Search
  • Follow NativePlanet
Share
» »ಚಳಿಗಾಲಕ್ಕೆ ದಂಪತಿಗಳಿಗೆ ಸೂಕ್ತವಾದ ಕರ್ನಾಟಕದ ರೋಮ್ಯಾಂಟಿಕ್ ತಾಣಗಳು

ಚಳಿಗಾಲಕ್ಕೆ ದಂಪತಿಗಳಿಗೆ ಸೂಕ್ತವಾದ ಕರ್ನಾಟಕದ ರೋಮ್ಯಾಂಟಿಕ್ ತಾಣಗಳು

ನಮ್ಮ ದೈನಂದಿನ ಜೀವನದಲ್ಲಿ ಅದೆಷ್ಟೇ ಕಾರ್ಯನಿರತರಾಗಿದ್ದರೂ ಕೂಡ ವಾರಾಂತ್ಯದಲ್ಲಿ ಅಥವಾ ರಜೆಯ ದಿನಗಳಲ್ಲಿ ದಂಪತಿಗಳಿಗೆ ಕಾಲ ಕಳೆಯೋಕೆ ಒಂದೊಳ್ಳೆ ಜಾಗ ಬೇಕೇ ಬೇಕು. ಅದರಲ್ಲೂ ಚಳಿಗಾಲದಲ್ಲಿ ದಂಪತಿಗಳು ಸುಂದರವಾದ ಸಮಯವನ್ನು ಕಳೆಯೋಕೆ ಅಂತಾನೆ ಕರ್ನಾಟಕದಲ್ಲಿ ಕೆಲವೊಂದು ರೊಮ್ಯಾಂಟಿಕ್ ತಾಣಗಳಿವೆ. ನೀವು ನಿಮ್ಮ ಸಂಗಾತಿಯೊಂದಿಗೆ ಉತ್ತಮ ಸಮಯವನ್ನು ಕಳೆಯೋಕೆ ಪ್ರವಾಸ ಯೋಜನೆಯನ್ನು ಹಾಕಿಕೊಳ್ಳಲು ಇದು ಸೂಕ್ತವಾದ ಸಮಯ. ಕರ್ನಾಟಕದಲ್ಲಿರುವ ಆ ರೊಮ್ಯಾಂಟಿಕ್ ತಾಣಗಳು ಯಾವುವು ? ಅವುಗಳಿಗೆ ಭೇಟಿ ನೀಡುವುದು ಹೇಗೆ ಇಲ್ಲಿಗೆ ಮಾಹಿತಿ.

Romantic Places to Visit In Karnataka For Couples During Winter

ಕರ್ನಾಟಕದಲ್ಲಿ ದಂಪತಿಗಳು ಭೇಟಿ ನೀಡಬಹುದಾದ ರೊಮ್ಯಾಂಟಿಕ್ ತಾಣಗಳು :

ಕೂರ್ಗ್ :

ಕೂರ್ಗ್ :

ಕೂರ್ಗ್ ಅಂದರೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ? ಈ ಪುಟ್ಟ ನಗರವು ಕರ್ನಾಟಕದ ಪ್ರಸಿದ್ಧ ತಾಣಗಳಲ್ಲಿ ಒಂದಾಗಿದೆ. ಇಲ್ಲಿ ನೀವು ನಿಮ್ಮ ಪ್ರೀತಿಪಾತ್ರರೊಡನೆ ಕೆಲವು ಸ್ಮರಣೀಯ ಸಮಯವನ್ನು ಕಳೆಯಬಹುದು. ಇಲ್ಲಿನ ಹವಾಮಾನ ದಂಪತಿಗಳಿಗೆ ಹೇಳಿ ಮಾಡಿಸಿದ ಹಾಗಿದೆ ಎಂದರೆ ತಪ್ಪಾಗಲಾರದು. ಹಸುರಿನ ಕಾನನದ ನಡುವೆ, ಕಾಫಿ ತೋಟಗಳ ನಡುವೆ ನಿಮ್ಮ ಸಂಗಾತಿಯೊಂದಿಗೆ ನೀವು ಕೈ-ಕೈ ಹಿಡಿದುಕೊಂಡು ಅಡ್ಡಾಡಬಹುದು. ಇದಲ್ಲದೇ ನೀವಿಬ್ಬರೂ ಸೇರಿ ಇಲ್ಲಿ ಸಾಹಸ ಚಟುವಟಿಕೆಗಳನ್ನು ಕೂಡ ಮಾಡಬಹುದು. ಇಲ್ಲಿ ಟ್ರಕ್ಕಿಂಗ್ ಮಾಡಲು ಹಲವಾರು ತಾಣಗಳಿದ್ದು, ದಂಪತಿಗಳು ಟ್ರಕ್ಕಿಂಗ್ ಕೂಡ ಮಾಡಬಹುದು. ಇಲ್ಲಿ ಉಳಿಯಲು ಉತ್ತಮ ಸೌಕರ್ಯಗಳನ್ನು ಹೊಂದಿದರುವ ರೆಸಾರ್ಟ್ ಅಥವಾ ಹೋಂ ಸ್ಟೇಗಳು ಕೂಡ ಲಭ್ಯವಿದೆ.
ಪ್ರಯಾಣಕ್ಕೆ ಉತ್ತಮ ಸಮಯ: ಸೆಪ್ಟೆಂಬರ್ ನಿಂದ ಜೂನ್ ತಿಂಗಳು
ಇಲ್ಲಿ ಏನೆಲ್ಲಾ ಮಾಡಬಹುದು ? : ಟ್ರೆಕ್ಕಿಂಗ್, ಕಾವೇರಿ ನದಿಯಲ್ಲಿ ಕೊರಾಕಲ್‌ನಲ್ಲಿ ತೇಲುವುದು, ಅಬ್ಬಿ ಜಲಪಾತಕ್ಕೆ ಭೇಟಿ, ರಾತ್ರಿಯ ಕ್ಯಾಂಪಿಂಗ್ ಮತ್ತು ಬಾರಾಪೋಲ್‌ನಲ್ಲಿ ರಾಫ್ಟಿಂಗ್

ಮಡಿಕೇರಿ :

ಮಡಿಕೇರಿ :

ಈ ಬ್ಯುಸಿ ಲೈಫ್‌ನಲ್ಲಿ ಮನಸ್ಸು ಬೇಸತ್ತು ಹೋಗಿದ್ದರೆ ಖಂಡಿತವಾಗಿಯೂ ನೀವು ಹಸಿರಿನ ತಾಣ ಮಡಿಕೇರಿಗೆ ಭೇಟಿ ನೀಡಬೇಕು. ಮಡಿಕೇರಿ ಇದೊಂದು ಸುಂದರ ಪಟ್ಟಣವಾಗಿದ್ದು, ಇದು ಶಾಂತ ಮತ್ತು ಸುಂದರ ಮಾತ್ರವಲ್ಲದೆ ಮಾಲಿನ್ಯ ಮುಕ್ತವಾಗಿದೆ. ಇಲ್ಲಿನ ಕಣಿವೆಗಳು ಹಚ್ಚ ಹಸಿರಿನಿಂದ ಕೂಡಿದ್ದು, ನೀವು ಕಾಫಿ ಪ್ರಿಯರಾಗಿದ್ದರೆ ಕಾಫಿಯ ಸುವಾಸನೆಯು ನಿಮ್ಮ ಮನಸ್ಸನ್ನು ಉಲ್ಲಾಸದಿಂದಿಡುತ್ತದೆ. ಈ ಸುಂದರ ವಾತಾವರಣದ ಜೊತೆಗೆ ಹವಾಮಾನವು ಅಷ್ಟೇ ರೋಮ್ಯಾಂಟಿಕ್ ಆಗಿರುತ್ತದೆ. ವಾಸ್ತವವಾಗಿ ಮಡಿಕೇರಿಯು ಕರ್ನಾಟಕದ ಅತ್ಯುತ್ತಮ ರೋಮ್ಯಾಂಟಿಕ್ ಸ್ಥಳಗಳಲ್ಲಿ ಒಂದಾಗಿದೆ. ನೀವಿಲ್ಲಿ ಭವ್ಯವಾದ ಸೂರ್ಯಾಸ್ತವನ್ನು ಕೂಡ ವೀಕ್ಷಿಸಬಹುದು.
ಪ್ರಯಾಣಿಸಲು ಉತ್ತಮ ಸಮಯ : ಡಿಸೆಂಬರ್ ನಿಂದ ಫೆಬ್ರವರಿ ತಿಂಗಳು
ಇಲ್ಲಿ ಏನೆಲ್ಲಾ ಮಾಡಬಹುದು ? : ಕಾಫಿ ತೋಟಗಳಿಗೆ ಭೇಟಿ, ಓಂಕಾರೇಶ್ವರ ದೇವಸ್ಥಾನ ಮತ್ತು ಸೇಂಟ್ ಮೈಕೆಲ್ ಚರ್ಚ್ ಗೆ ಭೇಟಿ, ಮಡಿಕೇರಿ ಕೋಟೆಗೆ ಭೇಟಿ, ದೀರ್ಘವಾದ ಅಡ್ಡಾಡುವುದು ಮತ್ತು ಶಾಂತಿಯುತ ಪರಿಸರವನ್ನು ಆನಂದಿಸುವುದು.

ಗೋಕರ್ಣ :

ಗೋಕರ್ಣ :

ನೀವು ಕರ್ನಾಟಕದ ಅತ್ಯುತ್ತಮ ರೊಮ್ಯಾಂಟಿಕ್ ಸ್ಥಳಗಳಲ್ಲಿ ಒಂದನ್ನು ಭೇಟಿ ಮಾಡಲು ಬಯಸಿದರೆ, ಆ ಪಟ್ಟಿಯಲ್ಲಿ ಗೋಕರ್ಣವನ್ನು ಸೇರಿಸಿಕೊಳ್ಳಿ. ಈ ತಾಣದ ಒಂದು ಬದಿಯಲ್ಲಿ ಪಶ್ಚಿಮ ಘಟ್ಟಗಳಿದ್ದರೆ, ಇನ್ನೊಂದು ಬದಿಯಲ್ಲಿ ಅರಬ್ಬೀ ಸಮುದ್ರವಿದೆ. ಜಲಮೂಲಗಳನ್ನು ಇಷ್ಟಪಡುವ ದಂಪತಿಗಳಿಗೆ ಈ ಸ್ಥಳವು ಸೂಕ್ತವಾಗಿದೆ. ಇಲ್ಲಿಗೆ ಬಂದು ನೀವು ರೆಸಾರ್ಟ್‌ನಲ್ಲಿ ವಿಶ್ರಾಂತಿ ಪಡೆಯಬಹುದು ಜೊತೆಗೆ ವಿವಿಧ ಜಲಕ್ರೀಡೆಗಳನ್ನು ಕೂಡ ಮಜದಿಂದ ಅನುಭವಿಸಬಹುದು.
ನೀವು ಹೊಸ ದಂಪತಿಗಳಾಗಿದ್ದಲ್ಲಿ ಪರಸ್ಪರ ತಿಳಿದುಕೊಳ್ಳಲು ಸ್ವಲ್ಪ ಸಮಯ ಬೇಕಾದರೆ ಈ ಸ್ಥಳವು ಸೂಕ್ತವಾಗಿದೆ.
ಪ್ರಯಾಣಿಸಲು ಉತ್ತಮ ಸಮಯ : ಅಕ್ಟೋಬರ್ ನಿಂದ ಫೆಬ್ರವರಿ ತಿಂಗಳು
ಇಲ್ಲಿ ಏನೆಲ್ಲಾ ಮಾಡಬಹುದು ? : ಕುಮಟಾ ಸಮೀಪದ ನಿರ್ವಾಣ ಬೀಚ್ ಭೇಟಿ, ಟ್ರೀಹೌಸ್‌ನಲ್ಲಿ ನಿಮ್ಮ ಸಮಯವನ್ನು ಆನಂದಿಸಿ, ಕಡಲತೀರದಿಂದ ಸುಂದರವಾದ ಚಿಪ್ಪುಗಳನ್ನು ಸಂಗ್ರಹಿಸಿ, ದೋಣಿ ಸವಾರಿ ಮಾಡಿ ಮತ್ತು ಡಾಲ್ಫಿನ್‌ಗಳನ್ನು ನೋಡಿ, ಸೂರ್ಯಾಸ್ತದ ಸಮಯವನ್ನು ವೀಕ್ಷಿಸಿ.

ಮಂಗಳೂರು :

ಮಂಗಳೂರು :

ಮಂಗಳೂರು ಕರ್ನಾಟಕದ ಉತ್ತಮ ರೋಮ್ಯಾಂಟಿಕ್ ಸ್ಥಳಗಳಲ್ಲಿ ಒಂದಾಗಿದೆ. ಮಂಗಳೂರು ಬೇರೆಲ್ಲಾ ನಗರಗಳಿಗಿಂತ ಭಿನ್ನವಾಗಿರುವುದಲ್ಲದೇ, ಶಾಂತವಾದ ವಾತಾವರಣವನ್ನು ಹೊಂದಿದೆ. ಇಲ್ಲಿನ ವಾಸ್ತುಶಿಲ್ಪದ ದೇವಾಲಯಗಳನ್ನು ಕಂಡು ನೀವು ಪ್ರಶಂಸಿಸಬಹುದು ಮತ್ತು ಸುಂದರವಾದ ಕಡಲತೀರಗಳಿಗೆ ಭೇಟಿ ನೀಡಬಹುದು ಮತ್ತು ತೂಗಾಡುತ್ತಿರುವ ತೆಂಗಿನಕಾಯಿಯ ಮರಗಳ ಕೆಳಗೆ ಕುಳಿತು ವಿಶ್ರಾಂತಿ ಪಡೆಯಬಹುದು. ನಿಮ್ಮ ಹನಿಮೂನ್ ಸ್ಪಾಟ್ ಇದಾಗಿದ್ದರೆ, ನಿಮ್ಮ ಜೀವನದ ಸುಂದರ ಕ್ಷಣಗಳನ್ನು ಇಲ್ಲಿಂದಲೇ ಪ್ರಾರಂಭಿಸಬಹುದು.
ಪ್ರಯಾಣಿಸಲು ಉತ್ತಮ ಸಮಯ : ಸೆಪ್ಟೆಂಬರ್ ನಿಂದ ಏಪ್ರಿಲ್ ತಿಂಗಳು
ಇಲ್ಲಿ ಏನೆಲ್ಲಾ ಮಾಡಬಹುದು ? : ನೇತ್ರಾವತಿ ಸೇತುವೆಯ ಬಳಿ ಸೂರ್ಯಾಸ್ತದ ದೃಶ್ಯವನ್ನು ನೀವು ಆನಂದಿಸಬಹುದು, ಕಡಲತೀರದಲ್ಲಿ ಕೈ-ಕೈ ಹಿಡಿದು ವಿಹರಿಸಬಹುದು, ಚಂದ್ರಗಿರಿ ಕೋಟೆಗೆ ಭೇಟಿ ನೀಡಿ, ಪಿಲಿಕುಳ ಬೊಟಾನಿಕಲ್ ಗಾರ್ಡನ್ ಮತ್ತು ಸೇಂಟ್ ಲಾರೆನ್ಸ್ ಚರ್ಚ್‌ಗೆ ಭೇಟಿ ನೀಡಿ ಮತ್ತು ಅಡ್ಯಾರ್ ಜಲಪಾತದಲ್ಲಿ ನಿಮ್ಮ ಸಮಯವನ್ನು ಆನಂದಿಸಬಹುದು.

ಚಿಕ್ಕಮಗಳೂರು :

ಚಿಕ್ಕಮಗಳೂರು :

ವಾರಾಂತ್ಯ, ತಿಂಗಳಾಂತ್ಯ, ವರ್ಷಾಂತ್ಯ, ಹನಿಮೂನ್, ಫ್ಯಾಮಿಲಿ ಟೂರ್ ಅಂತೆಲ್ಲಾ ಬಂದರೆ ಮೊದಲು ಪ್ರಾಶಸ್ತ್ಯ ನೀಡೋದೆ ಈ ಚಿಕ್ಕಮಗಳೂರಿಗೆ. ಕಾಫಿ ಪ್ರಿಯರಿಗಂತೂ ಬೆಸ್ಟ್ ಪ್ಲೇಸ್ ಅಂದರೆ ಈ ಚಿಕ್ಕಮಗಳೂರು. ನಿಸರ್ಗದ ಸೌಂದರ್ಯವನ್ನು ಸವಿಯುವವರಿಗೆ, ಆಹ್ಲಾದಕರ ತಂಗಾಳಿಯನ್ನು ಆಹ್ವಾನಿಸುವವರಿಗೆ ಸ್ನೇಹಿತರಾಗುವ ತಾಣ ಚಿಕ್ಕಮಗಳೂರು. ಸಾಮಾನ್ಯವಾಗಿ ದಂಪತಿಗಳಿಗೆ ಹೆಚ್ಚು ಇಷ್ಟವಾಗುವ ತಾಣವಿದು, ಏಕೆಂದರೆ ಅತ್ಯುತ್ತಮ ಕಾಫಿಯ ಹೊರತಾಗಿ ನೀವು ಇಲ್ಲಿ ಅದ್ಭುತವಾದ ಹವಾಮಾನದ ಜೊತೆಗೆ ಇಲ್ಲಿನ ರಮಣೀಯ ನಿಸರ್ಗದ ಸೌಂದರ್ಯವನ್ನು ಸಹ ಆನಂದಿಸಬಹುದು.
ಪ್ರಯಾಣಿಸಲು ಉತ್ತಮ ಸಮಯ : ಸೆಪ್ಟೆಂಬರ್ ನಿಂದ ಮೇ ತಿಂಗಳು
ಇಲ್ಲಿ ಏನೆಲ್ಲಾ ಮಾಡಬಹುದು ? : ಕ್ಯಾಂಪಿಂಗ್‌ಗೆ ಹೋಗಿ, ಟ್ರೆಕ್ಕಿಂಗ್ ಮತ್ತು ರಾಫ್ಟಿಂಗ್ ಪ್ರಯತ್ನಿಸಿ, ಕಾಫಿ ತೋಟಗಳ ಮೂಲಕ ಸ್ವಲ್ಪ ಅಲೆದಾಟ, ಹೆಬ್ಬೆ ಜಲಪಾತದಲ್ಲಿ ನಿಮ್ಮ ಸಮಯವನ್ನು ಆನಂದಿಸಿ, ಝರುಯಿ ಜಲಪಾತಕ್ಕೆ ಜೀಪ್ ಸಫಾರಿಗೆ ಹೋಗಿ, ಶಾರದಾಂಬಾ ದೇವಸ್ಥಾನಕ್ಕೆ ಭೇಟಿ ನೀಡಿ.

ದಾಂಡೇಲಿ :

ದಾಂಡೇಲಿ :

ಜಲಕ್ರೀಡೆಗಳಿಗೆ ಫೇಮಸ್ ಅಂದರೆ ದಾಂಡೇಲಿ, ಅಷ್ಟೇ ಅಲ್ಲ ನೀವಿಲ್ಲಿ ದಟ್ಟ ಕಾಡಿನ ಸೌಂದರ್ಯವನ್ನು ಕೂಡ ಕಣ್ತುಂಬಿಕೊಳ್ಳಬಹುದು. ಹಚ್ಚ ಹಸಿರಿನ ಗಿಡ ಮರಗಳ ನಡುವೆ ಅಲೆದಾಟ, ಒಂದಷ್ಟು ತಂಪು ಗಾಳಿ ಮತ್ತು ಹೊತ್ತೊತ್ತಿಗೆ ಊಟ ಇಷ್ಟಿದ್ದರೆ ದಂಪತಿಗಳ ಸುಖ ಕ್ಷಣಗಳಿಗೆ ಅಡ್ಡಿ ಏನಿದೆ ಹೇಳಿ. ದಂಪತಿಗಳು ಇಲ್ಲಿ ವನ್ಯಜೀವಿ ಅಭಯಾರಣ್ಯಕ್ಕೆ ಭೇಟಿ ನೀಡಬಹುದು ಮತ್ತು ವಿವಿಧ ಸಾಹಸ ಚಟುವಟಿಕೆಗಳಲ್ಲಿ ಕೂಡ ಭಾಗವಹಿಸಬಹುದು. ಇದು ಸಾಹಸ ಪ್ರಿಯ ದಂಪತಿಗಳಿಗೆ ಉತ್ತಮ ಸ್ಥಳವಾಗಿದೆ.
ಪ್ರಯಾಣಿಸಲು ಉತ್ತಮ ಸಮಯ : ಅಕ್ಟೋಬರ್ ನಿಂದ ಮೇ ತಿಂಗಳು
ಇಲ್ಲಿ ಏನೆಲ್ಲಾ ಮಾಡಬಹುದು ? : ಕಾಳಿ ನದಿಯಲ್ಲಿ ರಿವರ್ ರಾಫ್ಟಿಂಗ್, ಕ್ರಾಸಿಂಗ್ ರಿವರ್, ಕಯಾಕಿಂಗ್, ದಾಂಡೇಲಿ ವನ್ಯಜೀವಿ ಅಭಯಾರಣ್ಯದಲ್ಲಿ ವನ್ಯಜೀವಿ ಸಫಾರಿ, ಮೌಂಟೇನ್ ಬೈಕಿಂಗ್, ನೈಸರ್ಗಿಕ ಜಕುಝಿ ಬಾತ್, ಸಿಂಥೇರಿ ರಾಕ್‌ಗೆ ಪಾದಯಾತ್ರೆ, ಕೊರಾಕಲ್ ಬೋಟ್ ರೈಡ್, ಜಂಗಲ್ ಕ್ಯಾಂಪಿಂಗ್ ಮತ್ತು ಪಕ್ಷಿ ವೀಕ್ಷಣೆ.

ಹಳೇಬೀಡು :

ಹಳೇಬೀಡು :

ಇತಿಹಾಸವನ್ನು ಹೊಂದಿರುವ ಪ್ರತಿಯೊಂದು ದೇವಾಲಯಗಳು ಪ್ರವಾಸಿಗರಿಗೆ ಉತ್ತಮ ಅನುಭವವನ್ನು ನೀಡುತ್ತವೆ. ಸಾಹಸ, ಮನೊರಂಜನೆ ಜೊತೆಗೆ ನಿಸರ್ಗ ಸವಿಯುವ ಅನೇಕ ದಂಪತಿಗಳಿಗೆ ಪುರಾತನ ದೇವಾಲಯಗಳು ಮತ್ತು ವಾಸ್ತುಶಿಲ್ಪಗಳು ಹೆಚ್ಚು ಆಕರ್ಷಣೀಯ. ಕರ್ನಾಟಕದಲ್ಲಿರುವ ಸುಂದರ ತಾಣ ಹಳೇಬೀಡು, ಈ ಸ್ಥಳಕ್ಕೆ ದಂಪತಿಗಳು ಭೇಟಿ ನೀಡುವ ಮೂಲಕ ಪ್ರಾಚೀನ ದೇವಾಲಯಗಳು ಮತ್ತು ಅವುಗಳ ಅವಶೇಷಗಳು, ವಾಸ್ತುಶಿಲ್ಪ, ಶಿಲ್ಪಕಲೆಗಳು ಇತ್ಯಾದಿಗಳನ್ನು ಅನ್ವೇಷಿಸಬಹುದು. ಇದು ಅತೀ ಕಡಿಮೆ ಜನಸಂದಣಿಯನ್ನು ಹೊಂದಿರುವ ಸ್ಥಳವಾಗಿದೆ ಮತ್ತು ನೀವು ಯಾವುದೇ ನಿರಾತಂಕದಿಂದ ಪರಸ್ಪರ ಸಮಯ ಕಳೆಯಲು ಮತ್ತು ಜಾಗವನ್ನು ತಿಳಿದುಕೊಳ್ಳಲು ಸಾಕಷ್ಟು ಸಮಯವನ್ನು ತೆಗೆದುಕೊಳ್ಳಬಹುದು.
ಪ್ರಯಾಣಿಸಲು ಉತ್ತಮ ಸಮಯ : ಅಕ್ಟೋಬರ್ ನಿಂದ ಫೆಬ್ರವರಿ ತಿಂಗಳು
ಇಲ್ಲಿ ಏನೆಲ್ಲಾ ಮಾಡಬಹುದು ? : ಸ್ಥಳೀಯ ಮಾರುಕಟ್ಟೆಗಳಲ್ಲಿ ಶಾಪಿಂಗ್‌, ಪುರಾತನ ದೇವಾಲಯಗಳು ಮತ್ತು ಬಯಲು ಪುರಾತತ್ವ ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡಿ, ಯಗಚಿ ಅಣೆಕಟ್ಟಿನಲ್ಲಿ ಜಲ ಕ್ರೀಡೆಗಳನ್ನು ಪ್ರಯತ್ನಿಸಿ.


ಕರ್ನಾಟಕದಲ್ಲಿ ದಂಪತಿಗಳು ಒಮ್ಮೆಯಾದರೂ ಭೇಟಿ ನೀಡಲೇಬೇಕಾದ ಕೆಲವು ಅತ್ಯುತ್ತಮ ಸ್ಥಳಗಳು ಇವು ಎಂಬುದರಲ್ಲಿ ಎರಡು ಮಾತಿಲ್ಲ. ಈ ಸ್ಥಳಗಳಿಗೆ ಭೇಟಿ ನೀಡಲು ನೀವು ಅನುಕೂಲಕ್ಕೆ ತಕ್ಕಂತೆ ಯೋಜನೆಯನ್ನು ಹಾಕಿಕೊಳ್ಳಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X