Search
  • Follow NativePlanet
Share

ಶಿರಸಿ – ವಿಹಾರಕ್ಕೆ ಹೇಳಿ ಮಾಡಿಸಿದ ತಾಣ

11

ಹಚ್ಚ ಹಸಿರಿನ ಕಾಡುಗಳು , ಧುಮ್ಮಿಕ್ಕುವ ಜಲಪಾತಗಳು ಮತ್ತು ಕಣ್ಮನ ಸೆಳೆಯುವ ಪ್ರಾಚೀನ ದೇವಾಲಯಗಳು ಇವೆಲ್ಲವು ಕೂಡಿ ಶಿರಸಿಯನ್ನು ಕರ್ನಾಟಕದ ಪ್ರಸಿದ್ಧ ಸ್ಥಳಗಳಲ್ಲಿ ಒಂದಾಗಿ ಸ್ಥಾನ ಪಡೆಯಲು ನೆರವಾಗಿವೆ. ಈ ಊರು ಪಶ್ಚಿಮಘಟ್ಟದ ಹೃದಯ ಭಾಗದಲ್ಲಿದ್ದು, ಬೆಂಗಳೂರಿನಿಂದ 425 ಕಿ.ಮೀ ದೂರದಲ್ಲಿದೆ.

 

ಶಿರಸಿಯಲ್ಲಿ ನೀವು ನೋಡಬಹುದಾದ ಸ್ಥಳಗಳು

ಶಿರಸಿಯು ಒಂದು ಅದ್ಭುತ ಊರು. ಅಘನಾಶಿನಿ ನದಿಯು ಶಿರಸಿ ಸಮೀಪದ ದೋಣಿಹಳ್ಳ ಎಂಬಲ್ಲಿ ಹುಟ್ಟಿ ಮುಂದೆ ಹರಿಯುತ್ತದೆ. ಈ ನದಿಯು ಶಿರಸಿಯ ಬೆಟ್ಟಗಳಿಂದ ಕೆಳಗೆ ಧುಮುಕುವಾಗ ಸೃಷ್ಟಿಸುವ ಭವ್ಯ ಜಲಪಾತಗಳು ನೋಡುಗರ ಮೈ ಮನಗಳಿಗೆ ಮುದ ನೀಡುತ್ತದೆ. ಈ ಊರಿನಲ್ಲಿ ಮಳೆಗಾಲದಲ್ಲಿ ಅತಿ ಮಳೆಯಾಗುವ ಕಾರಣದಿಂದ ಹಾಗು ಇಲ್ಲಿ ಉಷ್ಣವಲಯದ ಕಾಡುಗಳು ಇದ್ದು ಆ ಕಾಡಿನಲ್ಲಿ ವಿಪುಲವಾದ ವನ್ಯಜೀವಿ ಸಂಪತ್ತು ನೆಲೆ ಕಂಡು ಕೊಂಡಿವೆ. ಈ ಸ್ವಾಭಾವಿಕ ಸೌಂದರ್ಯವು ಶಿರಸಿಯನ್ನು ಪ್ರಮುಖ ವಿಹಾರ ತಾಣವಾಗಿಸಲು ನೆರವಾಗಿದೆ.

ಇಲ್ಲಿರುವ ಪ್ರಸಿದ್ಧ ದೇವಾಲಯಗಳಲ್ಲಿ 16ನೇ ಶತಮಾನಕ್ಕೆ ಸೇರಿದ ಮಾರಿಕಾಂಬ ದೇವಾಲಯವು ಒಂದು. ಈ ದೇವಿಯ ವಾರ್ಷಿಕ ಜಾತ್ರೆಗೆ ಲಕ್ಷೋಪಲಕ್ಷ ಭಕ್ತರು ಬಂದು ಸೇರುತ್ತಾರೆ. ಇದರಷ್ಟೆ ಪ್ರಸಿದ್ಧಿಯನ್ನು ಪಡೆದಿರುವ ಇನ್ನೊಂದು ದೇವಾಲಯ ಇಲ್ಲಿನ ಮಹಾಗಣಪತಿ ದೇವಾಲಯ. ಭಕ್ತಾದಿಗಳು ಯಾವುದೇ ಕೆಲಸ ಮಾಡುವ ಮೊದಲು ಈ ಸ್ವಾಮಿಯ ಆಶೀರ್ವಾದ ಪಡೆಯಲು ತಂಡೋಪತಂಡವಾಗಿ ಆಗಮಿಸುತ್ತಾರೆ. ದಂತಕಥೆಗಳ ಪ್ರಕಾರ ಈ ಸ್ವಾಮಿಯ ಆಶೀರ್ವಾದ ಪಡೆದವರು ಯಾರು ನಿರಾಸೆ ಹೊಂದಿಲ್ಲ.

ಇಲ್ಲಿಗೆ ಭೇಟಿ ಕೊಡುವವರು ಬನವಾಸಿ, ಸಹಸ್ರ ಲಿಂಗ ಮತ್ತು ಉಂಚಳ್ಳಿ ಜಲಪಾತವನ್ನು ನೋಡಬಹುದು. ಬನವಾಸಿಯು ಕರ್ನಾಟಕದ ಪೂರ್ವಾಕಾಲದ ರಾಜಧಾನಿಯಾಗಿತ್ತು. ಸಹಸ್ರಲಿಂಗವು ಸಾವಿರ ಲಿಂಗಗಳನ್ನು ಹೊಂದಿರುವ ಸ್ಥಳವಾಗಿದ್ದು, ದಟ್ಟ ಅಡವಿಯ ಮಧ್ಯದಲ್ಲಿನ ನದಿಯಲ್ಲಿ ಮುಳುಗಿದೆ. ಶಿರಸಿಗೆ ಸಮೀಪದ ವಿಮಾನನಿಲ್ದಾಣವು ಹುಬ್ಬಳ್ಳಿಯಾಗಿದ್ದು, ಅದು ಇಲ್ಲಿಂದ 100 ಕಿ.ಮೀ ದೂರದಲ್ಲಿದೆ ಹಾಗು ರಸ್ತೆಯ ಮೂಲಕವು ಶಿರಸಿಗೆ ತಲುಪಲು ಉತ್ತಮ ಸೌಕರ್ಯಗಳಿವೆ.

ಶಿರಸಿ ಪ್ರಸಿದ್ಧವಾಗಿದೆ

ಶಿರಸಿ ಹವಾಮಾನ

ಉತ್ತಮ ಸಮಯ ಶಿರಸಿ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಶಿರಸಿ

  • ರಸ್ತೆಯ ಮೂಲಕ
    ಶಿರಸಿಗೆ ಎಲ್ಲಾ ಪ್ರಮುಖ ನಗರಗಳಿಂದ ಕೆ ಎಸ್ ಆರ್ ಟಿ ಸಿ ( ಕರ್ನಾಟಕ ರಾಜ್ಯರಸ್ತೆ ಸಾರಿಗೆ ಸಂಸ್ಥೆ) ಬಸ್ಸುಗಳು ಮತ್ತು ಖಾಸಗಿ ಬಸ್ಸುಗಳು ದೊರೆಯುತ್ತವೆ. ವಿಶೇಷವಾಗಿ ಉತ್ತರ ಕನ್ನಡ ಪ್ರಮುಖ ನಗರಗಳಾದ ಶಿವಮೊಗ್ಗ, ಧಾರವಾಡ ಮತ್ತು ಉಡುಪಿಯಿಂದ ಶಿರಸಿಗೆ ಬಸ್ಸು ಸೌಕರ್ಯವಿದೆ. ಬಸ್ಸಿನಲ್ಲಿ ಪ್ರಯಾಣಿಸುವುದು ಮಿತವ್ಯಯಿ ಮತ್ತು ಸುರಕ್ಷಿತವು ಹೌದು.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಕುಮಟಾವು ಶಿರಸಿಗೆ ಸಮೀಪದ ರೈಲು ನಿಲ್ದಾಣವಾಗಿದ್ದು, ಅದು ಶಿರಸಿಯಿಂದ 61 ಕಿ.ಮೀ ದೂರದಲ್ಲಿದೆ. ಕುಮಟಾವು ಗೋವಾ, ಮಂಗಳೂರು ಮತ್ತು ಪಣಜಿಯೊಂದಿಗೆ ಉತ್ತಮ ಸಂಪರ್ಕ ಹೊಂದಿದ್ದು, ಪ್ರವಾಸಿಗರು ಇಲ್ಲಿಂದ ಟ್ಯಾಕ್ಸಿ, ಬಸ್ ಮತ್ತು ಬಾಡಿಗೆ ವಾಹನಗಳಲ್ಲಿ ಶಿರಸಿ ತಲುಪಬಹುದು.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಹುಬ್ಬಳ್ಳಿ ವಿಮಾನ ನಿಲ್ದಾಣವು ಇಲ್ಲಿಗೆ ಹತ್ತಿರದ ವಿಮಾನ ನಿಲ್ದಾಣವಾಗಿದ್ದು ಶಿರಸಿಯನ್ನು ಭಾರತ ದೇಶದ ಇತರ ಪ್ರಮುಖ ನಗರಗಳೊಂದಿಗೆ ಸಂಪರ್ಕಿಸುತ್ತದೆ. ಇದು ಇಲ್ಲಿಂದ 119 ಕಿ.ಮೀ ದೂರದಲ್ಲಿದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಶಿರಸಿಯಿಂದ 418 ಕಿ.ಮೀ ದೂರದಲ್ಲಿದ್ದು, ಅದು ಅಮೆರಿಕಾ, ಏಶಿಯಾ, ಯೂರೋಪ್ ಮತ್ತು ಮಧ್ಯ ಪ್ರಾಚ್ಯದ ಪ್ರವಾಸಿಗರನ್ನು ಬೆಂಗಳೂರಿನ ಮೂಲಕ ಶಿರಸಿ ತಲುಪಲು ಸಹಾಯ ಮಾಡುತ್ತದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat