Search
  • Follow NativePlanet
Share
» »ತಂತ್ರ-ಮಂತ್ರದಲ್ಲಿ ವಿಶ್ವಾಸ ಇರುವವರು ಹೋಗಲೇ ಬೇಕಾದ ಮಂದಿರಗಳಿವು

ತಂತ್ರ-ಮಂತ್ರದಲ್ಲಿ ವಿಶ್ವಾಸ ಇರುವವರು ಹೋಗಲೇ ಬೇಕಾದ ಮಂದಿರಗಳಿವು

ತಂತ್ರ ಎನ್ನುವುದು ಭಾರತೀಯ ಪ್ರಾಚೀನ ವಿದ್ಯೆಗಳಲ್ಲಿ ಒಂದಾಗಿದೆ. ವೇದಗಳಲ್ಲಿಯೂ ಈ ವಿದ್ಯೆಯ ಬಗ್ಗೆ ವಿಸ್ತಾರವಾಗಿ ವರ್ಣೀಸಲಾಗಿದೆ. ಹಿಂದಿನ ಕಾಲದಲ್ಲಂತೂ ಹೆಚ್ಚಿನವರು ಈ ತಂತ್ರಮಂತ್ರಗಳಲ್ಲಿ ವಿಶ್ವಾಸವಿಟ್ಟಿದ್ದರು. ಈಗಲೂ ಅದರಲ್ಲಿ ವಿಶ್ವಾಸ ಇಟ್ಟಿರುವವರು ಇದ್ದಾರೆ. ತಂತ್ರ-ಮಂತ್ರಗಳಿಗೆ ಪ್ರಸಿದ್ಧವಾಗಿರುವ ಅನೇಕ ಮಂದಿರಗಳು ಇಂದಿಗೂ ಭಾರತದಲ್ಲಿದೆ. ಹಾಗಾದರೆ ಆ ದೇವಾಲಯಗಳು ಯಾವ್ಯಾವು ಅನ್ನೋದನ್ನು ನೋಡೋಣ...

ವೈದ್ಯನಾಥ ಮಂದಿರ ಹಿಮಾಚಲ ಪ್ರದೇಶ

ವೈದ್ಯನಾಥ ಮಂದಿರ ಹಿಮಾಚಲ ಪ್ರದೇಶ

PC: Rakeshkdogra

ಈ ಮಂದಿರದಲ್ಲಿ ಶಿವನಿಗೆ ಸಮರ್ಪಿತವಾದ ದೇವಾಲಯ ಇದಾಗಿದ್ದು ಇಲ್ಲಿ ಪ್ರಸಿದ್ಧವಾದ ವೈದ್ಯನಾಥ ಲಿಂಗವಿದೆ. ಇಲ್ಲಿ ತಾಂತ್ರಿಕ ಕ್ರಿಯೆಗಳು ಹಾಗೂ ಇಲ್ಲಿನ ನೀರು ತನ್ನ ಪಚನ ಶಕ್ತಿಗಾಗಿ ಪ್ರಸಿದ್ಧವಾಗಿದೆ.

ಏಕಲಿಂಗ ಮಂದಿರ ರಾಜಸ್ಥಾನ

ಏಕಲಿಂಗ ಮಂದಿರ ರಾಜಸ್ಥಾನ

PC: Nikhil Varma

ಶಿವನಿ ಸಮರ್ಪಿತವಾದ ಈ ಮಂದಿರವು ರಾಜಸ್ಥಾನದ ಉದಯಪುರದ ಬಳಿ ಇದೆ. ಇಲ್ಲಿ ಶಿವನ ಸುಂದರವಾದ ನಾಲ್ಕುಮುಖದ ಮೂರ್ತಿ ಇದೆ. ಇದನ್ನು ಕಪ್ಪು ಬಣ್ಣದ ಸಂಗಮರ್‌ಮರ್‌ದಿಂದ ನಿರ್ಮಿಸಲಾಗಿದೆ.

ವೇತಾಲ್ ಮಂದಿರ ಓಡಿಸಾ

ವೇತಾಲ್ ಮಂದಿರ ಓಡಿಸಾ

PC: youtube

8ನೇ ಶತಮಾನದಲ್ಲಿ ನಿರ್ಮಿಸಲಾದ ಭುವನೇಶ್ವರದಲ್ಲಿರುವ ಈ ಮಂದಿರದಲ್ಲಿ ಬಲಶಾಲಿ ಚಾಮುಂಡ ಮೂರ್ತಿ ಇದೆ. ಇದು ಕಾಳಿ ದೇವಿಯ ಒಂದು ರೂಪ ಎನ್ನಲಾಗುತ್ತದೆ. ಇಲ್ಲಿ ತಾಂತ್ರಿಕ ಕ್ರಿಯೆಗಳು ಪ್ರತಿದಿನ ನಡೆಯುತ್ತಾ ಇರುತ್ತದೆ.

ಕಾಮಾಕ್ಯ ಮಂದಿರ ಅಸ್ಸಾಂ

ಕಾಮಾಕ್ಯ ಮಂದಿರ ಅಸ್ಸಾಂ

PC: Kunal Dalui

ಶಕ್ತಿ ಪೀಠಗಳಲ್ಲಿ ಒಂದಾದ ಕಾಮಾಕ್ಯ ಮಂದಿರವು ತಾಂತ್ರಿಕ ಗತಿವಿಧಾನಗಳಿಗೆ ಫೇಮಸ್ ಆಗಿದೆ. ಇಲ್ಲಿ ದೇವಿ ಸತಿಯ ಯೋನಿ ಬಿದ್ದಿದೆ ಎನ್ನಲಾಗುತ್ತದೆ. ಇಲ್ಲಿ ಭಕ್ತರಿಗೆ ವಿಶೇಷ ಪ್ರಸಾದವನ್ನು ನೀಡಲಾಗುತ್ತದೆ.

ಕಾಲೀಘಾಟ್‌, ಕೋಲ್ಕತ್ತಾ

ಕಾಲೀಘಾಟ್‌, ಕೋಲ್ಕತ್ತಾ

PC: Balajijagadesh

ಕೊಲ್ಕತ್ತಾದ ಕಾಲೀಘಾಟ್ ತಾಂತ್ರಿಕರಿಗೆ ಬಹಳ ಮಹತ್ವದ್ದಾಗಿದೆ. ಹಾಗಾಗಿ ಇಲ್ಲಿ ತಾಂತ್ರಿಕರು ವರ್ಷವಿಡೀ ಬರುತ್ತಾ ಇರುತ್ತಾರೆ. ಪುರಾಣದ ಪ್ರಕಾರ ದೇವಿ ಸತಿಯ ಬೆರಳು ಇಲ್ಲಿ ಬಿದ್ದಿತ್ತು ಎನ್ನಲಾಗುತ್ತದೆ.

ಜ್ವಾಲಾಮುಖಿ ಮಂದಿರ ಹಿಮಾಚಲ ಪ್ರದೇಶ

ಜ್ವಾಲಾಮುಖಿ ಮಂದಿರ ಹಿಮಾಚಲ ಪ್ರದೇಶ

PC: Pdogra2011

ಜ್ವಾಲಾಮುಖಿ ಮಂದಿರವು ತನ್ನ ಚಮತ್ಕಾರದ ಜೊತೆಗೆ ಇಲ್ಲಿ ನಡೆಯುವ ತಾಂತ್ರಿಕ ಕ್ರಿಯೆಗಳಿಗೂ ಪ್ರಸಿದ್ಧವಾಗಿದೆ. ಇಲ್ಲಿ ಒಂದು ಕುಂಡವೂ ಇದೆ. ಅದನ್ನು ನೋಡುವಾಗ ನೀರು ಕುದಿಯುತ್ತಾ ಇರುವಂತೆ ಕಾಣುತ್ತದೆ. ಆದರೆ ಮುಟ್ಟುವಾಗ ತಣ್ಣಗಾಗುತ್ತದೆ.

ಕಾಲ ಬೈರವ ಮಂದಿರ, ಮಧ್ಯಪ್ರದೇಶ

ಕಾಲ ಬೈರವ ಮಂದಿರ, ಮಧ್ಯಪ್ರದೇಶ

ಮಧ್ಯಪ್ರದೇಶದಲ್ಲಿ ಕಾಲಬೈರವನ ಮಂದಿರವಿದೆ. ಇಲ್ಲಿ ಬೈರವನ ಶ್ಯಾಮಮುಖಿ ಮೂರ್ತಿ ಇದೆ. ಇದು ತಂತ್ರ ವಿದ್ಯೆಗೆ ಬಹಳ ಪ್ರಸಿದ್ಧವಾಗಿದೆ. ದೇಶಾದ್ಯಂತ ತಾಂತ್ರಿಕ ಅಘೋರಿಗಳು ಇಲ್ಲಿಗೆ ಬರುತ್ತಿರುತ್ತಾರೆ.

ಖಜುರಾಹೋ ಮಂದಿರ, ಮಧ್ಯಪ್ರದೇಶ

ಖಜುರಾಹೋ ಮಂದಿರ, ಮಧ್ಯಪ್ರದೇಶ

PC: Deepa Chandran2014

ಮಧ್ಯಪ್ರದೇಶದ ಖಜುರಾಹೋ ಮಂದಿರವು ತನ್ನ ಕಲಾತ್ಮಕ ರಚನೆ ಹಾಗೂ ಕಾಮುಕ ಮೂರ್ತಿಗಳಿಗೆ ಪ್ರಸಿದ್ಧವಾಗಿದೆ. ಆದರೆ ಖಜುರಾಹೋ ಮಂದಿರವು ತಂತ್ರಕ್ಕೂ ಮಹತ್ವಪೂರ್ಣ ಸ್ಥಳವಾಗಿದೆ ಎನ್ನುವುದು ಹೆಚ್ಚಿನವರಿಗೆ ತಿಳಿದಿಲ್ಲ.

ಬಾಲಾಜಿ ಮಂದಿರ ರಾಜಸ್ಥಾನ

ಬಾಲಾಜಿ ಮಂದಿರ ರಾಜಸ್ಥಾನ

ಮೆಹಂದಿಪುರದ ಬಾಲಾಜಿ ಮಂದಿರವು ತಂತ್ರಕ್ಕೆ ಬಹಳ ಪವಿತ್ರವಾದ ಸ್ಥಳ ಎನ್ನಲಾಗುತ್ತದೆ. ಇಲ್ಲಿ ಮೈ ಮೇಲೆ ದೆವ್ವ ಬಂದವರನ್ನು ಕರೆತರಲಾಗುತ್ತದೆ. ಪ್ರೇತಾತ್ಮದಿಂದ ಮುಕ್ತಿ ಪಡೆಯಲು ಇಲ್ಲಿಗೆ ಆಗಮಿಸುತ್ತಾರೆ.

ಮುಂಬಾದೇವಿ ಮಂದಿರ ಮುಂಬೈ

ಮುಂಬಾದೇವಿ ಮಂದಿರ ಮುಂಬೈ

ಮಾಟ, ಮಂತ್ರದ ಮುಕ್ತಿ ಸಿಗುವಂತೆ ಮಾಡಲು ಮಹಾರಾಷ್ಟ್ರದ ಮುಂಬಾದೇವಿ ದೇವಸ್ಥಾನವು ಬಹಳ ಪ್ರಸಿದ್ಧವಾಗಿದೆ. ಮುಂಬಾದೇವಿಯು 8 ಕೈಗಳ ದೇವಿಯಾಗಿದ್ದಾಳೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X