Search
  • Follow NativePlanet
Share
ಮುಖಪುಟ » ಸ್ಥಳಗಳು » ಪೋರ್ಟ್ ಬ್ಲೇರ್ » ಆಕರ್ಷಣೆಗಳು » ಬ್ಯಾರನ್ ದ್ವೀಪ

ಬ್ಯಾರನ್ ದ್ವೀಪ, ಪೋರ್ಟ್ ಬ್ಲೇರ್

1

ಪೋರ್ಟ್ ಬ್ಲೇರ್ ನ ಈಶಾನ್ಯಕ್ಕೆ ಸುಮಾರು 84 ಮೈಲು ದೂರದಲ್ಲಿರುವ ಬ್ಯಾರನ್ ಒಂದು ಸಣ್ಣ ದ್ವೀಪವಾಗಿದೆ. ಇದು ದಕ್ಷಿಣ ಏಷ್ಯಾ ಮತ್ತು ಭಾರತದಲ್ಲಿ ಇರುವ ಏಕಮಾತ್ರ ಜ್ವಲಂತ ಜ್ವಾಲಾಮುಖಿಯ ಸ್ಥಳವಾಗಿದೆ. ಹೊರಜಗತ್ತನ್ನು ಅನ್ವೇಷಿಸುವ ಮಾನವರ ಕುತೂಹಲದ ಗುಣದಿಂದಾಗಿ ಇದು ಇಂದು ಒಂದು ಪ್ರವಾಸಿ ತಾಣವಾಗಿದೆ.

ಹೆಸರೆ ಹೇಳುವಂತೆ ಬ್ಯಾರನ್ ದ್ವೀಪ ಬಂಜರು ಭೂಮಿಯಾಗಿದೆ. ಇಲ್ಲಿ ಜನವಸತಿ ಇಲ್ಲ ಹಾಗೂ ಕೇವಲ ಕೆಲವೆ ಕೆಲವು ಪ್ರಾಣಿಗಳು ಇಲ್ಲಿ ಕಂಡುಬರುತ್ತವೆ. ಆದರೆ ಇಲ್ಲಿ ಇರುವ ಅಲ್ಪ ಸಂತತಿಗಳು ಅನನ್ಯವಾಗಿವೆ. ಹಲವಾರು ವರ್ಷಗಳ ಹಿಂದೆ ಸಮುದ್ರಯಾನ ಮಾಡಿದ ಯಾರೊ ಅಜ್ಞಾತರೊಬ್ಬರು ಬಿಟ್ಟು ಹೋಗಿದ್ದಾರೆ ಎನ್ನಲಾಗಿರುವ ಫೆರೆಲ್ ಆಡು ಇಲ್ಲಿನ ವಿಶೇಷವಾದ ಸಂತತಿಗಳ ಪೈಕಿ ಒಂದು. ಅಂದಿನಿಂದ ಇಂದಿನ ತನಕ ಈ ಪ್ರಾಣಿ ಪ್ರಭೇದ ತನ್ನ ಇರುವಿಗಾಗಿ ಸಮುದ್ರದ ಉಪ್ಪು ನೀರಿನ ಮೇಲೆ ಅವಲಂಬಿತವಾಗಿದೆ ಹಾಗೂ ಅಂತಹ ಕಷ್ಟದ ಪರಿಸ್ಥಿತಿಗಳಲ್ಲೂ ಜೀವಂತವಾಗಿವೆ. ಇವುಗಳ ಜೊತೆಗೆ ಇಲ್ಲಿ ಹಾರುವ ನರಿ ಮತ್ತು ಕೆಲವು ಪ್ರಭೇದಗಳ ದಂಶಕಗಳೂ ಕಾಣಸಿಗುತ್ತವೆ.

ಇಲ್ಲಿ 1994 ಮತ್ತು 2005 ರಲ್ಲಿ ಕ್ರಮವಾಗಿ ಎರಡು ಸ್ಫೋಟಗಳು ಸಂಭವಿಸಿದ್ದು ಅವುಗಳಲ್ಲಿ ಎರಡನೆಯದು ಹಿಂದೂ ಮಹಾಸಾಗರದಲ್ಲಿ ಎದ್ದಿದ್ದ ಸುನಾಮಿಯ ಪರಿಣಾಮವಾಗಿ ಸಂಭವಿಸಿದೆ ಎಂದು ನಂಬಲಾಗಿದೆ.

One Way
Return
From (Departure City)
To (Destination City)
Depart On
24 Jul,Fri
Return On
25 Jul,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Jul,Fri
Check Out
25 Jul,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Jul,Fri
Return On
25 Jul,Sat

Near by City