Search
  • Follow NativePlanet
Share
» »ಅಲೆಯಾಗಿ ಬರುವ ನೀರಿನ ಮೋಡಿಗೆ ಈ ಮನ ಸೋಲುವುದು

ಅಲೆಯಾಗಿ ಬರುವ ನೀರಿನ ಮೋಡಿಗೆ ಈ ಮನ ಸೋಲುವುದು

By Divya Pandit

ಎಷ್ಟು ದೂರ ನೋಡಿದರೂ ಅಂತ್ಯ ಕಾಣದು. ಕಣ್ಣು ಹಾಯಿಸಿದಷ್ಟೂ ನೀರಿನ ರಾಶಿಯೇ ಹೊರತು ಬೇರೇನು ಇಲ್ಲ. ಪದೇ ಪದೇ ಕಾಲಿಗೆ ಬಂದು ಬಡಿಯುವ ನೀರಿನ ತೆರೆಗಳು, ಎಷ್ಟೇ ಗಟ್ಟಿ ನಿಂತಿರುತ್ತೇನೆ ಎಂದರೂ ಪಾದದಡಿಯ ಮರಳು ನೀರಿನೊಂದಿಗೆ ಜಾರಿ ಹೋಗುವುದು.

ಅಲ್ಲಲ್ಲಿ ಬಿದ್ದಿರುವ ಕಪ್ಪೆಚಿಪ್ಪುಗಳು, ಮನಸ್ಸಿಗೆ ಖುಷಿಕೊಡುವ ಗಾಳಿ, ಈ ಸುಂದರ ಅನುಭವ ಆಗುವುದು ಸಮುದ್ರ ತೀರದಲ್ಲಿ ಮಾತ್ರ. ನಗರದ ಮಾಲಿನ್ಯ, ಜೀವನದ ಜಂಜಾಟಗಳನ್ನೆಲ್ಲಾ ಬಿಟ್ಟು ಸಮುದ್ರ ತೀರದಲ್ಲಿ ಕುಳಿತು, ಮನಸ್ಸಿಗೊಂದಿಷ್ಟು ರಿಲ್ಯಾಕ್ಸ್ ತಂದುಕೊಳ್ಳಬೇಕೆಂದರೆ ಹೆಚ್ಚು ದೂರ ಹೋಗಬೇಕಿಲ್ಲ. ಬೆಂಗಳೂರಿಗೆ ಹತ್ತಿರದಲ್ಲೇ ಹಲವು ಸಮುದ್ರ ತೀರಗಳಿವೆ. ಅವುಗಳ ಪರಿಚಯ ನಮಗಾಗಬೇಕಷ್ಟೆ.

ಗೋಕರ್ಣ

ಗೋಕರ್ಣ

ಪವಿತ್ರ ತೀರ್ಥಕ್ಷೇತ್ರ ಗೋಕರ್ಣ. ಈ ಕ್ಷೇತ್ರದ ಸುತ್ತುವರಿದ ಸಮುದ್ರ ತೀರ ಪ್ರವಾಸಿಗರಿಗೆ ಖುಷಿ ನೀಡುತ್ತದೆ. ಓಂ ಬೀಚ್ ಎಂದು ಕರೆಯುವ ಈ ಸಮುದ್ರ ತೀರದಲ್ಲಿ ಯಾವುದೇ ಚಿಂತೆ ಇಲ್ಲದೆ, ನಿಮಗಿಷ್ಟವಾಗುವ ಜ್ಯೂಸ್‍ಗಳನ್ನು ಕುಡಿಯುತ್ತ ಎಷ್ಟು ಹೊತ್ತು ಬೇಕಾದರೂ ಕುಳಿತುಕೊಳ್ಳಬಹುದು. ಹತ್ತಿರದಲ್ಲೇ ಅನುಕೂಲವಾಗುವಂತಹ ಬೆಲೆಗೆ ಸ್ಟೇ ಹೋಮ್, ರೆಸಾರ್ಟ್, ಹೋಟೆಲ್‍ಗಳು ಸಿಗುತ್ತವೆ. ಬೆಂಗಳೂರಿನಿಂದ 8 ಘಂ. ಕಾಲ ಪ್ರಯಾಣ ಮಾಡಬೇಕಾಗುತ್ತದೆ. ಕುಡ್ಲೆ ಸಮುದ್ರ ತೀರ, ಗೋಕರ್ಣ

PC: wikipedia.org

ಮುರ್ಡೇಶ್ವರ

ಮುರ್ಡೇಶ್ವರ

ಪ್ರಪಂಚದ ಎರಡನೇ ಅತಿದೊಡ್ಡ ಶಿವನ ಮೂರ್ತಿ ಇರುವುದು ಮುರ್ಡೇಶ್ವರದಲ್ಲಿ. ಈ ದೇವಸ್ಥಾನದ ಸುತ್ತಲೂ ಸಮುದ್ರ ತೀರವಿದೆ. ಸಮುದ್ರದ ನೀರಿನಲ್ಲಿ ಆಡಲು ಇಷ್ಟಪಡುವರಿಗೆ ಇದೊಂದು ಸೂಕ್ತ ಜಾಗ. ಇಲ್ಲಿ ಹಲವಾರು ವಾಟರ್ ಗೇಮ್‍ಗಳನ್ನು ಇಡಲಾಗಿದೆ. ಯಾವ ಭಯವಿಲ್ಲದೆ ಆಡಬಹುದು. ಬೆಂಗಳೂರಿನಿಂದ 9 ತಾಸುಗಳ ಪ್ರಯಾಣ ಮಾಡಬೇಕು. ಮುರುಡೇಶ್ವರ ಬೀಚ್, ಮುರುಡೇಶ್ವರ

PC: wikipedia.org

ಮಂಗಳೂರು

ಮಂಗಳೂರು

ಕರಾವಳಿ ತೀರದಲ್ಲಿ ಬರುವ ಈ ಸಮುದ್ರಕ್ಕೆ ಬಂದರೆ ನಿಮಗೊಂದು ಸುಂದರ ಅನುಭವ ಆಗುತ್ತದೆ. ನೀವು ಸಮುದ್ರ ತೀರಕ್ಕೆ ಹೋಗಿ ನಿಮ್ಮ ಪಾದಗಳನ್ನು ನೀರಿನಲ್ಲಿ ಮುಳುಗಿಸಬಹುದು. ನೀರಿನಲ್ಲಿ ನಿಶ್ಚಿಂತೆಯಾಗಿ ಆಟ ಆಡುತ್ತಾ ಕಾಲ ಕಳೆಯಲು ಇದೊಂದು ಸೂಕ್ತ ಸ್ಥಳ. ಬೆಂಗಳೂರಿನಿಂದ ಇಲ್ಲಿಗೆ 7 ತಾಸು ಪ್ರಯಾಣ ಮಾಡಬೇಕು.

PC: flickr.com

ಉಡುಪಿ

ಉಡುಪಿ

ಹಲವಾರು ಸಮುದ್ರ ತೀರಗಳನ್ನು ಕಾಣಬಹುದಾದ ಉಡುಪಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ದೇವಾಲಯಗಳಿಗೂ ಹೋಗಬಹುದು. ಸೂರ್ಯಾಸ್ತ ಹಾಗೂ ಸೂರ್ಯೋದಯದ ಸಂದರ್ಭವನ್ನು ಕಣ್ತುಂಬಿಕೊಳ್ಳಲು ಉತ್ತಮ ಜಾಗ. ಬೆಂಗಳೂರಿನಿಂದ 7 ತಾಸು ಪ್ರಯಾಣ ಮಾಡಬೇಕು. ಉಡುಪಿ - ಚಂದ್ರ ಮತ್ತು ನಕ್ಷತ್ರಗಳ ಸ್ಥಳ

PC: wikipedia.org

ಪಾಂಡಿಚೆರಿ

ಪಾಂಡಿಚೆರಿ

ಹಲವಾರು ಐತಿಹಾಸಿಕ ಪ್ರದೇಶವನ್ನು ಒಳಗೊಂಡ ಪಾಂಡಿಚೆರಿ ನಯನಮನೋಹರವಾದಂತಹ ಸಮುದ್ರತೀರಗಳಿಂದ ಆವೃತ್ತವಾಗಿರುವುದೇ ವಿಶೇಷ. ಜಲ ಕ್ರೀಡೆ ಆಡಲು, ಸುಮ್ಮನೆ ಕುಳಿತು ಸಮುದ್ರವನ್ನು ನೋಡಲು, ಐತಿಹಾಸಿಕ ಪ್ರದೇಶಗಳನ್ನು ನೋಡುತ್ತಾ ಹೆಜ್ಜೆ ಹಾಕಲು ಸೂಕ್ತ ಸ್ಥಳ. ಬೆಂಗಳೂರಿನಿಂದ ಇಲ್ಲಿಗೆ ಬರಬೇಕೆಂದರೆ 6. ಘಂಟೆಗಳ ಕಾಲ ಪ್ರಯಾಣ ಮಾಡಬೇಕು.

PC: wikipedia.org

ಮಹಾಬಲಿಪುರಂ

ಮಹಾಬಲಿಪುರಂ

ಚೆನ್ನೈನ ಹೊರವಲಯದಲ್ಲಿ ಬರುವ ಈ ಸಮುದ್ರ ತೀರ ವಾರಾಂತ್ಯದ ರಜೆಗೆ ಬರಬಹುದು. ಸೀ ಫುಡ್‍ಗಳನ್ನು ಸವಿಯಬೇಕು ಎಂದು ಆಸೆ ಪಡುವವರಿಗೆ ಇದೊಂದು ಸ್ವರ್ಗ ತಾಣ. ಬೆಂಗಳೂರಿನಿಂದ ಇಲ್ಲಿಗೆ ಬರಬೇಕೆಂದರೆ 5 ತಾಸು ಪ್ರಯಾಣ ಮಾಡಬೇಕು. ಮಹಾಬಲಿಪುರಂ - ಸಮುದ್ರ ತೀರದ ಅತ್ಯದ್ಭುತ ತಾಣ.

PC: wikipedia.org

ನೆನಪಿಟ್ಟುಕೊಳ್ಳಬೇಕು

ನೆನಪಿಟ್ಟುಕೊಳ್ಳಬೇಕು

* ಸಮುದ್ರಕ್ಕೆ ಹೋಗಲು ಒಳ್ಳೆಯ ಸಮಯವೆಂದರೆ ಬೆಳಿಗ್ಗೆ 6 ರಿಂದ 8 ಘಂಟೆ, ಸಂಜೆ 4 ರಿಂದ 6 ಘಂಟೆ.
* ಮರಳಿನಲ್ಲಿ ಆಡಲು ಬೇಕಾದ ಸಾಮಗ್ರಿಯನ್ನು ಕೊಂಡೊಯ್ಯುವುದು.
* ಸಮುದ್ರ ತೀರದಲ್ಲಿ ಸಿಗುವ ವಿಶೇಷ ತಿನಿಸುಗಳನ್ನು ಸವಿಯಬೇಕು.
* ಸೂರ್ಯೋದಯ ಹಾಗೂ ಸೂರ್ಯಾಸ್ತದ ಸೌಂದರ್ಯವನ್ನು ನೋಡಲು ಮರೆಯಬಾರದು.
* ಸಮುದ್ರದ ಅಲೆಗಳ ಶಕ್ತಿ ಹೆಚ್ಚಿರುತ್ತವೆ ಹಾಗಾಗಿ ನೀರಿನಲ್ಲಿ ಹೆಚ್ಚು ಆಳಕ್ಕೆ ಹೋಗದೆ ಆದಷ್ಟು ದಡದಲ್ಲೇ ಆಡುವುದು ಸೂಕ್ತ.

PC: wikipedia.org

Read more about: gokarna udupi mangalore

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more