Search
  • Follow NativePlanet
Share
» »2022ರ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ: ಭಾರತದಲ್ಲಿಯ ಪ್ರಸಿದ್ದ ಕೃಷ್ಣ ದೇವರ ದೇವಾಲಯಗಳಿಗೆ ಭೇಟಿ ಕೊಡಿ

2022ರ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ: ಭಾರತದಲ್ಲಿಯ ಪ್ರಸಿದ್ದ ಕೃಷ್ಣ ದೇವರ ದೇವಾಲಯಗಳಿಗೆ ಭೇಟಿ ಕೊಡಿ

ಹಿಂದುಗಳ ಪವಿತ್ರ ಹಬ್ಬ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಭಾರತದಲ್ಲಿ ಭೇಟಿ ನೀಡಬಹುದಾದ ಅತ್ಯಂತ ಹೆಸರುವಾಸಿಯಾದ ಕೃಷ್ಣ ದೇವಾಲಯಗಳು

ಕೃಷ್ಣ ಜನ್ಮಾಷ್ಟಾಮಿಯು ಜಗತ್ತಿನಾದ್ಯಂತದ ಹಿಂದು ಧರ್ಮದವರಿಂದ ಆಚರಿಸಲ್ಪಡುವ ಹಬ್ಬವಾಗಿದ್ದು, ಅದರಲ್ಲೂ ವೈಷ್ಣವ ಪಂಥದವರಿಗೆ ಈ ಹಬ್ಬವು ಪ್ರಮುಖವಾದ ಹಬ್ಬವೆನಿಸಿದೆ. ಈ ಹಬ್ಬವು ಹಿಂದಿನ ಕಾಲದಿಂದಲೂ ಅಂದರೆ ವಾಸುದೇವ ಹಾಗೂ ದೇವಕಿಯ ಎಂಟನೇ ಮಗುವಾದ ಶ್ರೀಕೃಷ್ಣನ ಜನನವಾದ ಕಾಲದಿಂದಲೂ ಈ ದಿನವನ್ನು ಆಚರಿಸುತ್ತಾ ಬಂದಿದೆ. ಈ ಹಬ್ಬವನ್ನು ಶತಮಾನಗಳಿಂದಲೂ ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.

ಕೃಷ್ಣ ಜನ್ಮಾಷ್ಟಮಿಯು ಹಿಂದುಗಳಿಗೆ ಅತ್ಯಂತ ಪ್ರಮುಖವಾದ ದಿನಗಳಲ್ಲಿ ಒಂದಾಗಿದ್ದು, ಇದು ಸಾಮಾನ್ಯವಾಗಿ ಆಗಸ್ಟ್ ತಿಂಗಳಲ್ಲಿ ಬರುತ್ತದೆ ಈ ದಿನವನ್ನು ಬಹಳ ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ಹಬ್ಬದ ಸಮಯದಲ್ಲಿ ಕೆಲವರು ದೇವಾಲಯಗಳಿಗೆ ಭೇಟಿ ಕೊಟ್ಟು ಧಾರ್ಮಿಕ ಆಚರಣೆಗಳಲ್ಲಿ ಪಾಲ್ಗೊಳ್ಳುತ್ತಾರೆ. ಈ ಹಬ್ಬವನ್ನು ಶ್ರೀಕೃಷ್ಣ ಭಗವಂತನ ಜಗತ್ತಿನಾದ್ಯಂತದ ಅನುಯಾಯಿಗಳಿಂದ ಆಚರಿಸಲ್ಪಡುತ್ತದೆ.

2022 : 2022ರ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಭಾರತದಲ್ಲಿ ಭೇಟಿ ನೀಡಬಹುದಾದಂತಹ ಅತ್ಯಂತ ಪ್ರಸಿದ್ದ ಶ್ರೀಕೃಷ್ಣ ದೇವರ ದೇವಾಲಯಗಳ ಪಟ್ಟಿ ಈ ಕೆಳಗಿನಂತಿವೆ

ಶ್ರೀಕೃಷ್ಣ ಜನಮ್ ಭೂಮಿ ಮಂದಿರ, ಮಥುರಾ

ಶ್ರೀಕೃಷ್ಣ ಜನಮ್ ಭೂಮಿ ಮಂದಿರ, ಮಥುರಾ

ಶ್ರೀಕೃಷ್ಣ ಜನ್ಮಭೂಮಿ ಮಂದಿರವು ಉತ್ತರ ಪ್ರದೇಶದ ಮಥುರಾದಲ್ಲಿದ್ದು, ಇದು ಶ್ರೀಕೃಷ್ಣ ದೇವರ ಜನ್ಮ ಸ್ಥಳವಾಗಿರುವುದರಿಂದ, ಅಸಂಖ್ಯಾತ ಭಕ್ತರಿಂದ ಪ್ರತಿದಿನ ಭೇಟಿ ಕೊಡಲ್ಪಡುವ ಸ್ಥಳವಾಗಿದೆ. ಈ ದೇವಾಲಯವನ್ನು ಶ್ರೀಕೃಷ್ಣ ದೇವರು ಹುಟ್ಟಿದ ಸ್ಥಳವಾದ ಖೈದಿಖಾನೆಯ(ಜೈಲಿನ) ಸುತ್ತ ನಿರ್ಮಿಸಲಾಗಿದೆ ಎನ್ನಲಾಗುತ್ತದೆ. ಮಥುರಾಗೆ ಭೇಟಿ ಕೊಟ್ಟಲ್ಲಿ ನೀವು ಶ್ರೀಕೃಷ್ಣ ದೇವರ ನಿಜವಾದ ಜನ್ಮ ಸ್ಥಳವನ್ನು ನೋಡುವ ಅವಕಾಶವನ್ನು ಪಡೆಯಬಹುದಾಗಿದೆ. ಈ ಖೈದಿಖಾನೆಯು ದೇವಾಲಯ ಸಂಕೀರ್ಣದ ಒಳಭಾಗದಲ್ಲಿ ನೆಲೆಸಿದ್ದು, ನಿಖರವಾದ ಜನ್ಮಸ್ಥಳವನ್ನು ವೀಕ್ಷಿಸಲು ಸಾಧ್ಯವಾಗುತ್ತದೆ. ಈ ಪವಿತ್ರ ಸ್ಥಳವು ನಿಮಗೆ ಶಾಂತಿಯುತ ವಾತಾವರಣವನ್ನು ನೀಡುತ್ತದೆ ಮತ್ತು ಶ್ರೀಕೃಷ್ಣ ಭಗವಂತನ ಸಾನ್ನಿಧ್ಯವನ್ನು ಹತ್ತಿರದಿಂದ ಅನುಭವಿಸುವ ಅವಕಾಶವನ್ನು ಪಡೆಯಬಹುದು.

ಬೇಕಾಗುವ ಸಮಯ: 4 ರಿಂದ 5 ತಾಸುಗಳು

ಸ್ಥಳ: ಜನಂ ಭೂಮಿ ಮಾರ್ಗ, ಜನಂ ಭೂಮಿ, ಮಥುರಾ, ಉತ್ತರ ಪ್ರದೇಶ 281001

ಬನ್ಕೆ ಬಿಹಾರಿ ದೇವಾಲಯ, ವೃಂದಾವನ್

ಬನ್ಕೆ ಬಿಹಾರಿ ದೇವಾಲಯ, ವೃಂದಾವನ್

ಬನ್ಕೆ ಬಿಹಾರಿ ದೇವಾಲಯವು ಭಾರತದ ಉತ್ತರಪ್ರದೇಶದ ಮಥುರಾ ಜಿಲ್ಲೆಯ ವೃಂದಾವನ್ ಪಟ್ಟಣದಲ್ಲಿ ನೆಲೆಸಿದೆ. ಇಲ್ಲಿ ಕೃಷ್ಣ ದೇವರ ಪ್ರತಿಮೆಯು ಮೂರು ಕೋನಗಳುಳ್ಳ ತ್ರಿಭಂಗ ಭಂಗಿಯಲ್ಲಿದೆ. ಹಾಗಾಗಿ ಮೂರು ಕಡೆ ಬಾಗಿರುವ ಶ್ರೀಕೃಷ್ಣನಿಗೆ "ಬ್ಯಾಂಕೆ " ಎಂಬ ಹೆಸರು ಬಂದಿದೆ. ಹಿಂದೆ ನಿಧಿವನ್ ನಲ್ಲಿ ಇದೇ ಶ್ರೀಕೃಷ್ಣನ ವಿಗ್ರಹವನ್ನು ಕುಂಜ್ ಬಿಹಾರಿ ಎಂದೂ ಪೂಜಿಸಲಾಗುತ್ತಿದ್ದು,ಇದರ ಅರ್ಥ ಕುಂಜ್ ಅಥವಾ ವೃಂದಾವನದ್ ತೋಪುಗಳಲ್ಲಿ ಆನಂದಿಸುವವನು ಎಂದು ಅರ್ಥವಾಗಿದ್ದು, ಅಲ್ಲಿ ಪರಮಾನಂದವನ್ನು ಅನುಭವಿಸುವವನೆಂದು ಅರ್ಥೈಸುತ್ತದೆ.

ಸಮಯ: 3 ರಿಂದ 4 ಗಂಟೆಗಳು

ಸ್ಥಳ: ಗೋದಾ ವಿಹಾರ್, ಮದನ್ ಮೋಹನ್ ಬಂಕಿ ಬಿಹಾರಿ ರಸ್ತೆ, ವೃಂದಾವನ, ಉತ್ತರ ಪ್ರದೇಶ, 28112

ರಾಜಗೋಪಾಲಸ್ವಾಮಿ ದೇವಾಲಯ ,ತಮಿಳುನಾಡು

ರಾಜಗೋಪಾಲಸ್ವಾಮಿ ದೇವಾಲಯ ,ತಮಿಳುನಾಡು

ಭಾರತದ ತಮಿಳುನಾಡಿನ ತಿರುವರೂರ್ ಜಿಲ್ಲೆಯ ಮನ್ನರ್ಗುಡಿ ಪಟ್ಟಣದಲ್ಲಿ ನೆಲೆಸಿರುವ ರಾಜಗೋಪಾಲಸ್ವಾಮಿ ದೇವಾಲಯಯವು ವೈಷ್ಣವ ಪಂಥದವರ ಅತ್ಯಂತ ಪ್ರಸಿದ್ದ ದೇವಾಲಯಗಳಲ್ಲೊಂದಾಗಿದೆ. ಹಾಗೂ ಇದು "ದಕ್ಷಿಣ ದ್ವಾರಕ" ಎಂಬ ಹೆಸರಿನಿಂದ ಕರೆಯಲ್ಪಡುತ್ತದೆ. ರಾಜಗೋಪಾಲಸ್ವಾಮಿ ದೇವಾಲಯವು ಕೃಷ್ಣ ದೇವರ ಅವತಾರಗಳಲ್ಲೊಂದಾದ ರಾಜಗೋಪಾಲಸ್ವಾಮಿಗೆ ಅರ್ಪಿತವಾಗಿದೆ. ಈ ದೇವಾಲಯವು 16 ಗೋಪುರಗಳು, 24 ಗುಡಿಗಳು, 7 ಪ್ರಾಕಾರಗಳು 7 ಮಂಟಪಗಳು ಮತ್ತು 9 ತೀರ್ಥಂಗಳನ್ನು ಹೊಂದಿದ್ದು, ಇದನ್ನು ಚೋಳರ ರಾಜ ಒಂದನೆ ಕುಲೋತ್ತುಂಗನಿಂದ ರಚಿತವಾಯಿತೆಂದು ನಂಬಲಾಗುತ್ತದೆ. ರಾಜಗೋಪಾಲಸ್ವಾಮಿ ದೇವಾಲಯವನ್ನು ಕುಲೋತ್ತುಂಗ ಚೋಳ I ನಿರ್ಮಿಸಿದ ಎಂದು ನಂಬಲಾಗಿದೆ. ಈ ದೇವಾಲಯವು ಭಾರತದ ತಮಿಳುನಾಡಿನ ಪ್ರಮುಖ ಪ್ರವಾಸಿ ತಾಣವಾಗಿದೆ.

ಅಗತ್ಯವಿರುವ ಸಮಯ: 2 ಗಂಟೆಗಳು

ಸ್ಥಳ: ಮನ್ನಾರ್ಗುಡಿ, ತಮಿಳುನಾಡು.

ದ್ವಾರಕಾಧೀಶ ದೇವಸ್ಥಾನ, ದ್ವಾರಕಾ

ದ್ವಾರಕಾಧೀಶ ದೇವಸ್ಥಾನ, ದ್ವಾರಕಾ

ದ್ವಾರಕಾಧೀಶ ದೇವಾಲಯವು ಭಾರತದ ಗುಜರಾತ್ ನ ದ್ವಾರಕ ನಗರದಲ್ಲಿರುವ ಒಂದು ದೇವಾಲಯ ಸಂಕೀರ್ಣವಾಗಿದೆ. ಇದನ್ನು "ಜಗತ್ ಮಂದಿರ್" ಎಂದೂ ಕರೆಯಲಾಗುತ್ತದೆ. ದ್ವಾರಕದ ಇತಿಹಾಸವು ಮಹಾಭಾರತದಲ್ಲಿ ಉಲ್ಲೇಖಿಸಲಾದ ದ್ವಾರಕ ಸಾಮ್ರ್ಯಾಜ್ಯಕ್ಕೆ ಸೇರಿದುದಾಗಿದ್ದು, ಅತ್ಯಂತ ಹಳೆಯದಾಗಿದೆ. ಇಲ್ಲಿ ಶ್ರೀಕೃಷ್ಣನನ್ನು ದ್ವಾರಕಾದೀಶ ಎಂದು ಕರೆಯುತ್ತಾರೆ. ಅಂದರೆ "ದ್ವಾರಕದ ರಾಜ" ಎಂದು ಅರ್ಥೈಸುತ್ತದೆ. ಈ ದೇವಾಲಯ ಸಂಕೀರ್ಣದೊಳಗೆ ಸುಭದ್ರ, ವಾಸುದೇವ, ಬಲರಾಮ ಮತ್ತು ರೇವತಿ, ರುಕ್ಮಿಣಿ ಮತ್ತು ಇತರ ಅನೇಕ ದೇವಾಲಯಗಳನ್ನು ಒಳಗೊಂಡಿದೆ. ಇಲ್ಲಿ ಜನ್ಮಾಷ್ಟಮಿಯನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ ಮತ್ತು ಮಧ್ಯರಾತ್ರಿಯಲ್ಲಿ ಶ್ರೀಕೃಷ್ಣನ ಜನ್ಮವನ್ನು ಆಚರಿಸಲು ಸಾವಿರಾರು ಭಕ್ತರು ಇಲ್ಲಿ ಸೇರುತ್ತಾರೆ.

ಅಗತ್ಯವಿರುವ ಸಮಯ: 2 ರಿಂದ 3 ಗಂಟೆಗಳು

ಸ್ಥಳ: ದ್ವಾರಕಾ, ಗುಜರಾತ್.

ಪ್ರೇಮ್ ಮಂದಿರ, ವೃಂದಾವನ

ಪ್ರೇಮ್ ಮಂದಿರ, ವೃಂದಾವನ

ಉತ್ತರಪ್ರದೇಶದಲ್ಲಿರುವ ವೃಂದಾವನದಲ್ಲಿರುವ ಪ್ರೇಮ್ ಮಂದಿರವು ರಾಧಾಕೃಷ್ಣ ಮತ್ತು ಸೀತಾ ರಾಮರಿಗೆ ಅರ್ಪಿತವಾಗಿದೆ. ಇದನ್ನು ಜಗದ್ಗುರು ಕೃಪಾಲು ಪರಿಷತ್, ಅಂತರರಾಷ್ಟ್ರೀಯ ಲಾಭರಹಿತ, ಆಧ್ಯಾತ್ಮಿಕ ಮತ್ತು ಎಜುಕೇಶನಲ್ ಚಾರಿಟಬಲ್ ಟ್ರಸ್ಟ್‌ನಿಂದ ಸಂರಕ್ಷಿಸಲಾಗಿದೆ. ಈ ದೇವಾಲಯವು ಸುಂದರವಾದ ವಾಸ್ತುಶಿಲ್ಪವನ್ನು ಹೊಂದಿದ್ದು, ಇದು ಭಾರತದ ಅತ್ಯಂತ ಸುಂದರವಾದ ಕೃಷ್ಣ ದೇವಾಲಯಗಳಲ್ಲಿ ಒಂದಾಗಿದೆ. ಇಲ್ಲಿನ ವಾಸ್ತುಶಿಲ್ಪವು ಸುಂದರವಾಗಿದೆ ಅಲ್ಲದೆ ಇಲ್ಲಿನ ಉದ್ಯಾನವು ಅದ್ಬುತ ಕಲಾಕೃತಿಯಾಗಿದೆ. ಸಂಜೆಯ ವೇಳೆಗೆ, ದೇವಾಲಯವು ಹಲವಾರು ವರ್ಣರಂಜಿತ ದೀಪಗಳಿಂದ ಬೆಳಗುತ್ತದೆ ಇದು ಸುಂದರ ವರ್ಣಚಿತ್ರದಂತೆ ಕಾಣುತ್ತದೆ ಈ ಮನಮೋಹಕ ದೃಶ್ಯವು ನಿಮ್ಮನ್ನು ಅಲ್ಲೇ ಶಾಶ್ವತವಾಗಿ ಉಳಿಯುವಂತೆ ಮಾಡುತ್ತದೆ.

ಅಗತ್ಯವಿರುವ ಸಮಯ: 2 ಗಂಟೆಗಳು

ಸ್ಥಳ: ಶ್ರೀ ಕೃಪಾಲು ಮಹಾರಾಜ್ ಜಿ ಮಾರ್ಗ, ರಾಮನ್ ರೇತಿ, ವೃಂದಾವನ, ಉತ್ತರ ಪ್ರದೇಶ 281121

ದಯವಿಟ್ಟು ಗಮನಿಸಿ: ಅಗತ್ಯವಿರುವ ಸಮಯದಲ್ಲಿ ಸಂದರ್ಭ ಮತ್ತು ವ್ಯಕ್ತಿಗೆ ಅನುಗುಣವಾಗಿ ಬದಲಾವಣೆಗೆ ಒಳಪಟ್ಟಿರುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X