India
Search
  • Follow NativePlanet
Share
» »ಶಿರಸಿ ಬಳಿಯ ಮನಸೂರೆಗೊಳ್ಳುವ ಸಪ್ತ ತಾಣಗಳು

ಶಿರಸಿ ಬಳಿಯ ಮನಸೂರೆಗೊಳ್ಳುವ ಸಪ್ತ ತಾಣಗಳು

By Vijay

ಹಚ್ಚ ಹಸಿರಿನ ಕಾಡುಗಳು , ಧುಮ್ಮಿಕ್ಕುವ ಜಲಪಾತಗಳು ಮತ್ತು ಕಣ್ಮನ ಸೆಳೆಯುವ ಪ್ರಾಚೀನ ದೇವಾಲಯಗಳು ಇವೆಲ್ಲವು ಕೂಡಿ ಉತ್ತರ ಕನ್ನಡ ಜಿಲ್ಲೆಯ ಶಿರಸಿಯನ್ನು ಕರ್ನಾಟಕದ ಪ್ರಸಿದ್ಧ ಸ್ಥಳಗಳಲ್ಲಿ ಒಂದಾಗಿ ಸ್ಥಾನ ಪಡೆಯಲು ನೆರವಾಗಿವೆ. ಈ ಊರು ಪಶ್ಚಿಮಘಟ್ಟದ ಹೃದಯ ಭಾಗದಲ್ಲಿದ್ದು, ಬೆಂಗಳೂರಿನಿಂದ 425 ಕಿ.ಮೀ ದೂರದಲ್ಲಿದೆ.

ಉಚಿತ ಕೂಪನ್ನುಗಳು : ಗೊಐಬಿಬೊದಿಂದ ಫ್ಲೈಟ್ ಮತ್ತು ಹೋಟೆಲ್ ಬುಕ್ಕಿಂಗ್ ಮೇಲೆ 6000 ರೂಪಾಯಿ ಕಡಿತ

ಶಿರಸಿಯು ಒಂದು ಅದ್ಭುತ ಊರು ಎಂದೆ ಹೇಳಬಹುದು. ಅಘನಾಶಿನಿ ನದಿಯು ಶಿರಸಿ ಸಮೀಪದ ದೋಣಿಹಳ್ಳ ಎಂಬಲ್ಲಿ ಹುಟ್ಟಿ ಮುಂದೆ ಹರಿಯುತ್ತ ಬೆಟ್ಟಗಳಿಂದ ಕೆಳಗೆ ಧುಮುಕುವಾಗ ಸೃಷ್ಟಿಸುವ ಭವ್ಯ ಜಲಪಾತಗಳು ನೋಡುಗರ ಮೈ ಮನಗಳನ್ನು ಪುಳಕಿತಗೊಳಿಸುತ್ತದೆ. ಈ ಊರಿನಲ್ಲಿ ಮಳೆಗಾಲದ ಸಂದರ್ಭದಲ್ಲಿ ಹೆಚ್ಚಿನ ಪ್ರಮಾಣದ ಮಳೆಯಾಗುವ ಕಾರಣದಿಂದ ವಿಫುಲವಾದ ಹಸಿರು ಸಂಪತ್ತು ಹಾಗೂ ವನ್ಯಜೀವಿ ಸಂಪತ್ತು ನೆಲೆ ಕಂಡು ಕೊಂಡಿವೆ.

ವಿಶೇಷ ಲೇಖನ : ಕಾರವಾರದ ಪ್ರವಾಸಿ ಆಕರ್ಷಣೆಗಳು

ಇನ್ನೂ, ಶಿರಸಿ ನಗರದಲ್ಲಿ ಮಾತ್ರವಲ್ಲದೆ ಅದರ ಸುತ್ತಮುತ್ತಲೂ ಸಹ ಅತ್ಯಾಕರ್ಷಕ ಪ್ರವಾಸಿ ತಾಣಗಳಿವೆ. ಶಿರಸಿಯಿಂದ ಪಶ್ಚಿಮದೆಡೆ ಒಂದು ಚೌಕಾಕಾರದಲ್ಲಿ ಸುತ್ತು ಹೊಡೆದರೆ ಸಾಕು ಏಲು ಅದ್ಭುತ ಪ್ರವಾಸಿ ತಾಣಗಳನ್ನು ಸಂದರ್ಶಿಸಿ ಮತ್ತೆ ಶಿರಸಿಗೆ ಮರಳಬಹುದು. ಹಾಗಾದರೆ ಶಿರಸಿಯಿಂದ ನಮ್ಮ ಪ್ರವಾಸ ಪ್ರಾರಂಭಿಸೋಣವೆ?

ಉಪಯುಕ್ತ ಕೊಂಡಿಗಳು : ಗೋಕರ್ಣದಲ್ಲಿರುವ ಹೋಟೆಲುಗಳು ಮುರುಡೇಶ್ವರದಲ್ಲಿರುವ ಹೋಟೆಲುಗಳು

ಶಿರಸಿ ಹಾಗೂ ಸುತ್ತಮುತ್ತಲು:

ಶಿರಸಿ ಹಾಗೂ ಸುತ್ತಮುತ್ತಲು:

ಮುಂದಿನ ಸ್ಲೈಡುಗಳಲ್ಲಿ ಶಿರಸಿಯಿಂದ ಒಂದು ಸುಂದರವಾದ ಸಪ್ತ ತಾಣಗಳ ಪ್ರವಾಸ ಆರಂಭಿಸಿ.

ಶಿರಸಿ ಹಾಗೂ ಸುತ್ತಮುತ್ತಲು:

ಶಿರಸಿ ಹಾಗೂ ಸುತ್ತಮುತ್ತಲು:

ಮೊದಲಿಗೆ ಶಿರಸಿಯಿಂದ ಪ್ರಾರಂಭಿಸೋಣ. ಇಲ್ಲಿರುವ ಪ್ರಸಿದ್ಧ ದೇವಾಲಯಗಳಲ್ಲಿ 16ನೇ ಶತಮಾನಕ್ಕೆ ಸೇರಿದ ಮಾರಿಕಾಂಬ ದೇವಾಲಯವು ಒಂದು. ಈ ದೇವಿಯ ವಾರ್ಷಿಕ ಜಾತ್ರೆಗೆ ಲಕ್ಷೋಪಲಕ್ಷ ಭಕ್ತರು ಬಂದು ಸೇರುತ್ತಾರೆ. ಭಕ್ತಾದಿಗಳು ಈ ದೇವಾಲಯದಲ್ಲಿನ 7 ಅಡಿಗಳಷ್ಟು ಎತ್ತರದ ಮರದಲ್ಲಿ ಕೆತ್ತಿದ ದೇವಿಯ ವಿಗ್ರಹಕ್ಕೆ ಪೂಜೆ ಸಲ್ಲಿಸಬಹುದು.

ಚಿತ್ರಕೃಪೆ: KA 31 news

ಶಿರಸಿ ಹಾಗೂ ಸುತ್ತಮುತ್ತಲು:

ಶಿರಸಿ ಹಾಗೂ ಸುತ್ತಮುತ್ತಲು:

ಶಿರಸಿಗೆ ಹೋಗುವ ಪ್ರವಾಸಿಗರು ಸಮಯಾವಕಾಶ ದೊರೆತರೆ ಇಲ್ಲಿನ ಸಹಸ್ರಲಿಂಗಕ್ಕೆ ಒಮ್ಮೆ ಬೇಟಿಕೊಡಬಹುದು. ಇದು ಹೆಸರೆ ಸೂಚಿಸುವಂತೆ ಸಾವಿರಲಿಂಗವಿರುವ ಸ್ಥಳ. ಇದು ಶಿರಸಿಯಿಂದ 10 ಕಿ.ಮೀ ದೂರದಲ್ಲಿ ಅಸ್ತವ್ಯಸ್ತವಾಗಿರುವ ಕಾಡಿನ ಮಧ್ಯೆ ಹರಿಯುವ ಶಾಲ್ಮಲ ನದಿಯ ತೀರದಲ್ಲಿದೆ. ಈ ಸ್ಥಳಕ್ಕೆ ಮಹಾಶಿವರಾತ್ರಿಯಂತಹ ಹಬ್ಬದ ದಿನಗಳನ್ನು ಹೊರತುಪಡಿಸಿ ಬೇರೆ ದಿನಗಳಲ್ಲಿ ಬಹಳ ಜನರು ಬರುವುದಿಲ್ಲ.

ಚಿತ್ರಕೃಪೆ: Unique.creator

ಶಿರಸಿ ಹಾಗೂ ಸುತ್ತಮುತ್ತಲು:

ಶಿರಸಿ ಹಾಗೂ ಸುತ್ತಮುತ್ತಲು:

ಮಿಕ್ಕಂತೆ ಶಿರಸಿ ನಗರದಲ್ಲಿ ಗೋಪಾಲ ಕೃಷ್ಣ ದೇವಾಲಯ, ಮಹಾಗಣಪತಿ ದೇವಾಲಯ ಹೀಗೆ ಹಲವು ಇತರೆ ದೇವಾಲಯಗಳಿರುವುದನ್ನು ನೋಡಬಹುದು. ಇನ್ನು ಶಿರಸಿ ಪಟ್ಟಣದ ದಕ್ಷಿಣಕ್ಕೆ ರಾಜ್ಯ ಹೆದ್ದಾರಿ ಸಂಖ್ಯೆ 93 ರಲ್ಲಿ 38 ಕಿ.ಮೀ ಸಾಗಿದರೆ ದೊರೆಯುವ ಸ್ಥಳವೆ ಸಿದ್ಧಾಪುರ. ಸಿದ್ದಾಪುರದ ಜನರ ಪ್ರಮುಖ ಕಸುಬು ಬೇಸಾಯ ಹಾಗೂ ಅಡಿಕೆ ವ್ಯಾಪಾರ. ಅಲ್ಲದೆ ತೆಂಗು ಹಾಗೂ ಏಲಕ್ಕಿ, ದಾಲ್ಚಿನಿಗಳಂತಹ ಸಾಂಬಾರ ಪದಾರ್ಥಗಳನ್ನು ಸಹ ಬೆಳೆಯಲಾಗುತ್ತದೆ. ಯಕ್ಷಗಾನ ಸ್ಥಳೀಯವಾಗಿ ಜನಪ್ರೀಯತೆ ಪಡೆದಿರುವ ಅದ್ಭುತ ಕಲೆ.

ಚಿತ್ರಕೃಪೆ: Hegades

ಶಿರಸಿ ಹಾಗೂ ಸುತ್ತಮುತ್ತಲು:

ಶಿರಸಿ ಹಾಗೂ ಸುತ್ತಮುತ್ತಲು:

ಸಿದ್ದಾಪುರದಲ್ಲಿ ಗಮನಸೆಳೆವ ಪ್ರವಾಸಿ ಆಕರ್ಷಣೆ ಎಂದರೆ ಉಂಚಳ್ಳಿ ಜಲಪಾತ. ಸಿದ್ಧಾಪುರದಿಂದ 35 ಕಿ.ಮೀ ದೂರವಿರುವ ಈ ಜಲಪಾತ ತಾಣವನ್ನು ಹೆಗ್ಗರಣೆ ಎಂಬ ಗ್ರಾಮಕ್ಕೆ ತಲುಪಿ ಅಲ್ಲಿಂದ ಐದು ಕಿ.ಮೀ ಗಳಷ್ಟು ದೂರವನ್ನು ದಟ್ಟ ಕಾಡಿನಲ್ಲಿ ಟ್ರೆಕ್ ಮಾಡುತ್ತ ತಲುಪಬಹುದು.

ಚಿತ್ರಕೃಪೆ: Balaji Narayanan

ಶಿರಸಿ ಹಾಗೂ ಸುತ್ತಮುತ್ತಲು:

ಶಿರಸಿ ಹಾಗೂ ಸುತ್ತಮುತ್ತಲು:

ಸಿದ್ಧಾಪುರದಿಂದ ಕೇವಲ 19 ಕಿ.ಮೀ ದೂರದಲ್ಲಿ ನೆಲೆಸಿದೆ ವಿಶ್ವ ವಿಖ್ಯಾತ ಜೋಗದ ಜಲಪಾತ. ಮಾವಿನಗುಡಿ - ಸಿದ್ಧಾಪುರ ರಸ್ತೆಯ ಮೂಲಕ ಈ ಜಲಪಾತ ತಾಣಕ್ಕೆ ಸುಲಭವಾಗಿ ತಲುಪಬಹುದು.

ಚಿತ್ರಕೃಪೆ: Shuba

ಶಿರಸಿ ಹಾಗೂ ಸುತ್ತಮುತ್ತಲು:

ಶಿರಸಿ ಹಾಗೂ ಸುತ್ತಮುತ್ತಲು:

ಜೋಗದಗುಂಡಿಯಿಂದ ರಾಷ್ಟ್ರೀಯ ಹೆದ್ದಾರಿ 206 ರ ಮೂಲಕ ಹುಲೆಗಾರ್, ಕವಲಕ್ಕಿ ಮೇಲಿಂದ ಸುಮಾರು 60 ಕಿ.ಮೀ ಕ್ರಮಿಸಿ ಹೊನ್ನಾವರ ತಲುಪಿ. ಹೊನ್ನಾವರದ ದಕ್ಷಿಣಕ್ಕೆ ಶರಾವತಿ ನದಿಯಿದ್ದರೆ ಪಶ್ಚಿಮಕ್ಕೆ ಅರಬ್ಬಿ ಸಮುದ್ರವಿದೆ. ಅಲ್ಲದೆ ಹೊನ್ನಾವರದಲ್ಲಿಯೆ ಶರಾವತಿ ನದಿಯು ಅರಬ್ಬಿ ಸಮುದ್ರದಲ್ಲಿ ಸೇರುತ್ತದೆ. ಚಿತ್ರದಲ್ಲಿರುವುದು ಹೊನ್ನಾವರದಲ್ಲಿರುವ ಗದ್ದೆಗಳ ಪಕ್ಕದಲ್ಲಿರುವ ಕಸರಕೋಡ್ ಕಡಲ ತೀರ.

ಚಿತ್ರಕೃಪೆ: Sudarshana

ಶಿರಸಿ ಹಾಗೂ ಸುತ್ತಮುತ್ತಲು:

ಶಿರಸಿ ಹಾಗೂ ಸುತ್ತಮುತ್ತಲು:

ಹೊನ್ನಾವರದಿಂದ ನಾಲ್ಕು ಕಿ.ಮೀ ದೂರದಲ್ಲಿರುವ ಬಸವರಾಜ ದುರ್ಗ ಒಂದು ಅದ್ಭುತ ಪ್ರವಾಸಿ ಆಕರ್ಷಣೆಯಾಗಿದೆ. ಮೂಲತಃ ಇದೊಂದು ಅರಬ್ಬಿ ಸಮುದ್ರದಲ್ಲಿರುವ ಚಿಕ್ಕ ದ್ವೀಪ ಪ್ರದೇಶವಾಗಿದೆ. ದೋಣಿಯಿಂದ ಮಾತ್ರವೆ ಇದನ್ನು ತಲುಪಬಹುದಾಗಿದ್ದು, ವಿಜಯನಗರ ಆಡಳಿತಾಭಾರವಿದ್ದಾಗ ನಿರ್ಮಾಣಗೊಂಡಂತಹ ಒಂದು ಪುರಾತನ ಕೋಟೆಯನ್ನು ಇಲ್ಲಿ ಕಾಣಬಹುದಾಗಿದೆ.

ಚಿತ್ರಕೃಪೆ: Kumarcnaik

ಶಿರಸಿ ಹಾಗೂ ಸುತ್ತಮುತ್ತಲು:

ಶಿರಸಿ ಹಾಗೂ ಸುತ್ತಮುತ್ತಲು:

ಹೊನ್ನಾವರದ ದಕ್ಷಿಣಕ್ಕೆ ಸುಮಾರು 27 ಕಿ.ಮೀ ಗಳಷ್ಟು ಅಂತರದಲ್ಲಿ ಮುರುಡೇಶ್ವರ ನೆಲೆಸಿದೆ. ಮುರುಡೇಶ್ವರವು ಒಂದು ಸುಂದರ ಪ್ರವಾಸಿ ಕ್ಷೇತ್ರವಾಗಿದ್ದು ತನ್ನಲ್ಲಿರುವ ಶಿವ ಪ್ರತಿಮೆ ಹಾಗೂ ಶಿವನ ದೇವಸ್ಥಾನಕ್ಕೆ ಅಪಾರ ಖ್ಯಾತಿ ಗಳಿಸಿದೆ.

ಚಿತ್ರಕೃಪೆ: Jim McDougall

ಶಿರಸಿ ಹಾಗೂ ಸುತ್ತಮುತ್ತಲು:

ಶಿರಸಿ ಹಾಗೂ ಸುತ್ತಮುತ್ತಲು:

ಅರಬ್ಬಿ ಸಮುದ್ರದ ಕರಾವಳಿ ತೀರದಲ್ಲಿ ನೆಲೆಸಿರುವ ಈ ಪ್ರಸಿದ್ಧ ಧಾರ್ಮಿಕ ಕ್ಷೇತ್ರವು ವಿಶೇಷವಾಗಿ ತನ್ನಲ್ಲಿರುವ ಅತಿ ಎತ್ತರದ ದೇವಾಲಯ ಗೋಪುರ ಹಾಗೂ ಅತಿ ಎತ್ತರದ ಶಿವನ ಪ್ರತಿಮೆಗಳಿಂದಾಗಿ ಜನರ ಮನ್ನಣೆ ಗಳಿಸಿದೆ. ನಿತ್ಯವೂ ನೂರಾರು ಸಂಖ್ಯೆಯಲ್ಲಿ ಪ್ರವಾಸಿಗರು ಈ ಭವ್ಯ ರಚನೆಗಳನ್ನು ದರ್ಶಿಸುವ ಉದ್ದೇಶದಿಂದ ಮುರುಡೇಶ್ವರಕ್ಕೆ ಆಗಮಿಸುತ್ತಲೆ ಇರುತ್ತಾರೆ.

ಚಿತ್ರಕೃಪೆ: ramesh Iyanswamy

ಶಿರಸಿ ಹಾಗೂ ಸುತ್ತಮುತ್ತಲು:

ಶಿರಸಿ ಹಾಗೂ ಸುತ್ತಮುತ್ತಲು:

ದೇವಾಲಯವನ್ನು ಹೊರತುಪಡಿಸಿ ಇತರೆ ಆಕರ್ಷಣೆಗಳೆಂದರೆ ಸಮುದ್ರ ತೀರದ ಚಟುವಟಿಕೆಗಳಾದ ಈಜುವುದು, ಈಜು ಕಲಿಯುವಿಕೆ ಹಾಗೂ ದೋಣಿ ವಿಹಾರ ಇಲ್ಲಿನ ಸಮುದ್ರದ ಸುಂದರ ಹಾಗೂ ಪ್ರಶಾಂತ ವಾತಾವರಣ ದಿಂದ ಪ್ರಸಿದ್ಧವಾಗಿದೆ.

ಚಿತ್ರಕೃಪೆ: Jon Connell

ಶಿರಸಿ ಹಾಗೂ ಸುತ್ತಮುತ್ತಲು:

ಶಿರಸಿ ಹಾಗೂ ಸುತ್ತಮುತ್ತಲು:

ಮುರುಡೇಶ್ವರ ಚೆಂದದ ಸಮಯವನ್ನು ಕಳೆದು ಮತ್ತೆ ಮರಳಿ ಹೊನ್ನಾವರಕ್ಕೆ ತಲುಪಿ. ಹೊನ್ನಾವರದ ಉತ್ತರಕ್ಕೆ ರಾಷ್ಟ್ರೀಯ ಹೆದ್ದಾರಿ 17 ರ ಮೇಲೆ 20 ಕಿ.ಮೀ ಗಳಷ್ಟು ಚಲಿಸಿ ಧಾರೇಶ್ವರ ಮಾರ್ಗವಾಗಿ ಕುಮಟಾ ಪಟ್ಟಣವನ್ನು ತಲುಪಿ. ಅವಾಕ್ಕಾಗಿಸುವ ದೃಶ್ಯವೈಭವ, ಮನಮುದಗೊಳಿಸುವ ಸ್ಮಾರಕಗಳು ಮತ್ತು ಶ್ರೀಮಂತ ಸಾಂಸ್ಕೃತಿಕ ವೈಭವದಿಂದಾಗಿ ಉತ್ತರ ಕನ್ನಡದ ಕುಮಟಾ ಪ್ರವಾಸವು ನೆನಪಿಡುವಂತಾಗುತ್ತದೆ.

ಚಿತ್ರಕೃಪೆ: Nishanth Jois

ಶಿರಸಿ ಹಾಗೂ ಸುತ್ತಮುತ್ತಲು:

ಶಿರಸಿ ಹಾಗೂ ಸುತ್ತಮುತ್ತಲು:

ಅರೇಬಿಯನ್‌ ಸಮುದ್ರದ ತೀರದಲ್ಲಿರುವ ಕುಮಟಾ ಬೀಚ್‌ ಹೆಚ್ಚು ಜನಪ್ರಿಯವಾಗಿದೆ. ಇದು ಕುಮಟಾದಿಂದ ಸುಮಾರು 4 ಕಿ.ಮೀ ದೂರದಲ್ಲಿದೆ. ಇತರ ಬೀಚ್‌ಗಳಿಗೆ ಹೋಲಿಸಿದರೆ ಈ ಸಮುದ್ರ ತೀರವು ವಿಶಾಲವಾಗಿದೆ. ಸಮುದ್ರ ತೀರದ ಸುತ್ತ ಹಳ್ಳಿಗಳು ಸುತ್ತುವರಿದಿವೆ. ಸಮುದ್ರ ತೀರಕ್ಕೆ ನಿಮ್ಮನ್ನು ಕರೆದುಕೊಂಡು ಹೋಗಲು ರಸ್ತೆ ಕೂಡಾ ಇದೆ. ಪ್ರವಾಸಿಗರು ಲೈಟ್‌ ಹೌಸ್‌, ಬತ್ತದ ಗದ್ದೆ ಮತ್ತು ತೆಂಗು ತೋಟವನ್ನು ಸಮುದ್ರ ತೀರದ ಸುತ್ತ ಕಾಣಬಹುದು.

ಚಿತ್ರಕೃಪೆ: Kamat

ಶಿರಸಿ ಹಾಗೂ ಸುತ್ತಮುತ್ತಲು:

ಶಿರಸಿ ಹಾಗೂ ಸುತ್ತಮುತ್ತಲು:

ಬಾಡ ಸಮುದ್ರ ತೀರವು ಕುಮಟಾದಲ್ಲಿರುವ ಬೀಚ್‌ಗಳಲ್ಲೇ ಅತ್ಯಂತ ಸ್ವಚ್ಛವಾದದ್ದು. ಕುಮಟಾದ ತಮ್ಮ ಪ್ರವಾಸದಲ್ಲಿ ಪ್ರವಾಸಿಗರು ಈ ಸಮುದ್ರ ತೀರವನ್ನು ಭೇಟಿ ಮಾಡಲೇಬೇಕು. ಕರ್ಕಿಯಿಂದ ಗೋಕರ್ಣಕ್ಕೆ ಹೋಗುವ ಮಾರ್ಗಮಧ್ಯದಲ್ಲಿ ಪ್ರವಾಸಿಗರು ಬಾಡ ಬೀಚನ್ನು ನೋಡಬಹುದು. ಒಂದು ಕಡೆ ಕಲ್ಲು ಬಂಡೆಯಿದ್ದು ಇನ್ನೆರಡು ಕಡೆಯಿಂದ ಗುಡ್ಡಗಳು ಬೀಚನ್ನು ಸುತ್ತುವರಿದಿದೆ.

ಚಿತ್ರಕೃಪೆ: Mangesh Nadkarni

ಶಿರಸಿ ಹಾಗೂ ಸುತ್ತಮುತ್ತಲು:

ಶಿರಸಿ ಹಾಗೂ ಸುತ್ತಮುತ್ತಲು:

ಕುಮಟಾದ ಮತ್ತೊಂದು ಆಕರ್ಷಣೆ ಮಿರ್ಜಾನ್ ಕೋಟೆ. ಅಘನಾಶಿನಿ ನದೀಪಾತ್ರದಲ್ಲಿರುವ ಮಿರ್ಜಾನ ಕೋಟೆಯನ್ನು ನೋಡಲು ಪ್ರವಾಸಿಗರಿಗೆ ಸಲಹೆ ಮಾಡಬಹುದು. ಈ ಕೋಟೆ ಸುಮಾರು 4.1 ಹೆಕ್ಟೇರು ವೈಶಾಲ್ಯತೆ ಹೊಂದಿದೆ. ತನ್ನ ಸುಂದರವಾದ ವಾಸ್ತುಶಿಲ್ಪಕ್ಕೆ ಈ ಕೋಟೆ ಹೆಸರಾಗಿದ್ದು, ಎರಡು ಹಂತದ ಗೋಡೆಯನ್ನು ಹೊಂದಿದೆ.

ಚಿತ್ರಕೃಪೆ: Ramnath Bhat

ಶಿರಸಿ ಹಾಗೂ ಸುತ್ತಮುತ್ತಲು:

ಶಿರಸಿ ಹಾಗೂ ಸುತ್ತಮುತ್ತಲು:

ಮಿರ್ಜಾನ್ ಕೋಟೆಯಿಂದ ಹಾಗೆ ಪ್ರಯಾಣ ಮುಂದುವರೆಸಿ ರಾಷ್ಟ್ರೀಯ ಹೆದ್ದಾರಿ 17 ರ ಮೂಲಕ ಸುಮಾರು 25 ಕಿ.ಮೀ ಸಾಗಿದರೆ ಸಿಗುವ ಪ್ರಖ್ಯಾತ ಸ್ಥಳ ಶ್ರೀಕ್ಷೇತ್ರ ಗೋಕರ್ಣ. ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯಲ್ಲಿನ ಗೋಕರ್ಣವು ಒಂದು ಪುಣ್ಯ ಕ್ಷೇತ್ರ ವಾಗಿರುವುದಲ್ಲದೆ ಇಲ್ಲಿರುವ ಸಮುದ್ರ ತೀರ ಹಾಗೂ ಸುಂದರ ಸರೋವರದಿಂದ ಪ್ರವಾಸೀ ತಾಣವಾಗಿಯೂ ಸಹ ಪ್ರಸಿದ್ಧಿ ಹೊಂದಿದೆ.

ಚಿತ್ರಕೃಪೆ: Infoayan

ಶಿರಸಿ ಹಾಗೂ ಸುತ್ತಮುತ್ತಲು:

ಶಿರಸಿ ಹಾಗೂ ಸುತ್ತಮುತ್ತಲು:

ಗೋಕರ್ಣದಲ್ಲಿನ ಮಹಾಬಲೇಶ್ವರ ಶಿವನ ದೇವಾಲಯವು ದೇಶದ ಎಲ್ಲ ಹಿಂದೂ ಭಕ್ತರಿಗೂ (ಹೆಚ್ಚಾಗಿ ಶಿವನ ಆರಾಧಕರಿಗೆ ) ಇದನ್ನು ಪುಣ್ಯ ಸ್ಥಳವಾಗಿ ಮಾಡಿದೆ. ಈ ದೇವಾಲಯದ ಉಲ್ಲೇಖವನ್ನು ತಮಿಳು ಕವಿಗಳಾದ ಅಪ್ಪಾರ್ ಮತ್ತು ಸಂಬಂದಾರ್ ರವರ ರಚನೆಗಳಲ್ಲಿ ಕಾಣಬಹುದು ಇವರ ಕೀರ್ತನೆಗಳು ತುಳು ನಾಡಿನ ಒಡೆಯನ ಹೊಗಳಿಕೆಗೆ ಸಾಕ್ಷಿಯಾಗಿವೆ.

ಚಿತ್ರಕೃಪೆ: Nvvchar

ಶಿರಸಿ ಹಾಗೂ ಸುತ್ತಮುತ್ತಲು:

ಶಿರಸಿ ಹಾಗೂ ಸುತ್ತಮುತ್ತಲು:

ಮಹಾಬಲೇಶ್ವರ ದೇವಸ್ಥಾನದಲ್ಲಿರುವ ಶಿವನ ಆತ್ಮಲಿಂಗ.

ಚಿತ್ರಕೃಪೆ: Sbblr geervaanee

ಶಿರಸಿ ಹಾಗೂ ಸುತ್ತಮುತ್ತಲು:

ಶಿರಸಿ ಹಾಗೂ ಸುತ್ತಮುತ್ತಲು:

ಗೋಕರ್ಣವು ಅತ್ಯಂತ ವೇಗವಾಗಿ ಪ್ರಿಯವಾಗುತ್ತಿರುವ ಪ್ರವಾಸಿ ತಾಣವಾಗಿದ್ದು ಗೋವಾದ ಅನೇಕ ಸಮುದ್ರ ತೀರಗಳನ್ನು ಹಿಮ್ಮೆಟ್ಟಿಸುವಂತಹ ಸುಂದರವಾದ ಹಲವು ಕರಾವಳಿ ಪ್ರದೇಶಗಳನ್ನು ಹೊಂದಿದೆ. ಕುಡ್ಲೆ ಸಮುದ್ರ ತೀರ, ಗೋಕರ್ಣ ತೀರ, ಹಾಫ್ ಮೂನ್ ಸಮುದ್ರ ತೀರ, ಪ್ಯಾರಾಡೈಸ್ ತೀರ ಹಾಗೂ ಓಂ ಸಮುದ್ರ ತೀರಗಳು ಇಲ್ಲಿರುವ ಐದು ಪ್ರಮುಖ ಕಡಲ ತೀರಗಳು. ಚಿತ್ರದಲ್ಲಿರುವುದು ಓಂ ಕಡಲ ತೀರ. ಮೇಲಿನಿಂದ ಸಂಸ್ಕೃತದ ಓಂ ಆಕಾರದಲ್ಲಿರುವುದರಿಂದ ಇದಕ್ಕೆ ಈ ಹೆಸರು ಬಂದಿದೆ.

ಚಿತ್ರಕೃಪೆ: Axis of eran

ಶಿರಸಿ ಹಾಗೂ ಸುತ್ತಮುತ್ತಲು:

ಶಿರಸಿ ಹಾಗೂ ಸುತ್ತಮುತ್ತಲು:

ಗೋಕರ್ಣದ ಪ್ರವಾಸಿ ಆಕರ್ಷಣೆಯಾದ ಕೂಡ್ಲೆ ಕಡಲ ತೀರದ ಸುಂದರ ನೋಟ.

ಚಿತ್ರಕೃಪೆ: Happyshopper

ಶಿರಸಿ ಹಾಗೂ ಸುತ್ತಮುತ್ತಲು:

ಶಿರಸಿ ಹಾಗೂ ಸುತ್ತಮುತ್ತಲು:

ಈ ಪಟ್ಟಣದ ಪ್ರಮುಖ ಸಮುದ್ರ ತೀರವಾದ ಗೋಕರ್ಣ ತೀರದಲ್ಲಿ ಭಕ್ತಾದಿಗಳು ಮಹಾಬಲೇಶ್ವರ ದೇವಾಲಯಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ಸೇರುತ್ತಾರೆ. ಇಲ್ಲಿ ಗಮನಿಸಬೇಕಾದ ಮುಖ್ಯ ವಿಷಯವೆಂದರೆ ಇದು ಈಜುವುದಕ್ಕೆ ಬಹಳ ಅಪಾಯಕಾರಿ ಸ್ಥಳವಾಗಿದೆ.

ಚಿತ್ರಕೃಪೆ: Nechyporuk Iuliia

ಶಿರಸಿ ಹಾಗೂ ಸುತ್ತಮುತ್ತಲು:

ಶಿರಸಿ ಹಾಗೂ ಸುತ್ತಮುತ್ತಲು:

ಗೋಕರ್ಣದಲ್ಲಿರುವ ಪವಿತ್ರ ಕೋಟಿತೀರ್ಥ ಕಲ್ಯಾಣಿ ಅಥವಾ ಪುಷ್ಕರಿಣಿ.

ಚಿತ್ರಕೃಪೆ: Miran Rijavec

ಶಿರಸಿ ಹಾಗೂ ಸುತ್ತಮುತ್ತಲು:

ಶಿರಸಿ ಹಾಗೂ ಸುತ್ತಮುತ್ತಲು:

ಹಾಫ್ ಮೂನ್ ಕರಾವಳಿ ಉತ್ತರ ಕನ್ನಡ ಜಿಲ್ಲೆಯಲ್ಲಿನ ಗೋಕರ್ಣದಲ್ಲಿರುವ ಹೆಚ್ಚು ಜನಪ್ರಿಯತೆ ಇಲ್ಲದ ಪ್ರದೇಶವಾಗಿದ್ದು ಸಮಯವಿದ್ದಲಿ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಬಹುದು. ಈ ಸಮುದ್ರ ತೀರಕ್ಕೆ ಕೇವಲ ಓಂ ತೀರದಿಂದ ಕಾಲ್ನಡಿಗೆ ಅಥವಾ ದೋಣಿಬಳಸಿ ಮಾತ್ರ ತಲುಪಬಹುದು. ಓಂ ತೀರ ಮತ್ತು ಹಾಫ್ ಮೂನ್ ತೀರ ಒಂದು ಬಂಡೆಯಿಂದ ಬೇರ್ಪಟ್ಟಿದ್ದು ಪ್ರಯಾಣಿಕರಿಗೆ ಈ ಬಂಡೆಯು ಅರಬ್ಬೀ ಸಮುದ್ರದ ಒಂದು ಸುಂದರ ನೋಟ ಒದಗಿಸುವಲ್ಲಿ ಯಶಸ್ವಿಯಾಗಿದೆ.

ಚಿತ್ರಕೃಪೆ: Prem Shikhare

ಶಿರಸಿ ಹಾಗೂ ಸುತ್ತಮುತ್ತಲು:

ಶಿರಸಿ ಹಾಗೂ ಸುತ್ತಮುತ್ತಲು:

ಗೋಕರ್ಣದ ನಂತರ ಉತ್ತರ ದಿಕ್ಕಿನೆಡೆ ರಾಷ್ಟ್ರೀಯ ಹೆದ್ದಾರಿ 17 ರಲ್ಲೆ ಮತ್ತೆ ಮುಂದೆ ಸಾಗುತ್ತ ಸುಮಾರು 26 ಕ್ರಮಿಸಿದರೆ ಸಿಗುವ ಮತ್ತೊಂದು ಪ್ರವಾಸಿ ತಾಣ ಅಂಕೋಲಾ. ಅಂಕೋಲಾ ಉತ್ತರ ಕನ್ನಡ ಜಿಲ್ಲೆಯ ಒಂದು ಪುಟ್ಟ ಪಟ್ಟಣವಾಗಿದ್ದು ಅರಬ್ಬಿ ಸಮುದ್ರ ಹಾಗೂ ಕಾಳಿ ನದಿಯಿಂದ ಸುಂದರವಾಗಿ ಆವೃತವಾಗಿದ್ದು ಜಿಲ್ಲೆಯ ಪ್ರವಾಸಿ ಆಕರ್ಷಣೆಯಾಗಿದೆ. ಅಲ್ಲದೆ ಈ ಪಟ್ಟಣವು ತನ್ನದೆ ಮಾವಿನ ಹಣ್ಣಿನ ತಳಿಯಾದ "ಇಶಾದ್" ಗೆ ಹೆಸರುವಾಸಿಯಾಗಿದ್ದು, ಗೋಡಂಬಿ ಹಣ್ಣುಗಳಿಗೂ ಸಹ ಪ್ರಸಿದ್ಧಿ ಪಡೆದಿದೆ.

ಚಿತ್ರಕೃಪೆ: indiawaterportal.org

ಶಿರಸಿ ಹಾಗೂ ಸುತ್ತಮುತ್ತಲು:

ಶಿರಸಿ ಹಾಗೂ ಸುತ್ತಮುತ್ತಲು:

ಅಂಕೋಲಾದ ನಂತರ ಈಶಾನ್ಯ ದಿಕ್ಕಿನೆಡೆ ಪ್ರಯಾಣ ಮುಂದುವರೆಸಿ, ರಾಷ್ಟ್ರೀಯ ಹೆದ್ದಾರಿ 63 ರ ಮೇಲೆ ಸುಮಾರು 71 ಕಿ.ಮೀ ಕ್ರಮಿಸಿ ಯಲ್ಲಾಪುರ ಪಟ್ಟಣವನ್ನು ತಲುಪಿ. ಯಲ್ಲಾಪುರ ಎಂದೆಂದಿಗು ಬದಲಾಗದ ಸಾಮಾನ್ಯ ಹಳೆಯಕಾಲದ ಊರಾದರು, ಅದರ ನಿಬ್ಬೆರಗಾಗುವ ಸೌಂದರ್ಯದಿಂದಾಗಿ ಪ್ರಸಿದ್ಧವಾಗಿದೆ.

ಚಿತ್ರಕೃಪೆ: Pushkarv

ಶಿರಸಿ ಹಾಗೂ ಸುತ್ತಮುತ್ತಲು:

ಶಿರಸಿ ಹಾಗೂ ಸುತ್ತಮುತ್ತಲು:

ಯಲ್ಲಾಪುರವನ್ನು ನೋಡಲು ಬರುವ ಪ್ರವಾಸಿಗರಿಗೆ ಸಮಯಾವಕಾಶ ದೊರೆತರೆ ಅವರು ಇಲ್ಲಿನ ಸಾತೊಡಿ ಜಲಪಾತಕ್ಕೆ ಒಮ್ಮೆ ಭೇಟಿಕೊಡಬಹುದು. ಇದು ಕರ್ನಾಟಕ ಪ್ರಸಿದ್ಧ ಜಲಪಾತಗಳಲ್ಲಿ ಒಂದು ಎಂದು ಸ್ಥಾನ ಪಡೆದಿದೆ. ಈ ಜಲಪಾತವು ಇಲ್ಲಿಗೆ ಸಮೀಪದ ಕಲ್ಲರಮನೆ ಘಾಟಿನಲ್ಲಿ ಹರಿಯುವ ಅನೇಕ ಅನಾಮಧೇಯ ತೊರೆಗಳಿಂದ ಉದ್ಭವಿಸುತ್ತದೆ. ಇದು ಯಲ್ಲಾಪುರದಿಂದ 25 ಕಿ.ಮೀ ದೂರದಲ್ಲಿನ ಗಣೇಶ ಗುಡಿ ಅರಣ್ಯ ಪ್ರದೇಶದಲ್ಲಿ ನೆಲೆಸಿದೆ.

ಚಿತ್ರಕೃಪೆ: Adnan Alibaksh

ಶಿರಸಿ ಹಾಗೂ ಸುತ್ತಮುತ್ತಲು:

ಶಿರಸಿ ಹಾಗೂ ಸುತ್ತಮುತ್ತಲು:

ಯಲ್ಲಾಪುರದಲ್ಲಿರುವ ಮಾಗೋಡು ಜಲಪಾತಕ್ಕೂ ಸಹ ಒಮ್ಮೆ ಭೇಟಿ ಕೊಡಬಹುದು. ಇದು ಯಲ್ಲಾಪುರದಿಂದ 19 ಕಿ.ಮೀ ದೂರದಲ್ಲಿದೆ. ಬೆಡ್ಥಿ ನದಿಯು, ಈ ಜಲಪಾತವನ್ನು ಸೃಷ್ಟಿಸುತ್ತದೆ. ಈ ಜಲಪಾತವು 650 ಅಡಿಗಳಿಂದ ಎರಡು ಹಂತಗಳಲ್ಲಿ ಧುಮ್ಮಿಕ್ಕುತ್ತದೆ. ಈ ರುದ್ರ ರಮಣೀಯವಾದ ನೋಟವನ್ನು ನೋಡುವುದೆ ಒಂದು ರೋಮಾಂಚನಕಾರಿ ಅನುಭವ. ಪ್ರವಾಸಿಗರು ಈ ಸ್ಥಳವನ್ನು ಸುಲಭವಾಗಿ ಗುರುತಿಸಬಹುದು. ಇದು ಇಲ್ಲಿನ ಮತ್ತೊಂದು ಪ್ರಸಿದ್ಧ ಯಾತ್ರಾ ಸ್ಥಳವಾದ ಜೇನುಕಲ್ಲು ಗುಡ್ಡದ ಸೂರ್ಯಸ್ತಮಾನ ವೀಕ್ಷಣಾ ಸ್ಥಳಕ್ಕೆ ಸಮೀಪದಲ್ಲಿದೆ.

ಶಿರಸಿ ಹಾಗೂ ಸುತ್ತಮುತ್ತಲು:

ಶಿರಸಿ ಹಾಗೂ ಸುತ್ತಮುತ್ತಲು:

ಯಲ್ಲಾಪುರದ ಮೇಲೆ ಹಾದು ಹೋಗುವ ಪ್ರವಾಸಿಗರು ಒಮ್ಮೆ ಅಲ್ಲಿನ ಕವಡಿಕೆರಿ ಅಥವ ಕೆರೆಯನ್ನು ನೋಡಲು ಹೋಗಬಹುದಾಗಿದೆ. ಇದು 62 ಎಕರೆಗಳಷ್ಟು ವಿಶಾಲವಾದ ಪ್ರದೇಶದಲ್ಲಿ ಹರಡಿಕೊಂಡಿದ್ದು, ಯಲ್ಲಾಪುರದಿಂದ 20 ಕಿ.ಮೀ ದೂರದಲ್ಲಿ ಮತ್ತು ಮಾಗೋಡು ಜಲಪಾತದಿಂದ 9 ಕಿ.ಮೀ ದೂರದಲ್ಲಿ ಇದೆ. ಕವಡಿಕೆರಿಯ ಸುತ್ತ ನೋಡಬಯಸುವ ಪ್ರವಾಸಿಗರು ಈ ಕೆರೆಯನ್ನು ಸುತ್ತುವರಿದ ಹಲವು ಬೆಟ್ಟಗಳನ್ನು ನೋಡಬಹುದು. ಕವಡಿಕೆರಿಗೆ ಸಮೀಪದಲ್ಲಿಯೇ ಒಂದು ಪುರಾತನಕಾಲದ ದುರ್ಗಾ ದೇವಾಲಯವಿದೆ. ಇಲ್ಲಿಗೆ ಭೇಟಿ ಕೊಟ್ಟಾಗ ಪ್ರವಾಸಿಗರು ದೈತ್ಯ ಗಾತ್ರದ ಚಿಟ್ಟೆಗಳನ್ನು ಮತ್ತು ಕೆಂಪು ಹಾಗು ಕಪ್ಪು ಪುಚ್ಚದ ಬುಲ್ ಬುಲ್ ಹಕ್ಕಿಗಳನ್ನು ನೋಡಬಹುದು. ಕೊನೆಯದಾಗಿ ಯಲ್ಲಾಪುರದಿಂದ ಮರಳಿ 50 ಕಿ.ಮೀ ದೂರವಿರುವ ಶಿರಸಿಗೆ ತಲುಪಿ. ಈ ಒಂದು ಪ್ರವಾಸ ಮಾರ್ಗವನ್ನು ಗಮನಿಸಿದಾಗ ಚೌಕಾಕಾರದಲ್ಲಿರುವುದನ್ನು ಕಾಣಬಹುದು.

ಚಿತ್ರಕೃಪೆ: itslife.in

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X