Search
  • Follow NativePlanet
Share
ಮುಖಪುಟ » ಸ್ಥಳಗಳು » ಕೇದಾರನಾಥ » ಹವಾಮಾನ

ಕೇದಾರನಾಥ ಹವಾಮಾನ

ಮೇ ತಿಂಗಳಿಂದ ಅಕ್ಟೋಬರ್‌ ಸಮಯ ಕೇದಾರನಾಥಕ್ಕೆ ಭೇಟಿ ನೀಡಲು ಸಕಾಲ. ಈ ಸಮಯದ ವಾತಾವರಣ ಭೇಟಿಗೆ ಸೂಕ್ತ ಹಾಗೂ ತಂಪಾದ ಸ್ಥಿತಿಯಲ್ಲಿ ಇರುತ್ತದೆ. ಇಲ್ಲಿಗೆ ನವೆಂಬರ್‌ನಿಂದ ಏಪ್ರಿಲ್‌ ನಡುವೆ ಕೂಡ ಭೇಟಿ ನೀಡಬಹುದು. ಆ ಸಂದರ್ಭದಲ್ಲಿ ಚಳಿಗೆ ಸೂಕ್ತವಾಗುವ ಉಲ್ಲನ್‌ ಬಟ್ಟೆ ಜತೆಯಲ್ಲಿರುವುದು ಕಡ್ಡಾಯ.

ಬೇಸಿಗೆಗಾಲ

(ಮೇನಿಂದ ಆಗಸ್ಟ್‌): ಮೇ ತಿಂಗಳಲ್ಲಿ ಇಲ್ಲಿ ಬೇಸಿಗೆ ಆರಂಭವಾಗುತ್ತದೆ. ಇದು ಆಗಸ್ಟ್‌ವರೆಗೂ ಮುಂದುವರಿಯುತ್ತದೆ. ಈ ಸಂದರ್ಭದಲ್ಲಿ ಸರಾಸರಿ ತಾಪಮಾನ 17 ಡಿಗ್ರಿ ಸೆಲ್ಶಿಯಸ್‌ ಇರುತ್ತದೆ. ಈ ಸಮಯ ದೇವಾಲಯ ಭೇಟಿಗೆ ಸರಿಯಾದ ಕಾಲ.

ಮಳೆಗಾಲ

(ಸಪ್ಟೆಂಬರ್‌ನಿಂದ ಅಕ್ಟೋಬರ್‌): ಕೇದಾರನಾಥದಲ್ಲಿ ಸೆಪ್ಟೆಂಬರ್‌ನಲ್ಲಿ ಮಳೆಗಾಲ ಆರಂಭವಾಗುತ್ತದೆ. ಈ ಸಂದರ್ಭದಲ್ಲಿ ತಾಪಮಾನ ಕೂಡ ಕಡಿಮೆ ಆಗಿ ಸರಾಸರಿ 12 ಡಿಗ್ರಿ ಸೆಲ್ಶಿಯಸ್‌ ತಲುಪುತ್ತದೆ. ಈ ಸಮಯದಲ್ಲಿಯೂ ಪ್ರವಾಸಿಗರು ಇಲ್ಲಿಗೆ ಆಗಮಿಸಬಹುದು.

ಚಳಿಗಾಲ

(ನವೆಂಬರ್‌ನಿಂದ ಏಪ್ರಿಲ್‌): ಕೇದಾರನಾಥದಲ್ಲಿ ನವೆಂಬರ್‌ನಲ್ಲಿ ಆರಂಭವಾಗುವ ಚಳಿಗಾಲ, ಏಪ್ರಿಲ್‌ವರೆಗೂ ಮುಂದುವರಿಯುತ್ತದೆ. ತಾಪಮಾನ ಈ ಸಂದರ್ಭದಲ್ಲಿ ಗರಿಷ್ಠ 5 ಡಿಗ್ರಿ ಸೆಲ್ಶಿಯಸ್‌ನಿಂದ ಶೂನ್ಯ ಡಿಗ್ರಿ ಸೆಲ್ಶಿಯಸ್‌ವರೆಗೂ ಇರುತ್ತದೆ. ಈ ಸಮಯದಲ್ಲಿ ಹಿಮಪಾತ ಇಲ್ಲಿ ಸಾಮಾನ್ಯ.