• Follow NativePlanet
Share
» »ಭಾರತದಲ್ಲಿರುವ ಅತ್ಯಂತ ಪ್ರಮುಖ ಮತ್ತು ಅತ್ಯಂತ ಹಳೆಯ ಆಲದ ಮರಗಳು

ಭಾರತದಲ್ಲಿರುವ ಅತ್ಯಂತ ಪ್ರಮುಖ ಮತ್ತು ಅತ್ಯಂತ ಹಳೆಯ ಆಲದ ಮರಗಳು

Posted By: Manjula Balaraj Tantry

ಆಲದ ಮರದ ವಿಸ್ತಾರವಾದ ಮೇಲ್ಚಾವಣಿಯಡಿಯಲ್ಲಿ ಒಂದು ವಿಶ್ರಾಂತಿಯನ್ನು ಪಡೆದರೆ ಹೇಗಿರಬಹುದು? ನೀವು ನಿಮ್ಮ ಸಮಯವನ್ನು ಪ್ರಕೃತಿಯ ಮಧ್ಯೆ ಹಕ್ಕಿಗಳ ಕಲರವ ಮತ್ತು ಗಾಳಿಯ ಸದ್ದಿನ ಮಧ್ಯೆ ಕಳೆಯಲು ಬಯಸಿದಲ್ಲಿ ಈ ಕೆಳಗಿನ ಸ್ಥಳಗಳಿಗೆ ಭೇಟಿ ಕೊಡಿ ಮತ್ತು ನಿಮ್ಮ ಬಯಕೆಗಳನ್ನು ಈಡೇರಿಸಿಕೊಳ್ಳಿ. ಭಾರತದ ಅತೀ ಪ್ರಮುಖ ಮತ್ತು ಪ್ರಸಿದ್ದ ಮತ್ತು ಅತ್ಯಂತ ಹಳೆಯದಾದ ಆಲದ ಮರಗಳ ಬಗ್ಗೆ ಎಲ್ಲವನ್ನೂ ಓದಿ.

ಸುಮ್ಮನೆ ಪ್ರಕೃತಿಯ ನೆರಳಲ್ಲಿ ಕುಳಿತುಕೊಂಡು ನಯನ ಮನೋಹರ ಸೌಂದರ್ಯತೆ ಮತ್ತು ಮಾಂತ್ರಿಕ ಮೋಡಿಯನ್ನು ಅನುಭವಿಸುವುದಕ್ಕಿಂತ ಉತ್ತಮವಾದುದು ಇನ್ನೊಂದಿಲ್ಲ. ಭಾರತವು ಶ್ರೀಮಂತ ಸಸ್ಯವರ್ಗವನ್ನು ಹೊಂದಿದ ದೇಶವಾಗಿದೆ. ಇದು ಪ್ರಾಚೀನ ಪಳಿಯುಳಿಕೆಗೆ ತಿರುಗಿದೆ ಮರಳಿಂದ ಹಿಡಿದು ದಶಕಗಳಷ್ಟು ಹಳೆಯದಾದ ಮರಗಳವರೆಗೆ ಭಾರತವು ಪ್ರಕೃತಿ ಪ್ರೀಯರ ಬೇಡಿಕೆಗಳಿಗನುಗುಣವಾಗಿ ಎಲ್ಲವನ್ನೂ ಒದಗಿಸುವಂತಹ ಕೇಂದ್ರವಾಗಿದೆ.

ಭಾರತದಲ್ಲಿ ನೂರಾರು ವರ್ಷ ಹಳೆಯದಾದ ಅನೇಕ ಆಲದ ಮರಗಳಿವೆ ಮತ್ತು ಅವುಗಳಿರುವ ಜಾಗವು ಅವುಗಳ ಅತ್ಯದ್ಬುತ ಸೌಂದರ್ಯತೆಯಿಂದ ಕೆಲವು ವರ್ಷಗಳಿಂದ ಪ್ರಸಿದ್ದ ಪ್ರವಾಸಿ ತಾಣಗಳೆನಿಸಿವೆ. ಇಂತಹ ಸುಂದರವಾದ ಪ್ರಕೃತಿಯ ಸ್ಥಳಗಳಿಗೆ ಈ ಋತುವಿನಲ್ಲಿ ಭೇಟಿಕೊಟ್ಟು ಅವುಗಳ ಸೌಂದರ್ಯತೆಯಲ್ಲಿ ಸಂಪೂರ್ಣವಾಗಿ ಅನುಭವಿಸುವ ಸುವರ್ಣಾವಕಾಶವನ್ನು ಪಡೆದರೆ ಹೇಗಿರಬಹುದು? ಭಾರತದ ಈ ಪ್ರಸಿದ್ದ ಹಾಗೂ ಅತ್ಯಂತ ಹಳೆಯ ಆಲದ ಮರಗಳ ಬಗ್ಗೆ ಓದಿ ತಿಳಿಯಿರಿ.

1) ತಿಮ್ಮಮ್ಮ ಮರಿಮನು, ಆಂಧ್ರ ಪ್ರದೇಶ

1) ತಿಮ್ಮಮ್ಮ ಮರಿಮನು, ಆಂಧ್ರ ಪ್ರದೇಶ

PC- Abdulkaleem

ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ಗಮನಾರ್ಹವಾಗಿ ಹರಡಿರುವ ತಿಮ್ಮಮ್ಮ ಮರಿಮನು ಜಗತ್ತಿನ ಒಂದು ಅತ್ಯಂತ ದೊಡ್ಡ ಮರವೆಂದು ಘೋಷಿಸಲಾಗಿದೆ. ಈ ಮರದ ಮೇಲ್ಚಾವಣಿಯು ಸುಮಾರು 4 ಎಕರೆಗಳಷ್ಟು ಪ್ರದೇಶದಲ್ಲಿ ಹರಡಿಕೊಂಡಿರುವುದೇ ಈ ಮರದ ವಿಶೇಷತೆಯಾಗಿದ್ದು ಈ ದೈತ್ಯಾಕಾರದ ಮರವು ಒಂದು ಅದ್ಬುತವಾದುದಾಗಿದೆ. ಇದರ ಬಾಹ್ಯಲಕ್ಷಣದಲ್ಲಿ ಮಾತ್ರವಲ್ಲದೆ ಈ ಹಳೆಯ ಹಾಗೂ ಅದ್ಬುತವಾದ ಮರವಿರುವ ಜಾಗವನ್ನು ಪವಿತ್ರವಾದ ಸ್ಥಳವೆಂದು ಪರಿಗಣಿಸಲಾಗಿದೆ.

ಇದರ ಹತ್ತಿರವಿರುವ ತಿಮ್ಮಮ್ಮ ದೇವಾಲಯದಲ್ಲಿ ಮಕ್ಕಳಿಲ್ಲದ ತಂದೆ ತಾಯಿಗಳು ಮಕ್ಕಳಿಗಾಗಿ ಬೇಡಿಕೊಂಡರೆ ಅವರಿಗೆ ಆರೋಗ್ಯವಂತ ಮಕ್ಕಳಾಗುವುದು ಎಂದು ನಂಬಲಾಗುತ್ತದೆ. ಕಂಬದಂತಿರುವ ಬೇರುಗಳು ಮತ್ತು ದಪ್ಪವಾದ ಶಾಖೆಗಳನ್ನು ಹೊಂದಿರುವ ಈ ಆಲದ ಮರವು ಗಿನ್ನಿಸ್ ಬುಕ್ ಆಫ್ ವರ್ಲ್ದ್ ರೆಕಾರ್ಡ್ ನಲ್ಲಿ ಸೇರಿಸಲಾಗಿದೆ. ಇಂತಹ ಐತಿಹಾಸಿಕ ಮರ ಮತ್ತು ಇದರ ಸೌಂದರ್ಯತೆಯ ಆಳವನ್ನು ತಿಳಿಯಲು ಇಲ್ಲಿಗೆ ಭೇಟಿ ಏಕೆ ಕೊಡಬಾರದು?

2) ದೊಡ್ಡ ಆಲದ ಮರ , ಕರ್ನಾಟಕ

2) ದೊಡ್ಡ ಆಲದ ಮರ , ಕರ್ನಾಟಕ

PC- Krishansubudhi

ಇದು ದೊಡ್ಡ ಆಲದ ಮರವೆಂದೇ ಅರ್ಥೈಸುತ್ತದೆ ದೊಡ್ಡ ಆಲದ ಮರವು 400 ವರ್ಷಗಳಷ್ಟು ಹಳೆಯದಾಗಿದ್ದು ಇದು ಬೆಂಗಳೂರಿನ ನಗರ ವಲಯದ ಜಿಲ್ಲೆಯಲ್ಲಿದೆ. ಇದು ಕೂಡಾ ಒಂದು ಉತ್ತಮವಾದ ವಾರಾಂತ್ಯದ ರಜೆ ಯನ್ನು ಕಳೆಯಲು ಅಥವಾ ಪಿಕ್ನಿಕ್ ಹೋಗಲು ಮತ್ತು ಪಕೃತಿ ಪ್ರೇಮಿಗಳಿಗೆ ಸೂಕ್ತವಾದ ಸ್ಥಳವಾಗಿದೆ.

ಇಲ್ಲಿ ಪಿಕ್ನಿಕ್ ಗಾಗಿ ಬರುವ ಅನೇಕ ಜನರು ತಮ್ಮ ಕುಟುಂಬ ಮತ್ತು ಮಕ್ಕಳು ಆಟವಾಡುವುದನ್ನು ಕಾಣಬಹುದು ಅಲ್ಲದೆ ಇಲ್ಲಿಯ ಈ ಮರದ ನೆರಳಿನಡಿಯಲ್ಲಿ ತಾಜಾ ಗಾಳಿಯಲ್ಲಿ ಸೇವನೆ ಮಾಡುತ್ತಿರುವುದನ್ನು ಈ ಬೆರಗು ಗೊಳಿಸುವ ಮರದ ಕಾಂಡಗಳು ಮತ್ತು ಬೇರುಗಳು ಈ ಮರದ ಸೌಂದರ್ಯತೆಯನ್ನು ಪ್ರತಿಬಿಂಬಿಸುತ್ತದೆ..

3) ಅಡ್ಯಾರ್ ಆಲದ ಮರ , ಚೆನ್ನೈ

3) ಅಡ್ಯಾರ್ ಆಲದ ಮರ , ಚೆನ್ನೈ

ಅಡ್ಯಾರ್ ಆಲದ ಮರದ ಇತಿಹಾಸದ ಬಗ್ಗೆ ಖಚಿತ ಮಾಹಿತಿ ದೊರೆತಿಲ್ಲವಾದರೂ ಇದು ಸುಮಾರು 450 ವರ್ಷ ಹಳೆಯದೆಂದು ನಂಬಲಾಗಿದೆ. ಇಲ್ಲಿಯ ಅಸ್ಥಿರ ವಾತಾವರಣ ಮತ್ತು ಸುಂದರವಾದ ಪರಿಸರದಿಂದಾಗಿ ಇದು ಪ್ರಕೃತಿ ಪ್ರೇಮಿಗಳಲ್ಲಿ ಬಹಳ ಕಾಲದಿಂದಲೂ ಪ್ರಸಿದ್ದಿಯನ್ನು ಪಡೆದಿದೆ. ಈ ಆಲದ ಮರದ ಪ್ರಮುಖ ವೈಶಿಷ್ಟ್ಯತೆ ಇದರ ಹಲವಾರು ಎಕರೆಗಳ ಜಾಗದಲ್ಲಿ ಹರಡಿರುವ ಪ್ರಬಲವಾದ ಕಾಂಡಗಳಲ್ಲಿದೆಯೆಂದು ಬ್ರಹ್ಮವಿದ್ಯೆಯ ಆಧಾರದ ಮೇಲೆ ಹೇಳಲಾಗುತ್ತದೆ.

4) ದ ಗ್ರೇಟ್ ಆಲದ ಮರ,(ಬನ್ಯಾನ್ ) ಕೊಲ್ಕತ್ತಾ

4) ದ ಗ್ರೇಟ್ ಆಲದ ಮರ,(ಬನ್ಯಾನ್ ) ಕೊಲ್ಕತ್ತಾ

PC- Biswarup

ಕೋಲ್ಕತಾ ದಲ್ಲಿರುವ ಅತ್ಯಂತ ಹಳೆಯ ಮರಗಳಲ್ಲಿ ದ ಗೇಟ್ ಬನ್ಯಾನ್ ಒಂದಾಗಿದೆ . ಇದು ಸುಮಾರು 250 ವರ್ಷಗಳಷ್ಟು ಹಳೆಯದು ಎಂದು ನಂಬಲಾಗುತ್ತದೆ. ಪ್ರಪಂಚದಾದ್ಯಂತ ಅನೇಕ ಖಂಡಗಳಿಂದ ತಂದ ಅನೇಕ ವಿಲಕ್ಷಣ ಸಸ್ಯಗಳು ಮತ್ತು ಮರಗಳಿಗೆ ನೆಲೆಯಾಗಿದೆ. ಈ ಜಾಗಕ್ಕೆ ಎರಡು ಸಲ ಚಂಡಮಾರುತಗಳಿಗೆ ಬಲಿಯಾಗಿದ್ದರೂ ಕೂಡಾ ಇದರ ಕಠಿಣ ವಾದ ಮತ್ತು ಬಲಯುತವಾದ ಕಾಂಡಗಳು ಮತ್ತು ಬೇರುಗಳು ಪ್ರಬಲವಾಗಿ ನಿಂತಿವೆ.

ದ ಗೇಟ್ ಬನಿಯಾನ್ ಇರುವ ಈ ಸ್ಥಳಕ್ಕೆ ದಿನನಿತ್ಯ ಜನರು ಅನೇಕ ಸಂಖ್ಯೆಯಲ್ಲಿ ಈ ಮರದ ಸೌಂದರ್ಯತೆಯನ್ನು ಸಂತೋಷಕರ ವಾತಾವರಣವನ್ನು ಆನಂದಿಸಲು ಬರುತ್ತಾರೆ. ಪ್ರಕೃತಿಯ ಈ ಅದ್ಭುತ ಕಲೆಗೆ ಭೇಟಿ ನೀಡಿದರೆ ಹೇಗಿರಬಹುದು?

5) ಪಿಳ್ಳಲಮರಿ, ತೆಲಂಗಾಣ

5) ಪಿಳ್ಳಲಮರಿ, ತೆಲಂಗಾಣ

PC- C.Chandra Kanth

ತೆಲಂಗಾಣದ ಮೆಹೆಬೂಬ್ ಜಿಲ್ಲೆಯಲ್ಲಿರುವ ಪಿಳ್ಳಲಮರಿಯು ಸುಮಾರು 800 ವರ್ಷ ಹಳೆಯದಾದ ಆಲದ ಮರವಾಗಿದೆ ಅಲ್ಲದೆ ಹಿಂದೆ ಪವಿತ್ರ ಸ್ಥಳವಾಗಿತ್ತು. ಇಂದು, ಈ ಆಲದ ಮರದ ಗಮನ ಸೆಳೆಯುವ ಸೌಂದರ್ಯವನ್ನು ಆನಂದಿಸಲು ಸಾವಿರಾರು ಜನ ಭೇಟಿ ನೀಡುವವರಿಗೆ ಪ್ರವಾಸಿ ತಾಣವಾಗಿ ಸೇವೆ ಸಲ್ಲಿಸುತ್ತಿದೆ.

ಕಾಲ ಕಳೆಯುತ್ತಿರುವಂತೆ ಈ ಅದರ ಮೇಲಾವರಣದ ಅಡಿಯಲ್ಲಿ ಇಡೀ ಪ್ರದೇಶವು ಉದ್ಯಾನವನವಾಗಿ ಪರಿವರ್ತಿತವಾಗಿದ್ದು, ಸುತ್ತಲೂ ಪಸರಿಸಿರುವ ತಂಪಾದ ಗಾಳಿಯನ್ನು ಪ್ರವಾಸಿಗರು ಅನುಭವಿಸುತ್ತಾರೆ. ಇದರ ವೈಭವ ಮತ್ತು ಸುವಾಸನೆ ಹೊರತು ಪಡಿಸಿ ಇಲ್ಲಿಗೆ ಹತ್ತಿರವಿರುವ ಹಾಗೂ ಮಕ್ಕಳ ಅಚ್ಚುಮೆಚ್ಚಿನ ವಿಜ್ಞಾನ ಮ್ಯೂಸಿಯಂ ಮತ್ತು ಜಿಂಕೆ ಉದ್ಯಾನವನಕ್ಕೆ ಭೇಟಿ ಕೊಡಿ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ