Search
 • Follow NativePlanet
Share
ಮುಖಪುಟ » ಸ್ಥಳಗಳು» ಅಂಡಮಾನ್ ಮತ್ತು ನಿಕೋಬಾರ್

ಅಂಡಮಾನ್ ಮತ್ತು ನಿಕೋಬಾರ್ – ಪ್ರಶಾಂತ ದ್ವೀಪಗಳು

ಸಮಾನ್ಯವಾಗಿ ಎಲ್ಲರೂ ಉಷ್ಣವಲಯದ ಬೆಚ್ಚಗಿನ ಬೀಚ್ ನಲ್ಲಿ ಏಕಾಂತವಾಗಿ ರಜಾ ದಿನಗಳನ್ನು ಕಳೆಯಲು ಬಯಸುತ್ತಾರೆ. ಇದು ಇಬಿಝಾ ದಿ ಬ್ರೆಜಿಲಿಯನ್ ಅಮೆಜಾನ್ ಅಥವಾ ಇನ್ನಿತರೆ ಕಡಲ ತೀರಗಳು ಆಗಿರಬಹುದು. ವಿಶ್ವದ ಪ್ರವಾಸಿ ತಾಣಗಳಲ್ಲಿ ಕೆಲವು ಶಾಂತವಾದ ರಾಜ್ಯಗಳು ಪ್ರವಾಸಿಗರಿಗೆ ಏಕಾಂತವನ್ನು ನೀಡುವಂತಹ ಪ್ರದೇಶಗಳನ್ನು ಹೊಂದಿವೆ. ನೀವು ಏಕಾಂತವನ್ನು ಹುಡುಕುತ್ತಿದ್ದರೆ ಅಂತಹ ಸ್ಥಳ ಅಂಡಮಾನ್ ಮತ್ತು ನಿಕೋಬಾರ್ ಬಿಟ್ಟು ಬೇರೊಂದಿಲ್ಲ.

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಭೌಗೋಳಿಕ ಲಕ್ಷಣ

ಭಾರತದ ಪ್ರಮುಖ ಪ್ರವಾಸಿ ತಾಣ ಮತ್ತು ರಜಾ ದಿನಗಳನ್ನು ಕಳೆಯಲು ಇರುವ ಅತ್ಯಂತ ಸೂಕ್ತ ಸ್ಥಳ ಅಂಡಮಾನ್ ನಿಕೋಬಾರ್ ಬಂಗಾಳ ಕೊಲ್ಲಿಯಲ್ಲಿದೆ. ಇದು ಭಾರತದ ದಕ್ಷಿಣದ ತುತ್ತತುದಿಯಾಗಿದ್ದು ಸುಮಾರು 8000 ಚದರ ಕಿಲೋಮೀಟರ್ ಹರಡಿದೆ ಮತ್ತು ಎಲ್ಲೇ ನೋಡಿದರೂ ಹಚ್ಚ ಹಸಿರಿನಿಂದ ಕೂಡಿದೆ. ಅಂಡಮಾನ ಮತ್ತು ನಿಕೋಬಾರ್ ಗಳು ಎರಡು ಪ್ರತ್ಯೇಕ ದ್ವೀಪ ಸಮೂಹಗಳಾಗಿದ್ದು 10 ಡಿಗ್ರಿ ಉತ್ತರ ಅಕ್ಷಾಂಶದಿಂದ ಬೇರ್ಪಟ್ಟಿವೆ. ಇದರ ರಾಜಧಾನಿಯಾದ ಪೋರ್ಟ್ ಬ್ಲೇರ್, ಈ ದ್ವೀಪ ಸಮೂಹಗಳಿಗೆ ಪ್ರವೇಶದ್ವಾರವಾಗಿದ್ದು ವಿಮಾನ ನಿಲ್ದಾಣವನ್ನು ಹೊಂದಿದೆ. ಇದು ಈ ಪ್ರದೇಶದಲ್ಲೆ  ಅತ್ಯಂತ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ನಗರವಾಗಿದೆ. ಇಲ್ಲಿಗೆ ತಲುಪಿದ ಬಳಿಕ ಸಮುದ್ರದ ನೀರಿನ ಮೇಲೆ ಎತ್ತರವಾಗಿ ನಿಂತಿರುವ ಬೆಟ್ಟಗಳನ್ನು ನೋಡಲು ಇತರ ಸಾರಿಗೆ ವ್ಯವಸ್ಥೆಯನ್ನು ಮಾಡಿಕೊಳ್ಳಬಹುದು. ಹೀಗೆ ಇದು ಉತ್ತರದಿಂದ ದಕ್ಷಿಣದ ತನಕ ಸುಮಾರು 800 ಕಿಲೋಮೀಟರ್ ನಷ್ಟು ಹಬ್ಬಿದೆ. ಪೋರ್ಟ್ ಬ್ಲೇರ್ ಗೆ ನೀವು ಚೆನ್ನೈ ಅಥವಾ ಕೋಲ್ಕತ್ತಾದಂತಹ ಭಾರತದ ಪೂರ್ವ ಕರಾವಳಿಯಿಂದ ದೋಣಿಯ ಮೂಲಕವೂ ತಲುಪಬಹುದು.

ಅಂಡಮಾನ್ ನಿಕೋಬಾರ್ ದ್ವೀಪಗಳಿಗೆ ಹೋದಾಗ ನೋಡಲೇ ಬೇಕಾದ ಆಕರ್ಷಣೆಗಳು

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಕೊನೆಯಿಲ್ಲದ ಶುದ್ಧ ಬಿಳಿ ಮರಳಿನ ಕಡಲ ತೀರಗಳ ಸಮೂಹವಾಗಿದೆ. ಸ್ಕೂಬಾ ಡೈವಿಂಗ್ ಹಾಗೂ ಸಾಗರದ ಆಳದಲ್ಲಿ ಅನ್ವೇಷಣೆ ನಡೆಸುವುದು ಮುಂತಾದ ರೋಮಾಂಚನಕಾರಿ ಚಟುವಟಿಕೆಗಳಿಗೆ ಇಲ್ಲಿ ಅವಕಾಶವಿದೆ. ವಿವಿಧ ಪಕ್ಷಿ ಹಾಗೂ ಪ್ರಾಣಿ ಸಂಕುಲಗಳನ್ನೊಳಂಗೊಂಡ ಇಲ್ಲಿನ ಅದ್ಭುತ ಪ್ರಕೃತಿ ಸೌಂದರ್ಯವು ಪ್ರವಾಸಿಗರನ್ನು ಮೂಕ ವಿಸ್ಮಿತರನ್ನಾಗಿ ಮಾಡುತ್ತದೆ. ಇದರ ಜೂತೆಗೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹಗಳು 'ಪರಿಸರ ಸ್ನೇಹಿ ರಜಾ ತಾಣ' ಎಂಬ ಬಿರುದನ್ನೂ ತಮ್ಮದಾಗಿಸಿಕೊಂಡಿವೆ.

ಆಕರ್ಷಣೆಗಳು ಕಡಲ ತೀರಗಳಷ್ಟೇ ಆಗಿಲ್ಲ. ಇಲ್ಲಿರುವ ವೈವಿಧ್ಯಮಯ ಪಕ್ಷಿಗಳು, ಬಣ್ಣ ಬಣ್ಣದ ಹೂವುಗಳು ಮತ್ತು ಹಲವಾರು ದೊಡ್ಡ ದಟ್ಟ ಅರಣ್ಯಗಳು ಮಧುಚಂದ್ರಕ್ಕೊಂದು ಹೇಳಿಮಾಡಿಸಿದ ಪಕ್ಕಾ ಸನ್ನಿವೇಶವನ್ನು ಒದಗಿಸುತ್ತವೆ. ಸ್ಥಳೀಯರು, ಇಲ್ಲಿಗೆ ಬರುವ ಪ್ರವಾಸಿಗರಿಗಾಗಿ ನಿರ್ಮಿಸಿರುವ ವಿಶ್ರಾಂತಿ ಧಾಮ (ರೆಸಾಲ್ಟ್) ಗಳನ್ನು  ಹೇಗೆ ಉತ್ತಮವಾಗಿ ನಿರ್ವಹಿಸುತ್ತಿದ್ದಾರೆ ಎಂಬುದನ್ನು ನೋಡಬಹುದು. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಎಷ್ಟು ಅನನ್ಯ ಎಂಬುದು ಈ ಮಾಹಿತಿ ನಿಮಗೆ ಸ್ಪಷ್ಟ ಗೊಳಿಸುತ್ತದೆ. ಅಂಡಮಾನ್ ಮತ್ತು ನಿಕೋಬಾರ್ ಗಳಲ್ಲಿ 2200 ಪ್ರಭೇದದ ಸಸ್ಯಗಳು ಕಂಡುಬರುತ್ತವೆ. ಇವುಗಳಲ್ಲಿ ಸುಮಾರು 1300 ಸಂತತಿಗಳು ಭಾರತದಲ್ಲೂ ಕಾಣಸಿಗುವುದಿಲ್ಲ.

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಅಲಂಕಾರಿಕ ಚಿಪ್ಪುಮೀನು ಮತ್ತು ಸಿಂಪಿಗಳ ಒಂದು ಬೃಹತ್ ಮಾರುಕಟ್ಟೆಯನ್ನು ಹೊಂದಿವೆ. ಗುಪ್ತತೆಯನ್ನು ಸೂಕ್ತವಾಗಿ ಕಾಯ್ದಿಟ್ಟ ಪ್ರದೇಶ ಎಂಬ ಹೆಚ್ಚುಗಾರಿಕೆಯನ್ನು ಹೊಂದಿರುವ ಅಂಡಮಾನ್ ನಿಕೋಬಾರ್ ದ್ವೀಪಗಳು, ಇಷ್ಟರಲ್ಲಿಯೆ, ಬೇಸಿಗೆಯನ್ನು ಕಳೆಯಲು ಅತ್ಯಂತ ಸೂಕ್ತವಾದ ಪ್ರವಾಸಿ ತಾಣ ಎಂಬ ಹೆಗ್ಗಳಿಕೆಯನ್ನೂ ಪಡೆಯುವುದು ಬಹುತೇಕ ಖಚಿತವಾಗಿದೆ. 'ಟೈಮ್ ಮ್ಯಾಗಜೀನ್' ಹಾವ್ಲೋಕ್ ದ್ವೀಪದಲ್ಲಿರುವ ರಾಧಾನಗರ ಕಡಲ ತೀರವನ್ನು ಏಷ್ಯಾದಲ್ಲಿಯೇ ಅತ್ಯಂತ ಸುಂದರವಾದ ಕಡಲ ಕಿನಾರೆ ಎಂದು ಬರೆದಿತ್ತು. ಹಾವ್ಲೋಕ್ ನ ರಾಧಾನಗರ ಕಡಲ ಕಿನಾರೆ ಹೊರತುಪಡಿಸಿ ಹಾವ್ಲೋಕ್ ಕಡಲ ತೀರವೂ ನೀಲಿಯಾಗಿ ಕಾಣುವ ನೀರಿನಿಂದ ಕೂಡಿದ ಅತ್ಯಂತ ರಮಣೀಯವಾದ ಕಡಲ ಕಿನಾರೆಯಾಗಿದೆ.

ಅಂಡಮಾನ್ ಪ್ರವಾಸ ಎಂದ ಕೂಡಲೇ ಹೆಚ್ಚಿನ ಪ್ರವಾಸಿಗರು ಜಾಲಿ ಬಾಯ್ ಗೆ ಹೋಗಲೇ ಬೇಕು ಎನ್ನುತ್ತಾರೆ. ಜಾಲಿ ಬಾಯ್ ದ್ವೀಪ ಇತರ ದ್ವೀಪಗಳಾದ ಹಾವ್ ಲಾಕ್ ದ್ವೀಪ, ಸಿಕ್ಯೂ ದ್ವೀಪ ಗಳೊಂದಿಗೆ ಸೇರಿಕೊಂಡು ಪ್ರಸಿದ್ಧ ಮಹಾತ್ಮಾ ಗಾಂಧಿ ರಾಷ್ಟ್ರೀಯ ಸಾಗರ ಉದ್ಯಾನವನ್ನು ನಿರ್ಮಿಸಿವೆ. ಇದನ್ನು ವಂದೂರು ಸಾಗರ ಉದ್ಯಾನ ಎಂದೂ ಕರೆಯುತ್ತಾರೆ. ಮಾಲಿನ್ಯ ತಡೆ ಮತ್ತು ಕಲಬೆರಕೆ ತಡೆಗಾಗಿ ಸಾಕಷ್ಟು ನಿಗಾ ವಹಿಸುವ ಮತ್ತು ಪರಿಸರದ ಬಗ್ಗೆ ಸಾಕಷ್ಟು ಕಾಳಜಿ ವಹಿಸುವ ಈ ದ್ವೀಪ ಸಮೂಹದಲ್ಲಿನ ಸಮಶೀತೋಷ್ಣ ಹವಾಮಾನವನ್ನು ಎಲ್ಲರೂ ಇಷ್ಟಪಡುವುದರಲ್ಲಿ ಸಂಶಯವಿಲ್ಲ. ಇಲ್ಲಿನ ಸ್ವಚ್ಛವಾದ ಕಡಲ ಕಿನಾರೆಗಳು, ವೈವಿಧ್ಯಮಯ ಜಲಜೀವಿಗಳು, ಇಲ್ಲಿ ಕಂಡುಬರುವ ಸಸ್ಯ ಮತ್ತು ಪ್ರಾಣಿಗಳಿಗೆ ಸಮಾನವಾಗಿರುವ ಪ್ರದೇಶ ಬೇರೊಂದಿಲ್ಲ.

ಪ್ರಶಾಂತವಾದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹಗಳಿಗೆ ನಿಮ್ಮನ್ನು ಕೊಂಡೊಯ್ಯುವ ದಾರಿಗಳು

ಅಂಡಮಾನ್ ನಿಕೋಬಾರ್ ದ್ವೀಪಗಳಿಗೆ ತಲುಪುವುದು ಕಷ್ಟವೇನಿಲ್ಲ. ಭಾರತದ ಎಲ್ಲಾ ಪ್ರಮುಖ ವಿಮಾನಯಾನ ಕಂಪನಿಗಳು ಭಾರತದ ಕೋಲ್ಕತ್ತಾ, ಭುವನೇಶ್ವರ ಹಾಗೂ ಚೆನ್ನೈ ವಿಮಾನ ನಿಲ್ದಾಣಗಳಿಂದ ಪೋರ್ಟ್ ಬ್ಲೇರ್ ನ ವೀರ್ ಸಾವರ್ಕರ್ ವಿಮಾನ ನಿಲ್ದಾಣಕ್ಕೆ ಸಂಪರ್ಕ ಸಾಧಿಸುತ್ತವೆ. ಭಾರತ ನೌಕಾಯಾನ ನಿಗಮ ಎಮ್.ವಿ. ನಾನ್ಕೊವ್ರೀ ಎಂಬ ಹೆಸರಿನ ಹಡಗಿನ ಮೂಲಕ ಅಂಡಮಾನ್ ನಿಕೋಬಾರ್ ಗೆ ಸಂಪರ್ಕ ಸಾಧಿಸಬಹುದಾಗಿದೆ. ಇದು ಚೆನ್ನೈನಿಂದ ಪೋರ್ಟ್ ಬ್ಲೇರ್ ಗೆ ತಿಂಗಳಿಗೆ ಎರಡು ಬಾರಿ ಮತ್ತು ವೈಜಾಗ್ ಬಂದರಿನಿಂದ ಪೋರ್ಟ್ ಬ್ಲೇರ್ ಗೆ ತಿಂಗಳಿಗೆ ಮೂರು ಬಾರಿ ಪ್ರಯಾಣಿಸುತ್ತದೆ.

ಅಂಡಮಾನ್ ಮತ್ತು ನಿಕೋಬಾರ್ ಸ್ಥಳಗಳು

 • ಗ್ರೇಟ್ ನಿಕೋಬಾರ್ 7
 • ಹಾವ್ ಲಾಕ್ ದ್ವೀಪ 12
 • ಪೋರ್ಟ್ ಬ್ಲೇರ್ 28
 • ಗ್ರೇಟ್ ನಿಕೋಬಾರ್ 7
 • ಹಾವ್ ಲಾಕ್ ದ್ವೀಪ 12
One Way
Return
From (Departure City)
To (Destination City)
Depart On
26 Nov,Thu
Return On
27 Nov,Fri
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
26 Nov,Thu
Check Out
27 Nov,Fri
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
26 Nov,Thu
Return On
27 Nov,Fri