Search
  • Follow NativePlanet
Share
ಮುಖಪುಟ » ಸ್ಥಳಗಳು » ಶಿರಸಿ » ಹವಾಮಾನ

ಶಿರಸಿ ಹವಾಮಾನ

ಚಳಿಗಾಲದಲ್ಲಿ ಈ ಪ್ರದೇಶವು ಸಮ ಶೀತ ಹಾಗು ಉಷ್ಣ ಹೊಂದಿರುವದರಿಂದ, ಭೇಟಿ ನೀಡಲು ಯೋಗ್ಯಕರವಾದ ವಾತಾವರಣ ಹೊಂದಿರುತ್ತದೆ. ಪ್ರವಾಸಿಗರು ಚಳಿಗಾಲದ ಸದುಪಯೋಗ ಪಡೆದುಕೊಳ್ಳುವುದು ಉತ್ತಮ.

ಬೇಸಿಗೆಗಾಲ

(ಮಾರ್ಚ್ ನಿಂದ ಮೇ): ಬೇಸಿಗೆಯಲ್ಲಿ ಶಿರಸಿಯ ಹವಾಮಾನ ಹಿತವಾಗಿರುತ್ತದೆ. ಆಗ ದಿನದ ಉಷ್ಣಾಂಶ 37°ಸೆಲ್ಶಿಯಸ್ ವರೆಗು ಏರುತ್ತದೆ.ರಾತ್ರಿ ಇದು  22° ಸೆಲ್ಶಿಯಸ್ ವರೆಗು ಇಳಿಯುತ್ತದೆ.

ಮಳೆಗಾಲ

(ಜೂನ್ ನಿಂದ ಸೆಪ್ಟಂಬರ್): ಮಳೆಗಾಲದಲ್ಲಿ ಶಿರಸಿಯು ಗಣನೀಯ ಪ್ರಮಾಣದ ಮಳೆಯನ್ನು ಪಡೆಯುವ ಪ್ರದೇಶವಾಗಿದೆ. ಹೆಚ್ಚಿನ ಮಳೆಯ ಕಾರಣ ಶಿರಸಿಗೆ ಹೋದಾಗ ಹೊರಗೆ ಹೋಗಿ ಪ್ರೇಕ್ಷಣೀಯ ಸ್ಥಳಗಳನ್ನು ನೋಡಲು ಆಗುವುದಿಲ್ಲ.

ಚಳಿಗಾಲ

(ಅಕ್ಟೋಬರ್ ನಿಂದ ಜನವರಿ): ಚಳಿಗಾಲದಲ್ಲಿ ಶಿರಸಿಯು ತಂಪಾಗಿ ಮುದನೀಡುವಂತಹ ವಾತಾವರಣವನ್ನು ಹೊಂದಿರುತ್ತದೆ. ಆಗಾಗಿ ಈ ಕಾಲವು ಇಲ್ಲಿಗೆ ಭೇಟಿ ಕೊಡಲು ಯೋಗ್ಯವಾಗಿದೆ. ಈ ಕಾಲದಲ್ಲಿ ಇಲ್ಲಿ ದಾಖಾಲಾಗಿರುವ ಕನಿಷ್ಠ ಉಷ್ಣಾಂಶ 19° ಸೆಲ್ಶಿಯಸ್ ಮತ್ತು ಗರಷ್ಠ ಉಷ್ಣಾಂಶ 32° ಸೆಲ್ಶಿಯಸ್. ಪ್ರವಾಸಿಗರು ಚಳಿಗಾಲದ ಈ ಹಿತವಾದ ವಾತವರಣದಿಂದಾಗಿ ಶಿರಸಿಗೆ ಹೋಗುವ ಯೋಜನೆ ಹಾಕಿ ಕೊಳ್ಳಬಹುದು.