Search
  • Follow NativePlanet
Share
ಮುಖಪುಟ » ಸ್ಥಳಗಳು » ಚಿಕ್ಕಮಗಳೂರು » ಹವಾಮಾನ

ಚಿಕ್ಕಮಗಳೂರು ಹವಾಮಾನ

ಚಿಕ್ಕಮಗಳೂರಿಗೆ ವರ್ಷದ ಯಾವುದೇ ಸಮಯದಲ್ಲಿ ಭೇಟಿ ನೀಡಬಹುದು. ಆದಾಗ್ಯೂ, ಅಕ್ಟೋಬರ್ ಮತ್ತು ಏಪ್ರಿಲ್ ಅವಧಿಯಲ್ಲಿನ ದೃಶ್ಯಗಳು ಅತ್ಯುತ್ತಮ ಎಂದು ಪರಿಗಣಿಸಲಾಗಿದೆ. ಜೂನ್ ಮತ್ತು ಸೆಪ್ಟೆಂಬರ್ ಅವಧಿಯು ಮಳೆಗಾಲದಿಂದಾಗಿ ಜಲಪಾತಗಳ  ಆಕರ್ಷಣೀಯ ಸೌಂದರ್ಯಕ್ಕೆ ಕಾರಣವಾಗಿರುವದರಿಂದ ಭೇಟಿಗೆ ಸೂಕ್ತವಾಗಿದೆ.

ಬೇಸಿಗೆಗಾಲ

(ಮಾರ್ಚ್ ನಿಂದ ಮೇ ): ಚಿಕ್ಕಮಗಳೂರು ಬೇಸಿಗೆ ಕಾಲದಲ್ಲಿ ಸ್ವಲ್ಪ ಬೆಚ್ಚಗಿನ ಹವಾಮಾನ ಪಡೆಯುತ್ತದೆ. ಪಾದರಸ ಹಗಲಿನ ಸಮಯದಲ್ಲಿ 35 ° C ರಷ್ಟು ಮೇಲಕ್ಕೇರುತ್ತದೆ ಮತ್ತು ರಾತ್ರಿ ಸಮಯದಲ್ಲಿ ತಾಪಮಾನ 32 ° C  ರಷ್ಟಾಗಿರುತ್ತದೆ. ಪ್ರವಾಸಿಗರು ಬೇಸಿಗೆ ಅವಧಿಯಲ್ಲಿ ಈ ಸ್ಥಳಕ್ಕೆ  ದೊಡ್ಡ ಸಂಖ್ಯೆಯಲ್ಲಿ ಭೇಟಿನೀಡುವರು.

ಮಳೆಗಾಲ

(ಜೂನ್ನಿಂದ ಸೆಪ್ಟೆಂಬರ್): ಚಿಕ್ಕಮಗಳೂರು ಮಳೆಗಾಲದಲ್ಲಿ  ಉತ್ತಮ ಪ್ರಮಾಣದಲ್ಲಿ ಮಳೆಯನ್ನು ಪಡೆಯುತ್ತದೆ. ಮಳೆಗಾಲದಲ್ಲಿ ಹವಾಮಾನ ಅದ್ಭುತವಾಗಿರುವದರಿಂದ ಪ್ರವಾಸಿಗರು ಈ ಸಮಯದಲ್ಲಿ ಚಿಕ್ಕಮಗಳೂರಿಗೆ ಭೇಟಿನೀಡಲು ಬಯಸುತ್ತಾರೆ.

ಚಳಿಗಾಲ

(ಅಕ್ಟೋಬರ್ ಫೆಬ್ರವರಿ): ಚಿಕ್ಕಮಗಳೂರಿನ ಹವಾಮಾನ ಚಳಿಗಾಲದ ಋತುವಿನಲ್ಲಿ ತಂಪಾಗಿ ಮತ್ತು ಆಹ್ಲಾದಕರವಾಗಿರುತ್ತದೆ. ಚಳಿಗಾಲದ ಋತುವಿನ ಅವಧಿಯಲ್ಲಿ ದಾಖಲಾದ ಕನಿಷ್ಠ ತಾಪಮಾನ 17  ° C ಮತ್ತು ಗರಿಷ್ಠ ಉಷ್ಣಾಂಶ 20 ° C . ಸುಂದರ ಹವಾಮಾನವಿರುವದರಿಂದ  ಚಳಿಗಾಲದಲ್ಲಿ ಪ್ರವಾಸಿಗರು ಈ ಗಿರಿಧಾಮಕ್ಕೆ ಬರಲು ಆದ್ಯತೆ ನೀಡುತ್ತಾರೆ.