Search
  • Follow NativePlanet
Share
» »ಶಕ್ತಿ ಸ್ವರೂಪಿಣಿಯ ಶಕ್ತಿಶಾಲಿ ದೇವಾಲಯಗಳು

ಶಕ್ತಿ ಸ್ವರೂಪಿಣಿಯ ಶಕ್ತಿಶಾಲಿ ದೇವಾಲಯಗಳು

By Vijay

ಎಲ್ಲಿ ಸ್ತ್ರೀಯರನ್ನು ಆರಾಧಿಸುವರೋ ಅಲ್ಲಿ ದೇವತೆಗಳ ವಾಸವಿರುತ್ತದೆ ಎಂದು ಹೇಳುತ್ತದೆ ನಮ್ಮ ಪುರಾಣ. ಮೊದಲಿನಿಂದಲೂ ಹಿಂದೂ ಧರ್ಮದಲ್ಲಿ ಸ್ತ್ರೀಯರನ್ನು ವಿಶೇಷವಾಗಿ ಗೌರವಿಸಿರುವುದನ್ನು ನಾವು ನೋಡಿರುತ್ತೇವೆ. ಸಂಸ್ಕೃತ ಶ್ಲೋಕದಲ್ಲಿ ಹೇಳಿರುವಂತೆ "ಕಾರ್ಯೇಶು ದಾಸಿ ಕರಣೇಶು ಮಂತ್ರಿ, ಭೋಜೇಶು ಮಾತಾ ಶಯನೇಶು ರಂಭಾ, ರೂಪೇಶು ಲಕ್ಷ್ಮಿ ಕ್ಷಮಯೇಶು ಧರಿತ್ರಿ" ಈ ರೀತಿಯಾಗಿ ಒಬ್ಬ ಸ್ತ್ರೀಯು ಹಲವು ತನ್ನ ಜೀವಿತಾವಧಿಯಲ್ಲಿ ಹಲವು ಪಾತ್ರಗಳನ್ನು ನಿಭಾಯಿಸುತ್ತಾಳೆ. ತಾಳ್ಮೆ, ಸಹನೆ, ಪ್ರೀತಿ, ಕರುಣೆ, ಸೂಕ್ಷ್ಮತೆಗೆ ಪ್ರತೀಕವಾಗಿರುವ ಸ್ತ್ರೀಯು ಸಂಯಮ ಕಳೆದುಕೊಂಡರೆ ಅಥವಾ ತನ್ನ ಪರಿವಾರಕ್ಕೆ ಏನಾದರೂ ಸಂಕಷ್ಟ ಬಂತೆಂದರೆ ದುಷ್ಟರನ್ನು ಶಿಕ್ಷಿಸುವ ರೌದ್ರಾವತಾರವಾದ ಚಂಡಿ ಸ್ವರೂಪವನ್ನೂ ಸಹ ತಾಳುತ್ತಾಳೆ.

ನಮ್ಮ ಪುರಾಣ ಪುಣ್ಯ ಕಥೆಗಳಲ್ಲಿ ಅದೆಷ್ಟೊ ಘಟಾನುಘಟಿ ದೇವತೆಗಳಿಂದ ಸೆದೆಬಡಿಯಲು ಸಾಧ್ಯವಾಗದ ರಕ್ಕಸರನ್ನು ದೇವಿಯು ಶಕ್ತಿ ಸ್ವರೂಪಿಣಿಯಾಗಿ ಅವತರಿಸಿ ಸಂಹರಿಸಿದ್ದುದನ್ನು ನಾವು ಕೇಳಿದ್ದೇವೆ. ಹಿಂದೂ ನಂಬಿಕೆಯ ಪ್ರಕಾರ, ಶಕ್ತಿ ಸ್ವರೂಪಿಣಿ ಜಗನ್ಮಾತೆಯು ಎಲ್ಲ ರೀತಿಯ ಹಾಗೂ ಎಷ್ಟೆ ದೊಡ್ಡದಾಗಿರುವ ಸಂಕಷ್ಟಗಳಿರಲಿ, ಅವುಗಳನ್ನು ಒಂದೆ ಕ್ಷಣದಲ್ಲಿ ನಿವಾರಿಸಬಲ್ಲ ಶಕ್ತಿ ದೇವತೆಯಾಗಿದ್ದಾಳೆ. ಈ ಶಕ್ತಿ ಸ್ವರೂಪಿಣಿ ದೇವಿಯು ದೇಶದ ವಿವಿಧ ಭಾಗಗಳಲ್ಲಿ ನೆಲೆಸಿದ್ದು ವಿವಿಧ ನಾಮಗಳಿಂದ ಆರಾಧಿಸಲ್ಪಡುತ್ತಾಳೆ.

ಪ್ರಸ್ತುತ ಲೇಖನವು ಶಕ್ತಿ ದೇವಿಯು ನೆಲೆಸಿರುವ ಕೆಲವು ಜಾಗೃತ ಹಾಗೂ ಪ್ರಭಾವಶಾಲಿ ದೇವಾಲಯಗಳ ಪರಿಚಯ ಮಾಡಿಸುತ್ತದೆ. ಸಮಯ ಸಿಕ್ಕಾಗ ಇಲ್ಲವೆ ಅವಕಾಶ ದೊರೆತಾಗ ಖಂಡಿತವಾಗಿಯೂ ಈ ದೇವಿಗಳ ದರ್ಶನ ಮಾಡಿ ಹಾಗೂ ಅವಳ ಕೃಪೆಗೆ ಪಾತ್ರರಾಗಿ.

ಶಕ್ತಿ ದೇವಿಯ ದೇವಾಲಯ:

ಶಕ್ತಿ ದೇವಿಯ ದೇವಾಲಯ:

ಮಾತಾ ರಾಣಿ ಅಥವಾ ವೈಷ್ಣವಿ ಎಂತಲೂ ಕರೆಯಲ್ಪಡುವ ಜಗನ್ಮಾತೆಯಾದ ವೈಷ್ಣೊ ದೇವಿಯ ದೇವಸ್ಥಾನವು ಜಮ್ಮು ಕಾಶ್ಮೀರ ರಾಜ್ಯದ ವೈಷ್ಣೊ ದೇವಿಯಲ್ಲಿದೆ. ಭಾರತದಲ್ಲಿ ಇದು ಎರಡನೇಯ ಅತಿ ಹೆಚ್ಚಾಗಿ ಭೇಟಿ ನೀಡಲ್ಪಡುವ ಧಾರ್ಮಿಕ ಕೇಂದ್ರವಾಗಿರುವುದಲ್ಲದೆ ಸುಪ್ರಸಿದ್ಧ ಶಕ್ತಿ ಪೀಠಗಳಲ್ಲೂ ಒಂದಾಗಿದೆ.

ಶಕ್ತಿ ದೇವಿಯ ದೇವಾಲಯ:

ಶಕ್ತಿ ದೇವಿಯ ದೇವಾಲಯ:

ಉತ್ತರಾಖಂಡ್ ರಾಜ್ಯದ ಗಡ್ವಾಲ್ ಪ್ರದೇಶದ ಅಲಕನಂದಾ ನದಿ ತೀರದಲ್ಲಿ ನೆಲೆಸಿರುವ ಶಕ್ತಿ ದೇವಿಯೆ ಧಾರಿ ದೇವಿ. ಶ್ರೀನಗರ - ಬದರಿನಾಥ ಹೈವೆಯ ಕಲ್ಯಾಸೌರ್ ಎಂಬಲ್ಲಿ ನೆಲೆಸಿರುವ ಈ ದೇವಸ್ಥಾನದಲ್ಲಿ ದೇವಿಯ ಮುಖ ಭಾಗದ ವಿಗ್ರಹವನ್ನು ಮಾತ್ರ ಕಾಣಬಹುದಾಗಿದೆ. ಸ್ಥಳೀಯ ದಂತ ಕಥೆಯ ಪ್ರಕಾರ, ದೇವಿಯ ವಿಗ್ರಹವು ಕಾಲಕ್ಕೆ ತಕ್ಕಂತೆ ಬಾಲ್ಯಾವಸ್ಥೆ, ತರುಣಾವಸ್ಥೆ ಹಾಗೂ ಮುಪ್ಪಾವಸ್ಥೆಯಲ್ಲಿ ಗೋಚರಿಸುವುದಂತೆ.

ಚಿತ್ರಕೃಪೆ: Aloak1

ಶಕ್ತಿ ದೇವಿಯ ದೇವಾಲಯ:

ಶಕ್ತಿ ದೇವಿಯ ದೇವಾಲಯ:

ಹಿಮಾಚಲ ಪ್ರದೇಶ ರಾಜ್ಯದ ಬಿಲಾಸ್ಪುರ್ ಜಿಲ್ಲೆಯಲ್ಲಿರುವ ನೈನಾ ದೇವಿಯು, ಶಕ್ತಿ ಸ್ವರೂಪಿಣಿ ನೈನಾ ದೇವಿ ನೆಲೆಸಿರುವ ಧಾರ್ಮಿಕ ಪಟ್ಟಣವಾಗಿದೆ.

ಚಿತ್ರಕೃಪೆ: Ekabhishek

ಶಕ್ತಿ ದೇವಿಯ ದೇವಾಲಯ:

ಶಕ್ತಿ ದೇವಿಯ ದೇವಾಲಯ:

ಮೈಸೂರು ನಗರದಿಂದ 13 ಕಿ.ಮೀ ದೂರದಲ್ಲಿರುವ ಚಾಮುಂಡಿ ಬೆಟ್ಟದ ಮೇಲೆ ನೆಲೆಸಿರುವ ಚಾಮುಂಡೇಶ್ವರಿ ದೇವಿಯ ದೇವಸ್ಥಾನವು ನಗರದ ಸುಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿದೆ. ಶಕ್ತಿ ಸ್ವರೂಪಿಣಿಯಾದ ಚಾಮುಂಡೇಶ್ವರಿ ದೇವಿಯು ದುರ್ಗೆಯ ಅವತಾರವಾಗಿದ್ದಾಳೆ.

ಚಿತ್ರಕೃಪೆ: Sanjay Acharya

ಶಕ್ತಿ ದೇವಿಯ ದೇವಾಲಯ:

ಶಕ್ತಿ ದೇವಿಯ ದೇವಾಲಯ:

ದಕ್ಷಿಣ ಕನ್ನಡ ಜಿಲ್ಲೆಯ ಒಂದು ಪುಟ್ಟ ಪಟ್ಟಣ ಕಟೀಲು. ಇಲ್ಲಿ ನೆಲೆಸಿರುವ ದುರ್ಗಾ ಪರಮೇಶ್ವರಿಯು ಶಕ್ತಿ ದೇವತೆಯಾಗಿ ಭಕ್ತರನ್ನು ಹರಸುತ್ತಿದ್ದಾಳೆ.

ಚಿತ್ರಕೃಪೆ: Premkudva

ಶಕ್ತಿ ದೇವಿಯ ದೇವಾಲಯ:

ಶಕ್ತಿ ದೇವಿಯ ದೇವಾಲಯ:

ಜಗನ್ಮಾತೆ ಮೂಕಾಂಬಿಕಾ ದೇವಿಯು ಕರ್ನಾಟಕ ರಾಜ್ಯದ ಉಡುಪಿ ಜಿಲ್ಲೆಯ ಕೊಲ್ಲೂರು ಪಟ್ಟಣದಲ್ಲಿ ನೆಲೆಸಿದ್ದಾಳೆ. ಈ ಕ್ಷೇತ್ರವು ರಾಜ್ಯದ ಗುರುತರ ಧಾರ್ಮಿಕ ಪ್ರವಾಸಿ ಕ್ಷೇತ್ರವಾಗಿದೆ.

ಚಿತ್ರಕೃಪೆ: Vaikoovery

ಶಕ್ತಿ ದೇವಿಯ ದೇವಾಲಯ:

ಶಕ್ತಿ ದೇವಿಯ ದೇವಾಲಯ:

ಅನ್ನದಾನ ಮಹಾದಾನ ಎನ್ನುವ ನಾವು ಅನ್ನ ಅಥವಾ ಭೋಜನಕ್ಕೆ ವಿಶೇಷ ಸ್ಥಾನ ಕೊಟ್ಟು ಪೂಜಿಸುತ್ತೇವೆ. ಇದಕ್ಕಾಗಿಯೆ ನಾವು ಅನ್ನವನ್ನು ಕರುಣಿಸುವ ದೇವಿಯಾದ ಅನ್ನ ಪೂರ್ಣೇಶ್ವರಿಯನ್ನು ಭಕ್ತಿಯಿಂದ ಪೂಜಿಸುತ್ತೇವೆ. ಚಿಕ್ಕಮಗಳೂರು ಜಿಲ್ಲೆಯ ಹೊರನಾಡು ಎಂಬಲ್ಲಿ ಈ ದೇವಿಯು ವಿರಾಜಮಾನಳಾಗಿದ್ದಾಳೆ.

ಚಿತ್ರಕೃಪೆ: Gnanapiti

ಶಕ್ತಿ ದೇವಿಯ ದೇವಾಲಯ:

ಶಕ್ತಿ ದೇವಿಯ ದೇವಾಲಯ:

ಕರ್ನಾಟಕದ ಕೋಲಾರ ಪಟ್ಟಣದ ದೇವತೆ ಶಕ್ತಿ ಸ್ವರೂಪಿಣಿ ಕೋಲಾರಮ್ಮ ದೇವಿ.

ಚಿತ್ರಕೃಪೆ: Hariharan Arunachalam

ಶಕ್ತಿ ದೇವಿಯ ದೇವಾಲಯ:

ಶಕ್ತಿ ದೇವಿಯ ದೇವಾಲಯ:

ಮಹಾರಾಷ್ಟ್ರದ ಕೋಲ್ಹಾಪುರ ಪಟ್ಟಣದಲ್ಲಿ ನೆಲೆಸಿರುವ ಮಹಾಲಕ್ಷ್ಮಿಯು ಸುಪ್ರಸಿದ್ಧ ಶಕ್ತಿ ದೇವತೆಯಾಗಿದ್ದಾಳೆ. ಈ ಕ್ಷೇತ್ರವು ಶಕ್ತಿ ಪೀಠಗಳಲ್ಲೂ ಕೂಡ ಒಂದಾಗಿದೆ.

ಚಿತ್ರಕೃಪೆ: tanny

ಶಕ್ತಿ ದೇವಿಯ ದೇವಾಲಯ:

ಶಕ್ತಿ ದೇವಿಯ ದೇವಾಲಯ:

12 ಪವಿತ್ರ ಜ್ಯೋತಿರ್ಲಿಂಗಳಲ್ಲೊಂದಾದ ಶ್ರೀಶೈಲಂ ಮಲ್ಲಿಕಾರ್ಜುನನ ದೇವಸ್ಥಾನವು ಭ್ರಮರಾಂಬಾ ದೇವಿಯೊಂದಿಗೆ ಆಸೀನವಾಗಿದ್ದು ಶಕ್ತಿ ಪೀಠಗಳ ಪೈಕಿ ಒಂದಾಗಿದೆ.

ಚಿತ್ರಕೃಪೆ: Chintohere

ಶಕ್ತಿ ದೇವಿಯ ದೇವಾಲಯ:

ಶಕ್ತಿ ದೇವಿಯ ದೇವಾಲಯ:

ಬುದ್ಧಿಮತ್ತೆ ಹಾಗು ಜಾಣ್ಮೆಯ ದೇವತೆಯಾದ ಶಾರದಾಂಬೆ (ಸರಸ್ವತಿಯ ಅವತಾರ) ಗೆ ಮುಡಿಪಾಗಿದೆ, ಶೃಂಗೇರಿಯ ಶಾರದಾಂಬೆ ದೇವಸ್ಥಾನ.

ಶಕ್ತಿ ದೇವಿಯ ದೇವಾಲಯ:

ಶಕ್ತಿ ದೇವಿಯ ದೇವಾಲಯ:

ತಮಿಳುನಾಡುನ ಪ್ರಖ್ಯಾತ ಧಾರ್ಮಿಕ ಕ್ಷೇತ್ರವಾದ ಕಂಚಿಯಲ್ಲಿ ನೆಲೆಸಿರುವ ಕಾಮಾಕ್ಷಿ ದೇವಿಯು ಸುಪ್ರಸಿದ್ಧ ಶಕ್ತಿ ದೇವಿಯಾಗಿ ವಿರಾಜಮಾನಳಾಗಿದ್ದಾಳೆ.

ಶಕ್ತಿ ದೇವಿಯ ದೇವಾಲಯ:

ಶಕ್ತಿ ದೇವಿಯ ದೇವಾಲಯ:

ಆಂಧ್ರದ ಮಹಬೂಬ್ ನಗರ ಜಿಲ್ಲೆಯ ದೇವಾಲಯ ಪಟ್ಟಣ ಅಲಂಪೂರ್ ನಲ್ಲಿ ನೆಲೆಸಿದ್ದಾಳೆ ಶಕ್ತಿ ಸ್ವರೂಪಿಣಿ ಜೋಗುಳಾಂಬಾ ದೇವಿ.

ಚಿತ್ರಕೃಪೆ: రహ్మానుద్దీన్

ಶಕ್ತಿ ದೇವಿಯ ದೇವಾಲಯ:

ಶಕ್ತಿ ದೇವಿಯ ದೇವಾಲಯ:

ಆಂಧ್ರ ಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಪೀಠಾಪುರಂ ಗುರುತರವಾದ ಧಾರ್ಮಿಕ ಕೇಂದ್ರವಾಗಿದೆ. ಇಲ್ಲಿ ನೆಲೆಸಿರುವ ಪುರುಹುತಿಕಾ ದೇವಿಯ ಸನ್ನಿಧಾನವು ಅಷ್ಟ ದಶ ಶಕ್ತಿ ಪೀಠಗಳಲ್ಲೊಂದಾಗಿದೆ. ಕುಕ್ಕೂಟೇಶ್ವರ ದೇವಸ್ಥಾನದ ಆವರಣದಲ್ಲಿ ಈ ಶಕ್ತಿ ಪೀಠವನ್ನು ಕಾಣಬಹುದು.

ಚಿತ್ರಕೃಪೆ: GS Darshan

ಶಕ್ತಿ ದೇವಿಯ ದೇವಾಲಯ:

ಶಕ್ತಿ ದೇವಿಯ ದೇವಾಲಯ:

ಒಡಿಶಾದ ಕಟಕ್ ನಗರದಲ್ಲಿ ನೆಲೆಸಿರುವ ಶಕ್ತಿ ಸ್ವರೂಪಿಣಿ ಚಂಡಿ ದೇವಾಲಯವು ನಗರದ ಅತಿ ಪ್ರಮುಖ ಧಾರ್ಮಿಕ ಕೇಂದ್ರವಾಗಿದೆ.

ಶಕ್ತಿ ದೇವಿಯ ದೇವಾಲಯ:

ಶಕ್ತಿ ದೇವಿಯ ದೇವಾಲಯ:

ಪೂರ್ವ ಗೋದಾವರಿಯ ದ್ರಾಕ್ಷರಾಮಾದಲ್ಲಿರುವ ದ್ರಾಕ್ಷರಾಮ ದೇವಸ್ಥಾನವು ಪಂಚರಾಮ ಕ್ಷೇತ್ರಗಳಲ್ಲೊಂದಾಗಿದೆ. ಶಿವನ ಈ ದೇವಸ್ಥಾನದಲ್ಲಿ ಪಾರ್ವತಿಯು ಮಾಣಿಕ್ಯಾಂಬಳಾಗಿ ನೆಲೆಸಿದ್ದಾಳೆ.

ಶಕ್ತಿ ದೇವಿಯ ದೇವಾಲಯ:

ಶಕ್ತಿ ದೇವಿಯ ದೇವಾಲಯ:

ಅಸ್ಸಾಮಿನ ಗುವಾಹಟಿ ನಗರದಲ್ಲಿ ನೆಲೆಸಿರುವ 51 ಶಕ್ತಿ ಪೀಠಗಳಲ್ಲೊಂದಾಗಿರುವ ಕಾಮಾಖ್ಯ ದೇವಿಯ ದೇವಸ್ಥಾನವು ಸುಪ್ರಸಿದ್ಧ ಧಾರ್ಮಿಕ ಯಾತ್ರಾ ಕೇಂದ್ರವಾಗಿದೆ.

ಚಿತ್ರಕೃಪೆ: Kunal Dalui

ಶಕ್ತಿ ದೇವಿಯ ದೇವಾಲಯ:

ಶಕ್ತಿ ದೇವಿಯ ದೇವಾಲಯ:

ಕೇರಳದ ತಿರುವನಂತಪುರಂ ಜಿಲ್ಲೆಯ ಎಡವದಲ್ಲಿರುವ ಪಾಲಕ್ಕಾವು ಭಗವತಿ ದೇವಾಲಯ ಅತಿ ಪುರಾತನವಾದ ಶಕ್ತಿ ಸ್ವರೂಪಿಣಿಯ ದೇವಾಲಯವಾಗಿದೆ. ದೇವಿಯು ಭದ್ರಕಾಳಿಯ ರೂಪವನ್ನು ಹೊಂದಿದ್ದಾಳೆ.

ಚಿತ್ರಕೃಪೆ: Akash.sl

ಶಕ್ತಿ ದೇವಿಯ ದೇವಾಲಯ:

ಶಕ್ತಿ ದೇವಿಯ ದೇವಾಲಯ:

ದಕ್ಷಿಣ ಭಾರತದ ಸುಪ್ರಸಿದ್ಧ ದೇವಾಲಯಗಳಲ್ಲೊಂದಾಗಿದೆ ಶರ್ಕರಾ ದೇವಿ ದೇವಸ್ಥಾನ. ತಿರುವನಂತಪುರಂ ಜಿಲ್ಲೆಯ ಚಿರಯೀನ್ಕಿಳು ತಾಲೂಕಿನಲ್ಲಿರುವ ಭದ್ರಕಾಳಿಯ ಈ ದೇವಸ್ಥಾನವು ಗುರುತರವಾದ ಧಾರ್ಮಿಕ ಕೇಂದ್ರವಾಗಿದೆ.

ಚಿತ್ರಕೃಪೆ: Binoyjsdk

ಶಕ್ತಿ ದೇವಿಯ ದೇವಾಲಯ:

ಶಕ್ತಿ ದೇವಿಯ ದೇವಾಲಯ:

ಬಾಗಲಕೋಟೆ ಜಿಲ್ಲೆಯ ಬಾದಾಮಿ ಪಟ್ಟಣದಲ್ಲಿರುವ ಚೋಳಚಗುಡ್ಡದಲ್ಲಿ ನೆಲೆಸಿರುವ ಬನಶಂಕರಿ ದೇವಿಯು ಉತ್ತರ ಕರ್ನಾಟಕದ ಸುಪ್ರಸಿದ್ಧ ದೇವಿಯಾಗಿ ಆರಾಧಿಸಲ್ಪಡುತ್ತಾಳೆ.

ಚಿತ್ರಕೃಪೆ: Nvvchar

ಶಕ್ತಿ ದೇವಿಯ ದೇವಾಲಯ:

ಶಕ್ತಿ ದೇವಿಯ ದೇವಾಲಯ:

ಉಗ್ರ ರೂಪದ ಪಾರ್ವತಿ ದೇವಿಯು ಮಹಾರಾಷ್ಟ್ರದ ಉಸ್ಮಾನಾಬಾದ್ ಜಿಲ್ಲೆಯ ತುಳಜಾಪುರದಲ್ಲಿ ತುಳಜಾ ಭವಾನಿಯಾಗಿ ಆರಾಧಿಸಲ್ಪಡುತ್ತಿದ್ದಾಳೆ. ಅನೇಕ ಕುಟುಂಬಗಳ ದೇವತೆಯೂ ಆಗಿರುವ ಈ ಭವಾನಿ ದೇವಿಯನ್ನು ದರ್ಶಿಸಲು ಮಾಹಾರಾಷ್ಟ್ರ ಮಾತ್ರವಲ್ಲದೆ ಆಂಧ್ರ ಹಾಗೂ ಉತ್ತರ ಕರ್ನಾಟಕದ ಸಾಕಷ್ಟು ಭಕ್ತರು ಆಗಮಿಸುತ್ತಿರುತ್ತಾರೆ. ಈ ಕ್ಷೇತ್ರ 51 ಶಕ್ತಿ ಪೀಠಗಳ ಪೈಕಿ ಒಂದಾಗಿದೆ.

ಚಿತ್ರಕೃಪೆ: Anjali Sajan

ಶಕ್ತಿ ದೇವಿಯ ದೇವಾಲಯ:

ಶಕ್ತಿ ದೇವಿಯ ದೇವಾಲಯ:

ಶಕ್ತಿ ಪೀಠ ಶಾಖಾಂಬರಿ (ಶಾಖುಂಬರಿ ದೇವಿ) ದೇವಿಯು ಉತ್ತರ ಪ್ರದೇಶದ ಸಹರನ್ಪುರ್ ನಗರದಿಂದ 40 ಕಿ.ಮೀ ದೂರದಲ್ಲಿರುವ ಜಸ್ಮೌರ್ ಎಂಬ ಗ್ರಾಮದಲ್ಲಿ ನೆಲೆಸಿದ್ದಾಳೆ. ಇಲ್ಲಿ ಮುಖ್ಯವಾದ ಎರಡು ದೇವಾಲಯಗಳನ್ನು ನೋಡಬಹುದಾಗಿದ್ದು, ಒಂದು ಶಾಖುಂಬರಿಯದ್ದಾಗಿದ್ದರೆ, ಇನ್ನೊಂದು ಭುರಾ ದೇವಿಯದ್ದಾಗಿದೆ.

ಶಕ್ತಿ ದೇವಿಯ ದೇವಾಲಯ:

ಶಕ್ತಿ ದೇವಿಯ ದೇವಾಲಯ:

ಉತ್ತರ ಕರ್ನಾಟಕದ ಸುಪ್ರಸಿದ್ಧ ಯಾತ್ರಾ ಕೇಂದ್ರ ಹಾಗೂ ಶಕ್ತಿ ಕ್ಷೇತ್ರ ಸೌದತ್ತಿ. ಇಲ್ಲಿರುವ ರೇಣುಕಾದೇವಿಯ ದೇವಸ್ಥಾನವು ಪ್ರಸಿದ್ಧ ಶ್ರೀಕ್ಷೇತ್ರವಾಗಿದೆ. ಈ ದೇವಿಯನ್ನು ಎಲ್ಲಮ್ಮಳೆಂದೂ ಸಹ ಕರೆಯಲಾಗುತ್ತದೆ.

ಶಕ್ತಿ ದೇವಿಯ ದೇವಾಲಯ:

ಶಕ್ತಿ ದೇವಿಯ ದೇವಾಲಯ:

ಶಕ್ತಿ ದೇವಿ ಪಾರ್ವತಿ ಮಾತೆಯ ಅವತಾರವೆನ್ನಲಾದ ವಿಶಾಲಾಕ್ಷಿ ದೇವಿಗೆ ಮುಡಿಪಾಗಿರುವ ವಿಶಾಲಾಕ್ಷಿ ಗೌರಿ ದೇವಸ್ಥಾನವು ಭಾರತದ ಆಧ್ಯಾತ್ಮಿಕ ನಗರಿ ವಾರಣಾಸಿಯಲ್ಲಿ ಸ್ಥಿತವಿದೆ. ಸಾಂಧರ್ಬಿಕ ಚಿತ್ರ.

ಚಿತ್ರಕೃಪೆ: Ekabhishek

ಶಕ್ತಿ ದೇವಿಯ ದೇವಾಲಯ:

ಶಕ್ತಿ ದೇವಿಯ ದೇವಾಲಯ:

ಛತ್ತೀಸಗಡ್ ರಾಜ್ಯದ ಜಗ್ದಲ್ಪುರ್ ನಿಂದ 80 ಕಿ.ಮೀ ದೂರದಲ್ಲಿರುವ ದಂತೆವಾಡಾದಲ್ಲಿ ನೆಲೆಸಿರುವ ದೇವಿಯೆ ದಂತೇಶ್ವರಿ ದೇವಿ. ದಂತಕಥೆಯ ಪ್ರಕಾರ, ಸತಿಯ ಹಲ್ಲುಗಳು ಇಲ್ಲಿ ಬಿದ್ದವು ಎಂದು ಹೇಳಲಾಗುತ್ತದೆ. ಇದು 51 ಶಕ್ತಿ ಪೀಠಗಳ ಪೈಕಿ ಒಂದಾಗಿದೆ.

ಚಿತ್ರಕೃಪೆ: dantewada.ni.in

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X