Search
  • Follow NativePlanet
Share
ಮುಖಪುಟ » ಸ್ಥಳಗಳು » ಬಿಜಾಪುರ » ಹವಾಮಾನ

ಬಿಜಾಪುರ ಹವಾಮಾನ

ಅಕ್ಟೋಬರ್ ಮತ್ತು ಮಾರ್ಚ್, ಜೂನ್, ಸೆಪ್ಟೆಂಬರ್ ನಲ್ಲಿ ಬಿಜಾಪುರಕ್ಕೆ ಭೇಟಿ ನೀಡಬಹುದು.

ಬೇಸಿಗೆಗಾಲ

(ಮಾರ್ಚ್ ನಿಂದ ಮೇ): ಬೇಸಿಗೆಯಲ್ಲಿ ಬಿಜಾಪುರ ಪಟ್ಟಣದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಿಸಿಲಿರುತ್ತದೆ. ಗರಿಷ್ಠ ಉಷ್ಣಾಂಶ 42 ಡಿ.ಸೆ.ವರೆಗೂ ಏರಿಕೆಯಾಗಿರುತ್ತದೆ. ಪ್ರವಾಸಿಗರು ಬೇಸಿಗೆಯಲ್ಲಿ ಬರುವುದನ್ನು ಮುಂದಕ್ಕೆ ಹಾಕುವುದು ಒಳ್ಳೆಯದು. ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ವಿಪರೀತ ಬಿಸಿಲು ಇಲ್ಲಿರುತ್ತದೆ.

ಮಳೆಗಾಲ

(ಜೂನ್ ನಿಂದ ಸೆಪ್ಟೆಂಬರ್): ಅಷ್ಟೇನೂ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗದಿದ್ದರೂ ಇಲ್ಲಿ ಪ್ರವಾಸಿಗರು ಮಳೆಗಾಲದಲ್ಲಿ ಬರಬಹುದು. ಸುಂದರ ಹಸಿರಿನ ಪರಿಸರದಲ್ಲಿ ಪ್ರವಾಸಿಗರು ಪಟ್ಟಣದ ಎಲ್ಲ ಐತಿಹಾಸಿಕ ಸ್ಥಳಗಳನ್ನು ನೋಡಬಹುದು.

ಚಳಿಗಾಲ

(ನವೆಂಬರ್ ನಿಂದ ಫೆಬ್ರವರಿ): ಚಳಿಗಾಲದಲ್ಲಿ ಆಹ್ಲಾದಕರ ವಾತಾರವಣ ಹೊಂದಿರುವ ಬಿಜಾಪುರದಲ್ಲಿ ಗರಿಷ್ಠ 30 ಡಿ.ಸೆ.ಇದ್ದರೆ ಕನಿಷ್ಠ 20 ಡಿ.ಸೆ.ವರೆಗಿರುತ್ತದೆ. ಈ ಸಮಯದಲ್ಲಿ ಬಿಜಾಪುರದ ಎಲ್ಲ ಪ್ರವಾಸಿ ಸ್ಥಳಗಳನ್ನು ನೋಡಲು ಪ್ರವಾಸಿಗರಿಗೆ ಅನುಕೂಲವಾಗಿರುತ್ತದೆ.