Search
  • Follow NativePlanet
Share
» »ಇಷ್ಟೆಲ್ಲಾ ವೆರೈಟಿ ಮಾವಿನ ಹಣ್ಣುಗಳಲ್ಲಿ ಮಾವಿನ ರಾಣಿ ಯಾವುದು ಹೇಳಿ ನೋಡೋಣ?

ಇಷ್ಟೆಲ್ಲಾ ವೆರೈಟಿ ಮಾವಿನ ಹಣ್ಣುಗಳಲ್ಲಿ ಮಾವಿನ ರಾಣಿ ಯಾವುದು ಹೇಳಿ ನೋಡೋಣ?

ಮಾವಿನ ಹಣ್ಣನ್ನು ಹಣ್ಣುಗಳ ರಾಜ ಎನ್ನುತ್ತಾರೆ. ಎಲ್ಲಾ ಪ್ರಾಯದವರಿಗೆ ಮಾವಿನ ಹಣ್ಣು ಇಷ್ಟವಾಗುತ್ತದೆ. ಈಗಾಗಲೇ ವಿವಿಧ ತಳಿಯ ಮಾವಿನ ಹಣ್ಣು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಮಾವು ಪ್ರೀಯರಿಗೆ ಮಾವಿನ ಹಣ್ಣನ್ನು ಸವಿಯುವ ಕಾಲ ಬಂದಿದೆ. ಈ ಋತುವಿನಲ್ಲಿ ಭಾರತ ಪ್ರಮುಖ ಮಾವಿನಹಣ್ಣಿನ ತಳಿಗಳಾದ ಕೇಸರ್, ತೋತಾಪುರಿ, ಅಲಾನ್ಸೋ ಮಾವಿನ ಹಣ್ಣುಗಳನ್ನು ಜಪಾನ್, ದಕ್ಷಿಣ ಕೊರಿಯಾ ದೇಶಗಳಿಗೆ ರಫ್ತು ಮಾಡಲಿದೆ. ಭಾರತದಲ್ಲಿ ಎಷ್ಟೆಲ್ಲಾ ಮಾವಿನ ಹಣ್ಣಿನ ಪ್ರಭೇಧಗಳಿವೆ ಅನ್ನೋದು ನಿಮಗೆ ಗೊತ್ತಾ? ಅವುಗಳಲ್ಲಿ ಯಾವೆಲ್ಲಾ ತಳಿಯ ಮಾವನ್ನು ನೀವು ತಿಂದಿದ್ದೀರಾ? ನಿಮಗೆ ಮಾವಿನ ಪ್ರಭೇಧಗಳ ಬಗ್ಗೆ ಗೊತ್ತಿಲ್ಲವಾದಲ್ಲಿ ಇಲ್ಲಿದೆ ನೋಡಿ ಮಾವಿನ ಪ್ರಬೇಧಗಳ ವಿವರ.

ಆಲ್ಫೊನ್ಸೋ ಮಾವಿನ ಹಣ್ಣು

ಆಲ್ಫೊನ್ಸೋ ಮಾವಿನ ಹಣ್ಣು

PC: G patkar

ಆಲ್ಫೊನ್ಸೋ ಮಾವಿನ ಹಣ್ಣು ಅತ್ಯಂತ ಶ್ರೇಷ್ಠ ಪ್ರಭೇದಗಳ ಮಾವಿನ ಹಣ್ಣುಗಳಲ್ಲಿ ಒಂದಾಗಿದೆ. ಅತ್ಯಂತ ಸಿಹಿಯಾಗಿದ್ದು, ರುಚಿಯಾಗಿದೆ. ಭಾರತದಲ್ಲಿ ಪೋರ್ಚುಗೀಸ್ ವಸಾಹತುಗಳನ್ನು ಸ್ಥಾಪಿಸಲು ನೆರವಾದ ಪೋರ್ಚುಗೀಸ್ ಜನರಲ್ ಮತ್ತು ಮಿಲಿಟರಿ ಪರಿಣತರಾದ ಅಫೊನ್ಸೊ ಡಿ ಅಲ್ಬುಕರ್ಕ್ ರ ಹೆಸರನ್ನು ಈ ಮಾವಿನ ಹಣ್ಣಿಗೆ ಇಡಲಾಗಿದೆ. ಆಲ್ಫೋನ್ಸೊ ಮಾವಿನ ಅತ್ಯಂತ ದುಬಾರಿಯಾಗಿದ್ದು, ಪಶ್ಚಿಮ ಭಾರತದಲ್ಲಿ ಸಿಂಧುದುರ್ಗ, ರತ್ನಾಗಿರಿ ಮತ್ತು ರಾಯ್ಗಡ್ ಜಿಲ್ಲೆಗಳಲ್ಲಿ ಅತಿ ಹೆಚ್ಚಾಗಿ ಬೆಳೆಸಲಾಗುತ್ತದೆ.

ಚೌನ್ಸಾ-ಉತ್ತರ ಭಾರತ

ಚೌನ್ಸಾ-ಉತ್ತರ ಭಾರತ

PC: Jahanzaib Zai

ಉತ್ತರ ಭಾರತದಲ್ಲಿ ಬೆಳೆಯುವ ಅತ್ಯಂತ ಸಿಹಿಯಾದ ಮಾವಿನ ಹಣ್ಣುಗಳು ಚೌನ್ಸಾವಾಗಿದ್ದು, ಇದು ಕೆಂಪು ಬಣ್ಣದಿಂದ ಚಿನ್ನದ ಹಳದಿ ಬಣ್ಣವನ್ನು ಹೊಂದಿದೆ. ಇದು ಮುಖ್ಯವಾಗಿ ಪಾಕಿಸ್ತಾನದ ಪಂಜಾಬ್‌ನ ಮಿರ್ಪುರ್ ಖಾಸ್ ಸಿಂಧ್ನಲ್ಲಿ ನಿರ್ಮಾಣಗೊಂಡಿತು.

ದಾಶೇರಿ -ಉತ್ತರ ಭಾರತ

ದಾಶೇರಿ -ಉತ್ತರ ಭಾರತ

PC:Khalid Mahmood

ದಾಶೇರಿ ಎಂಬುದು ಭಾರತದ ಉತ್ತರ ಭಾಗಗಳಲ್ಲಿ ಮೂಲಭೂತವಾಗಿ ಬೆಳೆಯಲಾಗುವ ಮಾವಿನಹಣ್ಣಾಗಿದೆ. ಉತ್ತರ ಪ್ರದೇಶದ ಮಲಿಹಾಬಾದ್‌ನಲ್ಲಿ ದಾಶೇರಿ ಮಾವಿನ ಹಣ್ಣನ್ನು ಹೆಚ್ಚಾಗಿ ಬೆಳೆಸಲಾಗುತ್ತದೆ. ಚೌನ್ಸಾ, ಫಝ್ಲಿ, ಲಕ್ನೋವಾ, ಜೌಹರಿ ಮತ್ತು ಸಫೇಡಾದಂತಹ ಇತರ ವಿಧದ ಮಾವಿನಹಣ್ಣುಗಳನ್ನೂ ಇಲ್ಲಿ ಬೆಳೆಯಲಾಗುತ್ತದೆ.

 ನೀಲಂ ಮಾವು

ನೀಲಂ ಮಾವು

ಭಾರತ ಮತ್ತು ಪಾಕಿಸ್ತಾನದ ಅನೇಕ ಪ್ರದೇಶಗಳಲ್ಲಿ ನೀಲಂ ಮಾವು ಬೆಳೆಯಲಾಗುತ್ತದೆ. ಹೆಚ್ಚು ಪ್ರಸಿದ್ಧವಾದ ಪಾಕಿಸ್ತಾನಿ ಪ್ರಭೇದಗಳು ಸಿಂಧ್ ಪ್ರದೇಶದಿಂದ ಬಂದಿದ್ದು, ದಕ್ಷಿಣ ಭಾರತದಲ್ಲಿ ಬೆಳೆಯಲಾಗುವ ಪ್ರಸಿದ್ಧ ಮಾವಿನ ಪ್ರಬೇಧವಾಗಿದೆ. ಬಹಳ ಪರಿಮಳಯುಕ್ತ ಹಣ್ಣು ಇದಾಗಿದ್ದು ಪರಿಮಳ ಮೂಗಿಗೆ ಬಡಿಯುವಾಗಲೇ ತಿನ್ನುವ ಎನ್ನುವ ಆಸೆ ಮೂಡುತ್ತದೆ. ಪ್ರಪಂಚದಾದ್ಯಂತ ಅನೇಕ ಜನರು ಇಷ್ಟ ಪಡುವ ಹಣ್ಣು ಇದಾಗಿದೆ.

ಬಾದಾಮಿ ಮಾವಿನ ಹಣ್ಣು

ಬಾದಾಮಿ ಮಾವಿನ ಹಣ್ಣು

PC: Siva.chander

ಬಾದಾಮಿ ಮಾವಿನಕಾಯಿಗಳನ್ನು ಕರ್ನಾಟಕ ರಾಜ್ಯದ ಅಲ್ಫೋನ್ಸೊ ಎಂದೂ ಕರೆಯುತ್ತಾರೆ. ಈ ಹಣ್ಣಿನ ಬಣ್ಣ, ರುಚಿಯು ಮಹಾರಾಷ್ಟ್ರದ ರತ್ನಗಿರಿಯಲ್ಲಿ ಬೆಳೆಯಲಾಗುವ ಆಲ್ಫೋನ್ಸೋ ಮಾವಿನಹಣ್ಣಿಗೆ ಸಮವಾಗಿದೆ. ಹಾಗಾಗಿ ಇದನ್ನು ಕರ್ನಾಟಕದ ಆಲ್ಫೋನ್ಸೋ ಎನ್ನುತ್ತಾರೆ.

ಲ್ಯಾಂಗ್ರಾ

ಲ್ಯಾಂಗ್ರಾ

PC:Abhishek Priyadarshi

ಲ್ಯಾಂಗ್ರಾ ಮಾವಿನ ಹಣ್ಣು ಪ್ರಮುಖವಾದ ಮಾವಿನ ತಳಿಯಾಗಿದ್ದ ಇದು ಉತ್ತರ ಭಾರತದ ಅತ್ಯಂತ ಹೆಚ್ಚು ಶ್ರೇಷ್ಠವಾದ ಮಾವುಗಳಲ್ಲಿ ಒಂದಾಗಿದೆ. ಲ್ಯಾಂಗ್ರಾ ಮಾವಿನ ಹಣ್ಣುಗಳು ಉತ್ತರ ಪ್ರದೇಶದ ವಾರಣಾಸಿ ಮೂಲದವುಗಳಾಗಿವೆ.

ಮುಲ್ಗೋಬಾ-ತಮಿಳುನಾಡು

ಮುಲ್ಗೋಬಾ-ತಮಿಳುನಾಡು

PC:Asit K. Ghosh

ಮುಲ್ಗೋಬಾ ಮಾವಿನ ಹಣ್ಣನ್ನು ತಮಿಳುನಾಡು ಮತ್ತು ದಕ್ಷಿಣ ಭಾರತದ ಇತರ ಭಾಗಗಳಲ್ಲಿ ಬೆಳೆಯಲಾಗುತ್ತದೆ. ಇದು ಅತ್ಯುತ್ತಮ ಮಾವಿನ ಹಣ್ಣಾಗಿದೆ. ಮುಲ್ಗೋಬಾವನ್ನು "ದಕ್ಷಿಣ ಭಾರತದ ಆಲ್ಫೋನ್ಸೋ ಎಂದು ಕರೆಯಲಾಗುತ್ತದೆ.

ರಸಪೂರಿ ಮಾವು-ಕರ್ನಾಟಕ

ರಸಪೂರಿ ಮಾವು-ಕರ್ನಾಟಕ

PC:Sampigesrini

ರಸಪೂರಿ ಮಾವಿನಹಣ್ಣು ಮೊಟ್ಟೆಯಾಕಾರದಲ್ಲಿರುತ್ತದೆ. ಮಾವಿನಹಣ್ಣು ಬಹಳ ರುಚಿಯಾಗಿದ್ದು ಇದನ್ನು ಭಾರತದಲ್ಲಿ ಮಾವಿನ ಹಣ್ಣುಗಳ ರಾಣಿ ಎಂದು ಪರಿಗಣಿಸಲಾಗಿದೆ. ರಸಪೂರಿ ಮಾವಿನಹಣ್ಣನ್ನು ಕರ್ನಾಟಕದಲ್ಲಿ ಹೆಚ್ಚಾಗಿ ಬೆಳೆಸಲಾಗುತ್ತದೆ.

ಹಿಮ್ಸಾಗರ್ ಮಾವು

ಹಿಮ್ಸಾಗರ್ ಮಾವು

PC:Asit K. Ghosh

ಹಿಮ್ಸಾಗರ್ ಮಾವುಗಳು ಪಶ್ಚಿಮ ಬಂಗಾಳ ಮತ್ತು ಒರಿಸ್ಸಾದ ವಿಶೇಷ ಮಾವಿನ ಹಣ್ಣಾಗಿದೆ. ಇವು ಭಾರತದಲ್ಲಿ ಅಗ್ರ ಐದು ಮಾವಿನ ಹಣ್ಣುಗಳಲ್ಲಿ ಒಂದಾಗಿದೆ. ರತಂಗಿರಿ ಹಪಸ್, ಬನಾರಾಸಿ ಲಾಂಗ್ಡಾ, ಗಿರ್ ಕೇಸರ್ ಮತ್ತು ಬಂಗನಾಪಲ್ಲಿಗಳ ಜೊತೆಗೆ ಇವು ಕೂಡಾ ಸೇರಿದೆ.

ತೋತಾಪುರಿ

ತೋತಾಪುರಿ

PC: Asit K. Ghosh

ತೋತಾಪುರಿ ಮಾವಿನ ಹಣ್ಣನ್ನು ದಕ್ಷಿಣ ಭಾರತದಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತದೆ. ಆಂಧ್ರ ಪ್ರದೇಶ, ಕರ್ನಾಟಕ ಮತ್ತು ತಮಿಳುನಾಡುಗಳಲ್ಲಿ ತೋತಾಪುರಿ ಮಾವು ಪ್ರಸಿದ್ಧವಾದ ಮಾವಿನ ಹಣ್ಣಿನ ತಳಿಯಾಗಿದೆ. ಭಾರತದಲ್ಲಿ ಬೆಳೆಯಲಾಗುವ ಪ್ರಮುಖ ಮಾವಿನ ತಳಿಗಳಲ್ಲಿ ತೋತಾಪುರಿ ಒಂದಾಗಿದೆ.

ಬಂಗನಾಪಲ್ಲಿ೦-ಆಂಧ್ರಪ್ರದೇಶ

ಬಂಗನಾಪಲ್ಲಿ೦-ಆಂಧ್ರಪ್ರದೇಶ

PC: Gnt

ಆಂಧ್ರಪ್ರದೇಶದ ಅತ್ಯಂತ ಪ್ರಸಿದ್ಧ ಮಾವಿನ ತಳಿ ಇದಾಗಿದೆ. ಅತ್ಯಂತ ಸಾಮಾನ್ಯವಾದ ತಳಿಗಳಲ್ಲಿ ಒಂದಾದ ಬೆನಿಶನ್ ಮಾವು ಕೂಡ ಬಂಗನಾಪಲ್ಲಿ ಎಂದು ಕರೆಯಲ್ಪಡುತ್ತದೆ. ಈ ಮಾವಿನಕಾಯಿಗಳು ದೊಡ್ಡದಾಗಿದ್ದು ಒಂದೊಂದು ಮಾವಿನಹಣ್ಣು ಸುಮಾರು 350-400 ಗ್ರಾಂಗಳಷ್ಟು ತೂಕವನ್ನು ಹೊಂದಿರುತ್ತದೆ. ಇದನ್ನು ದಕ್ಷಿಣ ಭಾರತದಲ್ಲಿನ ಮಾವಿನಹಣ್ಣುಗಳ ರಾಜ ಎಂದು ಕರೆಯಲ್ಪಡುತ್ತವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more