Search
  • Follow NativePlanet
Share
ಮುಖಪುಟ » ಸ್ಥಳಗಳು » ಮದುರೈ » ತಲುಪುವ ಬಗೆ

ತಲುಪುವ ಬಗೆ

ಮಧುರೈ ಮೂಲಕ ಅನೇಕ ರಾಷ್ಟ್ರೀಯ ಹೆದ್ದಾರಿಗಳು ಹಾಯ್ದು ಹೋಗುತ್ತವೆ. ಉದಾಹರಣೆಗೆ NH7, NH 45B, NH 49 And NH 208 ಹೆದ್ದಾರಿಗಳನ್ನು ನೀವು ಇಲ್ಲಿ ಕಾಣಬಹುದು.ಹೀಗಾಗಿ ಮಧುರೈ ನಗರದ ರಸ್ತೆ ಸಾರಿಗೆ ಸೌಲಭ್ಯವು ತುಂಬಾ ಉತ್ತಮವಾಗಿದ್ದು ಪ್ರಯಾಣಕ್ಕೆ ಅನುಕೂಲಕರವಾಗಿದೆ. ದಕ್ಷಿಣ ಭಾರತದ ಭಾರತದ ಪ್ರಮುಖ ನಗರಗಳಿಗೆ ಇಲ್ಲಿಂದ ಬಸ್ ಸೌಲಭ್ಯದ ವ್ಯವಸ್ಥೆ ಇದೆ. ಚೆನ್ನೈ, ಬೆಂಗಳೂರು, ಕೊಯಮತ್ತೂರು, ತಿರುವನಂತಪುರಂ, ತಿರುಚ್ಚಿ ಮುಂತಾದ ನಗರಗಳಿಗೆ ನಿಯಮಿತ ಬಸ್ ಸೇವೆಯ ಅನುಕೂಲತೆ ಇದೆ. ಖಾಸಗಿ ಬಸ್ ಸೇವೆಗಳ ಸೌಲಭ್ಯವೂ ಉಂಟು, ಮಧುರೈಯಿಂದ ತಮಿಳುನಾಡಿನ ಸುತ್ತಮುತ್ತಲಿನ ಅನೇಕ ನಗರಗಳಿಗೆ ತಮಿಳುನಾಡು ರಾಜ್ಯ ಸಾರಿಗೆ ಬಸ್ ವ್ಯವಸ್ಥೆಯನ್ನು ಮಾಡಲಾಗಿದೆ.