Search
  • Follow NativePlanet
Share
ಮುಖಪುಟ » ಸ್ಥಳಗಳು » ಮದುರೈ » ಆಕರ್ಷಣೆಗಳು » ಕೂಡಲ್ ಅಳಗರ್ ದೇವಸ್ಥಾನ

ಕೂಡಲ್ ಅಳಗರ್ ದೇವಸ್ಥಾನ, ಮದುರೈ

5

ಕೂಡಲ್ ಅಳಗರ್ ದೇವಸ್ಥಾನವು ದಕ್ಷಿಣ ಭಾರತದ ಅತ್ಯಂತ ಹಳೆಯ ದೇವಸ್ಥಾನಗಳಲ್ಲಿ ಒಂದು. ಈ ದೇವಸ್ಥಾನವು ವೈಷ್ಣವ ಮತದ ಪ್ರಮುಖ ದೇವಸ್ಥಾನವಾಗಿದೆ. ಮಹಾವಿಷ್ಣುವಿನ ದೇವಸ್ಥಾನವಾಗಿದೆ.

ಈ ದೇವಸ್ಥಾನದ ಮುಂದುಗಡೆ ಮಹಾವಿಷ್ಣುವಿನ ದೊಡ್ಡದಾದ ಪ್ರತಿಮೆಯನ್ನು ಕೆತ್ತಲಾಗಿದೆ. ಈ ಪ್ರಸಿದ್ಧ ದೇವಸ್ಥಾನವು ನಗರದ ಹೃದಯ ಭಾಗದಲ್ಲಿದ್ದು ನಗರದ ಮುಖ್ಯ ಬಸ್ ಸ್ಟಾಂಡಿನ ಹತ್ತಿರದಲ್ಲಿದೆ. ದೇವಸ್ಥಾನದ ಒಳಗಡೆ ಮಹಾವಿಷ್ಣು ಕುಳಿತಿರುವ, ನಿಂತಿರುವ ಮತ್ತು  ಒರಗಿದಂತೆ ಇರುವ ಹೀಗೆ ವಿವಿಧ ಭಂಗಿಗಳ ವಿಗ್ರಹಗಳಿವೆ. ಜೊತೆಗೆ ಈ ದೇವಾಲಯದ ಒಳಗಡೆ ಶ್ರೀರಾಮನ ಪಟ್ಟಾಭಿಷೇಕ ಮಹೋತ್ಸವದ ಘಟನೆಗಳ ಕುರಿತು ವಿವರಣೆ ನೀಡುವ ಕೆತ್ತನೆಯ ಶಿಲ್ಪಗಳಿವೆ.

ಈ ದೇವಸ್ಥಾನದಲ್ಲಿ ನೀವು ನವಗ್ರಹಗಳ ಪ್ರತಿಮೆಗಳ ಪುಟ್ಟ ಗುಡಿಯನ್ನು ಸಹ ನೀವು ಕಾಣಬಹುದು. ನವಗ್ರಹಗಳು ಎಂದರೆ ಒಂಭತ್ತು ಗ್ರಹಗಳು. ನಮ್ಮ ಪುರಾಣ ಮತ್ತು ವೇದಗಳಲ್ಲಿ ಈ ಒಂಭತ್ತು ಗ್ರಹಗಳನ್ನು ವಿವಿಧ ದೇವತೆಗಳೆಂದು ಗುರುತಿಸುತ್ತಾರೆ. ಇವು ವಿಶ್ವದ ಎಲ್ಲ ಆಗು ಹೋಗುಗಳ ಮೇಲೆ ಪರಿಣಾಮವನ್ನು ಬೀರುತ್ತವೆ ಎಂಬ ನಂಬಿಕೆ ಹಿಂದುಗಳಲ್ಲಿ ಇದೆ. ಆದರೆ ಈ ನವಗ್ರಹಗಳ ವಿಗ್ರಹಗಳು ಸಾಮಾನ್ಯವಾಗಿ ಶಿವ ದೇವಸ್ಥಾನಗಳಲ್ಲಿ ಕಂಡು ಬರುತ್ತವೆ. ಈ ಪ್ರಾಚೀನ ದೇವಸ್ಥಾನವನ್ನು ಮಧುರೈ ನಗರಕ್ಕೆ ಭೇಟಿ ನೀಡುವ ಎಲ್ಲ ಪ್ರವಾಸಿಗರು ಕಡ್ಡಾಯವಾಗಿ ನೋಡಲೇ ಬೇಕು.

One Way
Return
From (Departure City)
To (Destination City)
Depart On
23 Apr,Tue
Return On
24 Apr,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
23 Apr,Tue
Check Out
24 Apr,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
23 Apr,Tue
Return On
24 Apr,Wed