Search
 • Follow NativePlanet
Share
ಮುಖಪುಟ » ಸ್ಥಳಗಳು» ಉತ್ತರಾಖಂಡ್

ಉತ್ತರಾಖಂಡ್ : ಪ್ರವಾಸೋದ್ಯಮದ ಕಿರುಪರಿಚಯ

ಉತ್ತರ ಭಾರತದಲ್ಲಿರುವ ಉತ್ತರಾಖಂಡ್ ರಾಜ್ಯವು ಒಂದು ಪ್ರಖ್ಯಾತ ಪ್ರವಾಸಿ ರಾಜ್ಯವಾಗಿದ್ದು, ಜಗತ್ತಿನಾದ್ಯಂತ ಸಹಸ್ರಾರು ಪ್ರವಾಸಿಗರನ್ನು ಆಕರ್ಷಿಸುತ್ತದೆ. 'ದೇವತೆಗಳ ಭೂಮಿ' ಎಂದೆ ಪ್ರಖ್ಯಾತವಾಗಿರುವ ಉತ್ತರಾಖಂಡ ರಾಜ್ಯವು ತನ್ನ ಅದ್ವಿತೀಯ ಪ್ರಾಕೃತಿಕ ಸೌಂದರ್ಯದಿಂದಾಗಿ ಭೂಮಿಯ ಮೇಲಿನ ಸ್ವರ್ಗವೆಂದೆ ಪರಿಗಣಿಸಲ್ಪಟ್ಟಿದೆ.ರಾಜ್ಯವು ಉತ್ತರ ಭಾಗದಲ್ಲಿ ಟಿಬೇಟ್ ಮತ್ತು ಪೂರ್ವದಲ್ಲಿ ನೇಪಾಲ ದೇಶಗಳಿಂದ ಸುತ್ತುವರೆದಿದೆ. ಭಾರತದ ರಾಜ್ಯಗಳಾದ ಉತ್ತರ ಪ್ರದೇಶವು ಇದರ ದಕ್ಷಿಣದಲ್ಲಿದ್ದು, ಹಿಮಾಚಲ್ ಪ್ರದೇಶವು ವಾಯವ್ಯ ದಿಕ್ಕಿನಲ್ಲಿದೆ. ಮೂಲತಃ ಉತ್ತರಾಂಚಲ ಎಂದೆ ಪರಿಚಿತವಾಗಿದ್ದ ಈ ರಾಜ್ಯಕ್ಕೆ 2007 ರಲ್ಲಿ ಉತ್ತರಾಖಂಡ ವೆಂದು ಮರುನಾಮಕರಣ ಮಾಡಲಾಯಿತು. 13 ಜಿಲ್ಲೆಗಳನ್ನು ಹೊಂದಿರುವ ಈ ರಾಜ್ಯವನ್ನು, ಐತಿಹಾಸಿಕವಾಗಿ ಈ ಪ್ರದೇಶವನ್ನಾಳಿದ ಕುಮಾವೂನ್ ಮತ್ತು ಗಡ್ವಾಲ್ ಸಾಮ್ರಾಜ್ಯಗಳನುಸಾರವಾಗಿ ಕುಮಾವೂನ್ ಮತ್ತು ಗಡ್ವಾಲ್ ಎಂಬ ಎರಡು ಘಟಕಗಳಲ್ಲಿ ವಿಭಾಗಿಸಲಾಗಿದೆ.

ಹವಾಮಾನ

ಉತ್ತರಾಖಂಡದಲ್ಲಿ ಮೂರು ಪ್ರಮುಖ ಋತುಗಳಾದ ಬೇಸಿಗೆ, ಮಳೆ ಮತ್ತು ಚಳಿಗಾಲವನ್ನು ಕಾಣಬಹುದಾಗಿದ್ದರೂ ಹವಾಮಾನವು ಭೌಗೋಳಿಕವಾಗಿ ವಿಭಾಜಿಸಲ್ಪಟ್ಟಂತಹ ಭಾಗಗಳ ಮೇಲೆ ಆಧಾರಿತವಾಗಿದೆ. ಏಕೆಂದರೆ ಇಲ್ಲಿ ಗಿರಿ ಪ್ರದೇಶಗಳು ಅಧಿಕವಾಗಿದ್ದು ಕಡಿಮೆ ಸಂಖ್ಯೆಯಲ್ಲಿ ಸಮತಟ್ಟಾದ ಪ್ರದೇಶಗಳಿವೆ. ಇಲ್ಲಿನ ಆಕರ್ಷಣೆಗಳನ್ನು ಅನ್ವೇಷಿಸಲು ಬೇಸಿಗೆ ಸಮಯವು ಉತ್ತಮವಾಗಿದ್ದು, ಆ ಸಂದರ್ಭದಲ್ಲಿ ಅಹ್ಲಾದಕರ ವಾತಾವರಣ ಇಲ್ಲಿರುತ್ತದೆ. ಆದರೂ ಹಿಮವನ್ನು ನೋಡ ಬಯಸುವ ಪ್ರವಾಸಿಗರು ಚಳಿಗಾಲದಲ್ಲೂ ಭೇಟಿ ನೀಡಬಹುದಾಗಿದ್ದು, ಕೆಲವು ಸ್ಥಳಗಳನ್ನು ನೋಡುವ ಬಯಕೆಯನ್ನು ಬಿಟ್ಟ ಬಿಡಬೇಕಾಗುತ್ತದೆ. ಏಕೆಂದರೆ ಅತಿಯಾದ ಹಿಮಪಾತ ಇಲ್ಲಾಗುವುದರಿಂದ ಅವುಗಳನ್ನು ಅನ್ವೇಷಿಸಲು ಸಾಧ್ಯವಾಗುವುದಿಲ್ಲ.

ಭಾಷೆಗಳು

ರಾಜ್ಯದ ಅಧಿಕೃತ ಭಾಷೆ ಹಿಂದಿಯಾಗಿದ್ದರೂ ಅದರ ಉಪಭಾಷೆಗಳ ಬಳಕೆಯನ್ನು ಇಲ್ಲಿನ ವಿವಿಧ ಪ್ರದೇಶಗಳಲ್ಲಿ ಕಾಣಬಹುದು. ಇಲ್ಲಿನ ಒಟ್ಟಾರೆ ಜನಸಂಖ್ಯೆಯಲ್ಲಿ ಬಹುಮಟ್ಟಿಗೆ ಜನರು ಕುಮೌನಿ ಮತ್ತು ಗಡ್ವಾಲಿ ಭಾಷೆಗಳನ್ನು ಬಳಸುತ್ತಾರೆ. ಇವುಗಳಲ್ಲದೆ ಪಹಾಡಿ ಭಾಷೆಯೂ ಕೂಡ ಕೆಲವು ಪ್ರದೇಶಗಳಲ್ಲಿ ಬಳಸಲ್ಪಡುತ್ತದೆ. ಕುಮೌನಿ ಭಾಷೆಯನ್ನು ವಿಶಾಲವಾಗಿ ಅದರ ಉಪಭಾಷೆಗಳಾದ ಜೊಹರಿ, ದನ್ಪುರಿಯಾ, ಅಸ್ಕೊತಿ, ಸಿರಾಲಿ, ಗಂಗೋಲಾ, ಖಸ್ಪರ್ಜಿಯಾ, ಫಲ್ದಾಕೊತಿ, ಪಛೈ, ರೌಚೌಭೈಸಿ, ಮಝ್ ಕುಮೈಯಾ, ಸೋರ್ಯಾಲಿ, ಚೌಗರ್ಖ್ಯಾಲಿ ಮತ್ತು ಕುಮೈಯಾ ಎಂದು ವರ್ಗೀಕರಿಸಬಹುದಾಗಿದೆ. ಇದರಂತೆ ಗಡ್ವಾಲಿ ಭಾಷೆಯನ್ನೂ ಕೂಡ ಉಪಭಾಷೆಗಳಾದ ಜೌನ್ಸಾರಿ, ಸೈಲಾನಿ ಮತ್ತು ಮರ್ಚಿಗಳಲ್ಲಿ ವಿಭಾಗಿಸಬಹುದಾಗಿದೆ. ಒಟ್ಟಾರೆಯಾಗಿ ಇವೆಲ್ಲವುಗಳಲ್ಲಿ ಬಹು ಉಪಭಾಷೆಗಳು ಸಂಸ್ಕೃತ್, ಸೆಂಟ್ರಲ್ ಪಹಾಡಿ ಮತ್ತು ಸೌರಾಸೇನಿ ಪ್ರಕೀತ್ ಭಾಷೆಗಳ ಪ್ರಭಾವವನ್ನು ಹೊಂದಿದ್ದು ದೇವನಾಗರಿ ಲಿಪಿಯನ್ನು ಒಳಗೊಂಡಿವೆ.

ಉತ್ತರಾಖಂಡದಲ್ಲಿ ಪ್ರವಾಸೋದ್ಯಮ

ರಾಜ್ಯವು ಕೇವಲ 13 ಜಿಲ್ಲೆಗಳನ್ನು ಒಳಗೊಂಡಿದೆ ಆದರೂ ಕೊನೆಯೆ ಇಲ್ಲವೆನೊ ಎಂಬಂತೆ ಅಸಂಖ್ಯಾತ ಪ್ರವಾಸಿ ಆಕರ್ಷಣೆಗಳನ್ನು ತನ್ನ ಮಡಿಲಲ್ಲಿ ಹುದುಗಿಸಿಟ್ಟುಕೊಂಡಿದೆ. ಅಚ್ಚರಿಯ ಸಂಗತಿಯೆಂದರೆ ಈ ಪಟ್ಟಿಯು, ಇಂದಿಗೂ ಶೋಧಿಸಲಾಗುತ್ತಿರುವ ಹೊಸ ಹೊಸ ತಾಣಗಳಿಂದ ಬೆಳೆಯುತ್ತಲೆ ಸಾಗುತ್ತಿದೆ. ಯಾತ್ರಾ ಕ್ಷೇತ್ರಗಳಿಂದ ಹಿಡಿದು ಸ್ಥಳ ವೀಕ್ಷಣೆ, ಚಾರಣ, ರಾಫ್ಟಿಂಗ್ ಹೀಗೆ ವೈವಿಧ್ಯತೆಯನ್ನು ಉಣಬಡಿಸುವ ತಾಣಗಳು ತಮ್ಮ ಸುಂದರ ಪ್ರಾಕೃತಿಕ ದೃಶ್ಯಾವಳಿಗಳಿಂದ ಹೆಸರುವಾಸಿಯಾಗಿದ್ದು, ಬಹು ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತಿವೆ. 'ಉತ್ತರಾಖಂಡದ ಸರೋವರ ಜಿಲ್ಲೆ' ಎಂಬ ಬಿರುದನ್ನು ಪಡೆದಿರುವ ಪ್ರಖ್ಯಾತ ನೈನಿತಾಲ್ ಸಮುದ್ರ ಮಟ್ಟದಿಂದ 1938 ಮೀ. ಎತ್ತರದಲ್ಲಿ ನೆಲೆಸಿದೆ.

ಈ ಅಮೋಘ ತಾಣವು 1841 ರಲ್ಲಿ ಬ್ರಿಟೀಷರಿಂದ ಶೋಧಿಸಲ್ಪಟ್ಟು ಹಾಲಿಡೆ ರಿಸಾರ್ಟ್ ಆಗಿ ಪರಿವರ್ತಿತವಾಯಿತು. ಇಲ್ಲಿನ ಕೆರೆಯ ದಡದಲ್ಲಿರುವ ಹಿಂದು ದೇವತೆ ನೈನಿಯಿಂದ, ನೈನಿತಾಲ್ ನ ನೈನಿ ಪದವು ಒಡಮೂಡಿದೆ. ಪ್ರವಾಸಿಗರಿಗೆ ಇಲ್ಲಿನ ಕೆರೆಯಲ್ಲಿ ಯಾಟ್ ಜೊತೆಗೆ ಬೋಟಿಂಗ್ ಹಾಗು ಫಿಶಿಂಗ್ ಅವಕಾಶಗಳು ದೊರೆಯುತ್ತವೆ. ನೈನಿತಾಲ್ ನ ಸುತ್ತಮುತ್ತಲಿರುವ ಅನೇಕ ಗಮ್ಯ ಸ್ಥಳಗಳು ತಮ್ಮ ವಿಹಂಗಮ ನೋಟಗಳಿಂದ ಜಗತ್ತಿನಾದ್ಯಂತ ಹಲವಾರು ಪ್ರವಾಸಿಗರನ್ನು ಸೆಳೆಯುತ್ತವೆ.

ಅಂತಹ ಕೆಲವು ಪ್ರಮುಖ ಸ್ಥಳಗಳೆಂದರೆ, ಹನುಮಾನ್ ಗಡಿ, ಖುರ್ಪಾತಾಲ್, ಕಿಲ್ಬುರಿ, ಲರಿಯಾಕಾಂತಾ ಮತ್ತು ಲ್ಯಾಂಡ್ಸ್ ಎಂಡ್. ಇವುಗಳ ಹೊರತಾಗಿ ನೈನಿ ಪೀಕ್, ಸ್ನೋವ್-ವಿವ್, ನ್ಯಾಷನಲ್ ರೋಪ್ ವೇ, ಭೀಮ್ ತಲ್, ನೌಕುಚಿಯಾ ತಲ್ ಮತ್ತು ಸಾತ್ ತಲ್ ಕೂಡ ತಮ್ಮ ಪ್ರಾಕೃತಿಕ ಸೊಬಗಿಗೆ ಹೆಸರುವಾಸಿಯಾಗಿವೆ. 'ಪರ್ವತಗಳ ರಾಣಿ' ಮಸ್ಸೂರಿ ಕೂಡ ನೋಡಬಹುದಾದ ಒಂದು ಯೋಗ್ಯ ಸ್ಥಳ. ಇಲ್ಲಿನ ದಕ್ಷಿಣ ದಿಕ್ಕಿನಲ್ಲಿ ಸ್ಥಿತವಾಗಿರುವ ಡೂನ್ ಕಣಿವೆಯ ಮೂಲಕ ಹಚ್ಚ ಹಸಿರಿನ ಗುಡ್ಡಗಳು, ಹಿಮ ಟೊಪ್ಪಿಗೆಗಳನ್ನು ಹಾಕಿರುವಂತೆ ಭಾಸವಾಗುವ ಬೃಹತ್ ಹಿಮಾಲಯನ್ ಪರ್ವತ ಶ್ರೇಣಿಗಳ ಪನೋರಾಮಿಕ್ ದೃಶ್ಯಾವಳಿಗಳನ್ನು ನೋಡಬಹುದು.

ಮಸ್ಸೂರಿಯ ಸುತ್ತಮುತ್ತಲಿರುವ ಇನ್ನಿತರೆ ಆಕರ್ಷಣೆಗಳೆಂದರೆ, ಯಮುನಾ ಸೇತುವೆ, ನಾಗ್ ಟಿಬ್ಬಾ, ಧನೋಲ್ಟಿ ಮತ್ತು ಸುರ್ಖಂಡಾ ದೇವಿ.ಇನ್ನು ಕಸೌನಿಯು ಕತ್ಯೂರಿ ಕಣಿವೆ, ಗೋಮ್ತಿ ನದಿ, ಪಂಚಚುಲಿ ಹಿಮ ಶೃಂಗಗಳು, ನಂದಾ ಕೋಟ್, ನಂದಾ ದೇವಿ, ತ್ರಿಶೂಲ್, ನಂದಾ ಘುಂತಿ, ಚೌಖಂಬಾ ಮತ್ತು ಕೆದಾರ್ನಾಥ್ ಗಳ ರುದ್ರ ರಮಣೀಯ ನೋಟಗಳನ್ನು ಒದಗಿಸುತ್ತದೆ. ಇಲ್ಲಿರುವ ಅನಸಕ್ತಿ ಆಶ್ರಮ, ಪಂತ್ ಮ್ಯೂಸಿಯಂ ಮತ್ತು ಲಕ್ಷ್ಮಿ ಆಶ್ರಮಗಳೂ ಕೂಡ ಪ್ರವಾಸಿಗರ ನಡುವೆ ಜನಪ್ರಿಯವಾಗಿವೆ.ವಿವಿಧ ವನ್ಯಜೀವಿಗಳಿಗೆ ತವರಾಗಿದ್ದೂ, ತನ್ನಲ್ಲಿಯ ಪ್ರಕೃತಿ ಸುಂದರತೆಗೂ ಹೆಸರುವಾಸಿಯಾದ ಸ್ಥಳಗಳೆಂದರೆ ಜಿಮ್ ಕಾರ್ಬೆಟ್ ನ್ಯಾಷನಲ್ ಪಾರ್ಕ್, ರಾಜಾಜಿ ನ್ಯಾಷನಲ್ ಪಾರ್ಕ್, ಕೇದಾರ್ನಾಥ್ ವನ್ಯಧಾಮ, ಗೀವಿಂದ ವನ್ಯಧಾಮ, ಬಿನ್ಸರ್ ವನ್ಯಜೀವಿ ಧಾಮ, ಅಸ್ಸಾನ್ ಬ್ಯಾರೇಜ್ ಪಕ್ಷಿ ಧಾಮ, ನಂದಾ ದೇವಿ ರಾಷ್ಟ್ರೀಯ ಉದ್ಯಾನ ಮತ್ತು ಅಸ್ಕೋಟ್ ವನ್ಯ ಜೀವಿಧಾಮ.

ಉತ್ತರಾಖಂಡದಲ್ಲಿ, ಆದಿ ಕೈಲಾಶ್, ಅಲ್ಮೋರಾ, ಅಗಸ್ತ್ಯಮುನಿ, ಬದರಿನಾಥ್, ದೇವಪ್ರಯಾಗ್, ದ್ವಾರಾಹತ್, ಗಂಗ್ನಾನಿ, ಗಂಗೋಲಿಹತ್, ಗಂಗೋತ್ರಿ ಮತ್ತು ಗೌರಿಕುಂಡ್ ನಂತಹ ಪವಿತ್ರ ಸ್ಥಳಗಳಿದ್ದು ಭಕ್ತಾರ್ಥಿಗಳು ಯಾವಾಗಲೂ ಬರುತ್ತಿರುತ್ತಾರೆ. ಇವುಗಳ ಹೊರತಾಗಿ ಇಲ್ಲಿ ಕಾಣಬಹುದಾದ ಇತರೆ ಶ್ರೀಕ್ಷೇತ್ರಗಳೆಂದರೆ ಹರಿದ್ವಾರ, ಕೇದಾರನಾಥ, ರುದ್ರನಾಥ, ಕಲ್ಪೇಶ್ವರ ಮತ್ತು ಜಾಗೇಶ್ವರ.ಹಿಮಾಲಯ ಹಾಗು ಕಾರಾಕೋರಂ ಶ್ರೇಣಿಗಳು ಚಾರಣ, ಪರ್ವತಾರೋಹಣ, ಸ್ಕೀಯಿಂಗ್ ಮತ್ತು ರಿವರ್ ರಾಫ್ಟಿಂಗ್ ಗಳಿಗೆ ಆದರ್ಶಪ್ರಾಯವಾದ ಮಾರ್ಗಗಳನ್ನು ಒದಗಿಸುತ್ತವೆ. ಇಷ್ಟೆ ಏಕೆ, ಆಧುನಿಕ ಚಟುವಟಿಕೆಗಳಾದ ಬೈಕಿಂಗ್, ಪ್ಯಾರಾಗ್ಲೈಡಿಂಗ್ ಮತ್ತು ಕ್ಯಾಂಪಿಂಗ್ ಗಳನ್ನೂ ಕೂಡ ಈ ರಾಜ್ಯದ ಹಲವು ತಾಣಗಳಲ್ಲಿ ಆಸ್ವಾದಿಸಬಹುದು. ಇನ್ನೇಕೆ ತಡ...ಸಿಂಪಲ್ಲಾಗಿ ಬ್ಯಾಗ್ ಪ್ಯಾಕ್ ಮಾಡಿ, ಒಂದ್ಸಲ ಭೇಟಿ ನೀಡಿ.

ಉತ್ತರಾಖಂಡ್ ಸ್ಥಳಗಳು

One Way
Return
From (Departure City)
To (Destination City)
Depart On
06 Feb,Mon
Return On
07 Feb,Tue
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
06 Feb,Mon
Check Out
07 Feb,Tue
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
06 Feb,Mon
Return On
07 Feb,Tue