ತಿರುಚುಳಿ (ತಿರುಚುಳಿ) ಇದು ಮಧುರೈ ಹತ್ತಿರ ಇರುವ ಒಂದು ಪುಟ್ಟ ಗ್ರಾಮವಾಗಿದೆ. ಇದು ಸಂತ ಶ್ರೀ ರಮಣ ಮಹರ್ಷಿ ಜನ್ಮಸ್ಥಳ. ಆದ್ದರಿಂದ ಇದು ಪ್ರಸಿದ್ಧ ಪವಿತ್ರ ಸ್ಥಳವಾಗಿದೆ. 20ನೇ ಶತಮಾನದಲ್ಲಿ ಭಾರತದಲ್ಲಿ ಜನ್ಮ ತಳೆದ ಅತ್ಯಂತ ಪೂಜ್ಯ ಸಂತರಲ್ಲಿ ಸಂತ ಶ್ರೀ ರಮಣ ಮಹರ್ಷಿಗಳು ಒಬ್ಬರು. ಇವರನ್ನು ಮಹಾ ಸಂತರೆಂದು ಪರಿಗಣಿಸಲಾಗುತ್ತದೆ.
ಈ ಗ್ರಾಮದಲ್ಲಿರುವ ಆಶ್ರಮವನ್ನು ಭಗವಾನ ಸಂತ ಶ್ರೀ ರಮಣ ಮಹರ್ಷಿಗಳ ಹೆಸರಿನಲ್ಲಿ ನಿರ್ಮಿಸಲಾಗಿದ್ದು , ಇದಕ್ಕೆ ಶ್ರೀ ರಮಣ ಆಶ್ರಮ ಎಂದು ಹೆಸರಿಡಲಾಗಿದೆ. ನೀವು ಈ ಪುಟ್ಟ ಹಳ್ಳಿಯಲ್ಲಿ ಶಿವನ ಪ್ರಾಚೀನ ದೇವಸ್ಥಾನವನ್ನು ಸಹ ಕಾಣಬಹುದು. ಪ್ರಶಾಂತತೆ ಮತ್ತು ಅಧ್ಯಾತ್ಮಿಕತೆಯ ಸಂಪರ್ಕವನ್ನು ಬಯಸುವ ಜನರಿಗೆ ಈ ಆಶ್ರಮವು ಹೇಳಿ ಮಾಡಿಸಿದ ಸ್ಥಳವಾಗಿದೆ.