Search
  • Follow NativePlanet
Share
ಮುಖಪುಟ » ಸ್ಥಳಗಳು » ಮದುರೈ » ಆಕರ್ಷಣೆಗಳು » ತಿರುಮಲೈ ನಾಯಕ್ಕರ್ ಅರಮನೆ

ತಿರುಮಲೈ ನಾಯಕ್ಕರ್ ಅರಮನೆ, ಮದುರೈ

1

ತಿರುಮಲೈ ನಾಯಕ್ಕರ್ ಅರಮನೆಯು ತುಂಬಾ ಸುಂದರವಾಗಿದ್ದು ಇಂಡೋ ಸಾರ್ಸೆನಿಕ ಶೈಲಿಯಲ್ಲಿ ಇದನ್ನು ನಿರ್ಮಿಸಲಾಗಿದೆ. ನಾಯಕ ವಂಶದ ರಾಜನಾದ ತಿರುಮಲೈ ನಾಯಕನಿಂದ  ಈ ಅರಮನೆಯು ಹದಿನಾರನೇಯ ಶತಮಾನದಲ್ಲಿ ನಿರ್ಮಾಣಗೊಂಡಿತು. ಈ ಅರಮನೆಯು ಬೆಳಕು ಮತ್ತು ಧ್ವನಿಯ ಪ್ರದರ್ಶನವನ್ನು ಹೊಂದಿದ್ದು ಈ ಪ್ರದರ್ಶನವು ತಿರುಮಲೈ ನಾಯಕರ ಮತ್ತು ಶಿಲಪ್ಪದಿಕಾರಂ ಜೀವನದ ವಿವಿಧ ವಿಷಯಗಳ ಕುರಿತು ಮಾಹಿತಿಯನ್ನು ಒದಗಿಸುತ್ತದೆ.

ಇಂದು ಈ ಅರಮನೆಯ ಮೂಲ ರೂಪ 1/4 ರಷ್ಟು ಮಾತ್ರ ಉಳಿದಿದೆ. ಈ ಅರಮನೆಯಲ್ಲಿ 248 ಕಂಬಗಳಿದ್ದು ಅವುಗಳು 58 ಫೀಟ್ ಎತ್ತರವನ್ನು ಹೊಂದಿವೆ. ಅರಮನೆಯ ಮೇಲ್ಚಾವಣಿಯನ್ನು ವಿಷ್ಣು ಮತ್ತು ಶಿವನ ಜೀವನಗಾಥೆಯನ್ನು ವಿವರಿಸುವ ಅನೇಕ ಘಟನೆಗಳನ್ನು ಚಿತ್ರಿಸುವ ಮೂಲಕ ಅಲಂಕರಿಸಲಾಗಿದೆ. ಈ ಅರಮನೆಯ ವಾಸ್ತುಶಿಲ್ಪವು ತುಂಬಾ ಅದ್ಭುತವಾಗಿದೆ. ಅರಮನೆಯ ಗುಮ್ಮಟಗಳು ಮತ್ತು ಕಮಾನುಗಳನ್ನು ವಾಸ್ತುಶಿಲ್ಪದ ಗಾರೆ ಶೈಲಿಯಲ್ಲಿ ನಿರ್ಮಿಸಲಾಗಿದೆ.

ನೀವು ಅರಮನೆಯಲ್ಲಿ ಪ್ರಾಚೀನ ಪರಂಪರೆಗೆ ಸೇರಿದ ವಿವಿಧ ಪೀಠೋಪಕರಣಗಳು ಮತ್ತು ಅಂದು ಮನೆಯಲ್ಲಿ ಉಪಯೋಗಿಸುತ್ತಿದ್ದ ಅಡಿಗೆ ಮನೆಯ ಪಾತ್ರೆಗಳು, ಹೀಗೆ ಅನೇಕ ಇತರ ವಸ್ತುಗಳ ಪ್ರದರ್ಶನವನ್ನು ಸಹ ನೀವು ಕಾಣಬಹುದು. ನೀವು ಅರಮನೆಯನ್ನು ಪ್ರವೇಶಿಸುತ್ತಿದ್ದಂತೆಯೇ ನಿಮಗೆ ಅರಮನೆಯ ನೃತ್ಯ ಸಂಭಾಗಣ ಮತ್ತು ಮುಖ್ಯ ಸಭಾಂಗಣ ಕಾಣ ಸಿಗುತ್ತದೆ. ಇವು ಅತ್ಯಂತ ಸುಂದರವಾದ ಕೆತ್ತನೆಗಳನ್ನು ಹೊಂದಿದ್ದು ಅರಮನೆಯ ಪ್ರಮುಖ ಆಕರ್ಷಣೆಗಳಾಗಿವೆ. ಈ ಅರಮನೆಯು 1860 -1870 ರ ನಡುವಿನ ಅವಧಿಯಲ್ಲಿ ಬ್ರಿಟಿಷರಿಂದ ನವೀಕರಸಲ್ಪಟ್ಟಿತು.

One Way
Return
From (Departure City)
To (Destination City)
Depart On
25 Jul,Sat
Return On
26 Jul,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Jul,Sat
Check Out
26 Jul,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Jul,Sat
Return On
26 Jul,Sun