Search
  • Follow NativePlanet
Share
» »ಎಲೆ ಮರೆಯ ಕಾಯಿಯಂತಿರುವ ಕಾಕತಿ ಸಿದ್ಧೇಶ್ವರ

ಎಲೆ ಮರೆಯ ಕಾಯಿಯಂತಿರುವ ಕಾಕತಿ ಸಿದ್ಧೇಶ್ವರ

By Vijay

ಕರ್ನಾಟಕದ ವೀರ ವನಿತೆಯರ ಪಟ್ಟಿ ಮಾಡುವಾಗ ರಾಣಿ ಚೆನ್ನಮ್ಮನ ಹೆಸರು ಹೇಳಲೇಬೇಕು. ತನ್ನ ಸಂಸ್ಥಾನ ಕಿತ್ತೂರಿನ ರಕ್ಷಣೆಯ ವಿಷಯ ಬಂದಾಗ ಯಾವ ಗಂಡಿಗೂ ಕಮ್ಮಿ ಇಲ್ಲದಂತೆ ವೀರಾವೇಶದಿಂದ ಹೋರಾಡಿದ ವೀರಾಗ್ರಣಿ ಚೆನ್ನಮ್ಮನ ಹುಟ್ಟೂರಾದ ಕಾಕತಿ ಎಂಬ ಗ್ರಾಮವು ತನ್ನಲ್ಲಿರುವ ಸಿದ್ಧೇಶ್ವರ ದೇವಸ್ಥಾನಕ್ಕೆ ಹೆಸರುವಾಸಿಯಾಗಿದೆ.

ವ್ಯಾಲಂಟೈನ್ ವಿಶೇಷ : ಹೋಟೆಲ್ ಬುಕ್ಕಿಂಗ್ ಮೇಲೆ 50%+30% ರಷ್ಟು ಕಡಿತ

ಕಾಕತಿ ಗ್ರಾಮವು ಬೆಳಗಾವಿ ಜಿಲ್ಲೆಯಲ್ಲಿದ್ದು ಬೆಳಗಾವಿ ನಗರ ಕೇಂದ್ರದಿಂದ ಸುಮಾರು ಆರು ಕಿ.ಮೀ ಗಳಷ್ಟು ದೂರದಲ್ಲಿ ಪುಣೆ - ಬೆಂಗಳೂರು ಹೆದ್ದಾರಿ (NH4) ಮೇಲೆ ಪುಣೆಗೆ ಹೊರಡುವ ದಿಕ್ಕಿನಲ್ಲಿದೆ. ವಿಶೇಷವೆಂದರೆ ಕಾಕತಿ ಗ್ರಾಮಕ್ಕೆ ತಲುಪುತ್ತಿದ್ದಂತೆ ರಾಷ್ಟ್ರೀಯ ಹೆದ್ದಾರಿಯ ಬಲಭಾಗದಲ್ಲೆ (ಪುಣೆಯತ್ತ ಸಾಗುವ ದಿಕ್ಕಿನಲ್ಲಿ) ಈ ದೇವಸ್ಥಾನವು ಕಣ್ಣಿಗೆ ಬೀಳುತ್ತದೆ.

ವಿಶೇಷ ಲೇಖನ : ಕರ್ನಾಟಕದ ಅತಿ ಪುರಾತನ ಶಿವನ ದೇವಸ್ಥಾನಗಳು

ಕಾಕತಿಗೆ ತಲುಪಲು ಹತ್ತಿರದ ಪ್ರಮುಖ ರೈಲು ನಿಲ್ದಾಣವೆಂದರೆ ಬೆಳಗಾವಿಯ ರೈಲು ನಿಲ್ದಾಣ. ಬೆಳಗಾವಿಯು ಕರ್ನಾಟಕದ ಎಲ್ಲ ಪ್ರಮುಖ ನಗರಗಳು ಹಾಗೂ ದೇಶದ ಇತರೆ ಪ್ರಮುಖ ನಗರಗಳೊಂದಿಗೆ ಉತ್ತಮ ರೈಲು ಹಾಗೂ ಬಸ್ಸುಗಳ ಸುಗಮವಾದ ಸಂಪರ್ಕ ಹೊಂದಿದೆ. ಬೆಳಗಾವಿಯಿಂದ ಕಾಕತಿಗೆ ತೆರಳಲು ನಗರದಿಂದ ಖಾಸಗಿ ಹಾಗೂ ಸರ್ಕಾರಿ ಬಸ್ಸುಗಳೆರಡೂ ಸುಲಭವಾಗಿ ದೊರೆಯುತ್ತದೆ. ಸ್ಥಳೀಯರ ನಂಬಿಕೆಯಂತೆ, ಇಲ್ಲಿರುವ ಬೆಟ್ಟದಲ್ಲಿ ಶಂಕರಾಚಾರ್ಯರು ವಿಶ್ರಮಿಸಿದ್ದುದರಿಂದ ಅಲ್ಲದೆ ಸಿದ್ಧೇಶ್ವರನ ಪ್ರಭಾವವಿರುವುದರಿಂದ ಇದೊಂದು ಜಾಗೃತ ಸ್ಥಳವಾಗಿದ್ದು ಭಕ್ತಿಯಿಂದ ಬೇಡುವವರ ಸಕಲ ಇಷ್ಟಾರ್ಥಗಳು ಪೂರ್ಣವಾಗುತ್ತವೆ.

ಕಾಕತಿ ಸಿದ್ಧೇಶ್ವರ:

ಕಾಕತಿ ಸಿದ್ಧೇಶ್ವರ:

ಕಾಕತಿ ಗ್ರಾಮ ಸಮೀಪಿಸುತ್ತಿದ್ದಂತೆ ರಾಷ್ಟ್ರೀಯ ಹೆದ್ದಾರಿಯಿಂದ ಎಡ ತಿರುವು ಪಡೆದು ಉಪರಸ್ತೆಯಲ್ಲಿ ಚಲಿಸುತ್ತ ಕಾಕತಿ ನಗರಕ್ಕೆ ಪ್ರವೇಶಿಸಿ ಈ ದೇವಸ್ಥಾನಕ್ಕೆ ತಲುಪಬಹುದು. ಹೆದ್ದಾರಿಯಲ್ಲೆ ದೇವಸ್ಥಾನದ ಗೋಪುರ ಕಾಣುವುದರಿಂದ ತಲುಪಲು ಯಾವ ಅಡಚಣೆಯೂ ಉಂಟಾಗುವುದಿಲ್ಲ. ಭಕ್ತರನ್ನು ಸ್ವಾಗತಿಸುವ ದೇವಸ್ಥಾನದ ಕಮಾನು ಹಾಗೂ ಮಹಾದ್ವಾರ.

ಕಾಕತಿ ಸಿದ್ಧೇಶ್ವರ:

ಕಾಕತಿ ಸಿದ್ಧೇಶ್ವರ:

ದೇವಸ್ಥಾನ ಆವರಣವು ವಿಶಾಲವಾದ ಸ್ಥಳವನ್ನು ಹೊಂದಿದ್ದು ಇತರೆ ನಾಲ್ಕು ಚಿಕ್ಕ ಅಥವಾ ಉಪ ದೇವಸ್ಥಾನಗಳನ್ನು ಹೊಂದಿದೆ. ಅಲ್ಲದೆ ಮುಖ್ಯ ದೇವಾಲಯದ ಎದುರು ಅವಶೇಷಾವಸ್ಥೆಯಲ್ಲಿದ್ದರೂ ಸಂರಕ್ಷಿಸಲ್ಪಟ್ಟ ಪುರಾತನ ದೇಗುಲವೊಂದನ್ನು ಕಾಣಬಹುದು.

ಕಾಕತಿ ಸಿದ್ಧೇಶ್ವರ:

ಕಾಕತಿ ಸಿದ್ಧೇಶ್ವರ:

ಪುರಾತನ ದೇಗುಲದಲ್ಲಿ ಕಂಡು ಬರುವ ಪುರಾತನ ಕೆತ್ತನೆಗಳು.

ಕಾಕತಿ ಸಿದ್ಧೇಶ್ವರ:

ಕಾಕತಿ ಸಿದ್ಧೇಶ್ವರ:

ಪುರಾತನ ದೇಗುಲದ ಮುಂಭಾಗದಲ್ಲಿರುವ ಕಾಮ ದಹನ ಕುಂಡ. ಇಲ್ಲಿ ವಾರ್ಷಿಕವಾಗಿ ಕಾಮದಹನ ಕ್ರಿಯೆಯನ್ನು ಸಂಪನ್ನ ಮಾಡಲಾಗುತ್ತದೆ.

ಕಾಕತಿ ಸಿದ್ಧೇಶ್ವರ:

ಕಾಕತಿ ಸಿದ್ಧೇಶ್ವರ:

ಪುರಾತನ ದೇಗುಲದ ಆವರಣದ ಸಾಕಷ್ಟು ಭಾಗ ಕಾಲದ ಹೊಡೆತಕ್ಕೆ ಸಿಕ್ಕಿ ನಶಿಸಿ ಹೋಗಿದ್ದರೂ ಅಳಿದುಳಿದ ಭಾಗವನ್ನು ಸುಂದರವಾಗಿ ನಿರ್ಮಾಣ ಮಾಡಿ ಸಂರಕ್ಷಿಸಲಾಗಿದೆ.

ಕಾಕತಿ ಸಿದ್ಧೇಶ್ವರ:

ಕಾಕತಿ ಸಿದ್ಧೇಶ್ವರ:

ದೇವಾಲಯ ಆವರಣದಲ್ಲಿ ಸಿದ್ಧೇಶ್ವರನ ಮುಖ್ಯ ದೇವಸ್ಥಾನವಲ್ಲದೆ ನಾಗದೇವತಾ, ವೀರಭದ್ರ, ಗಣೇಶ ಹಾಗೂ ಬನಶಂಕರಿ ದೇವಿಯ ಉಪ ದೇವಸ್ಥಾನಗಳನ್ನು ಕಾಣಬಹುದು.

ಕಾಕತಿ ಸಿದ್ಧೇಶ್ವರ:

ಕಾಕತಿ ಸಿದ್ಧೇಶ್ವರ:

ನಾಗ ದೇವತಾ ಮಂದಿರ. ಗ್ರಾಮದ ಸಾಕಷ್ಟು ಭಕ್ತಾದಿಗಳು ಅದರಲ್ಲೂ ನಾಗ ದೋಷ ಇತ್ಯಾದಿಗಳಲ್ಲಿ ನಂಬಿಕೆ ಇರುವಂತಹವರು ಈ ದೇವಸ್ಥಾನಕ್ಕೆ ನಡೆದುಕೊಳ್ಳುತ್ತಾರೆ.

ಕಾಕತಿ ಸಿದ್ಧೇಶ್ವರ:

ಕಾಕತಿ ಸಿದ್ಧೇಶ್ವರ:

ಶಿವನ ಅವತಾರ ಹಾಗೂ ಉಗ್ರ ಸ್ವರೂಪನಾದ ವೀರ ಭದ್ರನಿಗೆ ಮುಡಿಪಾದ ದೇಗುಲ.

ಕಾಕತಿ ಸಿದ್ಧೇಶ್ವರ:

ಕಾಕತಿ ಸಿದ್ಧೇಶ್ವರ:

ಸಕಲ ವಿಘ್ನ ವಿನಾಶಕ ಗಣೇಶನಿಗೆ ಮುಡಿಪಾದ ಮಂದಿರ.

ಕಾಕತಿ ಸಿದ್ಧೇಶ್ವರ:

ಕಾಕತಿ ಸಿದ್ಧೇಶ್ವರ:

ಸಾಮಾನ್ಯವಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಬನಶಂಕರಿ ದೇವಿಗೆ ನಡೆದುಕೊಳ್ಳುವವರ ಸಂಖ್ಯೆ ಅಪಾರ. ಹೀಗಾಗಿ ಸಾಕಷ್ಟು ಬನಶಂಕರಿ ದೇವಸ್ಥಾನಗಳನ್ನು ಈ ಭಾಗದಲ್ಲಿ ಕಾಣಬಹುದು. ಸಿದ್ಧೇಶ್ವರ ದೇವಸ್ಥಾನದ ಆವರಣದಲ್ಲಿರುವ ಬನಶಂಕರಿ ದೇವಿಗೆ ಮುಡಿಪಾದ ದೇವಸ್ಥಾನ.

ಕಾಕತಿ ಸಿದ್ಧೇಶ್ವರ:

ಕಾಕತಿ ಸಿದ್ಧೇಶ್ವರ:

ಸಿದ್ಧೇಶ್ವರ ಮುಖ್ಯ ದೇವಾಲಯದ ಒಳ ಹೊಕ್ಕಾಗ ಕಂಡು ಬರುವ ವಿಶಾಲವಾದ ಆವರಣ. ಆವರಣದ ಮಧ್ಯ ಭಾಗದಲ್ಲಿ ಪಲ್ಲಕ್ಕಿಯನ್ನು ಇಡಲಾಗಿದ್ದು ಅದರ ಮುಂದೆ ಗರ್ಭಗೃಹವಿದೆ. ಆವರಣದ ಎರಡು ಬದಿಗಳಲ್ಲಿ ಕುಳಿತುಕೊಳ್ಳಲು ಕಟ್ಟೆಯನ್ನು ಕಟ್ಟಲಾಗಿದ್ದು ಗೋಡೆಗಳ ಮೇಲೆ ಹಿಂದೂ ಧರ್ಮದ ಪ್ರಮುಖ ಸಂತ, ಗುರುಗಳ ಚಿತ್ರಗಳನ್ನು ಬಿಡಿಸಲಾಗಿದೆ.

ಕಾಕತಿ ಸಿದ್ಧೇಶ್ವರ:

ಕಾಕತಿ ಸಿದ್ಧೇಶ್ವರ:

ಗರ್ಭ ಗೃಹದ ಎದುರು ಬದಿಯಲ್ಲಿ ಅಂದರೆ ಸಿದ್ಧೇಶ್ವರನಿಗೆ ಎದುರಾಭಿಮುಖವಾಗಿ ಎರಡು ಬಸವಣ್ಣನ ವಿಗ್ರಗಳಿರುವುದು ವಿಶೇಷ. ಸಾಮಾನ್ಯವಾಗಿ ಎಲ್ಲೆಡೆ ಶಿವನಿಗೆ ಅಭಿಮುಖವಾಗಿ ಒಂದೆ ಬಸವಣ್ಣನ (ನಂದಿ) ವಿಗ್ರಹವಿರುವುದನ್ನು ಗಮನಿಸಿರುತ್ತೇವೆ.

ಕಾಕತಿ ಸಿದ್ಧೇಶ್ವರ:

ಕಾಕತಿ ಸಿದ್ಧೇಶ್ವರ:

ಈ ದೇವಾಲಯದ ಮತ್ತೊಂದು ವಿಶೇಷವೆಂದರೆ ಹನುಮನು ಪ್ರತಿಷ್ಠಾಪಿಸಲ್ಪಟ್ಟ ಸ್ಥಳ. ಸಾಮಾನ್ಯವಾಗಿ ದೇವಸ್ಥಾನಗಳ ಅಕ್ಕ ಪಕ್ಕದಲ್ಲೊ ಅಥವಾ ಎದುರಿನಲ್ಲೊ ಆಂಜನೇಯನ ವಿಗ್ರಹಗಳನ್ನು ಕಂಡಿರುತ್ತೇವೆ.

ಕಾಕತಿ ಸಿದ್ಧೇಶ್ವರ:

ಕಾಕತಿ ಸಿದ್ಧೇಶ್ವರ:

ಆದರೆ ಈ ಸಿದ್ಧೇಶ್ವರ ದೇವಸ್ಥಾನದ ಮುಖ್ಯ ವಿಗ್ರಹದ ಹಿಂಭಾಗದ ಗೋಡೆಯಲ್ಲಿ ಹನುಮನು ಪ್ರಶಾಂತವಾಗಿ ಪ್ರತಿಷ್ಠಾಪಿಸಲ್ಪಟ್ಟಿರುವುದು ವಿಶೇಷ.

ಕಾಕತಿ ಸಿದ್ಧೇಶ್ವರ:

ಕಾಕತಿ ಸಿದ್ಧೇಶ್ವರ:

ಇನ್ನುಳಿದಂತೆ ಸಿದ್ಧೇಶ್ವರ ದೇವಸ್ಥಾನ ಪ್ರಾಂಗಣದ ಪಕ್ಕದಲ್ಲೆ ಒಂದು ಬೆಟ್ಟವಿದ್ದು ಅಲ್ಲಿ ರೇವಣ ಸಿದ್ಧೇಶ್ವರ ದೇವಾಲಯವಿದೆ. ಸ್ಥಳ ಪುರಾಣದಂತೆ ಈ ಬೆಟ್ಟದ ತಪ್ಪಲಿನಲ್ಲಿ ಆದಿ ಗುರು ಶಂಕರರು ವಿಶ್ರಮಿಸಿದ್ದರೆನ್ನಲಾಗುತ್ತದೆ. ಪ್ರತಿ ದಿನ ಇಲ್ಲಿ ಗೀತಾಧ್ಯಯನ ಅಥವಾ ಪಾರಾಯಣ ನಡೆಯುವುದು ವಿಶೇಷ.

ಕಾಕತಿ ಸಿದ್ಧೇಶ್ವರ:

ಕಾಕತಿ ಸಿದ್ಧೇಶ್ವರ:

ಬೆಳಗಾವಿ ಬಳಿಯಿರುವ ಕಾಕತಿಯ ಶ್ರೀ ಸಿದ್ಧೇಶ್ವರ ದೇವಸ್ಥಾನ.

ಕಾಕತಿ ಸಿದ್ಧೇಶ್ವರ:

ಕಾಕತಿ ಸಿದ್ಧೇಶ್ವರ:

ಬೆಳಗಾವಿ ಬಳಿಯಿರುವ ಕಾಕತಿಯ ಶ್ರೀ ಸಿದ್ಧೇಶ್ವರ ದೇವಸ್ಥಾನ.

ಕಾಕತಿ ಸಿದ್ಧೇಶ್ವರ:

ಕಾಕತಿ ಸಿದ್ಧೇಶ್ವರ:

ಬೆಳಗಾವಿ ಬಳಿಯಿರುವ ಕಾಕತಿಯ ಶ್ರೀ ಸಿದ್ಧೇಶ್ವರ ದೇವಸ್ಥಾನ.

ಕಾಕತಿ ಸಿದ್ಧೇಶ್ವರ:

ಕಾಕತಿ ಸಿದ್ಧೇಶ್ವರ:

ಬೆಳಗಾವಿ ಬಳಿಯಿರುವ ಕಾಕತಿಯ ಶ್ರೀ ಸಿದ್ಧೇಶ್ವರ ದೇವಸ್ಥಾನ.

ಕಾಕತಿ ಸಿದ್ಧೇಶ್ವರ:

ಕಾಕತಿ ಸಿದ್ಧೇಶ್ವರ:

ಬೆಳಗಾವಿ ಬಳಿಯಿರುವ ಕಾಕತಿಯ ಶ್ರೀ ಸಿದ್ಧೇಶ್ವರ ದೇವಸ್ಥಾನ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X