ವೃಂದಾವನಕ್ಕೆ ಭೇಟಿ ನೀಡಲು ನವೆಂಬರ್ ನಿಂದ ಮಾರ್ಚ್ ವರೆಗಿನ ಅವಧಿಯು ಹೇಳಿ ಮಾಡಿಸಿದ ಅವಧಿಯಾಗಿರುತ್ತದೆ. ಏಕೆಂದರೆ ಈ ಸಮಯದಲ್ಲಿ ಇಲ್ಲಿನ ಹವಾಮಾನವು ಆಹ್ಲಾದಕರವಾಗಿರುತ್ತದೆ. ಆಗಸ್ಟ್/ ಸೆಪ್ಟೆಂಬರ್ ತಿಂಗಳಿನಲ್ಲಿ ಬರುವ ಜನ್ಮಾಷ್ಟಮಿಗೆ ಇಲ್ಲಿ ಭಾರೀ ಜನಸಂದಣಿ ಸೇರುತ್ತದೆ.
ಇಲ್ಲಿ ಬೇಸಿಗೆಯು ಮಾರ್ಚ್ ನಿಂದ ಜೂನ್ವರೆಗೆ ಇರುತ್ತದೆ. ಮೇ ತಿಂಗಳಿನಲ್ಲಿ ಇಲ್ಲಿನ ಉಷ್ಣಾಂಶವು 45° ಸೆಲ್ಶಿಯಸ್ ಅನ್ನು ತಲುಪಿರುತ್ತದೆ.
ಮಳೆಗಾಲವು ಇಲಿ ಜುಲೈನಿಂದ ಸೆಪ್ಟೆಂಬರ್ ವರೆಗೆ ಕಂಡು ಬರುತ್ತದೆ. ಅನಿಯಮಿತವಾಗಿ ಸುರಿಯುವ ಭಾರೀ ಮಳೆಯು ಇಲ್ಲಿನ ವೈಶಿಷ್ಟ್ಯ. ದಟ್ಟವಾಗಿ ಕವಿದ ಮೋಡಗಳು, ಆರ್ದ್ರತೆ ಮತ್ತು ತೇವಾಂಶದಿಂದ ಕೂಡಿದ ವಾತಾವರಣ ಈ ಕಾಲದ ವೈಶಿಷ್ಟ್ಯ.
ಚಳಿಗಾಲವು ಇಲ್ಲಿ ಡಿಸೆಂಬರ್ ನಿಂದ ಫೆಬ್ರವರಿಯವರೆಗೆ ಇರುತ್ತದೆ. ಈ ಸಮಯದಲ್ಲಿ ಇಲ್ಲಿ ಆಹ್ಲಾದಕರವಾದ ವಾತಾವರಣವಿರುತ್ತದೆ ಹಾಗು ಉಷ್ಣಾಂಶವು 12° ಸೆಲ್ಶಿಯಸ್ನಿಂದ 20° ಸೆಲ್ಶಿಯಸ್ವರೆಗೆ ಇರುತ್ತದೆ.