Search
  • Follow NativePlanet
Share
ಮುಖಪುಟ » ಸ್ಥಳಗಳು » ಪೋರ್ಟ್ ಬ್ಲೇರ್ » ಆಕರ್ಷಣೆಗಳು » ಜಾಲಿ ಬಾಯ್

ಜಾಲಿ ಬಾಯ್, ಪೋರ್ಟ್ ಬ್ಲೇರ್

1

ಇದು ರಾಜಧಾನಿ ನಗರ ಪೋರ್ಟ್ ಬ್ಲೇರ್ ಗೆ ಸಮೀಪದಲ್ಲಿರುವ ನಗರ ಮತ್ತು ಹೆಚ್ಚಿನ ಪ್ರವಾಸಿಗರು ಇದನ್ನು ಸ್ವರ್ಗಕ್ಕಿಂತ ಸ್ವಲ್ಪವೂ ಕಡಿಮೆ ಇರದ ದ್ವೀಪವೆಂದು ಕರೆಯುತ್ತಾರೆ. ಇದು ವಂದೂರು ರಾಷ್ಟ್ರೀಯ ಸಾಗರ ಉದ್ಯಾನವೆಂದು ಪ್ರಖ್ಯಾತವಾಗಿರುವ ಮಹಾತ್ಮ ಗಾಂಧಿ ರಾಷ್ಟ್ರೀಯ ಸಾಗರ ಉದ್ಯಾನದ ಒಂದು ಭಾಗವಾಗಿದೆ. ಹಾಗು ಈ ದ್ವೀಪ ಇಲ್ಲಿ ಬರುವ ಪ್ರವಾಸಿಗರಿಗೆ ಹವಳದ ಬಂಡೆಗಳನ್ನು ಹತ್ತಿರದಿಂದ ನೋಡುವ ಮತ್ತು ಅವುಗಳನ್ನು ಅನುಭವಿಸುವ ಅವಕಾಶವನ್ನು ನಿಡುತ್ತದೆ. ಇಲ್ಲಿನ ಶುದ್ಧ ಬಿಳಿ ಮರಳಿನ ಕಡಲ ತಡಿಗಳು ಜನಾಕರ್ಷಣೆಯ ಮತ್ತೊಂದು ಮೂಲವಾಗಿದೆ. ನೀವು ಅದೃಶ್ಟಶಾಲಿಗಳಾಗಿದ್ದರೆ ಒಂದೆರಡು ಡಾಲ್ಫಿನ್ ಗಳನ್ನೂ ಕಾಣಬಹುದು.

ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹಗಳಲ್ಲಿರುವ ಸ್ಥಳೀಯ ಜಲಜೀವಿಗಳನ್ನು ಸಂರಕ್ಷಿಸಲು ಇಲ್ಲಿನ ಅರಣ್ಯ ಇಲಾಖೆ ಮುತುವರ್ಜಿ ವಹಿಸಿ ರಾಷ್ಟ್ರೀಯ ಸಾಗರ ಉದ್ಯಾನವನನ್ನು ನಿರ್ಮಿಸಿದ್ದಾರೆ. ಈ ಸಾಗರ ಉದ್ಯಾನವನವು 150 ದ್ವೀಪಗಳನ್ನು ಒಳಗೊಂಡಿದೆ ಮತ್ತು ಸುಮಾರು 280 ಚದರ ಕಿಲೋಮೀಟರ್ ವಿಸ್ತಾರಕ್ಕೆ ಹರಡಿಕೊಂಡಿದೆ, ಇವುಗಳಲ್ಲಿ ಜಾಲಿ ಬಾಯ್ ಅತ್ಯಂತ ಮಹತ್ವದ ದ್ವೀಪವಾಗಿದೆ.

ಜಾಲಿ ಬಾಯ್ ದ್ವೀಪವನ್ನು ತಲುಪುವುದೇ ಒಂದು ಸುಂದರವಾದ ಅನುಭವ. ಮೊದಲಿಗೆ ಅರಣ್ಯ ಇಲಾಖೆಯಿಂದ ಅನುಮತಿ ಪಡೆದು ನಂತರ ಹಡಗಿನ ಟಿಕೆಟ್ಟುಗಳನ್ನು ಪಡೆದುಕೊಳ್ಳಬೇಕು. ಅರಣ್ಯ ಇಲಾಖೆಯಿಂದ ಅನುಮತಿ ಮತ್ತು ಹಡಗಿವ ದರಗಳು ಕ್ರಮವಾಗಿ 50 ಮತ್ತು 500 ರೂ ಗಳಾಗಿವೆ ಆದರೆ ಅಲ್ಲಿಗೆ ತಲುಪಿದ ಮೇಲೆ ಇದು ನಗಣ್ಯ ಎಂದು ನಿಮಗೆ ಅನ್ನಿಸದೆ ಇರಲಾರದು. ಜಾಲಿ ಬಾಯ್ ದ್ವೀಪಕ್ಕೆ ತಲುಪುವ ಪ್ರಯಾಣ ಪೋರ್ಟ್ ಬ್ಲೇರ್ ನಿಂದ ಆರಂಭವಾಗುತ್ತದೆ ಹಾಗೂ ದಾರಿಯ ಮಧ್ಯೆ ರುದ್ರ ರಮಣೀಯವಾದ ನಿಸರ್ಗ ಸೌದರ್ಯವನ್ನು ಅನುಭವಿಸುವ ಅವಕಾಶವನ್ನು ನೀವು ಪಡೆದುಕೊಳ್ಳುತ್ತೀರಿ. ನಿಮ್ಮ ಜೊತೆ ಬರುವ ಮಾರ್ಗದರ್ಶಕರು ದಾರಿಯಲ್ಲಿ ಸಿಗುವ ದ್ವೀಪಗಳ ಬಗ್ಗೆ, ಇಲ್ಲಿನ ಸಸ್ಯರಾಶಿಯ ಬಗ್ಗೆ ಮತ್ತು ಜಲಜೀವನದ ಬಗೆಗಿನ ಅಧಿಕೃತ ಮಾಹಿತಿಯನ್ನು ನೀಡುತ್ತಾ ನಿಮ್ಮನ್ನು ಕೊಂಡೊಯ್ಯುತ್ತಾರೆ. ಜಾಲಿ ಬಾಯ್ ದ್ವೀಪಕ್ಕೆ ಸಮೀಪವಾಗುತ್ತಿದ್ದಂತೆ ದೊಡ್ಡ ಹಡಗು ಅಲ್ಲಿಗೆ ನಿಮ್ಮನ್ನು ತಲುಪಿಸಲಾಗದ ಕಾರಣ ನಿಮ್ಮನ್ನು ಇನ್ನೊಂದು ಸಣ್ಣ ದೋಣಿಯಲ್ಲಿ ಕರೆತರಲಾಗುತ್ತದೆ. ಈ ಸಣ್ಣ ದೋಣಿಯ ಕೆಳಭಾಗವು ಗಾಜಿನಿಂದ ಮಾಡಲಾಗಿದ್ದು ಇದು ನಿಮಗೆ ಅಲ್ಲಿನ ಹವಳದ ದಂಡೆಗಳ ಸೌಂದರ್ಯವನ್ನು ಎಂದು ಮರೆಯದಂತೆ ಕಣ್ಣಲ್ಲಿ ಸೆರೆಹಿಡಿಯಲು ನೆರವಾಗುತ್ತದೆ.

ಜಾಲಿ ಬಾಯ್ ದ್ವೀಪದಲ್ಲಿ ನಿರ್ಬಂಧಗಳು ಸ್ವಲ್ಪ ಹೆಚ್ಚು. ನೀವು ಭಾರತ ಸರ್ಕಾರ ಅನುಮತಿ ನೀಡಿದ ಮತ್ತು ಪೋರ್ಟ್ ಬ್ಲೇರ್ ನಲ್ಲಿ ವಿತರಿಸುವ ಆಹಾರವನ್ನು ಮಾತ್ರ ತೆಗೆದುಕೊಂಡು ಹೋಗಬೇಕು. ಆದರೆ ನೀವು ಜಾಲಿ ಬಾಯ್ ತಲುಪಿದ ಬಳಿಕ ಇದರ ಹಿಂದಿರುವ ಉದ್ದೇಶ ನಿಮಗೆ ಅರ್ಥವಾಗದೇ ಉಳಿಯದು. ಇಲ್ಲಿನ ಸ್ವಚ್ಛ ಕಡಲ ಕಿನಾರೆಗಳು, ಹಾಗೂ ಆಧುನಿಕತೆಗೆ ಒಳಗಾಗದೆ ಶುದ್ಧವಾಗಿರುವ ಪರಿಸರ ಎಲ್ಲಿಯೂ ಕಾಣಲು ಸಿಗದು. ಜಾಲಿ ಬಾಯ್ ದ್ವೀಪದಲ್ಲಿ ಸೂರ್ಯ ಮತ್ತು ಬಿಳಿ ಮರಳಿನ ಮೇಲೆ ನೀವು ಕಳೆಯುವ ಮಧಾಹ್ನದ ಅವಧಿ ನಿಮ್ಮ ಮಧುಚಂದ್ರದ ಅತ್ಯಂತ ಸುಮಧುರ ಮಧ್ಯಾಹ್ನದ ಸಮಯವಾಗಲಿದೆ.

One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri

Near by City