Search
  • Follow NativePlanet
Share
ಮುಖಪುಟ » ಸ್ಥಳಗಳು » ಕೊಲ್ಹಾಪುರ » ಹವಾಮಾನ

ಕೊಲ್ಹಾಪುರ ಹವಾಮಾನ

ಕೊಲ್ಹಾಪುರವು ತೀರ ಪ್ರದೇಶ ಹವಾಮಾನ ಮತ್ತು ಒಳನಾಡು ಪ್ರದೇಶ ಹವಾಮಾನಗಳ ಪರಿಪೂರ್ಣ ಮಿಶ್ರಣವನ್ನು ಹೊಂದಿದೆ. ತಾಪಮಾನವು ಸಾಮಾನ್ಯವಾಗಿ 14 ಡಿಗ್ರಿ ಸೆಲ್ಶಿಯಸ್ ನಿಂದ ಹಿಡಿದು 35 ಡಿಗ್ರಿ ಸೆಲ್ಶಿಯಸ್ ವರೆಗಿರುತ್ತದೆ. ಅತಿಯಾದ ಶಾಖದ ನಡುವೆ ಸೌಂದರ್ಯವನ್ನು ಸವಿಯುವುದು ಕಷ್ಟಕರವಾದ್ದರಿಂದ, ಮೇ ಒಂದನ್ನು ಹೊರತು ಪಡಿಸಿ ವರ್ಷ ಪೂರ್ತಿ ಭೇಟಿ ನೀಡಲು ಈ ಸ್ಥಳ ಯೋಗ್ಯವಾಗಿದೆ.

ಬೇಸಿಗೆಗಾಲ

ಬೇಸಿಗೆಯಲ್ಲಿ ಗರಿಷ್ಠ ತಾಪಮಾನವು 38 ಡಿಗ್ರಿ ಸೆಲ್ಶಿಯಸ್ ವರೆಗಿರುತ್ತದೆ. ಸಾಮಾನ್ಯವಾಗಿ 33 -35 ಡಿಗ್ರಿ ಸೆಲ್ಶಿಯಸ್ ನಿಂದ ಹಿಡಿದು 24 - 26 ಡಿಗ್ರಿ ಸೆಲ್ಶಿಯಸ್ ನಡುವೆ ಹೊಯ್ದಾಡುತ್ತಿರುತ್ತದೆ. ಈ ಸಮಯದಲ್ಲಿ ವಾತಾವರಣವು ತೇವಾಂಶದಿಂದ ಕೂಡಿದ್ದರೂ ಕೂಡ ಸ್ವಲ್ಪ ಪ್ರಮಾಣದ ತಂಪು ಕಂಡುಬರುತ್ತದೆ.

ಮಳೆಗಾಲ

ಜೂನ್ ನಿಂದ ಸೆಪ್ಟಂಬರ್ ವರೆಗು ಮಳೆಗಾಲವಿದ್ದು, ಈ ಅವಧಿಯಲ್ಲಿ ಕೊಲ್ಹಾಪುರವು ಪಶ್ಚಿಮ ಘಟ್ಟಕ್ಕೆ ಹತ್ತಿರವಾಗಿರುವದರಿಂದ ಒಳ್ಳೆಯ ಪ್ರಮಾಣದ ಮಳೆಯನ್ನು ಪಡೆಯುತ್ತದೆ. ವಾತಾವರಣದ ತಾಪಮಾನವು 20 ಡಿಗ್ರಿ ಸೆಲ್ಶಿಯಸ್ ನಿಂದ ಹಿಡಿದು 30 ಡಿಗ್ರಿ ಸೆಲ್ಶಿಯಸ್ ವರೆಗಿದ್ದು ಮಧ್ಯಮವಾದ ಮಳೆಯಾಗುತ್ತದೆ. ಒಮ್ಮೊಮ್ಮೆ ಅತಿಯಾದ ಮಳೆಯಿಂದ ಪ್ರವಾಹದ ಸಾಧ್ಯತೆಯು ಇರುತ್ತದೆ.

ಚಳಿಗಾಲ

ಚಳಿಗಾಲವು ನವಂಬರ್ ನಿಂದ ಫೆಬ್ರುವರಿವರೆಗಿದ್ದು, ವಾತಾವರಣವು ಆಹ್ಲಾದಕರವಾಗಿರುತ್ತದೆ. ಸಾಮಾನ್ಯವಾಗಿ ತಾಪಮಾನವು ಈ ಅವಧಿಯಲ್ಲಿ 14 ಡಿಗ್ರಿ ಸೆಲ್ಶಿಯಸ್ ನಿಂದ 30 ಡಿಗ್ರಿ ಸೆಲ್ಶಿಯಸ್ ವರೆಗಿರುತ್ತದೆ. ವಾತಾವರಣದಲ್ಲಿ ಕಡಿಮೆ ತೇವಾಂಶವಿದ್ದು ಆಹ್ವಾನಿಸುತ್ತಿರುತ್ತದೆ.