ಅಲ್ಗಾರ್ ಕೋಯಿಲ್ ಈ ದೇವಸ್ಥಾನವು ಭಗವಾನ ವಿಷ್ಣುವಿನ ಪ್ರಸಿದ್ಧ ದೇವಸ್ಥಾನವಾಗಿದೆ. ಭಗವಾನ ವಿಷ್ಣುವು ಹಿಂದುಗಳ ಪ್ರಮುಖ ದೇವತೆ. ಈ ದೇವಸ್ಥಾನವನ್ನು ಸೋಲಮಲೈ ಬೆಟ್ಟದ ಕೆಳಗಡೆ ಬಹು ಸುಂದರವಾಗಿ ನಿರ್ಮಿಸಲಾಗಿದ್ದು ಮಧುರೈ ನಗರದಿಂದ 20 ಕೀ..ಮಿ ದೂರದಲ್ಲಿದೆ. ಇಲ್ಲಿ ತುಂಬಾ ಸಣ್ಣ ಗಾತ್ರದ ಮೂರು ಪೂಜಾ ಮಂದಿರಗಳಿವೆ.
ಇಲ್ಲಿ ನೀವು ವಿಷ್ಣುವಿನ ವಿಗ್ರಹಗಳನ್ನು ಕಾಣಬಹದು. ಈ ದೇವಾಲಯವು ಸೂಕ್ಷ್ಮವಾದ ಕಲ್ಲಿನ ಕುಸುರಿ ಕೆತ್ತನೆಗಳಿಗೆ ಮತ್ತು ಶಿಲ್ಪಕಲೆಗೆ ಪ್ರಸಿದ್ಧವಾಗಿದೆ. ಇಲ್ಲಿ ಕಲ್ಲಿನಲ್ಲಿ ಕೆತ್ತಲಾದ ಭಗವಾನ ವಿಷ್ಣುವಿನ ಭವ್ಯವಾದ ಮೂರ್ತಿ ಇದೆ. ಇಷ್ಟೇ ಅಲ್ಲ, ನೀವು ಈ ದೇವಸ್ಥಾನದಲ್ಲಿ ವಿಷ್ಣುವಿನ ವಿವಿಧ ಭಂಗಿಯ ಅನೇಕ ವಿಗ್ರಹಗಳನ್ನು ನೀವು ಕಾಣಬಹುದು. ಈ ದೇವಾಲಯದ ಸಮೀಪದಲ್ಲಿಯೇ ಒಂದು ಹರಿಯುತ್ತಿರುವ ಒಂದು ನೈಸರ್ಗಿಕ ತೊರೆ ಇದೆ.
ಈ ತೊರೆಯ ನೀರಿನಿಂದಲೇ ಪ್ರತಿದಿನವೂ ಶ್ರೀ ವಿಷ್ಣುವನ್ನು ಶುದ್ಧಗೊಳಿಸಿ ಪೂಜಿಸಲಾಗುತ್ತದೆ. ದೇವಸ್ಥಾನದ ಪೂಜಾರಿಯ ಈ ತೊರೆಯಿಂದಲೇ ನೀರನ್ನು ತರುತ್ತಾರೆ. ಭಗವಾನ ವಿಷ್ಣುವು ಅಝಗರ್ ಎಂಬ ದೇವತೆಯ ಹೆಸರಿನಲ್ಲಿ ಈ ದೇವಸ್ಥಾನದಲ್ಲಿ ನೆಲೆಸಿದ್ದಾನೆ. ಅಝಗರ್ ಮೀನಾಕ್ಷಿ ದೇವತೆಯ ಸಹೋದರ ಎಂಬ ನಂಬಿಕೆ ಇದೆ.ಈ ದೇವಸ್ಥಾನವು ಸಹಸ್ರಾರು ಸಂಖ್ಯೆಯಲ್ಲಿ ಪ್ರವಾಸಿಗರನ್ನು ಮತ್ತು ಯಾತ್ರಿಗಳನ್ನು ಆಕರ್ಷಿಸುತ್ತಿದೆ.