Search
  • Follow NativePlanet
Share
» »ಮಹಾ ಶಿವರಾತ್ರಿ 2020 : ಭಾರತದ ವಿಶಿಷ್ಠವಾದ ಈ 7 ಶಿವ ದೇವಾಲಯಗಳಿಗೆ ಭೇಟಿ ಕೊಡಿ

ಮಹಾ ಶಿವರಾತ್ರಿ 2020 : ಭಾರತದ ವಿಶಿಷ್ಠವಾದ ಈ 7 ಶಿವ ದೇವಾಲಯಗಳಿಗೆ ಭೇಟಿ ಕೊಡಿ

ಹಿಂದು ಧರ್ಮದ ಮೂರು ಶಕ್ತಿ ಶಾಲಿ ದೇವರುಗಳಲ್ಲಿ ಪ್ರಳಯಾಂತಕ ಶಿವ ದೇವರೂ ಒಬ್ಬರಾಗಿದ್ದು ಸುಮಾರು 1,008 ಹೆಸರುಗಳಿಂದ ಈ ದೇವರನ್ನು ಕರೆಯಲಾಗುತ್ತದೆ.ಶಿವ ದೇವರನ್ನು ಹೆಚ್ಚಾಗಿ ಲಿಂಗ ರೂಪದಲ್ಲಿ ಪೂಜಿಸಲಾಗುತ್ತದೆ. ಶಿವರಾತ್ರಿ ಹಬ್ಬವು ಶಿವ ದೇವರಿಗೆ ಅರ್ಪಿತವಾಗಿದೆ ಮತ್ತು ವಿಶ್ವದಾದ್ಯಂತದ ಜನರು ಈ ಹಬ್ಬದ ದಿವಸದಂದು ಶಿವ ದೇವಾಲಯಗಳಿಗೆ ಭೇಟಿ ನೀಡಿ ದೇವರ ಆಶೀರ್ವಾದ ಪಡೆಯಲು ಬರುತ್ತಾರೆ.

ಈ ಶಿವರಾತ್ರಿಯ ಸಮಯದಲ್ಲಿ ಯಾವ ಶಿವ ದೇವಾಲಯಕ್ಕೆ ಭೇಟಿ ಕೊಡಬಹುದೆಂದು ಮಾಹಿತಿ ಈ ಕೆಳಗಿನಂತಿವೆ.

ಬೃಹದೀಶ್ವರ ದೇವಾಲಯ

ಬೃಹದೀಶ್ವರ ದೇವಾಲಯ

ಬೃಹದೀಶ್ವರ ದೇವಾಲಯವು ತಮಿಳರ ಅದ್ಭುತ ವಾಸ್ತುಶಿಲ್ಪ ಶೈಲಿಗೆ ಒಂದು ಪ್ರಮುಖವಾದ ಉದಾಹರಣೆಯಾಗಿದ್ದು ಇದು ಚೋಳ ರಾಜವಂಶಸ್ಥರ ಅವಧಿಯಲ್ಲಿ ನಿರ್ಮಿಸಿದ್ದಾಗಿದೆ. ಈ ದೇವಾಲಯವು ದ್ರಾವಿಡ ಶೈಲಿಯ ವಿನ್ಯಾಸವನ್ನು ಹೊಂದಿದೆ. ರಾಜ ರಾಜ ಚೋಳರಿಂದ ನಿರ್ಮಿಸಲ್ಪಟ್ಟಿರುವ ಇದು ಭಾರತದ ಅತಿದೊಡ್ಡ ದೇವಾಲಯವಾಗಿದೆ. ಈ ದೇವಾಲಯದ ವಿಶಿಷ್ಟ ಲಕ್ಷಣವೆಂದರೆ ಇದನ್ನು 25 ಟನ್ ತೂಕದ ಒಂದೇ ಗ್ರಾನೈಟ್ ಬಂಡೆಯಿಂದ ನಿರ್ಮಿಸಲಾಗಿದೆ. ಇಂದಿಗೂ ಹಿಂದಿನ ಕಾಲದ ವೈಭವ ಮತ್ತು ಭವ್ಯತೆಗಳನ್ನುಈ ದೇವಾಲಯವು ಪ್ರತಿಬಿಂಬಿಸುತ್ತಿದ್ದು ಇದು ಚೋಳ ರಾಜವಂಶದ ಶ್ರೀಮಂತ ಸಂಸ್ಕೃತಿಯ ಒಳನೋಟವನ್ನು ನೀಡುತ್ತವೆ. ಈಗ ಈ ಭವ್ಯವಾದ ದೇವಾಲಯವು ಇಂದು ಯುನೆಸ್ಕೋ ವಿಶ್ವ ಪರಂಪರೆಯೆ ತಾಣವೆಂದು ಪಟ್ಟಿ ಮಾಡಲಾಗಿದೆ.

ಲಿಂಗರಾಜ ದೇವಾಲಯ

ಲಿಂಗರಾಜ ದೇವಾಲಯ

ಭುಬನೇಶ್ವವರದಲ್ಲಿಯ ಅತ್ಯಂತ ಪ್ರಾಚೀನ ದೇವಾಲಯವಾದ ಲಿಂಗರಾಜ ದೇವಾಲಯವು ಅತ್ಯಂತ ಹೆಸರುವಾಸಿಯಾದ ಪ್ರವಾಸಿ ಆಕರ್ಷಣೆಯಾಗಿದ್ದು ಇದೊಂದು ಭೇಟಿಕೊಡಲೇ ಬೇಕಾದ ದೇವಾಲಯವಾಗಿದೆ. ನಗರದ ಈ ಅತಿ ದೊಡ್ಡದಾದ ದೇವಾಲಯವು 1,100 ವರ್ಷಗಳಿಗಿಂತ ಹಳೆಯದು ಎಂದು ಪರಿಗಣಿಸಲಾಗಿದೆ. ಈ ದೇವಾಲಯದ ವಾಸ್ತುಶಿಲ್ಪವು ವಿಶಿಷ್ಟವಾಗಿದ್ದು ಹಿಂದೂ ದೇವಾಲಯದ ರಚನೆಗಳಲ್ಲಿ ಅತ್ಯುತ್ತಮ ಉದಾಹರಣೆಯಾಗಿದೆ. ಡಿಯುಲಾ ಶೈಲಿಯಲ್ಲಿ ನಿರ್ಮಿಸಲಾದ ಮರಳುಗಲ್ಲಿನ ರಚನೆಯು ಇಂದಿಗೂ ಪ್ರಬಲವಾಗಿದೆ. ಗರ್ಭಗುಡಿ, ಸದನಗಳನ್ನು ನಡೆಸುವ ಕೋಣೆ, ಹಬ್ಬಗಳನ್ನು ನಡೆಸುವ ಹಜಾರ ಮತ್ತು ಪೂಜೆಗಳನ್ನು ನಡೆಸುವ ಹಜಾರ. ಈ ರೀತಿಯಾಗಿ ದೇವಾಲಯದಲ್ಲಿ ನಾಲ್ಕು ವಿಭಾಗಗಳನ್ನು ಮಾಡಲಾಗಿದೆ. ಈ ದೇವಾಲಯದ ಕೆಳಗೆ ಒಂದು ರಹಸ್ಯ ಹೊಳೆಯು ಹರಿಯುತ್ತಿದ್ದು, ಇದು ಹತ್ತಿರದ ಬಿಂದುಸಾಗರ್ ಟ್ಯಾಂಕ್ ಅನ್ನು ತುಂಬುತ್ತದೆ. ಈ ನೀರಿಗೆ ರೋಗ ನಿವಾರಣಾ ಗುಣಗಳಿವೆ ಎಂಬ ವಿಶಿಷ್ಟವಾದ ನಂಬಿಕೆಯಿದೆ.

ಕೋಟಿ ಲಿಂಗೇಶ್ವರ ದೇವಾಲಯ

ಕೋಟಿ ಲಿಂಗೇಶ್ವರ ದೇವಾಲಯ

ಕೋಟಿ ಲಿಂಗೇಶ್ವರ ದೇವಾಲಯವು ಕಮ್ಮಸಂದ್ರ ಗ್ರಾಮದಲ್ಲಿದೆ. ಈ ದೇವಾಲಯವನ್ನು ಶಾಂಭ ಶಿವ ಮೂರ್ತಿಯವರು ನಿರ್ಮಿಸಿದ್ದು, ಇಲ್ಲಿಯ ಶಿವನ ಲಿಂಗವು 108 ಅಡಿ ಎತ್ತರವಿದೆ. ಇದನ್ನು ವಿಶ್ವದ ಅತ್ಯಂತ ದೊಡ್ಡ ಶಿವ ಲಿಂಗವೆಂದು ಪರಿಗಣಿಸಲಾಗಿದೆ. ಅಷ್ಟೇ ಅಲ್ಲದೆ ಇಲ್ಲಿಗೆ ಬರುವ ಭಕ್ತರು ಶಿವ ಲಿಂಗದ ಕಡೆಗೆ ಮುಖ ಮಾಡಿಕೊಂಡಿರುವ 35 ಅಡಿ ಎತ್ತರದ ನಂದಿಯ ಮೂರ್ತಿಯನ್ನೂ ಕಾಣಬಹುದಾಗಿದೆ. ಶಿವರಾತ್ರಿಯ ಸಮಯದಲ್ಲಿ ಇಲ್ಲಿಗೆ ದೇಶದ ವಿವಿಧ ಭಾಗಗಳಿಂದ ಭಕ್ತರು ಭೇಟಿ ನೀಡುತ್ತಾರೆ. ಈ ದೇವಾಲಯದಲ್ಲಿ ಕೇವಲ ಶಿವ ದೇವರು ಮಾತ್ರವಲ್ಲದೆ ವಿಷ್ಣು , ರಾಮ, ಮಹೇಶ್ವರ, ಆಂಜನೇಯ, ಬ್ರಹ್ಮ ಮುಂತಾದ ಇತರ ದೇವರುಗಳನ್ನೂ ಇಲ್ಲಿ ಕಾಣಬಹುದಾಗಿದೆ ಅಲ್ಲದೆ ಅನ್ನಪೂರ್ಣೇಶ್ವರಿ ದೇವಿಯನ್ನೂ ಸಹ ಇಲ್ಲಿ ಕಾಣಬಹುದಾಗಿದೆ. ದೇವಿ ಕನ್ನಿಕಾ ಪರಮೇಶ್ವರಿ , ವೆಂಕಟರಮಣಸ್ವಾಮಿ ಮತ್ತು ಕರುಮಾರಿಯಮ್ಮ ದೇವಿ ಮತ್ತು ಪಾಂಡುರಂಗ ಸ್ವಾಮಿ ಮುಂತಾದ ದೇವರುಗಳನ್ನು ಪೂಜಿಸುವ ದೇವಾಲಯಗಳನ್ನು ಕೂಡ ಇಲ್ಲಿ ಕಾಣಬಹುದಾಗಿದೆ.

ಮುರುಡೇಶ್ವರ ದೇವಾಲಯ

ಮುರುಡೇಶ್ವರ ದೇವಾಲಯ

ಕಂದುಕಾ ಗಿರಿ ಪರ್ವತದ ಮೇಲೆ ನೆಲೆಸಿರುವ ಮುರುಡೇಶ್ವರ ದೇವಾಲಯವು ಮುರುಡೇಶ್ವರದ ಒಂದು ಅತ್ಯಂತ ಪ್ರಮುಖ ಆಕರ್ಷಣೆಯಾಗಿದೆ ಮತ್ತು ಪ್ರತಿಯೊಬ್ಬ ಪ್ರವಾಸಿಗನೂ ಭೇಟಿ ನೀಡಲೇಬೇಕಾದಂತಹ ಸ್ಥಳವಾಗಿದೆ. ಈ ದೇವಾಲಯದ ಮೂರೂ ದಿಕ್ಕಿನಲ್ಲಿಯೂ ಅರಬ್ಬೀ ಸಮುದ್ರವು ಆವೃತ್ತವಾಗಿದೆ. ಗಣೇಶ ದೇವರು ಬ್ರಾಹ್ಮಣ ಹುಡುಗನ ರೂಪದಲ್ಲಿ ಬಂದು ರಾವಣ ನೀಡಿದ್ದ ಆತ್ಮಲಿಂಗವನ್ನು ಕೆಳಕ್ಕೆ ಇಳಿಸಿದ್ದ ಸ್ಥಳವೆಂದು ಹೇಳಲಾಗುತ್ತದೆ. ಪ್ರವಾಸಿಗರು ಈ ದೇವಾಲಯದಲ್ಲಿ ಶಿವಲಿಂಗದ ಹೊರತಾಗಿ 123 ಅಡಿ ಎತ್ತರದ ಶಿವ ದೇವರ ಪ್ರತಿಮೆಯನ್ನು ನೋಡಬಹುದಾಗಿದೆ. ಇದಲ್ಲದೆ ದೇವಾಲಯದ ಆವರಣದಲ್ಲಿ ಅನೇಕ ಶಿಲ್ಪಗಳ ಜೊತೆಗೆ ಹೆಣ್ಣು ಮಕ್ಕಳ ಕೆಲವು ಕಾಂಕ್ರೀಟ್ ನಿಂದ ಮಾಡಲಾದ ಶಿಲ್ಪಗಳನ್ನೂ ಸಹ ಇಲ್ಲಿ ಕಾಣಬಹುದಾಗಿದೆ. ಈ ದೇವಾಲಯವು ಇಪ್ಪತ್ತು ಅಂತಸ್ತಿನ ರಾಜಗೋಪುರವನ್ನು ಹೊಂದಿದ್ದು, ಅದರ ಪ್ರವೇಶದ್ವಾರದಲ್ಲಿ ಎರಡು ಪೂರ್ಣ ಗಾತ್ರದ ಆನೆಯ ವಿಗ್ರಹಗಳನ್ನು ಕಾಣಬಹುದಾಗಿದೆ. ಗ್ರಾನೈಟ್ ಬಳಸಿ ನಿರ್ಮಿಸಲಾದ ಈ ದೇವಾಲಯವು ದಕ್ಷಿಣ ಭಾರತದ ವಾಸ್ತುಶಿಲ್ಪವನ್ನು ಪ್ರದರ್ಶಿಸುತ್ತದೆ.

ತುಂಗ್ ನಾಥ್ ಮಂದಿರ

ತುಂಗ್ ನಾಥ್ ಮಂದಿರ

ಪಂಚ ಕೇದಾರಗಳಲ್ಲಿ ಒಂದಾದ ತುಂಗ್ ನಾಥ್ ಮಂದಿರವು ವಿಶ್ವದ ಅತಿ ಎತ್ತರದ ಶಿವ ದೇವಾಲಯವೆಂದು ಹೆಮ್ಮೆಗೆ ಪಾತ್ರವಾಗಿದೆ. ಈ ದೇವಾಲಯವು ತುಂಗ್ ನಾಥ ಪರ್ವತ ಶ್ರೇಣಿಯಲ್ಲಿ ನೆಲೆಸಿದ್ದು, ಸಮುದ್ರ ಮಟ್ಟದಿಂದ ಸುಮಾರು 3680 ಅಡಿ ಎತ್ತರದಲ್ಲಿದೆ. ಹಿಂದೂ ಪುರಾಣದ ಪ್ರಕಾರ ಈ ದೇವಾಲಯವನ್ನು ಪಾಂಡವ ಸಹೋದರರಲ್ಲಿ ಒಬ್ಬನಾದ ಅರ್ಜುನನಿಂದ ನಿರ್ಮಿಸಲ್ಪಟ್ಟಿತು ಎಂದು ಹೇಳಲಾಗುತ್ತದೆ. ತುಂಗ್ ನಾಥ್ ಎಂದರೆ ಅಕ್ಷರಶ:ವಾಗಿ " ಶಿಖರಗಳ ದೇವರು" (ಲಾರ್ಡ್ ಆಫ್ ಪೀಕ್ಸ್) ಎಂದು ಅರ್ಥೈಸುತ್ತದೆ. ಉತ್ತರ ಭಾರತದ ವಾಸ್ತು ಶಿಲ್ಪವನ್ನು ಪ್ರತಿಬಿಂಬಿಸುವ ಈ ದೇವಾಲಯದಲ್ಲಿ ಶಿವನ ತೋಳನ್ನು ಪೂಜಿಸಲಾಗುತ್ತದೆ. ದೇವಾಲಯದ ಮುಖ್ಯದ್ವಾರದಲ್ಲಿ ನಂದಿಯ ಕಲ್ಲಿನ ವಿಗ್ರಹವಿದೆ ಹಿಂದೂ ಪುರಾಣಗಳ ಪ್ರಕಾರ ಇದು ಶಿವನ ಆಸೀನವಾಗಿದ್ದ ಪರ್ವತವೆಂದು ಹೇಳಲಾಗುತ್ತದೆ. ಇಲ್ಲಿ ಕಾಲಭೈರವ ಮತ್ತು ವ್ಯಾಸ ಹಿಂದೂ ಋಷಿ ಮುನಿಗಳ ಪ್ರತಿಮೆಗಳು, ಪಾಂಡವರ ಚಿತ್ರಗಳನ್ನೂ ಸಹ ಪ್ರತಿಷ್ಟಾಪಿಸಲಾಗಿದೆ.ಇದಲ್ಲದೆ, ಈ ದೇವಾಲಯದ ಸುತ್ತಲೂ ವಿವಿಧ ದೇವರು ಮತ್ತು ದೇವತೆಗಳ ಸಣ್ಣ ದೇವಾಲಯಗಳನ್ನು ಕಾಣಬಹುದು.

ಅಮರ್ ನಾಥ್ ದೇವಾಲಯ

ಅಮರ್ ನಾಥ್ ದೇವಾಲಯ

ಶ್ರೀನಗರದಿಂದ ಸುಮಾರು 145 ಕಿ.ಮೀ ಅಂತರದಲ್ಲಿ ಅಮರ್ ನಾಥ್ ದೇವಾಲಯವಿದ್ದು, ಭಾರತದ ಅತ್ಯಂತ ಪ್ರಸಿದ್ದ ಯಾತ್ರಾ ಸ್ಥಳಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಈ ಸ್ಥಳವು ಸಮುದ್ರ ಮಟ್ಟಕ್ಕಿಂತ 4175 ಮೀಟರ್ ಎತ್ತರದಲ್ಲಿರುವ ಈ ದೇವಾಲಯವು ವಿನಾಶಕ ದೇವರೆಂದೇ ಹೆಸರು ವಾಸಿಯಾದ ಹಿಂದೂ ದೇವರಾದ ಶಿವನ ದೇವಾಲಯವಿದೆ. ಈ ದೇವಾಲಯವು ಗುಹೆಯ ಸ್ವರೂಪದಲ್ಲಿ ನೈಸರ್ಗಿಕವಾಗಿ ರೂಪುಗೊಂಡಿದೆ ಮಾತ್ರವಲ್ಲದೆ ಇಲ್ಲಿ ಮಂಜಿನಿಂದ ನೈಸರ್ಗಿಕವಾಗಿ ರೂಪುಗೊಂಡ ಶಿವನ ಲಿಂಗವನ್ನು ದೇವರ ಸ್ವರೂಪವೆಂದು ಪೂಜಿಸಲಾಗುತ್ತದೆ. ಇದು ಇಲ್ಲಿಯ ಪ್ರಮುಖ ಆಕರ್ಷಣೆಯಾಗಿದೆ. ಈ ತೀರ್ಥಸ್ಥಳದ ಹೆಸರು ಹಿಂದಿ ಪದಗಳಾದ " ಅಮರ್" ಅಂದರೆ ಅಮರ (ಸಾವಿಲ್ಲದ) ಎಂದೂ ನಾಥ್ ಎಂದರೆ ದೇವರೆಂದೂ ಅರ್ಥೈಸುತ್ತದೆ.

ಕೈಲಾಸನಾಥ ದೇವಾಲಯ

ಕೈಲಾಸನಾಥ ದೇವಾಲಯ

ಮಹಾರಾಷ್ಟ್ರದ ಎಲ್ಲೋರಾದಲ್ಲಿರುವ ಕೈಲಾಸ ನಾಥ್ ದೇವಾಲಯವು ಒಂದು ಬಂಡೆಗಳಿಂದ ನಿರ್ಮಿತವಾದ (ರಾಕ್ ಕಟ್) ಸ್ಮಾರಕಗಳಿಗೆ ಉದಾಹರಣೆಯಾಗಿದ್ದು ಅತ್ಯಂತ ಹೆಸರುವಾಸಿಯಾದುದಾಗಿದೆ. ಈ ದೇವಾಲಯದ ಗಮನಾರ್ಹ ನೋಟ, ವಿಸ್ತಾರವಾದ ಕಾರ್ಯವೈಖಿರಿ, ವಾಸ್ತುಶಿಲ್ಪದಲ್ಲಿಯ ದಕ್ಷತೆ, ಮತ್ತು ಶಿಲ್ಪಕಲೆಯ ಅಲಂಕಾರಿಕ ಕ್ಷಮತೆ ಇವೆಲ್ಲದರ ಕಾರಣದಿಂದಾಗಿ ಇದೊಂದು ಅತ್ಯುತ್ತಮ ದ್ರಾವಿಡ ಶೈಲಿಯ ವಾಸ್ತುಶಿಲ್ಪಕ್ಕೆ ಒಂದು ಅತ್ಯುತ್ತಮ ಉದಾಹರಣೆಯಾಗಿದೆ. ಈ ದೇವಾಲಯವು ಸುಮಾರು ಕ್ರಿ.ಶ 757-783 ರ ನಡುವೆಯ ಅವಧಿಯಲ್ಲಿ ರಾಷ್ಟ್ರಕೂಟ ಆಡಳಿತದ ಮೊದಲನೇ ಕೃಷ್ಣ ಇವರ ಆಡಳಿತದ ಅವಧಿಯಲ್ಲಿ ನಿರ್ಮಿತವಾದುದಾಗಿದೆ. ಏಕಶಿಲಾ ಕೆತ್ತನೆಯಿಂದ ನಿರ್ಮಿತವಾದ ಈ ದೇವಾಲಯವನ್ನು ಶಿವ ದೇವರ ನೆಲೆಯಾದ ಕೈಲಾಸ ಪರ್ವತವನ್ನು ನೆನಪಿಸಿಕೊಳ್ಳುವಂತೆ ವಿನ್ಯಾಸಗೊಳಿಸಲಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X