Search
  • Follow NativePlanet
Share
» »ಪ್ರತಿಯೊಬ್ಬ ಹಿಂದೂವು ತಪ್ಪದೇ ಭೇಟಿ ನೀಡಲೇಬೇಕಾದ ಕ್ಷೇತ್ರಗಳಿವು...

ಪ್ರತಿಯೊಬ್ಬ ಹಿಂದೂವು ತಪ್ಪದೇ ಭೇಟಿ ನೀಡಲೇಬೇಕಾದ ಕ್ಷೇತ್ರಗಳಿವು...

ನಮ್ಮ ಭಾರತದೇಶದಲ್ಲಿ ಉತ್ತರ ಭಾರತಕ್ಕಿಂತ ದಕ್ಷಿಣ ಭಾರತದಲ್ಲಿಯೇ ಅತಿ ಹೆಚ್ಚು ದೇವಾಲಯಗಳು ಇರುವುದನ್ನು ಕಾಣಬಹುದು. ದೇವಾಲಯಗಳ ನಾಡು ಎಂದೇ ಪ್ರಸಿದ್ಧವಾಗಿರುವ ತಮಿಳುನಾಡಿನಲ್ಲಿ ಹೆಜ್ಜೆಹೆಜ್ಜೆಗೂ ದೇವಾಲಯಗಳಿವೆ. ಹಾಗೆಯೇ ಆಂಧ್ರಪ್ರದೇಶ ಹಾಗೂ ಕೇರಳದಲ್ಲಿ ತನ್ನದೇ ಆದ ವಿಶಿಷ್ಟ ದೇವಾಲಯಗಳಿವೆ. ಕರ್ನಾಟಕದಲ್ಲೂ ಪ್ರಖ್ಯಾತವಾದ ದೇವಾಲಯಗಳಿವೆ. ಆ ಎಲ್ಲಾ ದೇವಾಲಯಗಳಿಗೆ ದೇಶದ ಮೂಲೆ ಮೂಲೆಯಿಂದಲೇ ಅಲ್ಲದೇ ವಿದೇಶದಿಂದಲೂ ಭಕ್ತರ ದಂಡು ಭೇಟಿ ನೀಡುತ್ತಿರುತ್ತಾರೆ. ಅನೇಕ ದೇವಾಲಯಗಳು ಪ್ರಸಿದ್ಧವಾದ ಸ್ಥಳ ಪುರಾಣವನ್ನು ಹೊಂದಿದ್ದರೆ ಮತ್ತೆ ಕೆಲವು ದೇವಾಲಯಗಳು ತನ್ನದೇ ಆದ ಶಿಲ್ಪಕಲೆಯಿಂದ ಕಂಗೊಳಿಸುತ್ತಿದೆ. ಪ್ರತಿಯೊಬ್ಬ ಹಿಂದುವು ಭೇಟಿ ನೀಡಲೇಬೇಕಾದ ೫ ದೇವಾಲಯಗಳ ಬಗ್ಗೆ ಲೇಖನದ ಮೂಲಕ ತಿಳಿದುಕೊಳ್ಳಿ.

೧. ಮೀನಾಕ್ಷಿ ದೇವಾಲಯ, ಮಧುರೈ

೧. ಮೀನಾಕ್ಷಿ ದೇವಾಲಯ, ಮಧುರೈ

Ashok666

ಪ್ರಾಚೀನ ಮಧುರೈ ಭಾರತದ ದೊಡ್ಡ ಧಾರ್ಮಿಕ ಮತ್ತು ಸಾಂಸ್ಕೃತಿಕ ಕೇಂದ್ರಗಳಲ್ಲಿ ಒಂದಾಗಿದೆ. ಇದು ದಕ್ಷಿಣ ಭಾರತದ ಅತ್ಯಂತ ಪ್ರಭಾವಶಾಲಿ ದೇವಾಲಯಗಳ ನೆಲೆಯಾಗಿದೆ. ಮೀನಾಕ್ಷಿ ದೇವಸ್ಥಾನವು ಖಂಡಿತವಾಗಿಯೂ ನೀವು ನೋಡಲೇಬೇಕಾದ ದಕ್ಷಿಣ ಭಾರತದ ದೇವಾಲಯವಾಗಿದ್ದು, ದೇವಾಲಯದ ಸಂಕೀರ್ಣವು 1500 ಕ್ಕಿಂತಲೂ ಹೆಚ್ಚು ಎತ್ತರವಿದೆ, 4500 ಸ್ತಂಭಗಳು ಮತ್ತು 12 ಗೋಪುರಗಳನ್ನು ಹೊಂದಿದೆ. ದೇವಾಲಯದ ಬಗೆಗಿನ ಅತ್ಯಂತ ಅದ್ಭುತವಾದ ವೈಶಿಷ್ಟ್ಯವೆಂದರೆ ಅದರ ವಿವಿಧ ಶಿಲ್ಪ. ಇಲ್ಲಿ 12 ದಿನಗಳವರೆಗೆ ಅತ್ಯಂತ ವಿಜ್ಋಂಣೆಯಿಂದ ಉತ್ಸವ ನಡೆಯುತ್ತದೆ. ಈ ಉತ್ಸವದ ಸಮಯದಲ್ಲಿ ದೇವಿಯ ದಶನಕ್ಕಾಗಿ ದೇಶದ ಮೂಲೆ ಮೂಲೆಗಳಿಂದ ಭಕ್ತರು ಹಾಜರಾಗುತ್ತಾರೆ. ಇದು ನಿಜವಾಗಿಯೂ ಅಗ್ರ ಐದು ದಕ್ಷಿಣ ಭಾರತದ ದೇವಾಲಯಗಳಲ್ಲಿ ಒಂದಾಗಿದೆ. ಒಮ್ಮೆ ಈ ವಿಶೇಷವಾದ ದೇವಾಲಯಕ್ಕೆ ಭೇಟಿ ನೀಡಿ ಬನ್ನಿ.

2.ತಿರುಪತಿ

2.ತಿರುಪತಿ

PC:YOUTUBE

ತಿರುಪತಿಗೆ ಸಮೀಪದಲ್ಲಿರುವ ತಿರುಮಲ ಬೆಟ್ಟ ಪ್ರದೇಶವು ಅತ್ಯಂತ ಪವಿತ್ರವಾದ ಪುಣ್ಯ ಭೂಮಿಯಾಗಿದೆ. ಇಲ್ಲಿ ಪ್ರಸಿದ್ಧವಾದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯವಿದೆ. ಈ ಬೆಟ್ಟವು ಸಮುದ್ರ ಮಟ್ಟದಿಂದ ಸುಮಾರು 3200 ಅಡಿ ಕ್ಕಿಂತ ಎತ್ತರದಲ್ಲಿದೆ. ಇಲ್ಲಿ ಸಾಕ್ಷಾತ್ ಆ ತಿರುಮಲವಾಸನಾದ ವೆಂಕಟೇಶ್ವರ ಸ್ವಾಮಿ ನೆಲೆಸಿದ್ದಾನೆ. ಇತನ ದರ್ಶನವನ್ನು ಪಡೆಯಲು ದೇಶದ ಮೂಲೆ-ಮೂಲೆಯಿಂದಲೇ ಅಲ್ಲದೇ ವಿದೇಶಗಳಿಂದಲೂ ಕೂಡ ಭಕ್ತರು ಭೇಟಿ ನೀಡುತ್ತಾರೆ.

ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯವು ಅತ್ಯಂತ ಪುರಾತನವಾದುದು. ದೇಶದಲ್ಲಿ ಅತ್ಯಂತ ಹೆಚ್ಚು ಭಕ್ತರನ್ನು ಹೊಂದಿರುವ ಕ್ಷೇತ್ರಗಳಲ್ಲಿ ಇದು ಕೂಡ ಒಂದಾಗಿದೆ. ಇದು ವೆಂಕಟ ತಿರುಮಲ ಬೆಟ್ಟದ ಮೇಲೆ 7 ಶಿಖರಗಳ ಮಧ್ಯೆಯಲ್ಲಿದೆ. ಸ್ವಾಮಿ ಪುಷ್ಕರಣಿ ನದಿ ದಕ್ಷಿಣ ದಿಕ್ಕಿಗೆ ಇದೆ. ಈ ದೇವಾಲಯದ ಸಂಪ್ರದಾಯವು ದ್ರಾವಿಡ ನಿರ್ಮಾಣ ಶೈಲಿಯಲ್ಲಿ ನಿರ್ಮಾಣ ಮಾಡಲಾಗಿದೆ. 2.2 ಎಕರೆ ಭೂಮಿಗಳಷ್ಟು ವಿಶಾಲವಾಗಿರುವ ಈ ದೇವಾಲಯದಲ್ಲಿ 8 ಅಡಿ ಎತ್ತರದ ವೆಂಕಟೇಶ್ವರ ಸ್ವಾಮಿಯ ವಿಗ್ರಹವಿದೆ.

3.ರಾಮನಾಥಸ್ವಾಮಿ ದೇವಾಲಯ

3.ರಾಮನಾಥಸ್ವಾಮಿ ದೇವಾಲಯ

PC:YOUTUBE

ದ್ರಾವಿಡ ಶೈಲಿಯಲ್ಲಿ ನಿರ್ಮಾಣವಾದ ದೇವಾಲಯಗಳಲ್ಲಿ ರಾಮನಾಥಸ್ವಾಮಿ ದೇವಾಲಯವೂ ಒಂದು. ಪೂರ್ವದಲ್ಲಿ ಇಲ್ಲಿ ಸುಮಾರು 112 ಸರೋವರಗಳು ಇದ್ದವು ಎಂದು ಹೇಳುತ್ತಾರೆ. ಆದರೆ ಪ್ರಸ್ತುತ ಇಲ್ಲಿ 12 ಸರೋವರಗಳು ಮಾತ್ರವೇ ಇದೆ. ವಿಶಾಲವಾದ ದೇವಾಲಯದ ಪ್ರಾಂಗಣದಲ್ಲಿ ರಾಮನಾಥಸ್ವಾಮಿ ದೇವಾಲಯ 2 ಸ್ಥಾನದಲ್ಲಿದೆ.

ಸಾಮಾನ್ಯವಾಗಿ ಪ್ರತಿಯೊಂದು ಧರ್ಮಗಳಲ್ಲೂ ಹೇಳಿರುವಂತೆ ಹಿಂದೂ ಧರ್ಮದಲ್ಲೂ ಸಹ ಮನುಷ್ಯ ತನ್ನ ಜೀವಿತಾವಧಿಯಲ್ಲಿ ಒಮ್ಮೆಯಾದರೂ ಭಕ್ತಿ, ಶೃದ್ಧೆಗಳಿಂದ ತೀರ್ಥಕ್ಷೇತ್ರಗಳ ಯಾತ್ರೆ ಕೈಗೊಂಡರೆ ಸಕಲ ಪಾಪಗಳು ನಶಿಸಿ ಹೋಗುತ್ತವೆ ಹಾಗೂ ಆ ವ್ಯಕ್ತಿ ದೇವರ ಕೃಪಾ ಕಟಾಕ್ಷ ಪಡೆಯುತ್ತಾನೆ ಎಂದು ಹೇಳಲಾಗಿದೆ.

4.ಕೂಂಬಕೋಣಂ

4.ಕೂಂಬಕೋಣಂ

PC:YOUTUBE

ಕೂಂಬಕೋಣಂ ಎಂದೂ ಕರೆಯಲ್ಪಡುವ ಕುಂಬಕೋಣಂ ಒಂದು ಸುಂದರ ಹಾಗೂ ಪವಿತ್ರ ನಗರ. ತಮಿಳುನಾಡಿನ ತಾಂಜಾವೂರು ಜಿಲ್ಲೆಯಲ್ಲಿರುವ ಕುಂಬಕೋಣಂ ಕಾವೇರಿ ಮತ್ತು ಅರ್ಸಲಾರ್ ನದಿಗಳ ನಡುವಣ ಸ್ಥಳದಲ್ಲಿರುವ ಕಾರಣ ಧಾರ್ಮಿಕ ಮಹತ್ವದ ಜೊತೆಗೇ ಅಹ್ಲಾದಕರ ವಾತಾವರಣವನ್ನೂ ಹೊಂದಿದೆ. ನಗರದ ದಕ್ಷಿಣ ಭಾಗದಲ್ಲಿ ಅರ್ಸಲಾರ್ ನದಿಯೂ ಉತ್ತರ ಭಾಗದಲ್ಲಿ ಕಾವೇರಿ ನದಿಯೂ ಸಮಾನಾಂತರವಾಗಿ ಹರಿಯುತ್ತಿವೆ. ಕುಂಭಕೋಣಂ ಇತಿಹಾಸವನ್ನು ಕೊಂಚ ಕೆದಕಿದರೆ ಹಲವಾರು ಸ್ವಾರಸ್ಯಕರ ಸಂಗತಿಗಳು ಬೆಳಕಿಗೆ ಬರುತ್ತವೆ.

5.ನಂಜನಗೂಡ

5.ನಂಜನಗೂಡ

PC:YOUTUBE

ಕನ್ನಡದಲ್ಲಿ ನಂಜುಂಡ ಎಂಬ ಪದವು ನಂಜ+ಉಂಡ ಎಂಬ 2 ಪದಗಳಿಂದ ಏರ್ಪಟ್ಟಿದೆ. ನಂಜ ಎಂದರೆ ವಿಷ ಎಂದೂ, ಉಂಡ ಎಂದರೆ ನುಂಗಿದ ಎಂಬ ಅರ್ಥ ಬರುತ್ತದೆ. ಹಾಗಾಗಿಯೇ ಈ ಕ್ಷೇತ್ರದಲ್ಲಿ ಪರಮಶಿವನನ್ನು ನಂಜುಂಡೇಶ್ವರ ಎಂದು ಕರೆಯುತ್ತಾರೆ.ನಂಜುಡೇಶ್ವರನು ನೆಲೆಸಿರುವುದರಿಂದಲೇ ಈ ಪ್ರದೇಶವನ್ನು ನಂಜನಗೂಡು ಎಂದು ಕರೆಯುತ್ತಾರೆ. ಅಷ್ಟೇ ಅಲ್ಲದೇ, ಶ್ರೀಕಂಠ ಎಂದೂ ಕೂಡ ಪರಮಶಿವನಿಗೆ ಹೆಸರಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X