Search
  • Follow NativePlanet
Share
ಮುಖಪುಟ » ಸ್ಥಳಗಳು » ಪೋರ್ಟ್ ಬ್ಲೇರ್ » ಆಕರ್ಷಣೆಗಳು » ರಾಸ್ ದ್ವೀಪ

ರಾಸ್ ದ್ವೀಪ, ಪೋರ್ಟ್ ಬ್ಲೇರ್

7

ಪೋರ್ಟ್ ಬ್ಲೇರ್ ನಿಂದ ಕೇವಲ 2 ಕಿ.ಮೀ ಪೂರ್ವಕ್ಕೆ ನೀವು ಇಲ್ಲಿಯವರೆಗೆ ನೋಡಿದ ಎಲ್ಲಾ ಅವಶೇಷಗಳಿಗಿಂತಲೂ ಸುಂದರವಾದ ಅವಶೇಷಗಳಿವೆ. ಬೇರೆ ಬೇರೆ ಕಾಲಾವಧಿಯ ಸುಂದರವಾದ ಅವಶೇಷಗಳನ್ನು ಹೊಂದಿರುವ ರಾಸ್ ದ್ವೀಪ ಪ್ರವಾಸಿಗರ ನೆಚ್ಚಿನ ತಾಣಗಳಲ್ಲಿ ಒಂದಾಗಿದೆ. ಬ್ರಿಟೀಷರ ಅವಧಿಯಿಂದಲೂ ಇಲ್ಲಿ ಕಟ್ಟಲಾದ ಬೇರೆ ಬೇರೆ ತರಹದ ಕಟ್ಟಡಗಳು ನೋಡಲರ್ಹವಾಗಿವೆ.

ಪೋರ್ಟ್ ಬ್ಲೇರ್ ನಿಂದ ಫೋನಿಕ್ಸ್ ಜೆಟ್ಟಿಗೆ ಇರುವ ದೋಣಿ ಸಂಪರ್ಕದ ಮೂಲಕ ನೀವು ಇಲ್ಲಿಗೆ ತಲುಪಬಹುದು. ಈ ದ್ವೀಪವನ್ನು ಭಾರತ ನೌಕಾಪಡೆ ತನ್ನ ಸುಪರ್ದಿಯಲ್ಲಿ ಇಟ್ಟುಕೊಂಡಿದೆ. ಇಲ್ಲಿ ಒಳಬರುವ ಮತ್ತು ಹೊರಹೋಗುವ ಎಲ್ಲಾ ಪ್ರವಾಸಿಗರು ಭದ್ರತೆಯ ದೃಷ್ಟಿಯಿಂದ ಸಹಿ ಮಾಡಿ ಹೋಗಬೇಕಾಗುತ್ತದೆ.

ಇತಿಹಾಸ ಪ್ರಿಯರಿಗೆ ರಾಸ್ ದ್ವೀಪ ಒಂದು ಪ್ರಮುಖ ತಾಣವಾಗಿದೆ. ಬ್ರಿಟೀಷ್ ವಸಾಹತು ಸರಕಾರ 1857 ರಲ್ಲಿ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ನಡೆದ ಬಳಿಕ ಭಾರತದ ಪ್ರಮುಖ ಸ್ವಾತಂತ್ರ್ಯ ಹೋರಾಟಗಾಗರಿಗೆ ಕಠಿಣ ಶಿಕ್ಷೆಯನ್ನು ನೀಡಲು ಮುಂದಾಯಿತು. ಇದು ಸುಮಾರು 80 ವರ್ಷಗಳ ಕಾಲ ಮುಂದುವರಿಯಿತು. ಆಗಿನ ಕಾಲದಲ್ಲೇ ಈ ದ್ವೀಪದಲ್ಲಿ ಆಸ್ಪತ್ರೆ, ಬೇಕರಿ, ಮಾರುಕಟ್ಟೆ, ಟೆನ್ನಿಸ್ ಅಂಗಣ, ವಸತಿ ಸಮುಚ್ಚಯಗಳು ಹಾಗೂ ಇನ್ನಿತರ ಎಲ್ಲಾ ಅವಶ್ಯಕ ಸವಲತ್ತುಗಳಿದ್ದವು.

ಎರಡನೇ ಮಹಾಯುದ್ಧದ ವೇಳೆ ಜಪಾನ್ ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹವನ್ನು ವಶಪಡಿಸಿಕೊಂಡಿದ್ದ ಕಾರಣ ಇವೆಲ್ಲವೂ ಇಂದು ಅವಶೇಷಗಳಾಗಿ ಉಳಿದಿವೆ. ಇದರ ಇನ್ನೊಂದು ಅವಳಿ ದ್ವೀಪವಾದ ಸ್ಮಿತ್ ದ್ವೀಪಕ್ಕೆ ಇದು ಹೊಂದಿಕೊಂಡಿದೆ. ಸ್ಮಿತ್ ದ್ವೀಪವು ಕೂಡ ನೋಡಲರ್ಹವಾಗಿದೆ.

One Way
Return
From (Departure City)
To (Destination City)
Depart On
24 Apr,Fri
Return On
25 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Fri
Check Out
25 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Fri
Return On
25 Apr,Sat

Near by City