Search
  • Follow NativePlanet
Share
» »ನಿಮ್ಮ ಮುಂದಿನ ಟ್ರಾವೆಲ್ ಗೆ ಈ ಅಗತ್ಯ ವಸ್ತುಗಳನ್ನು ಸೇರಿಸಿ

ನಿಮ್ಮ ಮುಂದಿನ ಟ್ರಾವೆಲ್ ಗೆ ಈ ಅಗತ್ಯ ವಸ್ತುಗಳನ್ನು ಸೇರಿಸಿ

ಟ್ರಾವೆಲ್ ಪ್ರಿಯರು ಚಾರಣ ಹೋಗುವುದು, ಅಲೆದಾಡುವುದು, ಹೊಸ ಜಾಗಗಳನ್ನು ಅನ್ವೇಷಿಸುವುದು ಈಗಿನ ದಿನಗಳಲ್ಲಿ ಟ್ರೆಂಡ್ ಆಗಿದೆ. ಒಂದು ಕಾಲದಲ್ಲಿ ಆಗೊಮ್ಮೆ ಈಗೊಮ್ಮೆ ಅಥವಾ ಮನಸ್ಸಿಗೆ ರಿಲ್ಯಾಕ್ಸ್ ಬೇಕಾದಾಗ ಮಾತ್ರ ಟ್ರಾವೆಲ್ ಮಾಡುವುದು ಎಂಬ ಆಲೋಚನೆ ಇತ್ತು. ಆದರೆ ಈಗ ಕಾಲ ಬದಲಾಗಿದೆ, ಟ್ರಾವೆಲ್ ಮಾಡುವುದು ಕೂಡ ಒಂದು ಹವ್ಯಾಸವಾಗಿ ಮಾರ್ಪಟ್ಟಿದೆ. ಹೀಗಿರುವಾಗ ಟ್ರಾವೆಲ್ ಪ್ರಿಯರಿಗಾಗಿ ಒಂದು ಉಪಯುಕ್ತ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಟ್ರಾವೆಲ್ ಪ್ರಿಯರು ವಾರಾಂತ್ಯ, ತಿಂಗಳಾಂತ್ಯಗಳಲ್ಲಿ ಟ್ರಾವೆಲ್ ಮಾಡುವ ಮುನ್ನ ನಿಮ್ಮ ಸಿದ್ಧತೆಗಳಲ್ಲಿ ಏನೆಲ್ಲಾ ಅಗತ್ಯ ವಸ್ತುಗಳನ್ನು ಪ್ಯಾಕ್ ಮಾಡಬೇಕು? ಬೇಸಿಗೆ ಮತ್ತು ಚಳಿಗಾಲಕ್ಕೆ ಸೂಕ್ತವಾದ ಯಾವೆಲ್ಲಾ ಅಗತ್ಯ ವಸ್ತುಗಳನ್ನು ನಿಮ್ಮ ಬ್ಯಾಗ್ ನಲ್ಲಿ ಜೋಡಿಸಿಕೊಳ್ಳಬೇಕು ಎನ್ನುವ ವಿಸ್ತಾರವಾದ ಪಟ್ಟಿ ಇಲ್ಲಿದೆ.

These Things You Should Carry For Traveling In India Or Outside India

ಟ್ರಾವೆಲ್ ಪ್ರಿಯರ ಬ್ಯಾಗ್‌ನಲ್ಲಿರಬೇಕಾದ ವಸ್ತುಗಳ ಪಟ್ಟಿ :

1. ಒಣ ಟವೆಲ್ - ಇದು ಕನಿಷ್ಠ ಜಾಗವನ್ನು ಆಕ್ರಮಿಸುತ್ತದಲ್ಲದೆ, ಬೇಸಿಗೆ ಮತ್ತು ಚಳಿಗಾಲ ಎರಡಕ್ಕೂ ಸೂಕ್ತವಾಗಿದೆ.
2. ಶಾಂಪೂ ಮತ್ತು ಕಂಡೀಷನರ್ ಸ್ಯಾಶ್‌ಗಳು- ನೀವು ತಂಗುವ ಹೋಟೆಲ್ ಈ ವಸ್ತುಗಳನ್ನು ಒದಗಿಸುತ್ತದೆಯೇ ಎಂದು ಖಚಿತಪಡಿಸಿಕೊಳ್ಳಿ.
3. ಮೌತ್ ಫ್ರೆಶರ್- ಇದೊಂದು ಉಪಯುಕ್ತ ವಸ್ತು ಎಂಬುದನ್ನು ಮರೆಯದಿರಿ.
4. ಸಣ್ಣ ಮಾಯಿಶ್ಚರೈಸರ್ ಬಾಟಲ್- ಹೊರಗೆ ಸುತ್ತುವುದರಿಂದ ನಿಮ್ಮ ತ್ವಚೆ ಒಣಗದಿರಲು ಸಹಾಯ ಮಾಡುತ್ತದೆ.
5. ವ್ಯಾಸಲೀನ್-ತುಟಿಗಳು ಅತ್ಯಂತ ಸೂಕ್ಷ್ಮವಾಗಿರಿಸಿಕೊಳ್ಳಲು ಸಹಾಯ ಮಾಡುತ್ತದೆ.
6. ಸೇಫ್ಟಿ ಪಿನ್- ಸಾಮಾನ್ಯವಾಗಿ ಅಕಾಸ್ಮಾತಾಗಿ ಏನಾದರೂ ಅಗತ್ಯ ಬಿದ್ದಲ್ಲಿ ಉಪಕಾರಿಯಾಗಲಿದೆ.
7. ಸ್ಯಾನಿಟೈಸರ್- ಈಗಿನ ದಿನಗಳಲ್ಲಿ ಸ್ಯಾನಿಟೈಸರ್ ನಿಜಕ್ಕೂ ಉಪಯುಕ್ತ ವಸ್ತು.
8. ಪತ್ರಿಕೆ - ಪ್ರಚಲಿತ ಘಟನೆಗಳನ್ನು ತಿಳಿಯಲು ಮತ್ತು ಸಮಯವನ್ನು ಉಪಯೋಗಿಸಿಕೊಳ್ಳಲು ಸಹಾಯವಾಗಲಿದೆ.
9. ಪ್ಲಾಸ್ಟಿಕ್ ಚೀಲಗಳು-ಒದ್ದೆ ಬಟ್ಟೆಗಳನ್ನು ಒಯ್ಯಲು
10. ಔಷಧಗಳು-ತಲೆನೋವು, ವಾಂತಿ, ಬೆನ್ನುನೋವು ಅಥವಾ ಹೊಟ್ಟೆ ನೋವು, ಬ್ಯಾಂಡ್ ಏಡ್, ಹತ್ತಿ ಮುಂತಾದ ದೇಹದ ತೊಂದರೆಗಳಿಗೆ ಮದ್ದು.

11. ಪವರ್ ಬ್ಯಾಂಕ್-ನಿಮ್ಮ ಸ್ಮಾರ್ಟ್ ಫೋನ್ ಬಳಕೆಗೆ ಇದು ಹೆಚ್ಚು ಉಪಯುಕ್ತ.
12. ಐಪಾಡ್/MP3- ಪ್ರಯಾಣಿಕರ ಸ್ನೇಹಿತ
13. ಕಾದಂಬರಿ-ರೈಲು ಪ್ರಯಾಣಗಳು ವಿಪರೀತವಾದಾಗ ಬೇಸರು ನಿವಾರಿಸಲು ಓದಿಗೆ
14. ಡಿಯೋಡರೆಂಟ್-ನಿಮ್ಮ ದೇಹದ ವಾಸನೆಯಿಂದ ನಿಮ್ಮ ಸಹ ಪ್ರಯಾಣಿಕರಿಗೆ ಕಿರಿಕಿರಿ ಉಂಟಾಗದಿರಲು ಕಾಲಕಾಲಕ್ಕೆ ಸಿಂಪಡಿಸುವುದನ್ನು ಅಭ್ಯಾಸ ಮಾಡಿ.
15. ಬೆಡ್ ಶೀಟ್-ನೀವು ಸ್ಲೀಪರ್ ಅಥವಾ ರೈಲಿನ ಕಾಯ್ದಿರಿಸದ ವಿಭಾಗದಲ್ಲಿ ಪ್ರಯಾಣಿಸುತ್ತಿದ್ದರೆ ಬೆಡ್ ಶೀಟ್ ಅಗತ್ಯ.

16. ಸಾಕಷ್ಟು ಒಳ ಉಡುಪು- ವೈಯಕ್ತಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಹೆಚ್ಚಿನ ಒಳ ಉಡುಪುಗಳನ್ನು ಒಯ್ಯಿರಿ.
17. ಎರಡು ಜೊತೆ ಸಾಕ್ಸ್ ತೆಗೆದುಕೊಳ್ಳುವುದು ಉತ್ತಮ.
18. ಹುಡುಗಿಯರಿಗಾಗಿ ಮೇಕಪ್ ಕಿಟ್- ನಿಮಗೆ ಅಗತ್ಯವಿರುವ ಸೂಕ್ತ ಸೌಂದರ್ಯವರ್ಧಕ ವಸ್ತುಗಳನ್ನು ಒಯ್ಯಿರಿ.
19. ನಿಮ್ಮ ಫೋನ್ ಸಾಕಷ್ಟು ಉತ್ತಮವಾಗಿಲ್ಲದಿದ್ದರೆ ಕ್ಯಾಮೆರಾ ಅನ್ನು ತೆಗೆದುಕೊಂಡು ಹೋಗಿ.
20. ಸಾಮಾನ್ಯವಾಗಿ ಟ್ರಾವೆಲ್ ಪ್ರಿಯರು ಸನ್‌ ಗ್ಲಾಸ್ ಗಳನ್ನು ತೆಗೆದುಕೊಂಡು ಹೋಗುವುದನ್ನು ಮರೆಯದಿರಿ.
21. ನೋಟ್‌ಬುಕ್ ಮತ್ತು ಪೆನ್ -ನೀವು ವೀಕ್ಷಿಸಿದ ಜಾಗದ ಕುರಿತು ಒಂದಷ್ಟು ಮಾಹಿತಿಯನ್ನು ಬರೆಯಿರಿ.
22. ಲಾಕರ್ -ಇದರಿಂದ ನೀವು ರೈಲುಗಳಲ್ಲಿ ಶಾಂತಿಯಿಂದ ಮಲಗಬಹುದು ಅಥವಾ ಹೋಟೆಲ್‌ಗಳಲ್ಲಿ ನಿಮ್ಮ ಲಗೇಜ್ ಸುರಕ್ಷತೆಯಿಂದ ಇರಿಸಬಹುದು.
23. ಒಂದು ಸಣ್ಣ ಬ್ಯಾಗ್ - ನಗರದ ಸುತ್ತ ತಿರುಗುತ್ತಿರುವಾಗ ನೀರಿನ ಬಾಟಲಿ, ಕ್ಯಾಮರಾ ಮತ್ತು ಮೇಲೆ ತಿಳಿಸಲಾದ ಇತರ ಶೌಚಾಲಯ ವಸ್ತುಗಳನ್ನು ಇರಿಸಿಕೊಳ್ಳಲು ಸಣ್ಣ ಬ್ಯಾಗ್ ಒಯ್ಯಿರಿ.
24. ಟ್ರಾವೆಲ್ ಪ್ರಿಯರು ಪ್ಯಾನ್ ಕಾರ್ಡ್, ವಿದ್ಯಾರ್ಥಿ ಐಡಿ, ಆಫೀಸ್ ಐಡಿ, ಪಾಸ್‌ಪೋರ್ಟ್ ಮತ್ತು ಇತರೆ ದಾಖಲೆಗಳನ್ನು ಒಯ್ಯಿರಿ.
25. ಒಂದು ಟಾರ್ಚ್ ನಿಮ್ಮ ಟ್ರಾವೆಲ್ ಗೆ ಹೆಚ್ಚು ಪ್ರಯೋಜನಕಾರಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X