Search
  • Follow NativePlanet
Share
» »ಪ್ರಾಚೀನ ಭಾರತದ ಭವ್ಯ ಸೌಂದರ್ಯತೆಯನ್ನು ಪ್ರತಿಬಿಂಬಿಸುತ್ತವೆ ಕೇರಳದ ಈ 5 ಪ್ರಮುಖ ವಾಸ್ತುಶಿಲ್ಪ ಅದ್ಬುತಗಳು!

ಪ್ರಾಚೀನ ಭಾರತದ ಭವ್ಯ ಸೌಂದರ್ಯತೆಯನ್ನು ಪ್ರತಿಬಿಂಬಿಸುತ್ತವೆ ಕೇರಳದ ಈ 5 ಪ್ರಮುಖ ವಾಸ್ತುಶಿಲ್ಪ ಅದ್ಬುತಗಳು!

ದೇವರ ಸ್ವಂತ ನಾಡೆಂದೇ ಪ್ರಸಿದ್ದಿಯಾಗಿರುವ ಕೇರಳವು ತನ್ನಲ್ಲಿರುವ ಅಪಾರ ಸಂಖ್ಯೆತ ಪ್ರಕೃತಿ ಸೌಂದರ್ಯತೆಗೆ ಜನಪ್ರಿಯವಾಗಿದ್ದು ಇದು ಹಿನ್ನಿರು, ಸರೋವರಗಳು, ಬೆಟ್ಟಗಳು, ಕಣಿವೆಗಳು ಮತ್ತು ಜಲಪಾತಗಳ ರೂಪದಲ್ಲಿ ರಾಜ್ಯದಾದ್ಯಂತ ಹರಡಿಕೊಂಡಿದೆ. ಕೇರಳದ ಈ ನೈಸರ್ಗಿಕ ಸೌಂದರ್ಯತೆಯನ್ನು ಅನ್ವೇಷಣೆ ಮಾಡಲು ಕೇವಲ ಭಾರತ ಮಾತ್ರವಲ್ಲದೆ ಪ್ರಪಂಚದಾದ್ಯಂತದ ಜನರು ಭೇಟಿ ಕೊಡುತ್ತಾರೆ. ಇಂತಹ ಜನಪ್ರಿಯತೆಯನ್ನು ಗಳಿಸಿರುವ ಕೇರಳಕ್ಕೆ ಪ್ರವಾಸ ಮಾಡುವುದನ್ನು ನಿಮ್ಮ ಪ್ರವಾಸದ ಪಟ್ಟಿಯಲ್ಲಿ ಸೇರಿಸಿಕೊಳ್ಳಿ. ಆದರೆ ಕೇರಳವು ತನ್ನ ಪ್ರಾಚೀನ ಸ್ಮಾರಕಗಳಿಗೀ ಅಷ್ಟೇ ಮಹತ್ವದ್ದಾಗಿದೆ ಎಂದು ನಿಮಗೆ ತಿಳಿದಿದೆಯೇ? ಇಲ್ಲದಿದ್ದರೆ, ಕೇರಳವು ದೇಶದ ಕೆಲವು ಸುಂದರವಾದ ಪ್ರಾಚೀನ ಸ್ಮಾರಕಗಳಿಗೆ ನೆಲೆಯಾಗಿದೆ ಎಂದು ನಾವು ನಿಮಗೆ ಅವುಗಳ ಬಗ್ಗೆ ವಿವರಿಸುತ್ತೇವೆ.

ಕೇರಳದಲ್ಲಿರುವ ವಾಸ್ತುಶಿಲ್ಪ ಕೇರಳದ ಈ ವಾಸ್ತುಶಿಲ್ಪ ಅದ್ಬುತಗಳು ಮಿಲಿಯನ್ ಗಟ್ಟಲೆ ವಾಸ್ತುಶಿಲ್ಪ ಉತ್ಸಾಹಿಗಳು ಮತ್ತು ಇತಿಹಾಸ ಪ್ರಿಯರನ್ನು ಆಕರ್ಷಿಸುತ್ತದೆ. ನೀವು ಇದರಲ್ಲಿ ಯಾರಾದರೂ ಒಬ್ಬರಾಗಿದ್ದಲ್ಲಿ ಈ ಸ್ಥಳಗಳನ್ನು ನೀವು ಈ ಋತುವಿನಲ್ಲಿ ಭೇಟಿ ಕೊಡಲೇಬೇಕು. ಈ ಪಟ್ಟಿಯಲ್ಲಿ ಪುರಾತನ ಧಾರ್ಮಿಕ ತಾಣಗಳು, ಅರಮನೆಗಳು, ಕೋಟೆಗಳು ಸೇರಿವೆ.

ವಡಕ್ಕುನ್ನಾಥನ್ ದೇವಾಲಯ

ವಡಕ್ಕುನ್ನಾಥನ್ ದೇವಾಲಯ

ನಗರ ತ್ರಿಶೂರ್ ನ ವಡಕ್ಕುನಾಥನ್ ದೇವಾಲಯವು ದೇಶದ ಅತ್ಯಂತ ಪ್ರಾಚೀನ ದೇವಾಲಯಗಳಲ್ಲಿ ಒಂದೆಂದು ಹೆಸರುವಾಸಿಯಾಗಿದೆ. ಈ ದೇವಾಲಯವು ಶಿವ ದೇವರಿಗೆ ಅರ್ಪಿತವಾದುದಾಗಿದ್ದು, ಇದನ್ನು ಸಾವಿರಾರು ವರ್ಷಗಳ ಹಿಂದೆ ವಿಷ್ಣುವಿನ ಆರನೇ ಅವತಾರವಾದ ಸ್ವತಃ ಪರಶುರಾಮ ದೇವರು ನಿರ್ಮಿಸಿದರೆನ್ನಲಾಗುತ್ತದೆ.

ಆದುದರಿಂದ ಇದು ದೊಡ್ಡ ಐತಿಹಾಸಿಕ ಮತ್ತು ಧಾರ್ಮಿಕ ಪ್ರಾಮುಖ್ಯತೆಯನ್ನು ಹೊಂದಿದೆ. ಸುಂದರವಾದ ಉದ್ಯಾನವನದಿಂದ ಸುತ್ತುವರೆದಿರುವ ಈ ಸಹಸ್ರಮಾನಗಳ ಹಳೆಯ ದೇವಾಲಯವು ಸುಂದರವಾದ ಪ್ರವೇಶ ದ್ವಾರಗಳನ್ನು ಹೊಂದಿದೆ ಮತ್ತು ಇದನ್ನು ಕೇರಳದ ವಿಶಿಷ್ಟ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಿಸಲಾಗಿದೆ.

ಇದು ತನ್ನ ಭವ್ಯವಾದ ಮರದ ಕೆತ್ತನೆಗಳು ಮತ್ತು ಅದ್ಭುತವಾದ ಗೋಡೆ ವರ್ಣಚಿತ್ರಗಳಿಗಾಗಿ ಪ್ರವಾಸಿಗರಲ್ಲಿ ಹೆಸರುವಾಸಿಯಾಗಿದೆ. ತ್ರಿಶ್ಶೂರ್ ಮತ್ತು ಸುತ್ತಮುತ್ತ ಇರುವಾಗ ವಡಕ್ಕುನಾಥನ್ ದೇವಸ್ಥಾನವನ್ನು ಭೇಟಿ ಕೊಡುವುದನ್ನು ತಪ್ಪಿಸಿಕೊಳ್ಳಲೇಬಾರದು. ಎಲ್ಲಕ್ಕಿಂತ ಹೆಚ್ಚಾಗಿ ಇದು ಐತಿಹಾಸಿಕ ಮತ್ತು ವಾಸ್ತುಶಿಲ್ಪದ ಪ್ರಾಮುಖ್ಯತೆಯನ್ನು ಹೊಂದಿರುವ ಜಿಲ್ಲೆಯ ಕೆಲವೇ ದೇವಾಲಯಗಳಲ್ಲಿ ಒಂದಾಗಿದೆ.

ಬೇಕಲ್ ಕೋಟೆ

ಬೇಕಲ್ ಕೋಟೆ

ಹದಿನೇಳನೇ ಶತಮಾನದಲ್ಲಿ ನಿರ್ಮಿಸಲ್ಪಟ್ಟ ಬೇಕಲ್ ಕೋಟೆಯು ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಅರಬ್ಬೀ ಸಮುದ್ರದ ದಡದಲ್ಲಿದೆ. ಇದನ್ನು ಕೆಳದಿ ರಾಜವಂಶದ ನಾಯ್ಕರು ನಿರ್ಮಿಸಿದರೆನ್ನಲಾಗುತ್ತದೆ. ಅಲ್ಲದೆ, ಈ ಕೋಟೆಯು ಮೈಸೂರು ಮತ್ತು ಇನ್ನಿತರ ರಾಜವಂಶಗಳ ಆಳ್ವಿಕೆಗೂ ಒಳಪಟ್ಟಿದೆ. ಈ ಕೋಟೆಯ ಉಪಸ್ಥಿತಿಯು ಸಮುದ್ರ ದಡದಲ್ಲಿರುವ ಕಾರಣ ಇದು ಕೇವಲ ಇತಿಹಾಸ ಪ್ರಿಯರಿಗೆ ಜನಪ್ರಿಯ ವಾರಾಂತ್ಯದ ರಜಾದಿನಗಳ ತಾಣ ಮಾತ್ರವಲ್ಲದೆ ಇದೊಂದು ಬೀಚ್ ಪ್ರೇಮಿಗಳ ತಾಣವೂ ಆಗಿದೆ. ಬೇಕಲ್ ಕೋಟೆಯು ಕೇರಳದ ಅತ್ಯಂತ ದೊಡ್ಡ ಕೋಟೆ ಎನ್ನುವುದು ನಿಮಗೆ ಗೊತ್ತೇ?

ಬಲವಾದ ಬುರುಜುಗಳು ಮತ್ತು ಸುಂದರವಾದ ಕೋಟೆಗಳೊಂದಿಗೆ, ಈ ಪ್ರಾಚೀನ ಕೋಟೆಯು ಕೇರಳದ ಇತಿಹಾಸದ ಬಗ್ಗೆ ತಿಳಿದುಕೊಳ್ಳಲು ಬಯಸುವ ಪ್ರತಿಯೊಬ್ಬ ಪ್ರಯಾಣಿಕರು ಭೇಟಿ ನೀಡಲೇಬೇಕಾದ ತಾಣವಾಗಿದೆ. ಕೋಟೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಚ್ಚ ಹಸಿರಿನ ಉಪಸ್ಥಿತಿಯು ಹೆಚ್ಚು ಫೋಟೋಜೆನಿಕ್ ಆಗಿ ಕಾಣುತ್ತದೆ.

ಪರದೇಸಿ ಸಿನಗಾಗ್ (ಯಹೂದಿಯರ ಗುಡಿ)

ಪರದೇಸಿ ಸಿನಗಾಗ್ (ಯಹೂದಿಯರ ಗುಡಿ)

1567ರಲ್ಲಿ ನಿರ್ಮಿತವಾದ ಪರದೇಸಿ ಸಿನಗಾಗ್ ಕೊಚ್ಚಿಯಲ್ಲಿ ನೆಲೆಸಿದೆ. ಮತ್ತು ಇದನ್ನು ಕೆಲವೊಮ್ಮೆ ಕೊಚ್ಚಿನ್ ಜ್ಯೂವಿಶ್ ಸಿನೆಗಾಗ್ ಎಂದೂ ಕರೆಯಲಾಗುತ್ತದೆ. ಇದು ವಿಶ್ವದ ಅತ್ಯಂತ ಹಳೆಯ ಸಕ್ರಿಯ ಸಿನಗಾಗ್‌ಗಳಲ್ಲಿ ಒಂದಾಗಿದೆ ಎಂದು ಹೇಳಲಾಗುತ್ತದೆ ಮತ್ತು ಅದರ ಅಸಾಧಾರಣ ಒಳಾಂಗಣಕ್ಕೆ ಹೆಸರುವಾಸಿಯಾಗಿದೆ.

ಸುಂದರವಾದ ಗಾಜಿನ ಗೊಂಚಲುಗಳು, ಕಾನೂನಿನ ಪುರಾತನ ಸುರುಳಿಗಳು, ಚಿನ್ನದ ಕಿರೀಟಗಳು ಮತ್ತು ಹಳೆಯ ತಾಮ್ರದ ಫಲಕಗಳನ್ನು ಹೊಂದಿರುವ ಇದು ದೇಶದ ಅತ್ಯಂತ ಸುಂದರವಾದ ಸಿನಗಾಗ್‌ಗಳಲ್ಲಿ ಒಂದಾಗಿದೆ ಎಂದು ನಂಬಲಾಗಿದೆ. ಆದ್ದರಿಂದ, ಇದು ಪ್ರತಿ ವರ್ಷ ಸಾವಿರಾರು ಪ್ರವಾಸಿಗರನ್ನು ಆಕರ್ಷಿಸುತ್ತದೆ. ನಿಮ್ಮ ಕ್ಯಾಮರಾದಲ್ಲಿ ಪುರಾತನ ಅಲಂಕಾರದ ಅತ್ಯುತ್ತಮವಾದುದನ್ನು ಸೆರೆಹಿಡಿಯಲು ನೀವು ಬಯಸಿದರೆ, ಕೊಚ್ಚಿಯಲ್ಲಿರುವ ಪರದೇಸಿ ಸಿನಗಾಗ್ ನಿಮಗೆ ಸೂಕ್ತವಾದ ಗಮ್ಯಸ್ಥಾನವಾಗಿದೆ.

ಪದ್ಮನಾಭ ಸ್ವಾಮಿ ದೇವಾಲಯ

ಪದ್ಮನಾಭ ಸ್ವಾಮಿ ದೇವಾಲಯ

ನಿಸ್ಸಂದೇಹವಾಗಿಯೂ ಕೇರಳದ ಅತ್ಯಂತ ಜನಪ್ರಿಯ ಮತ್ತು ಪ್ರಮುಖವಾದ ಸ್ಥಳವೆಂದರೆ ಅದು ಪದ್ಮನಾಭಸ್ವಾಮಿ ದೇವಾಲಯ. ಈ ದೇವಾಲಯವು ಅನಂತ ದೇವರ ನಗರವೆಂದೇ ಕರೆಸಿಕೊಳ್ಳುವ ತ್ರಿವೆಂಡ್ರಮ್ ನಲ್ಲಿ ನೆಲೆಸಿದ್ದು, ಈ ದೇವಾಲಯವು ವಿಷ್ಣು ದೇವರಿಗೆ ಅರ್ಪಿತವಾದುದಾಗಿದೆ. ಈ ದೇವಾಲಯವು ದೇಶದ ಅತ್ಯಂತ ಶ್ರೀಮಂತವಾದ ದೇವಾಲಯವೆಂದು ಕರೆಸಿಕೊಳ್ಳುತ್ತದೆ.

ಕೇರಳ ಮತ್ತು ತಮಿಳು ಶೈಲಿಯ ಮಿಶ್ರಣದ ವಾಸ್ತುಶಿಲ್ಪವನ್ನು ಹೊಂದಿರುವ ಈ ದೇವಾಲಯವು ಭೇಟಿ ನೀಡಲೇ ಬೇಕು ಎನ್ನುವಂತಹುದು.

ಸಾವಿರಾರು ವರ್ಷಗಳ ಹಿಂದೆ ನಿರ್ಮಿತವಾಗಿರುವ ಈ ದೇವಾಲಯವು ಐತಿಹಾಸಿಕ ಮಹತ್ವವುಳ್ಳದ್ದಾಗಿದೆ. ಪ್ರತೀವರ್ಷ ಇಲ್ಲಿ ಮಿಲಿಯನ್ ಗಟ್ಟಲೆ ಹಿಂದು ಭಕ್ತರು ಹಾಗೂ ಪ್ರವಾಸಿಗರು ಭೇಟಿ ನೀಡುತ್ತಾರೆ.ಹಿಂದುಗಳಲ್ಲಿ ಇದು ಅತ್ಯಂತ ಪ್ರಮುಖ ಯಾತ್ರಾಸ್ಥಳಗಳಲ್ಲಿ ಒಂದಾಗಿದೆ. ಈ ದೇವಾಲಯವು ವಿಷ್ಣು ದೇವರ 108 ಪವಿತ್ರ ನೆಲೆಗಳಲ್ಲಿ ಒಂದಾಗಿರುವುದರಿಂದ ಇದು ಪ್ರಮುಖವಾಗಿ ವೈಷ್ಣವ ಪಂಥದವರಿಗೆ ಅತ್ಯಂತ ಪವಿತ್ರವಾದ ದೇವಾಲಯವಾಗಿದೆ.

ಕನಕಕ್ಕುನ್ನು ಅರಮನೆ

ಕನಕಕ್ಕುನ್ನು ಅರಮನೆ

ತ್ರಿವೆಂಡ್ರಮ್ ನ ಮತ್ತೊಂದು ವಾಸ್ತುಶಿಲ್ಪ ಅದ್ಬುತದ ಸ್ಥಳವೆಂದರೆ ಅದು ಕನಕಕ್ಕುನ್ನು ಅರಮನೆಯಾಗಿದ್ದು ಇದು ರಾಜ್ಯದ ಅತ್ಯಂತ ಸುಂದರ ಮತ್ತು ವೈಭವೋಪೇತ ಕಟ್ಟಡಗಳಲ್ಲಿ ಒಂದಾಗಿದೆ. ಇದನ್ನು ನೂರು ವರ್ಷದ ಹಿಂದೆ ಟ್ರಾವೆಂಕೂರ್ ರಾಜ ಮೂಲಮ್ ತಿರುನಾಳ್ ಆಡಳಿತದ ಸಮಯದಲ್ಲಿ ನಿರ್ಮಿಸಲ್ಪಟ್ಟಿತು. ಸುಂದರವಾದ ಉದ್ಯಾನವನದಿಂದ ಆವೃತವಾಗಿರುವ ಮತ್ತು ಕೇರಳ ಶೈಲಿಯ ವಾಸ್ತುಶಿಲ್ಪದ ಹೆಗ್ಗಳಿಕೆಯನ್ನು ಹೊಂದಿರುವ ಈ ಸುಂದರವಾದ ಅರಮನೆಯನ್ನು ಈಗ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಇತರ ಪ್ರಮುಖ ಸಭೆಗಳಿಗೆ ಬಳಸಲಾಗುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X