Search
  • Follow NativePlanet
Share
» »ನಿಮ್ಮ ಮನಸೂರೆಮಾಡುವಂತಹ ಭಾರತದಲ್ಲಿಯ 20 ಅತ್ಯಂತ ವರ್ಣರಂಜಿತ ಸ್ಥಳಗಳು

ನಿಮ್ಮ ಮನಸೂರೆಮಾಡುವಂತಹ ಭಾರತದಲ್ಲಿಯ 20 ಅತ್ಯಂತ ವರ್ಣರಂಜಿತ ಸ್ಥಳಗಳು

ನಿಮ್ಮ ಮನಸೂರೆಗೊಳಿಸುವಂಥ ಭಾರತದ ವರ್ಣರಂಜಿತ ಸ್ಥಳಗಳಿವು!

ಕೇವಲ ಹೋಳಿಯ ಬಣ್ಣಗಳಿಂದ ಮಾತ್ರ ನಮ್ಮ ಭಾರತ ದೇಶವು ವರ್ಣರಂಜಿತವಾಗಿರುವುದಲ್ಲ! ಹೌದು ಭಾರತದಾದ್ಯಂತ ಪ್ರಯಾಣಿಸಿದಲ್ಲಿ ನಮಗೆ ಹಲವಾರು ವರ್ಣರಂಜಿತ ಸ್ಥಳಗಳು ಕಣ್ಣಿಗೆ ಹಬ್ಬವನ್ನುಂಟು ಮಾಡುವುದು ಸಹಜ ಇಲ್ಲಿ ಹಲವಾರು ಇಂತಹ ಆಕರ್ಷಣೀಯವಾದ ಸ್ಥಳಗಳಿವೆ.

ಇಂತಹ ರಮಣೀಯ ಪ್ರಶಾಂತ ಹಾಗೂ ಕುತೂಹಲಕಾರಿಯದ ಸ್ಥಳಗಳಲ್ಲಿ ಖಂಡಿತವಾಗಿಯೂ ಅನುಭವವನ್ನು ಪಡೆಯ ಬಯಸುತ್ತೇವೆ. ಹಾಗೂ ಅವುಗಳನ್ನು ನೋಡಲು ಕಾತರಿಸುತ್ತೇವೆ ಭಾರತಾದ್ಯಂತ ಸಂಚರಿಸಿದಲ್ಲಿ, ನಮಗೆ ಇಂತಹ ಸುಂದರ ಸ್ಥಳಗಳ ಅನುಭವವಾಗುತ್ತದೆ ಹಾಗು ಇಂತಹ ಅದ್ಬುತ ಸ್ಥಳಗಳಿಗೆ ಭೇಟಿ ಕೊಟ್ಟಲ್ಲಿ ನಿಮ್ಮ ಅಮೂಲ್ಯ ಸಮಯವು ವ್ಯರ್ಥವೆನಿಸದು.

ಬನ್ನಿ ಒಂದು ವರ್ಣರಂಜಿತ ಪ್ರವಾಸ ಮಾಡೋಣ!

ಹೋಳಿ - ಬಣ್ಣಗಳ ಸಂತೋಷದ ಹಬ್ಬ

ಹೋಳಿ - ಬಣ್ಣಗಳ ಸಂತೋಷದ ಹಬ್ಬ

ನೀವು ಭಾರತವನ್ನು ವರ್ಣರಂಜಿತವಾಗಿ ಹೋಳಿ ಹಬ್ಬದ ಸಮಯದಲ್ಲಿ ಕಾಣುವಷ್ಟು ಬಣ್ಣಗಳನ್ನು ಬೇರೆ ಸಮಯದಲ್ಲಿ ಕಾಣಲು ಸಾಧ್ಯವೇ ಇಲ್ಲ! ಹೌದು, ಹೋಳಿ ಸಮಯದಲ್ಲಿ ಬಣ್ಣದಲ್ಲಿ ಮಿಂದಿರುವುದನ್ನು ಕಾಣಬಹುದು. ಅಲ್ಲದೆ ರಸ್ತೆಗಳು ಕಾಮನಬಿಲ್ಲಿನಂತೆ ವರ್ಣರಂಜಿತವಾಗಿರುತ್ತವೆ. ನೀವು ಹೋಳಿ ಹಬ್ಬದ ಅತ್ಯುತ್ತಮ ಅನುಭವ ಪಡೆಯಬೇಕೆನ್ನುವಿರಾದಲ್ಲಿ ಮಥುರಾ ಅಥವಾ ವೃಂದಾವನಕ್ಕೆ ಭೇಟಿ ಕೊಡಿ

ಎಂದೆಂದಿಗೂ ನೀಲಿ

ರಾಜಸ್ಥಾನದಲ್ಲಿರುವ ಜೋಧಪುರವನ್ನು "ನೀಲಿ ನಗರ" ಎಂದು ಕರೆಯುವುದು ನಿಮಗೆ ಗೊತ್ತೆ! ಮೆಹ್ರಾನ್‌ಗಢ್ ಕೋಟೆಯ ಸುತ್ತಲಿನ ಮನೆಗಳನ್ನು ಎದ್ದುಕಾಣುವ-ನೀಲಿ ಬಣ್ಣದಲ್ಲಿ ಚಿತ್ರಿಸಲಾಗಿದೆ ಮತ್ತು ಇದು ಭಾರತದ ಅತ್ಯಂತ ವರ್ಣರಂಜಿತ ಸ್ಥಳಗಳಲ್ಲಿ ಒಂದಾಗಿದೆ.

ಈ ಕಣಿವೆಯು ಹೂವುಗಳಿಂದಲೇ ಆವರಿಸಿಕೊಂಡಿದೆ

ಈ ಕಣಿವೆಯು ಹೂವುಗಳಿಂದಲೇ ಆವರಿಸಿಕೊಂಡಿದೆ

ಉತ್ತರಾಖಂಡ್ ನಲ್ಲಿರುವ 'ಹೂವುಗಳ ಕಣಿವೆ' ಇದು ಪ್ರಕೃತಿಯ ಒಂದು ವರದಾನ ಎಂದರೆ ತಪ್ಪಾಗಲಾರದು ಇಡೀ ಪರ್ವತ ಇಳಿಜಾರುಗಳನ್ನು ಇಲ್ಲಿ ಹೂವುಗಳಿಂದ ಮುಚ್ಚಲ್ಪಟ್ಟಿದೆ. ಅದೃಷ್ಟವಶಾತ್, ಭಾರತದಲ್ಲಿ ಅಂತಹ 5 ಹೂವುಗಳ ಕಣಿವೆಗಳಿದ್ದು! ಇದು ಯಾವುದೇ ದೃಶ್ಯ ವೈಭವಕ್ಕಿಂತ ಕಡಿಮೆಯಿಲ್ಲ. ಹಾಗೂ ಕಣ್ಣಿಗೆ ರಮಣೀಯ ನೋಟವನ್ನು ನೀಡುತ್ತವೆ.

ಹಾರ್ನ್ ಬಿಲ್ ನ ಹೆಸರಿನಲ್

ಹಾರ್ನ್ ಬಿಲ್ ನ ಹೆಸರಿನಲ್

ಹಾರ್ನ್‌ಬಿಲ್ ಉತ್ಸವವು ಭಾರತೀಯ ಹಾರ್ನ್‌ಬಿಲ್‌ನಂತೆ ರೋಮಾಂಚಕವಾಗಿದೆ! ಬುಡಕಟ್ಟು ಜನಾಂಗದವರು ತಮ್ಮ ಸಾಂಪ್ರದಾಯಿಕ ವೇಷಭೂಷಣಗಳಲ್ಲಿ ಒಟ್ಟಿಗೆ ಸೇರುತ್ತಾರೆ ಮತ್ತು ಹೆಮ್ಮೆಯಿಂದ ತಮ್ಮ ಸಂಸ್ಕೃತಿಯನ್ನು ಪ್ರದರ್ಶಿಸುತ್ತಾರೆ.

ಹೂವುಗಳ ಹಾಸು

ಹೂವುಗಳ ಹಾಸು

ಓಣಂ ಹಬ್ಬದ ಸಮಯದಲ್ಲಿ ಖಂಡಿತವಾಗಿಯೂ ಕೇರಳಕ್ಕೆ ಭೇಟಿ ಕೊಡಬೇಕು. ಪೂಕಳಂ

(ಹೂವಿನಿಂದ ಬಿಡಿಸಲಾದ ಚಿತ್ತಾರಗಳು) ಪ್ರತೀಯೊಂದೂ ಮನೆಯ ಮುಂದೆಯೂ ಬಿಡಿಸಲಾಗುತ್ತದೆ. ಪುರಾಣ ಪುರುಷ ಬಲಿ ಚಕ್ರವರ್ತಿಯು ಪ್ರತೀ ಮನೆಯನ್ನು ಓಣಂ ಸಮಯದಲ್ಲಿ ಭೇಟಿ ನೀಡುತ್ತಾನೆ ಎಂದು ನಂಬಲಾಗುತ್ತದೆ ಅವನ ಸ್ವಾಗತಕ್ಕಾಗಿ ಈ ಹೂವಿನ ಚಿತ್ತಾರವನ್ನು ಬಿಡಿಸಲಾಗುತ್ತದೆ. ಈ ಹೂವಿನ ಪೂಕಳಂ ಸುಂದರ ಹಾಗೂ ವಿವಿಧ ಹೂವುಗಳನ್ನು ಬಳಸಿ ರಚಿಸಲಾಗುತ್ತದೆ.

ಸೇಬು ಹಣ್ಣುಗಳನ್ನು ಕೊಯ್ಯಲು ಹೋಗಿ

ಸೇಬು ಹಣ್ಣುಗಳನ್ನು ಕೊಯ್ಯಲು ಹೋಗಿ

ಸೇಬುಹಣ್ಣಿನ ಸುಂದರ ಕೆಂಪು ಬಣ್ಣವನ್ನು ಇಷ್ಟ ಪಡುವಿರಾ? ಹಾಗಿದ್ದಲ್ಲಿ ಹಿಮಾಚಲ ಪ್ರದೇಶದ ಸೇಬುಹಣ್ಣಿನ ತೋಟಗಳಿಗೆ ಭೇಟಿ ಕೊಡಿ ಶಿಮ್ಲಾ ಸೇಬು ತೋಟಗಳಿಗೆ ಜನಪ್ರಿಯ ಸ್ಥಳಗಳಲ್ಲಿ ಒಂದಾಗಿದೆ. ಈ ಹಣ್ಣಿನ ತೋಟಗಳಿಗೆ ಭೇಟಿ ನೀಡುವುದು ನಿಮ್ಮ ಕಣ್ಣುಗಳಿಗೆ ತುಂಬಾ ಹಿತವಾಗಿರುತ್ತದೆ ಮತ್ತು ರುಚಿಕರವಾದ ಸೇಬುಹಣ್ಣುಗಳನ್ನು ಸವಿಯಿರಿ!

ವೈಭವೋಪೇತ ಮೈಸೂರಿನ ದಸರಾ

ವೈಭವೋಪೇತ ಮೈಸೂರಿನ ದಸರಾ

ಕರ್ನಾಟಕದ ಮೈಸೂರಿನಲ್ಲಿ ಆಚರಿಸಲಾಗುವ ದಸರಾ ಹಬ್ಬ ವಿಶ್ವವಿಖ್ಯಾತವಾಗಿದೆ. ಈ ವೈಭವೋಪವಾಗಿ ಹತ್ತು ದಿನಗಳ ಕಾಲ ನಡೆಯುವ ಈ ಹಬ್ಬವು ಲಕ್ಷಾಂತರ ಜನರನ್ನು ಆಕರ್ಷಿಸುತ್ತದೆ. ಈ ಹಬ್ಬದ ಸಮಯದಲ್ಲಿ ವೇಷಭೂಷಣಗಳನ್ನು ಧರಿಸಿದ ಆನೆಗಳು, ನೃತ್ಯ ಪ್ರದರ್ಶನಗಳು ಮತ್ತು ಭವ್ಯವಾದ ಮೆರವಣಿಗೆಯು ಭಾರತದ ಅತ್ಯಂತ ವರ್ಣರಂಜಿತ ಸ್ಥಳಗಳಲ್ಲಿ ಒಂದಾಗಿದೆ.

ಪಾಂಗೋಂಗ್ ಸರೋವರ

ಪಾಂಗೋಂಗ್ ಸರೋವರ

ಎತ್ತರದ ಸರೋವರಗಳ ನೀಲಿ ಛಾಯೆಯು ವಿಶಿಷ್ಟವಾಗಿದೆ ಮತ್ತು ಅತ್ಯಂತ ಆಕರ್ಷಕವಾಗಿದೆ. ಪ್ಯಾಂಗೊಂಗ್ ತ್ಸೋ ಸರೋವರವು ಲಡಾಖ್‌ನಲ್ಲಿರುವ ವಿವರಿಸಲಾಗದ

ಸೌಂದರ್ಯವಾಗಿದೆ.ಸೂರ್ಯಾಸ್ತವನ್ನು ವೀಕ್ಷಿಸಿಕಿತ್ತಳೆಬಣ್ಣ ಮತ್ತು ಹಳದಿ ಮಿಶ್ರಿತ ಸೂರ್ಯನು ವಿಸ್ತಾರವಾದ ನೀಲಿ ಆಕಾಶದಿಂದ ಮರೆಯಾಗುವುದನ್ನು ನೋಡುವುದೇ ಒಂದು ಮಾಂತ್ರಿಕ ನೋಟವನ್ನು ನೀಡುತ್ತದೆ. ಭಾರತದಲ್ಲಿ ಹಲವಾರು ಅದ್ಭುತವಾದ ಸೂರ್ಯಾಸ್ತದ ಸ್ಥಳಗಳಿವೆ ಮತ್ತು ಆಗುಂಬೆಯಲ್ಲಿನ ಸೂರ್ಯಾಸ್ತಮಾನವನ್ನು ವೀಕ್ಷಿಸುವುದು ಪ್ರಸಿದ್ಧವಾದವುಗಳಲ್ಲಿ ಒಂದಾಗಿದೆ. ಸೂರ್ಯಾಸ್ತದ ನೋಟವು ನಿಸ್ಸಂದೇಹವಾಗಿ ಅತ್ಯಂತ ವರ್ಣರಂಜಿತ ದೃಶ್ಯವಾಗಿದೆ.

ಜೈಪುರ

ಜೈಪುರ

ಸೂರ್ಯಾಸ್ತವನ್ನು ವೀಕ್ಷಿಸಿ

ಕಿತ್ತಳೆಬಣ್ಣ ಮತ್ತು ಹಳದಿ ಮಿಶ್ರಿತ ಸೂರ್ಯನು ವಿಸ್ತಾರವಾದ ನೀಲಿ ಆಕಾಶದಿಂದ ಮರೆಯಾಗುವುದನ್ನು ನೋಡುವುದೇ ಒಂದು ಮಾಂತ್ರಿಕ ನೋಟವನ್ನು ನೀಡುತ್ತದೆ. ಭಾರತದಲ್ಲಿ ಹಲವಾರು ಅದ್ಭುತವಾದ ಸೂರ್ಯಾಸ್ತದ ಸ್ಥಳಗಳಿವೆ ಮತ್ತು ಆಗುಂಬೆಯಲ್ಲಿನ ಸೂರ್ಯಾಸ್ತಮಾನವನ್ನು ವೀಕ್ಷಿಸುವುದು ಪ್ರಸಿದ್ಧವಾದವುಗಳಲ್ಲಿ ಒಂದಾಗಿದೆ. ಸೂರ್ಯಾಸ್ತದ ನೋಟವು ನಿಸ್ಸಂದೇಹವಾಗಿ ಅತ್ಯಂತ ವರ್ಣರಂಜಿತ ದೃಶ್ಯವಾಗಿದೆ.

ಮುದನೀಡುವ ಎಮರಾಲ್ಡ್ ಹಸಿರು

ಪ್ರಕೃತಿಯ ಸೌಂದರ್ಯಕ್ಕೆ ಸರಿಸಾಟಿಯಾಗಿರುವುದು ಅಥವಾ ಇದಕ್ಕೆ ಸ್ಪರ್ಧೆ ಇಲ್ಲ. ಮುನ್ನಾರ್‌ನಲ್ಲಿನ ಪರ್ವತ ಇಳಿಜಾರುಗಳನ್ನು ಆವರಿಸಿರುವ ಟೀ ಎಸ್ಟೇಟ್‌ಗಳ ನೋಟವು ತುಂಬಾ ಹಿತವಾಗಿದ್ದು, ಖಂಡಿತವಾಗಿಯೂ ವರ್ಣಮಯವಾಗಿದೆ!ಗುಲಾಬಿ ಬಣ್ಣದ ಒಂದು ನೋಟ

ಜೈಪುರದ ವೈಮಾನಿಕ ನೋಟವು 'ಗುಲಾಬಿ' ಬಣ್ಣದ ನಗರದ ಪ್ರಮುಖ ಭಾಗವನ್ನು ರೂಪಿಸುತ್ತದೆ ಎಂದು ತೋರಿಸುತ್ತದೆ. ಆದ್ದರಿಂದ, ಇದನ್ನು 'ಪಿಂಕ್ ಸಿಟಿ' ಎಂದು ಜನಪ್ರಿಯವಾಗಿ ಕರೆಯಲಾಗುತ್ತದೆ. ಖಂಡಿತವಾಗಿ ಇದು ಆಸಕ್ತಿದಾಯಕ ವಿಷಯವೇ ಸರಿ ಅಲ್ಲವೆ?

ಲಾಲ್ಬಾಗ್

ಲಾಲ್ಬಾಗ್

ಹೂವುಗಳ ಪ್ರದರ್ಶನ

ಲಾಲ್ ಬಾಗ್ ಬೆಂಗಳೂರಿನ ಒಂದು ಪ್ರಸಿದ್ದ ಹೂವುಗಳ ಉದ್ಯಾನವನವಾಗಿದೆ. ಇದು ವರ್ಷದಲ್ಲಿ ಎರಡು ಬಾರಿ ನಡೆಸಲಾಗುವ ಹೂವುಗಳ ಪ್ರದರ್ಶನವು ಪ್ರಸಿದ್ದವಾಗಿದೆ. ವಿವಿಧ ವಾಸ್ತುಶೈಲಿಗಳ ಸುಂದರವಾದ ಪ್ರತಿಕೃತಿಗಳನ್ನು ವಿವಿಧ ಹೂವುಗಳಿಂದ ಮಾಡಲಾಗಿದೆ. ಆ ಸಮಯದಲ್ಲಿ ಬೆಂಗಳೂರಿಗೆ ಬಂದರೆ ಈ ಕಾರ್ಯಕ್ರಮಕ್ಕೆ ಭೇಟಿ ನೀಡಲೇಬೇಕು.

ಕೇಸರಿ ಪಟ್ಟಣ

ಕೇಸರಿ ಭಾರತದ ದುಬಾರಿ ಮಸಾಲೆಗಳಲ್ಲಿ ಒಂದಾಗಿದೆ. ಇದು ವಿಶಿಷ್ಟವಾದ ಬಣ್ಣ ಮತ್ತು ರುಚಿ ಭಾರತೀಯ ಭಕ್ಷ್ಯಗಳಲ್ಲಿ ಒಂದು ಅಪರೂಪದ ನೆಲೆಯಾಗಿದೆ. ಪಾಂಪೋರ್ ಕೇಸರಿ ತೋಟಗಳಿಗೆ ಜನಪ್ರಿಯವಾಗಿದೆ ಮತ್ತು ಆದ್ದರಿಂದ ಇದನ್ನು 'ಕಾಶ್ಮೀರದ ಕೇಸರಿ ಪಟ್ಟಣ' ಎಂದು ಕರೆಯಲಾಗುತ್ತದೆ. ಇದು ಖಂಡಿತವಾಗಿಯೂ ಭಾರತದ ವರ್ಣರಂಜಿತ ಸ್ಥಳಗಳಲ್ಲಿ ಒಂದಾಗಿದೆ.

ಜಾನಪದ ಕಲಾ ಮೆರವಣಿಗೆ

ಕೇರಳದ ಜಾನಪದ ಕಲಾ ಪ್ರಕಾರಗಳ ರೋಮಾಂಚಕ ಮತ್ತು ಹೊಳೆಯುವ ವೇಷಭೂಷಣಗಳನ್ನು ನೋಡಿ ನಿಮಗೆ ಆಶ್ಚರ್ಯವಾಗುತ್ತದೆ. ವಿವಿಧ ಜಾನಪದ ಕಲಾ ಪ್ರಕಾರಗಳ ಮೆರವಣಿಗೆಯು ನಡೆಯುವ ಓಣಂ ಒಂದು ಸಮಯದಲ್ಲಿ. ಸಹಜವಾಗಿಯೂ, ಇಲ್ಲಿ ನಡೆಯುವ ಇದೇ ರೀತಿಯ ಘಟನೆಗಳಿಗೆ ಸಾಕ್ಷಿಯಾಗುವ ಅನೇಕ ಹಬ್ಬಗಳಿವೆ ಆದರೆ ಓಣಂ ಪ್ರಸಿದ್ಧವಾಗಿದೆ.

ಇಟಾಲಿಯನ್ ಭಾರತೀಯ

ಲಾವಾಸವು ಪುಣೆಯ ಸಮೀಪವಿರುವ ಒಂದು ಹೊಸ ನಗರ ಮತ್ತು ಗಿರಿಧಾಮವಾಗಿದೆ. ಇದು ಇಟಾಲಿಯನ್ ಪಟ್ಟಣವಾದ ಪೋರ್ಟೊಫಿನೊ ಮಾದರಿಯಲ್ಲಿದೆ. ಆಸಕ್ತಿದಾಯಕ ಮೂಲಸೌಕರ್ಯ ಮತ್ತು ರೋಮಾಂಚಕ ವಾತಾವರಣದೊಂದಿಗೆ ಲಾವಾಸಾ ನಗರವು ಭೇಟಿ ನೀಡಲೇಬೇಕು.

ಅದೃಷ್ಟವನ್ನು ತರುವ ಕೆಂಪು

ದುರ್ಗಾ ಪೂಜಾ ಅಥವಾ ದುರ್ಗೋತ್ಸವದ ಸಮಯದಲ್ಲಿ ಕೋಲ್ಕತ್ತದ ನೋಟವು ನೋಡಲು ಯೋಗ್ಯವದುದಾಗಿದ್ದು ಈ ಸಮಯದಲ್ಲಿ ಈ ಸ್ಥಳಕ್ಕೆ ಭೇಟಿ ನೀಡಬೇಕು. ಈ ಸಮಯದಲ್ಲಿ ಸುಂದರವಾದ ದುರ್ಗಾದೇವಿಯ ಪ್ರತಿಮೆಗಳನ್ನು ಪೆಂಡಾಲ್ ಗಳಲ್ಲಿ ಇರಿಸಲಾಗುತ್ತದೆ. ಹಾಗೂ ಎಲ್ಲಾ ಕಡೆ ಹಾಡುಗಳು ನೃತ್ಯಗಳದ್ದೇ ಸದ್ದು ಗದ್ದಲವು ಕೇಳಿಬರುತ್ತದೆ. ಮದುವೆಯಾದ ಸ್ತ್ರೀಯರು 'ಸಿಂಧೂರ್ ಕೇಲಾ' (ಒಬ್ಬರಿಗೊಬ್ಬರು ಕುಂಕುಮ ಹಚ್ಚುವುದರಲ್ಲಿ)ದಲ್ಲಿ ನಿರತರಾಗಿರುತ್ತಾರೆ. ಮಹಿಳೆಯರು ಉಡುವ ಕೆಂಪು ಮತ್ತು ಬಿಳಿ ಸೀರೆ (ಸಾಂಪ್ರದಾಯಿಕ ಬಂಗಾಳಿ ಸೀರೆ) ಕೂಡ ನಿಮ್ಮನ್ನು ಮೋಡಿ ಮಾಡುತ್ತದೆ.

ಗೊಂಬೆಗಳ ನಗರ

ಗೊಂಬೆಗಳು ಖಂಡಿತವಾಗಿಯೂ ಅತ್ಯಂತ ವರ್ಣರಂಜಿತ ವಸ್ತುಗಳು. ಕರ್ನಾಟಕದ ಚನ್ನಪಟ್ಟಣವು ಮರದ ಆಟಿಕೆಗಳನ್ನು ತಯಾರಿಸುವುದಕ್ಕಾಗಿ ವಿಶ್ವವಿಖ್ಯಾತಿಯನ್ನು ಪಡೆದಿದೆ. ಇದು ಸಾಂಪ್ರದಾಯಿಕ ಕರಕುಶಲವಾಗಿದ್ದು, ದೇಶದಾದ್ಯಂತ ಅನೇಕರನ್ನು ಆಕರ್ಷಿಸಿದೆ. ಆದ್ದರಿಂದ, 'ಗೊಂಬೆಗಳ ಊರು' (ಆಟಿಕೆ ಪಟ್ಟಣ) ಎಂದು ಹೆಸರನ್ನು ಪಡೆದಿದೆ. ಇಲ್ಲಿಗೆ ಭೇಟಿ ಕೊಡುವುದು ಖಂಡಿತ, ವರ್ಣರಂಜಿತ ಅನುಭವವಾಗಿರುತ್ತದೆ.

ಚೂಡಿ ಬಜ಼ಾರ್

ಲಾಡ್ ಬಜಾರ್ ಅಥವಾ ಚೂಡಿ ಬಜಾರ್ ಹೈದರಾಬಾದ್‌ನಲ್ಲಿರುವ ಬಳೆ ಮಾರುಕಟ್ಟೆಯಾಗಿದೆ. ಇದು ಹಳೆಯ ಮಾರುಕಟ್ಟೆಯಾಗಿದ್ದು, ಇಲ್ಲಿ ನೀವು ವಿವಿಧ ಬಗೆಯ ಬಳೆಗಳು ಮತ್ತು ಕೃತಕ ಆಭರಣಗಳನ್ನು ಕಾಣಬಹುದು. ಇಡೀ ಪ್ರದೇಶವು ಹೊಳೆಯುವ ಬಳೆಗಳಿಂದ ಸುಂದರವಾಗಿ ಹಾಗೂ ಉತ್ಸಾಹಭರಿತವಾಗಿ ಕಾಣುತ್ತದೆ.

ರೋಮಾಂಚನಗೊಳಿಸುವ ನದಿಯ ಘಾಟ್ ಗಳು

ವಾರಣಾಸಿಯಲ್ಲಿರುವ ಗಂಗಾ ನದಿ ಘಾಟ್‌ಗಳು ಸುಂದರವಾಗಿದ್ದು ಹೆಸರುವಾಸಿಯಾಗಿದೆ. ಫೋಟೋಗ್ರಫಿ ಪ್ರವಾಸಕ್ಕೆ ಹೋಗಲು ಇದು ಅತ್ಯುತ್ತಮ ಸ್ಥಳಗಳಲ್ಲಿ ಒಂದಾಗಿದೆ. ಧುಮ್ಮಿಕ್ಕುವ ಗಂಗಾ ನದಿ ಮತ್ತು ಅದರ ಪಕ್ಕದಲ್ಲಿರುವ ನಗರ ನೋಡಲು ಕ್ರಿಯಾತ್ಮಕವಾಗಿದೆ.

ಗೋಲ್ಡನ್ ಟೆಂಪಲ್

ಗೋಲ್ಡನ್ ಟೆಂಪಲ್

ಗೋಲ್ಡನ್ ಟೆಂಪಲ್

ಬೈಲಕುಪ್ಪೆಯಲ್ಲಿರುವ ಗೋಲ್ಡನ್ ಟೆಂಪಲ್ ವರ್ಣರಂಜಿತ ಮಠಗಳಲ್ಲಿ ಒಂದಾಗಿದೆ. ಸುಂದರವಾದ ವಾತಾವರಣವು ಈ ದೇವಾಲಯದ ಸಂಕೀರ್ಣಕ್ಕೆ ನಿಮ್ಮನ್ನು ಆಹ್ವಾನಿಸುತ್ತದೆ.

ರಾಜಸ್ಥಾನದ ಜೋಧಪುರದಲ್ಲಿ ನೀಲಿ ಕಟ್ಟಡಗಳು, ಉತ್ತರಾಖಂಡದ ಹೂವುಗಳ ಕಣಿವೆ ಇತ್ಯಾದಿಗಳ ನೋಟವು ಭಾರತವನ್ನು ಇನ್ನಷ್ಟು ವರ್ಣರಂಜಿತವನ್ನಾಗಿ ಮಾಡುತ್ತದೆ.

ಮೈಸೂರು, ಕರ್ನಾಟಕದ ಪ್ರಸಿದ್ಧ ಹಬ್ಬಗಳಾದ ದಸರಾವನ್ನು ಎಂದಿಗೂ ತಪ್ಪಿಸಬಾರದು. ಅವು ನಮ್ಮ ದೇಶದ ಶ್ರೀಮಂತ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಪ್ರದರ್ಶಿಸುತ್ತವೆ.

ಇಂತಹ ಭಾರತದ ವರ್ಣರಂಜಿತ ಸ್ಥಳಗಳನ್ನು ವೀಕ್ಷಿಸಲು ಒಂದು ಪ್ರವಾಸವು ಅತ್ಯಗತ್ಯವಾಗಿರುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X