷಿ ಆಮ್ಮನ್ ದೇವಸ್ಥಾನ ಮ್ಯೂಸಿಯಮ್  ಇದು ದೇವಾಲಯದ ಸಂಕೀರ್ಣದ ಒಳಗಡೆಯೇ ಇದೆ.1000 ಕಂಬಗಳುಳ್ಳ ದೊಡ್ಡ ಹಜಾರಿನಲ್ಲಿ ಈ ಮ್ಯೂಸಿಯಮ ಅನ್ನು ನಿರ್ಮಿಸಲಾಗಿದೆ. ಈ ಮ್ಯೂಸಿಯಂ ಪ್ರವಾಸಿಗರಿಗೆ ಹಿಂದು ಧರ್ಮದ ಕುರಿತು ಮಹತ್ವದ ಮಾಹಿತಿ ಮತ್ತು ಈ ಭವ್ಯದೇವಾಲಯದ 1200 ವರ್ಷಗಳಷ್ಟು ಹಳೆಯ ಇತಿಹಾಸದ ಕುರಿತು ಮಹತ್ವದ...

    + ಹೆಚ್ಚಿಗೆ ಓದಿ
  • 03ಅಲ್ಗಾರ್ ಕೋಯಿಲ್

    ಅಲ್ಗಾರ್ ಕೋಯಿಲ್ ಈ ದೇವಸ್ಥಾನವು ಭಗವಾನ ವಿಷ್ಣುವಿನ ಪ್ರಸಿದ್ಧ ದೇವಸ್ಥಾನವಾಗಿದೆ. ಭಗವಾನ ವಿಷ್ಣುವು ಹಿಂದುಗಳ ಪ್ರಮುಖ ದೇವತೆ. ಈ ದೇವಸ್ಥಾನವನ್ನು ಸೋಲಮಲೈ ಬೆಟ್ಟದ ಕೆಳಗಡೆ ಬಹು ಸುಂದರವಾಗಿ ನಿರ್ಮಿಸಲಾಗಿದ್ದು ಮಧುರೈ ನಗರದಿಂದ 20 ಕೀ..ಮಿ ದೂರದಲ್ಲಿದೆ. ಇಲ್ಲಿ ತುಂಬಾ ಸಣ್ಣ ಗಾತ್ರದ ಮೂರು ಪೂಜಾ ಮಂದಿರಗಳಿವೆ....

    + ಹೆಚ್ಚಿಗೆ ಓದಿ
  • 04ಕೂಡಲ್ ಅಳಗರ್ ದೇವಸ್ಥಾನ

    ಕೂಡಲ್ ಅಳಗರ್ ದೇವಸ್ಥಾನವು ದಕ್ಷಿಣ ಭಾರತದ ಅತ್ಯಂತ ಹಳೆಯ ದೇವಸ್ಥಾನಗಳಲ್ಲಿ ಒಂದು. ಈ ದೇವಸ್ಥಾನವು ವೈಷ್ಣವ ಮತದ ಪ್ರಮುಖ ದೇವಸ್ಥಾನವಾಗಿದೆ. ಮಹಾವಿಷ್ಣುವಿನ ದೇವಸ್ಥಾನವಾಗಿದೆ.

    ಈ ದೇವಸ್ಥಾನದ ಮುಂದುಗಡೆ ಮಹಾವಿಷ್ಣುವಿನ ದೊಡ್ಡದಾದ ಪ್ರತಿಮೆಯನ್ನು ಕೆತ್ತಲಾಗಿದೆ. ಈ ಪ್ರಸಿದ್ಧ ದೇವಸ್ಥಾನವು ನಗರದ ಹೃದಯ ಭಾಗದಲ್ಲಿದ್ದು...

    + ಹೆಚ್ಚಿಗೆ ಓದಿ
  • 05ಗಾಂಧಿ ಮ್ಯೂಸಿಯಂ

    ಮಧುರೈನಲ್ಲಿರುವ ಗಾಂಧಿ ಮ್ಯೂಸಿಯಂ ದೇಶದ ಪ್ರಮುಖ ಐದು ಗಾಂಧಿ ವಸ್ತು ಸಂಗ್ರಹಾಲಯಗಳಲ್ಲಿ ಪ್ರಮುಖ ಸ್ಥಾನವನ್ನು ಪಡೆದಿದೆ. ಇದು ಗಾಂಧಿಜಿಗೆ ಸೇರಿದ ಅನೇಕ ಪ್ರಮುಖ ವಸ್ತುಗಳನ್ನು ಹೊಂದಿದೆ. ಈ ಸಂಗ್ರಹಾಲಯದಲ್ಲಿ ನೀವು ಗಾಂಧಿಜಿಯು ತಮ್ಮ ಹತ್ಯೆಯ ದಿನ ಧರಿಸಿದ ರಕ್ತಸಿಕ್ತವಾದ ಧೋತಿಯನ್ನು ನೀವು ನೋಡಬಹುದು.

    ಗಾಂಧಿಜಿಗೆ...

    + ಹೆಚ್ಚಿಗೆ ಓದಿ
  • 06ತಿರುಮಲೈ ನಾಯಕ್ಕರ್ ಅರಮನೆ

    ತಿರುಮಲೈ ನಾಯಕ್ಕರ್ ಅರಮನೆ

    ತಿರುಮಲೈ ನಾಯಕ್ಕರ್ ಅರಮನೆಯು ತುಂಬಾ ಸುಂದರವಾಗಿದ್ದು ಇಂಡೋ ಸಾರ್ಸೆನಿಕ ಶೈಲಿಯಲ್ಲಿ ಇದನ್ನು ನಿರ್ಮಿಸಲಾಗಿದೆ. ನಾಯಕ ವಂಶದ ರಾಜನಾದ ತಿರುಮಲೈ ನಾಯಕನಿಂದ  ಈ ಅರಮನೆಯು ಹದಿನಾರನೇಯ ಶತಮಾನದಲ್ಲಿ ನಿರ್ಮಾಣಗೊಂಡಿತು. ಈ ಅರಮನೆಯು ಬೆಳಕು ಮತ್ತು ಧ್ವನಿಯ ಪ್ರದರ್ಶನವನ್ನು ಹೊಂದಿದ್ದು ಈ ಪ್ರದರ್ಶನವು ತಿರುಮಲೈ ನಾಯಕರ ಮತ್ತು...

    + ಹೆಚ್ಚಿಗೆ ಓದಿ
  • 07ವೈಗೈ ಆಣೆಕಟ್ಟು

    ವೈಗೈ ಅಣೆಕಟ್ಟನ್ನು ವೈಗೈ ನದಿಗೆ ಅಡ್ದಲಾಗಿ ಕಟ್ಟಲಾಗಿದೆ. ಥೇಣಿ ಜಿಲ್ಲೆಯಲ್ಲಿ ಈ ಆಣೆಕಟ್ಟನ್ನು ನಿರ್ಮಿಸಲಾಗಿದ್ದು ಇದು ಆಂಡಿಪಟ್ಟಿ ಸಮೀಪದಲ್ಲಿದೆ.ವೈಗೈ ಆಣೆಕಟ್ಟು ಮಧುರೈ ಮತ್ತು ದಿಂಡಿಗಲ್ ಜಿಲ್ಲೆಯ ನೀರಾವರಿ ಮತ್ತು ಕುಡಿಯುವ ನೀರಿನ ಮುಖ್ಯ ಮೂಲವಾಗಿದೆ. ತಮಿಳು ನಾಡಿನ ಕೃಷಿ ಸಂಶೋಧನಾ ಕೇಂದ್ರವನ್ನು ಈ ಆಣೆಕಟ್ಟೆಯ...

    + ಹೆಚ್ಚಿಗೆ ಓದಿ
  • 08ವಂಡಿಯೂರ್ ಮಾರಿಯಮ್ಮನ್ ತೆಪ್ಪಾಕುಲಮ್

    ವಂಡಿಯೂರ್ ಮಾರಿಯಮ್ಮನ್ ತೆಪ್ಪಾಕುಲಮ್ ಈ ದೊಡ್ಡದಾದ ಸರೋವರವನ್ನು 1646 ರಲ್ಲಿ ನಿರ್ಮಿಸಲಾಯಿತು. ಹದಿನಾರು ಏಕರೆ ವ್ಯಾಪ್ತಿಯುಳ್ಳ ಈ ಸರೋವರವನ್ನು ತಿರುಮಲೈ ನಾಯಕ್ ಅವರು ಬಹುಕಾಳಜಿಯಿಂದ ನಿರ್ಮಿಸಿದರು. ಮೀನಾಕ್ಷಿ ದೇವಸ್ಥಾನದ ಪೂರ್ವದಿಂದ  ಐದು ಕೀ.ಮಿ ದೂರದಲ್ಲಿ ಈ ಸರೋವರ ಇದೆ.

    ಈ ಸರೋವರದ ಮಧ್ಯಭಾಗದಲ್ಲಿ...

    + ಹೆಚ್ಚಿಗೆ ಓದಿ
  • 09ತಿರುಪಾರನಕುಂದರಮ್

    ತಿರುಪಾರನಕುಂದರಮ್ ಒಂದು ನಗರವಾಗಿದ್ದು ಮಧುರೈ ಜಿಲ್ಲೆಯಲ್ಲಿ ಇದೆ. ಮಧುರೈ ನಗರದಿಂದ 8 ಕೀ.ಮಿ ದೂರದಲ್ಲಿರುವ ಈ ತಿರುಪಾರನಕುಂದರಮ್ ನಗರವು ಮುರುಗನ್ ದೇವಸ್ಥಾನ ಮತ್ತು ಹಝರತ್ ಸುಲ್ತಾನ ಸಿಕಂದರ ಬಾದುಷಾ ಶಾಹೀದ ದರ್ಗಾ ಈ ಪ್ರೇಕ್ಷಣಿಯ ಸ್ಥಳಗಳಿಗೆ ಪ್ರಸಿದ್ಧವಾಗಿದೆ.

    ತಿರುಪಾರನಕುಂದರಮ್ ಬೆಟ್ಟಗಳ ಮೇಲೆ ನೀವು ಈ...

    + ಹೆಚ್ಚಿಗೆ ಓದಿ
  • 10ಪಾಳಮುದಿರಚೋಲೈ

    ಪಾಳಮುದಿರಚೋಲೈ ಇದು ಸುಬ್ರಮಣ್ಯ ಅಥವಾ ಮುರುಗ ದೇವತೆಯ ಪ್ರಸಿದ್ಧ ದೇವಸ್ಥಾನವಾಗಿದೆ. ಸುಬ್ರಮಣ್ಯ ಸ್ವಾಮಿಯು ಹಿಂದು ಧರ್ಮದ ಪ್ರಮುಖ ದೇವತೆಗಳಲ್ಲಿ ಸ್ಥಾನವನ್ನು ಪಡೆದಿದ್ದಾರೆ. ಸುಬ್ರಮಣ್ಯ ಸ್ವಾಮಿಯು ಶಿವ ಪಾರ್ವತಿಯರ ಜೇಷ್ಠ ಪುತ್ರ. ಈ ದೇವಸ್ಥಾನವು ಸೋಲೈಮಲೈ ಬೆಟ್ಟಗಳ ಮೇಲೆ ನೆಲೆಸಿದ್ದು,ಅಲ್ಗಾರ್ ಕೋಯಿಲ್ ದೇವಸ್ಥಾನದ...

    + ಹೆಚ್ಚಿಗೆ ಓದಿ
  • 11ಖಾಜಿಮಾರ್ ಬೃಹತ್ ಮಸೀದಿ

    ಖಾಜಿಮಾರ್ ಬೃಹತ್ ಮಸೀದಿ

    ಖಾಜಿಮಾರ್ ಬೃಹತ್ ಮಸೀದಿಯನ್ನು ನೀವು ಮಧುರೈ ಜಂಕ್ಷನ ಮತ್ತು ಪೆರಿಯಾರ ಬಸ್ ಸ್ಟಾಂಡ ಬಳಿ ನೀವು ನೋಡಬಹುದು. ಇದು ಅತ್ಯಂತ ಹಳೆಯ ಮಸೀದಿಯಾಗಿದ್ದು ಇದನ್ನು ಹಝರತ್ ಕಾಝಿ ಸಯ್ಯದ ತಾಜದ್ದಿನ್ ಎಂಬವವರು ನಿರ್ಮಿಸಿದರು. ಪ್ರವಾದಿ ಮೊಹಮ್ಮದರ ವಂಶಸ್ಥರಾದ ಇವರು ಹದಿಮೂರನೇಯ ಶತಮಾನದಲ್ಲಿ ಬದುಕಿದ್ದರು.

    ಈ ಮಸೀದಿಯು ಮಧುರೈ...

    + ಹೆಚ್ಚಿಗೆ ಓದಿ
  • 12ತಿರುಚುಳಿ

    ತಿರುಚುಳಿ (ತಿರುಚುಳಿ) ಇದು ಮಧುರೈ ಹತ್ತಿರ ಇರುವ ಒಂದು ಪುಟ್ಟ ಗ್ರಾಮವಾಗಿದೆ. ಇದು ಸಂತ ಶ್ರೀ ರಮಣ ಮಹರ್ಷಿ ಜನ್ಮಸ್ಥಳ. ಆದ್ದರಿಂದ ಇದು ಪ್ರಸಿದ್ಧ ಪವಿತ್ರ ಸ್ಥಳವಾಗಿದೆ. 20ನೇ ಶತಮಾನದಲ್ಲಿ ಭಾರತದಲ್ಲಿ ಜನ್ಮ ತಳೆದ ಅತ್ಯಂತ ಪೂಜ್ಯ ಸಂತರಲ್ಲಿ ಸಂತ ಶ್ರೀ ರಮಣ ಮಹರ್ಷಿಗಳು ಒಬ್ಬರು. ಇವರನ್ನು ಮಹಾ ಸಂತರೆಂದು...

    + ಹೆಚ್ಚಿಗೆ ಓದಿ
  • 13ಅರುಪ್ಪುಕ್ಕೊಟ್ಟೈ

    ಅರುಪ್ಪುಕ್ಕೊಟ್ಟೈ ನಗರವು ಮಧುರೈ ನಗರದಿಂದ ಸುಮಾರು 48 ಕೀ.ಮಿ ದೂರದಲ್ಲಿದೆ. ಈ ನಗರವು ತಾನು ಹೋಂದಿರುವ ವಿಶಾಲ ವ್ಯಾಪ್ತಿಯ ದೇವಾಲಯಗಳು,ಮಸೀದಿಗಳು ಮತ್ತು ಚರ್ಚುಗಳು ಹಾಗೂ ಮಲ್ಲಿಗೆ ಹೂವಿನ ಅನೇಕ ಉತ್ಪನ್ನಗಳಿಗೆ ಪ್ರಸಿದ್ಧವಾಗಿದೆ. ಈ ನಗರದಲ್ಲಿರುವ ಪ್ರಮುಖ ಆಕರ್ಷಣೀಯ ಸ್ಥಳಗಳೆಂದರೆ ನಲ್ಲಿಯಾರ್ ಮೊಹೈದ್ದಿನ್ ಅಂಡಾವರ್...

    + ಹೆಚ್ಚಿಗೆ ಓದಿ
  • 14ಮಧುರೈಯಲ್ಲಿ ಖರೀದಿ ವ್ಯಾಪಾರ ಅಥವಾ ಶಾಪಿಂಗ್

    ಮಧುರೈ ಯಲ್ಲಿ ನೀವು ಖರೀದಿ ವ್ಯಾಪಾರ ಅಥವಾ ಶಾಪಿಂಗ್ ಮಾಡದಿದ್ದರೆ ನಿಮ್ಮ ಪ್ರವಾಸ ಅಪೂರ್ಣವಾದಂತೆಯೇ ಸರಿ. ಮಧುರೈಯಲ್ಲಿ ಖರೀದಿ ವ್ಯಾಪಾರ ಅಥವಾ ಶಾಪಿಂಗ್ ಮಾಡುವುದು ಒಂದು ಸಂತೋಷಕರ ಸಂಗತಿಯಾಗುತ್ತದೆ. ಜವಳಿ ಮತ್ತು ಕರಕುಶಲ ವಸ್ತುಗಳಿಗೆ ಈ ನಗರವು ಹೆಸರುವಾಸಿಯಾಗಿದೆ. ರೇಷ್ಮೆ,ಕಾಟನ್,ಬಾಟಿಕ್ ಮತ್ತು ಸುಂಗುಂಡಿ ಸಾರಿಗಳಿಗೂ ಈ...

    + ಹೆಚ್ಚಿಗೆ ಓದಿ
  • 15ಗೋರಿ ಪಾಳ್ಯಂ ದರ್ಗಾ

    ಗೋರಿ ಪಾಳ್ಯಂ ದರ್ಗಾ

    ಗೋರಿ ಪಾಳ್ಯಂ ದರ್ಗಾ ಮಧುರೈ ನಗರದಲ್ಲಿರುವ ಒಂದು ದೊಡ್ಡ ಮಸೀದಿಯಾಗಿದೆ. ವೈಗೈ ನದಿಯ ಉತ್ತರದಲ್ಲಿ ಈ ದರ್ಗಾ ಇದೆ.  ಇದನ್ನು 13 ನೇ ಶತಮಾನದಲ್ಲಿ ತಿರುಮಲೈ ನಾಯಕ್ ನಿರ್ಮಿಸಿದನೆಂದು ಹೇಳಲಾಗುತ್ತದೆ, ಈ ದರ್ಗಾವು ಇಬ್ಬರು ಪ್ರಸಿದ್ಧ ಮುಸ್ಲಿಂ ಸಂತರ ಮತ್ತು ಆಡಳಿತಗಾರರ ಪವಿತ್ರ ಗೋರಿ ನಿವಾಸಗಳನ್ನು ಒಳಗೊಂಡಿದೆ....

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun