Search
  • Follow NativePlanet
Share

ಲಡಾಖ್‌: ಕಣ್ಮನ ಸೆಳೆಯುವ ಸ್ವರ್ಗ ಸದೃಶ ತಾಣ

31

ಇಂಡಸ್‌ ನದಿ ದಂಡೆಯ ಮೇಲಿರುವ ಅತ್ಯಂತ ಸುಂದರ ತಾಣ ಲಡಾಖ್‌.  ಜಮ್ಮು ಮತ್ತು ಕಾಶ್ಮೀರ ರಾಜ್ಯದ ಜನಪ್ರಿಯ ಹಾಗೂ ಗುರುತಾದ ಪ್ರವಾಸಿ ತಾಣ. ಇದು ಲಡಾಖ್‌ ಎಂಬ ಹೆಸರಿನಿಂದ ಮಾತ್ರವಲ್ಲ, 'ಕೊನೆಯ ಸಂಗ್ರೀಲಾ', 'ಕಿರು ಟಿಬೇಟ್‌', 'ಚಂದ್ರನ ಭೂಮಿ' ಹಾಗೂ 'ಚಂದ್ರನ ತುಂಡು' ಎಂಬಿತ್ಯಾದಿ ಹೆಸರುಗಳಿಂದ ಜನಪ್ರಿಯವಾಗಿದೆ. ರಾಜಧಾನಿಯಾದ ಲೇಹ್‌ ಹೊರತುಪಡಿಸಿ ಇಲ್ಲಿ ಇನ್ನೂ ಅನೇಕ ನೋಡಬಲ್ಲ ತಾಣಗಳಿವೆ. ಅವುಗಳಲ್ಲಿ ಅಲಚಿ, ನೂಬ್ರಾ ಕಣಿವೆ, ಹೇಮಿಸ್‌, ಲಮ್ಯಾರು, ಜನ್ಸ್‌ಕರ್‌ ಕಣಿವೆ, ಕರಂಗಲಿ, ಪಂಗೊಂಗ್ ಸೊ, ಸೋ ಕಾರ್‌ ಹಾಗೂ ಸೊ ಮೋರಿರಿ ಮುಖ್ಯವಾದವು. ಆಕರ್ಷಕ ಕೆರೆಗಳು, ಕಣ್ಮನ ಸೆಳೆಯುವ ಪರ್ವತ, ಆಕರ್ಷಕ ಭೂಪ್ರದೇಶ ಹಾಗೂ ಬೆಟ್ಟದ ಆಕರ್ಷಕ ತಪ್ಪಲುಗಳು ಇಲ್ಲಿನ ಜೀವಂತಿಕೆಯನ್ನು ಎತ್ತಿ ಹಿಡಿದಿವೆ. ಇಲ್ಲಿ ಮಾತನಾಡುವ ಭಾಷೆಗಳೆಂದರೆ ಲಡಾಖಿ, ಪುರೀಗ್‌, ಟಿಬೇಟಿಯನ್‌, ಹಿಂದಿ ಹಾಗೂ ಇಂಗ್ಲಿಷ್‌.

ಸಮುದ್ರ ಮಟ್ಟದಿಂದ ಲಡಾಖ್‌ ಇರುವುದು 3500 ಮೀಟರ್‌ ಎತ್ತರದಲ್ಲಿ. ಹಿಮಾಲಯ ಹಾಗೂ ಕಾರಾಕೋರಂ ಎಂಬೆರಡು ಪರ್ವತ ಶ್ರೇಣಿಗಳ ನಡುವೆ ಇದಿದೆ. ಅಲ್ಲದೇ ಹೆಚ್ಚುವರಿ ಆಕರ್ಷಣೆಯಾಗಿ ಜನ್ಸಕರ್‌ ಹಾಗೂ ಲಡಾಖ್‌ ಕಣಿವೆಗಳು ಇದನ್ನು ಸುತ್ತಿವರಿದಿದ್ದು ಇದನ್ನು ಇನ್ನಷ್ಟು ಆಕರ್ಷಕವಾಗಿಸಿದೆ. ನಂಬಿಕೆಗಳ ಪ್ರಕಾರ, ಲಡಾಖ್‌ ದೊಡ್ಡ ಕೆರೆಯೊಂದರ ಮುಳುಗಿದ ಭಾಗವಾಗಿದೆ. ಇದರಿಂದ ಇದು ವರ್ಷದ ಎಲ್ಲಾ ದಿನ ಭೌಗೋಲಿಕ ಬದಲಾವಣೆಯನ್ನು ತೋರಿಸುತ್ತದೆ. ಇದರಿಂದಾಗಿ ಇದು ಲಡಾಖ್‌ ಒಂದು ಕಣಿವೆ ಪ್ರದೇಶವಾಗಿದೆ.

ಇಂದು ಜಮ್ಮು ಮತ್ತು ಕಾಶ್ಮೀರ ರಾಜ್ಯದ ಭಾಗವಾಗಿರುವ ಲಡಾಖ್‌, ಹಿಂದೆ ಅಂದರೆ 10ನೇ ಶತಮಾನದಲ್ಲಿ ಟಿಬೇಟ್‌ ಅರಸರ ಅಧಿನದಲ್ಲಿತ್ತು. ಸೆಂಗ್ಯೇನಗ್ಯಾಲ ನೇತೃತ್ವದಲ್ಲಿ ಹಿಮಾಲಯ ರಾಜ್ಯಾಡಳಿತವು 17ನೇ ಶತಮಾನದಲ್ಲಿ ಈ ಸ್ಥಳದ ಕೊನೆಯವರೆಗೂ ತಲುಪಿತ್ತು. 18ನೇ ಶತಮಾನದಲ್ಲಿ ಲಡಾಖ್‌ ಹಾಗೂ ಬಲ್ತಿಸ್ತಾನ್‌ಗಳು ಜಮ್ಮು ಮತ್ತು ಕಾಶ್ಮೀರ ವ್ಯಾಪ್ತಿಯ ಅಡಿ ಬಂದವು. 1947ರಲ್ಲಿ ಭಾರತವನ್ನು ವಿಭಾಗಿಸಿದ ಸಂದರ್ಭದಲ್ಲಿ ಬಲ್ತಿಸ್ತಾನವು ಪಾಕಿಸ್ತಾನಕ್ಕೆ ಸೇರ್ಪಡೆಯಾಯಿತು.

ಈ ಭಾಗದಲ್ಲಿ ಬೌದ್ಧ ಧರ್ಮವು ಅತ್ಯಂತ ಪ್ರಭಾವಿಯಾಗಿದ್ದು, ತನ್ನ ಪ್ರಭುತ್ವ ಸಾಧಿಸಿದೆ. ಆಶ್ರಮ ಅಥವಾ ಗೋಂಪ್‌ಗಳು ಇಲ್ಲಿ ಹೆಚ್ಚು ಜನರನ್ನು ಆಕರ್ಷಿಸುವ ತಾಣಗಳಾಗಿವೆ. ಲಡಾಖ್‌ನ ಪ್ರಮುಖ ಗಮನ ಸೆಳೆಯುವ ಕೇಂದ್ರಗಳೂ ಇವೆ ಆಗಿವೆ. ಹೇಮಿಸ್‌ ಆಶ್ರಮ, ಸಂಕರ ಗೋಂಪಾ, ಮಾಥೂ ಆಶ್ರಮ, ಶೇ ಗೋಂಪಾ, ಸ್ಪಿತುಕ್‌ ಆಶ್ರಮ ಹಾಗೂ ಸತಂಕ ಆಶ್ರಮಗಳು ಇಲ್ಲಿನ ಅತ್ಯಂತ ಪ್ರಸಿದ್ಧ ಹಾಗೂ ಗುರುತಾದ ಧಾರ್ಮಿಕ ಕೇಂದ್ರಗಳು. ಇವಲ್ಲದೇ ತಿಕ್ಸೆ ಆಶ್ರಮ ಹಾಗೂ ತೆಸ್ಮೋ ಆಶ್ರಮಗಳು ಕೂಡ ಭೇಟಿಗೆ ಯೋಗ್ಯವಾದ ತಾಣಗಳು.

ಉತ್ಸವಗಳಲ್ಲಿ ಪ್ರಮುಖವಾಗಿ ಗಾಲ್ಡನ್‌ ನಮ್ಚೋಟ್‌, ಬುದ್ಧ ಪೂರ್ಣಿಮೆ, ದೋಸ್‌ಮೋಚೇ ಹಾಗೂ ಲೋಸಾರ್‌ಗಳು ಲಡಾಖ್‌ನಾದ್ಯಂತ ಅದ್ದೂರಿಯಾಗಿ ಆಚರಣೆಯಾಗುತ್ತವೆ. ಈ ಸಮಯದಲ್ಲಿ ಅಪಾರ ಸಂಖ್ಯೆಯಲ್ಲಿ ಪ್ರವಾಸಿಗರೂ ಇಲ್ಲಿ ಸೇರುತ್ತಾರೆ. ದೋಸ್‌ಮೋಚೇ ಉತ್ಸವದಲ್ಲಿ ನೃತ್ಯ, ಪ್ರಾರ್ಥನೆ ಹಾಗೂ ಪ್ರದರ್ಶನ ಸೇರಿರುತ್ತದೆ. ಈ ಉತ್ಸವ ಇಲ್ಲಿನ ನಾಗರಿಕರಲ್ಲಿ ಹೊಸ ಉತ್ಸಾಹ ಚಿಮ್ಮಿಸುತ್ತದೆ. ಎರಡು ದಿನಗಳ ಕಾಲ ಈ ಆಚರಣೆ ನಡೆಯುತ್ತದೆ. ಟಿಬೇಟಿಯನ್‌ ಬೌದ್ಧ ಧರ್ಮೀಯರ ಪಾಲಿಗೆ ಇದೊಂದು ವಿಶೇಷ ಸಮಾರಂಭ. ಸಖಾ ದವಾ ಆಚರಣೆಯು ಗೌತಮ ಬುದ್ಧ ಹುಟ್ಟಿದ ದಿನದ ಸಂಭ್ರಮಕ್ಕೆ ಕೈಗೊಳ್ಳುವ ಉತ್ಸವವಾಗಿದೆ. ಅಲ್ಲದೇ ಬುದ್ಧನ ಸಾವಿನ ದಿನವೂ ಇದೇ ಆಗಿದೆ. ಟಿಬೇಟಿಯನ್‌ ಕ್ಯಾಲೆಂಡರ್‌ನ ನಾಲ್ಕನೇ ತಿಂಗಳ ಹಬ್ಬ ಇದಾಗಿದ್ದು, ಮೇ ಅಥವಾ ಜೂನ್‌ ತಿಂಗಳಲ್ಲಿ ನಡೆಯುತ್ತದೆ. ಇಡೀ ತಿಂಗಳು ಈ ಆಚರಣೆ ಅಲ್ಲಲ್ಲಿ ನಡೆಯುತ್ತಲೇ ಇರುತ್ತದೆ.

ಪ್ರವಾಸಿಗರು ಇಲ್ಲಿ ಓಡಾಡಲು ಬಾಡಿಗೆ ಕಾರು ಅಥವಾ ಬೈಕ್‌ ಪಡೆಯಬಹುದು. ಸಾಮಾನ್ಯವಾಗಿ ಪ್ರವಾಸಿಗರು ಇಲ್ಲಿಗೆ ಸ್ವಂತ ವಾಹನದಲ್ಲಿ ಆಗಮಿಸುತ್ತಾರೆ. ಇದು ಸಂಚಾರಕ್ಕೂ ಸರಳ. ಪ್ರದೇಶದಲ್ಲಿ ಸಂಚಾರ ಸಾಕಷ್ಟು ದುಸ್ತರವಾಗಿರುವುದರಿಂದ ವಾಹನದೊಂದಿಗೆ ಬರುವವರು ಜತೆಗೆ ಅಗತ್ಯ ಬಿಡಿಭಾಗವನ್ನೂ ತಂದುಕೊಳ್ಳುವುದು ಒಳಿತು ಎನ್ನುವ ಸಲಹೆ ನೀಡಲಾಗುತ್ತದೆ. ತುರ್ತು ಸಂದರ್ಭದಲ್ಲಿ ಇದು ಸಹಾಯಕ್ಕೆ ಆಗುತ್ತದೆ. ಇಲ್ಲಿರುವ ಸಾಕಷ್ಟು ಹೋಟೆಲ್‌ಗಳು, ರೆಸ್ಟೊರೆಂಟ್‌ಗಳು ತುಪ್ಕಾಸ್‌ ಅಥವಾ ಸೂಪ್‌ ನೂಡಲ್ಸ್‌ ಹಾಗೂ ಮೋಮೊಸ್‌ ಅಥವಾ ಡುಪ್ಲಿಂಗ್‌ಗಳನ್ನು ಆಹಾರ ರೂಪದಲ್ಲಿ ನೀಡುತ್ತವೆ. ಇದು ಈ ಭಾಗದ ಜನಪ್ರಿಯ ತಿಂಡಿ ಕೂಡ.

ಪ್ರವಾಸಿಗರು ಲಡಾಖ್‌ಗೆ ವರ್ಷದ ಯಾವುದೇ ಸಮಯದಲ್ಲಿಯೂ ಬರಬಹುದಾಗಿದೆ. ಆದರೆ ಉತ್ತಮ ಸಮಯ, ಮೇ ನಿಂದ ಸೆಪ್ಟೆಂಬರ್‌ ನಡುವಿನ ಅವಧಿ. ಈ ಸಂದರ್ಭದಲ್ಲಿ ಇಲ್ಲಿನ ವಾತಾವರಣವು ಆಹ್ಲಾದಮಯವಾಗಿರುತ್ತದೆ. ತಾಪಮಾನ ಕೂಡ 33 ಡಿಗ್ರಿ ಸೆಲ್ಶಿಯಸ್‌ಗಿಂತ ಹೆಚ್ಚಿರುವುದಿಲ್ಲ.

ಲಡಾಖ್ ಪ್ರಸಿದ್ಧವಾಗಿದೆ

ಲಡಾಖ್ ಹವಾಮಾನ

ಉತ್ತಮ ಸಮಯ ಲಡಾಖ್

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಲಡಾಖ್

  • ರಸ್ತೆಯ ಮೂಲಕ
    ಜಮ್ಮು ಮತ್ತು ಶ್ರೀನಗರ ಮಾರ್ಗ ಲಡಾಖ್‌ ತಲುಪಲು ಸೂಕ್ತ ಮಾರ್ಗವಾಗಿದೆ. ಮನಾಲಿಯಿಂದ ಲಡಾಖ್‌ಗೆ ರೋಹತಂಗ್‌ ಪಾಸ್‌ ಮೂಲಕವೂ ಬರಬಹುದು. ಆದರೆ ಈ ಮಾರ್ಗ ಜುಲೈನಿಂದ ಸೆಪ್ಟೆಂಬರ್‌ ನಡುವೆ ಮಾತ್ರ ತೆರೆದಿರುತ್ತದೆ. ಇನ್ನು ಶ್ರೀನಗರದಿಂದ ಲಡಾಖ್‌ಗೆ ಜೋ ಲೀಲಾ ಪಾಸ್‌ ಮೂಲಕವೂ ಬರಬಹುದು. ಇದು ಜೂನ್‌ನಿಂದ ಅಕ್ಟೋಬರ್‌ ನಡುವಿನ ಅವಧಿಯಲ್ಲಿ ಪ್ರವೇಶ ಮುಕ್ತವಾಗಿರುತ್ತದೆ. ಈ ಎರಡೂ ಮಾರ್ಗಗಳು ಮೂರು ನಗರಗಳನ್ನು ಸಂಪರ್ಕಿಸುತ್ತವೆ. ಜಮ್ಮು ಹಾಗೂ ಕಾಶ್ಮೀರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಅಥವಾ ಜೆ&ಕೆಎಸ್‌ಆರ್‌ಟಿಸಿ ಹಾಗೂ ಹಿಮಾಚಲ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಅಥವಾ ಎಚ್‌ಆರ್‌ಟಿಸಿ ಈ ಮಾರ್ಗವಾಗಿ ಬಸ್‌ ಸೌಲಭ್ಯಗಳನ್ನು ಒದಗಿಸಿದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಜಮ್ಮುವಿನ ತಾವಿ ರೈಲು ನಿಲ್ದಾಣ ಲಡಾಖ್‌ಗೆ ಅತ್ಯಂತ ಸಮೀಪದ ನಿಲ್ದಾಣವಾಗಿದೆ. ಇದು ಲಡಾಖ್‌ನಿಂದ 680 ಕಿ.ಮೀ. ದೂರದಲ್ಲಿದೆ. ಜಮ್ಮು ರೈಲು ನಿಲ್ದಾಣ ರಾಷ್ಟ್ರದ ಇತರೆ ರಾಜ್ಯದ ಪ್ರಮುಖ ನಗರಗಳಾದ ದೆಹಲಿ, ಮುಂಬಯಿ, ಪುಣೆ, ಚೆನ್ನೈ ಸೇರಿದಂತೆ ಹಲವು ಕಡೆಗಳಿಂದ ಉತ್ತಮ ಸಂಪರ್ಕ ಹೊಂದಿದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಲಡಾಖ್‌ ವಿಮಾನ ನಿಲ್ದಾಣ ಅತ್ಯಂತ ಸಮೀಪದ ಡೊಮೆಸ್ಟಿಕ್‌ ವಿಮಾನ ನಿಲ್ದಾಣವಾಗಿದೆ. ಇದು ರಾಜ್ಯದ ಪ್ರಮುಖ ನಗರಗಳಿಂದ ಉತ್ತಮ ಸಂಪರ್ಕ ಹೊಂದಿದೆ. ಇದನ್ನು ಹೊರತುಪಡಿಸಿದರೆ ಜಮ್ಮು ವಿಮಾನ ನಿಲ್ದಾಣವೂ ಪ್ರಮುಖ ನಿಲ್ದಾಣವಾಗಿದೆ. ದೆಹಲಿ, ಮುಂಬಯಿ, ಪುಣೆ, ಚೆನ್ನೈ ಹಾಗೂ ಇನ್ನಿತರ ಪ್ರಮುಖ ನಗರಗಳಿಂದ ವೈಮಾನಿಕ ಸಂಪರ್ಕವನ್ನು ಹೊಂದಿದೆ. ಇದಲ್ಲದೇ ವಿದೇಶಿ ಪ್ರಜೆಗಳಿಗೆ ಸಂಪರ್ಕಕ್ಕಾಗಿ ದಿಲ್ಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಇದ್ದೇ ಇದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat