Search
  • Follow NativePlanet
Share

ಕೋಲಾರ – ಕರ್ನಾಟಕದ ಪೂರ್ವದ ಹೆಬ್ಬಾಗಿಲು.

27

ಕೋಲಾರವು ಕರ್ನಾಟಕ ಪೂರ್ವ ಭಾಗದಲ್ಲಿ ನೆಲೆಸಿರುವ ಒಂದು ಸಣ್ಣ ಪಟ್ಟಣವಾಗಿದೆ. ಈ ಜಿಲ್ಲೆಯು ತಮಿಳುನಾಡು ಮತ್ತು ಆಂಧ್ರ ಪ್ರದೇಶದ ಗಡಿಭಾಗದಲ್ಲಿದ್ದು 3,969ಕಿ.ಮೀ ಗಳಷ್ಟು ವಿಸ್ತೀರ್ಣವನ್ನು ಹೊಂದಿದೆ. ಅಲ್ಲದೆ ಇದು ’ಕರ್ನಾಟಕದ ಪೂರ್ವದ ಹೆಬ್ಬಾಗಿಲು’ ಎಂಬ ಅಡ್ಡ ಹೆಸರನ್ನು ಸಹಾ ಪಡೆದಿದೆ. ಕೋಲಾರವು ಇಲ್ಲಿನ ಚಿನ್ನದ ಗಣಿಯಿಂದಾಗಿ ಖ್ಯಾತಿ ಪಡೆದಿದೆ. ಈ ಚಿನ್ನದ ಗಣಿಯು ಕೋಲಾರಕ್ಕೆ ಗತಕಾಲದಲ್ಲಿ ಸುವರ್ಣಯುಗವನ್ನು ತಂದುಕೊಟ್ಟಿದ್ದಲ್ಲದೆ, ಮನಮೋಹಕ ದೇವಾಲಯಗಳನ್ನು ಮತ್ತು ಕೋಟೆಕೊತ್ತಲಗಳನ್ನು ಸಹಾ ಒದಗಿಸಿದೆ.

 

ಕೋಲಾರದ ಕುರಿತ ದಂತಕತೆಗಳು.

ಕೋಲಾರದ ಸುತ್ತ ಹಲವು ದಂತಕತೆಗಳು ಹರಡಿವೆ. ಅವುಗಳ ಪ್ರಕಾರ ಕೋಲಾರವು ಮಹರ್ಷಿ ವಾಲ್ಮೀಕಿಯ ವಾಸಸ್ಥಾನವಾಗಿತ್ತಂತೆ. ರಾಮನು ವನವಾಸದ ಸಮಯದಲ್ಲಿ ವಾಲ್ಮೀಕಿಯ ಆಶ್ರಮಕ್ಕೆ ಭೇಟಿಕೊಟ್ಟಿದ್ದನಂತೆ. ನಂತರದ ಕಾಲದಲ್ಲಿ ಸೀತೆಯು ರಾಮನಿಂದ ರಾಜ್ಯ ಬಹಿಷ್ಕಾರಕ್ಕೊಳಪಟ್ಟಾಗ ಇದೇ ವಾಲ್ಮೀಕಿಯ ಆಶ್ರಮದಲ್ಲಿ ಆಶ್ರಯ ಪಡೆದಳಂತೆ. ಕೋಲಾರದಲ್ಲಿನ ಇದೇ ಆಶ್ರಮದಲ್ಲಿ ಸೀತೆಯು ಲವ –ಕುಶರಿಗೆ ಜನ್ಮನೀಡಿದಳು. ವಿಷ್ಣುವಿನ ಅವತಾರಗಳಲ್ಲಿ ಒಬ್ಬನೆಂದು ಪರಿಗಣಿಸಲಾಗಿರುವ ವೀರ ಋಷಿ ಪರಶುರಾಮನು ಇದೇ ಕೋಲಾರದ ಪಶ್ಚಿಮಕ್ಕೆ ಇರುವ ಹಚ್ಚ ಹಸಿರಿನ ಬೆಟ್ಟಗಳಲ್ಲಿ ಕೆಲ ಕಾಲ ತಂಗಿದ್ದನೆಂದು ಹೇಳಲಾಗುತ್ತದೆ.

ಇತಿಹಾಸದ ಆಧಾರದ ಮೇಲೆ ’ಕೋಲಾರ’ ಎಂಬ ಪದವು ಕೋಲಾಹಲ ಪುರ ಎಂಬ ಮೂಲದಿಂದ ಬಂದಿದೆ. ಇದರರ್ಥ ಜಗಳದ, ಯುದ್ಧದ ಊರು ಎಂದಾಗುತ್ತದೆ.ಬೆಟ್ಟಗಳ ನಡುವಿನ ತಂಪಾದ ಈ ಊರು ಚಾಲುಕ್ಯ ಮತ್ತು ಚೋಳ ಸಾಮ್ರಾಜ್ಯಗಳ ನಡುವಿನ ಭೀಕರ ಕದನಗಳಿಗೆ ಸಾಕ್ಷಿಯಾಗಿದೆ.

ಈ ಕಾಲದ ಅದ್ಭುತ ಅವಶೇಷಗಳನ್ನು ನಾವು ಇಂದಿಗು ಕೋಲಾರದಲ್ಲಿ ನೋಡಬಹುದು. ಕೋಲಾರಮ್ಮ ದೇವಾಲಯ ಮತ್ತು ಸೋಮೇಶ್ವರ ದೇವಾಲಯವು ನೋಡಲೆ ಬೇಕಾದ ದೇವಾಲಯಗಳಾಗಿವೆ. ಇಲ್ಲಿನ ಇನ್ನಿತರ ಆಕರ್ಷಣೆಗಳೆಂದರೆ ಪ್ಯಾರಸೆಯ್ಲಿಂಗ್ ಮತ್ತು ಶಿಲಾರೋಹಣದಂತಹ ಸಾಹಸಕ್ರೀಡೆಗಳು ಇಲ್ಲಿ ನಡೆಯುತ್ತಿರುತ್ತವೆ. ಕೋಲಾರವು ಬೆಂಗಳೂರಿನಿಂದ 65ಕಿ.ಮೀ ದೂರದಲ್ಲಿದ್ದು ರಸ್ತೆಯ ಮೂಲಕ ಮತ್ತು ರೈಲಿನ ಮೂಲಕ ಸುಲಭವಾಗಿ ತಲುಪಬಹುದು.

ಕೋಲಾರ ಪ್ರಸಿದ್ಧವಾಗಿದೆ

ಕೋಲಾರ ಹವಾಮಾನ

ಉತ್ತಮ ಸಮಯ ಕೋಲಾರ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಕೋಲಾರ

  • ರಸ್ತೆಯ ಮೂಲಕ
    ಕೋಲಾರವು ಕರ್ನಾಟಕದ ಪ್ರಮುಖ ನಗರಗಳಲ್ಲಿ ಒಂದಾಗಿದೆ. ಇದು ಹತ್ತಿರದ ನಗರ ಮತ್ತು ಪಟ್ಟಣಗಳಿಂದ ಉತ್ತಮ ಬಸ್ಸುಗಳ ಸಂಪರ್ಕವನ್ನು ಹೊಂದಿದೆ. ಕೆ ಎಸ್ ಆರ್ ಟಿ ಸಿ ಬಸ್ಸುಗಳು ಬೆಂಗಳೂರಿನಿಂದ ಕೋಲಾರಕ್ಕೆ ನಿರಂತರವಾಗಿ ಹೋಗಿ ಬರುತ್ತಿರುತ್ತವೆ. ಪ್ರವಾಸಿಗರು ಬಾಡಿಗೆ ವಾಹನಗಳಲ್ಲಿ ಹತ್ತಿರ ರೈಲು ಮತ್ತು ವಿಮಾನ ನಿಲ್ದಾಣಗಳಿಂದ ಕೋಲಾರ ತಲುಪಬಹುದು.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಕೋಲಾರವು ತನ್ನದೆ ಆದ ರೈಲು ನಿಲ್ದಾಣವನ್ನು ಹೊಂದಿದೆ. ಇದು ನಗರ ಕೇಂದ್ರಭಾಗದಿಂದ 2 ಕಿ.ಮೀ ದೂರದಲ್ಲಿದೆ. ಇದು ಹತ್ತಿರದ ನಗರ ಮತ್ತು ಪಟ್ಟಣಗಳೊಂದಿಗೆ ಉತ್ತಮ ರೈಲು ಸಂಪರ್ಕವನ್ನು ಹೊಂದಿದೆ. ಪ್ರವಾಸಿಗರು ಇಲ್ಲಿಂದ ಟ್ಯಾಕ್ಸಿ ಮತ್ತು ಬಾಡಿಗೆ ವಾಹನಗಳಲ್ಲಿ ಹತ್ತಿರದ ಸ್ಥಳಗಳಿಗೆ ತಲುಪಬಹುದು.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಕೋಲಾರಕ್ಕೆ ಸಮೀಪದ ವಿಮಾನನಿಲ್ದಾಣವಾಗಿದೆ. ಇದು ದೇಶೀಯ ಮತ್ತು ವಿದೇಶಿಯ ಪ್ರವಾಸಿಗರಿಗೆ ಅನುಕೂಲಕರವಾಗಿದೆ. ಇದು ಇಲ್ಲಿಂದ 68 ಕಿ.ಮೀ ದೂರದಲ್ಲಿದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ದೇಶದ ಮತ್ತು ವಿದೇಶದ ವಿಮಾನ ನಿಲ್ದಾಣಗಳೊಂದಿಗೆ ಉತ್ತಮ ವಿಮಾನ ಸಂಪರ್ಕವನ್ನು ಹೊಂದಿದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri