• Follow NativePlanet
Share
Menu
» »ವಿಭಿನ್ನವಾದ ಪ್ರಸಾದಗಳನ್ನು ನೀಡುವ ಭಾರತದ ದೇವಾಲಯಗಳು

ವಿಭಿನ್ನವಾದ ಪ್ರಸಾದಗಳನ್ನು ನೀಡುವ ಭಾರತದ ದೇವಾಲಯಗಳು

Written By:

ಪ್ರಸಾದಗಳು ನಮ್ಮ ಭಾರತ ದೇಶದಲ್ಲಿನ ದೇವಾಲಯಗಳಲ್ಲಿ ಅತ್ಯಂತ ಮಹತ್ವವನ್ನು ಪಡೆದಿದೆ. ದೇವರಿಗೆ ಅಹಾರವನ್ನು ಸಮರ್ಪಣೆ ಮಾಡಿಯೇ ನಂತರ ಭಕ್ತರು ಆ ಆಹಾರವನ್ನು ಸೇವಿಸುತ್ತಾರೆ. ಅನ್ನದ ದೇವತೆಯಾದ ಅನ್ನಪೂರ್ಣೆಯು ನಮ್ಮ ಮನೆಯಲ್ಲಿ ಎಂದಿಗೂ ನೆಲೆಸಿರಲಿ ಎಂದು ಪ್ರಸಾದದ ರೂಪದಲ್ಲಿ ಭಕ್ತರಿಗೆ ಹಂಚುತ್ತಾರೆ.

ಸಾಮಾನ್ಯವಾಗಿ ಮನೆಯಲ್ಲಿ ಮಾಡಿದ ಅದೇ ಆಹಾರಕ್ಕೂ, ದೇವರ ಮುಂದೆ ಇಟ್ಟು ತಿನ್ನುವ ಆಹಾರಕ್ಕೂ ಕೆಲವು ವ್ಯತ್ಯಾಸಗಳು ಇರುತ್ತವೆ. ದೇವರು ಬಂದು ತಿನ್ನತ್ತಾನೆಯೊ, ಬಿಡುತ್ತಾನೆಯೊ ಅದು ಬೇರೆ ಮಾತು. ಇದೊಂದು ಆಧ್ಯಾತ್ಮಿಕವಾದ ನಂಬಿಕೆಯೇ ಆಗಿದೆ. ವಿಭಿನ್ನವಾದ ಪ್ರಸಾದಗಳನ್ನು ನೀಡುವ ದೇವಾಲಯಗಳು ಕೂಡ ಪ್ರಸಿದ್ಧಿಯಲ್ಲಿವೆ.

ನಮ್ಮ ದೇಶದಲ್ಲಿನ ಕೆಲವು ದೇವಾಲಯಗಳಲ್ಲಿ ವಿಭಿನ್ನವಾದ ಪ್ರಸಾದಗಳನ್ನು ನೀಡುತ್ತಾರೆ. ಅದು ಯಾವ ದೇವಾಲಯ? ಯಾವ ಪ್ರಸಾದ ನೀಡುತ್ತಾರೆ? ಅದು ಎಲ್ಲಿದೆ? ಎಂಬ ಹಲವಾರು ಪ್ರೆಶ್ನೆಗೆ ಉತ್ತರ ಲೇಖನದ ಮೂಲಕ ಪಡೆಯಿರಿ.

ಕಾಳಭೈರವ ದೇವಾಲಯ,ಉಜ್ಜೈನಿ

ಕಾಳಭೈರವ ದೇವಾಲಯ,ಉಜ್ಜೈನಿ

ಕಾಳಭೈರವ ದೇವಾಲಯವು ಮಧ್ಯ ಪ್ರದೇಶದಲ್ಲಿನ ಉಜ್ಜೈನಿಯಲ್ಲಿದೆ. ಈ ದೇವಾಲಯವು ನಗರದ ರಕ್ಷಕ ದೇವತೆಯಾದ ಕಾಳ ಭೈರವನಿಗೆ ಅರ್ಪಿತವಾದ ದೇವಾಲಯವಾಗಿದೆ. ಇಲ್ಲಿ ಕಾಳ ಭೈರವನಿಗೆ ಮದ್ಯವನ್ನು ನೈವೇದ್ಯವಾಗಿ ಸಮರ್ಪಿಸುತ್ತಾರೆ. ಆಶ್ಚರ್ಯ ಏನಪ್ಪ ಎಂದರೆ ಇಲ್ಲಿ ಕಾಳಬೈರವನು ಭಕ್ತರು ತಂದಿರುವ ಮದ್ಯವನ್ನು ಸೇವಿಸುವುದು. ತದನಂತರ ಉಳಿದ ಮದ್ಯವನ್ನು ಭಕ್ತರಿಗೆ ಪ್ರಸಾದವಾಗಿ ನೀಡುವುದು. ಇಲ್ಲಿನ ಪ್ರಸಾದ ಯಾವುದು ಎಂದರೆ ಮದ್ಯವೇ ಅಗಿದೆ.


Andrew Mason

ಚೀನಿ ಕಾಳಿ ದೇವಾಲಯ, ಕೋಲ್ಕತ್ತಾ

ಚೀನಿ ಕಾಳಿ ದೇವಾಲಯ, ಕೋಲ್ಕತ್ತಾ

ಚೀನಿಯರು ಸಹ ಕಾಳಿ ದೇವತೆಯನ್ನು ಆರಾಧಿಸುತ್ತಾರೆ. ಕೋಲ್ಕತ್ತಾಗೆ ವಲಸೆ ಬಂದ ಚೀನಿಯರು ಈ ಕಾಳಿ ದೇವಿಯ ದೇವಾಲಯವನ್ನು ನಿರ್ಮಾಣ ಮಾಡಿದರು. ಈ ವಿಶೇಷವಾದ ದೇವಾಲಯವು ಕೋಲ್ಕತ್ತಾದ ತಂಗ್ರಾ ಪ್ರದೇಶದಲ್ಲಿದೆ. ಇದನ್ನು ಭಾರತದ "ಚೈನಾ ಟೌನ್" ಎಂದೂ ಸಹ ಕರೆಯುತ್ತಾರೆ. ಈ ದೇವಾಲಯದಲ್ಲಿ ನೀವು ಎಂದೂ ಊಹಿಸಲಾಗದ ಪ್ರಸಾದವನ್ನು ನೀಡುತ್ತಾರೆ. ಅದೆನೂ ಎಂದು ಕೇಳುತ್ತಿದ್ದೀರಾ? ಅದೇ ನೂಡಲ್ಸ್.....

Lablascovegmenu

ಮಹಾದೇವ ದೇವಾಲಯ, ತ್ರಿಶ್ಯುರ್

ಮಹಾದೇವ ದೇವಾಲಯ, ತ್ರಿಶ್ಯುರ್

ಮಹಾದೇವ ದೇವಾಲಯವು ತ್ರಿಶ್ಯುರ್ ಜಿಲ್ಲೆಯ ಮಜುವಾಂಚೇರಿ ಎಂಬ ಸಣ್ಣದಾದ ಹಳ್ಳಿಯಲ್ಲಿದೆ. ಈ ದೇವಾಲಯದ ಪ್ರಸಾದ ಬೇರೆಲ್ಲಾ ದೇವಾಲಯಗಳಿಗಿಂತ ಅತ್ಯಂತ ವಿಭಿನ್ನವಾದುದು. ಅದೆನೂ ಗೊತ್ತ? ಈ ದೇವಾಲಯದ ಪ್ರಸಾದವಾಗಿ ಭಕ್ತರಿಗೆ ಪುಸ್ತಕಗಳು, ಸಿಡಿಗಳು, ಕೈಪಿಡಿಗಳು ಇತ್ಯಾದಿಗಳನ್ನು ನೀಡುತ್ತಾರೆ. ಈ ಬಗ್ಗೆ ದೇವಾಲಯದ ಅಧಿಕಾರಿಗಳು ಜ್ಞಾನ ಮತ್ತು ಬುದ್ಧಿವಂತಿಕೆಯನ್ನು ನೀಡುವುದೇ ಅತ್ಯಂತ ದೊಡ್ಡದಾದ ಪ್ರಸಾದ ಎಂದು ನಂಬುತ್ತಾರೆ.


Pedro Alonso

ಮುರುಗನ್ ದೇವಾಲಯ, ಪಳನಿ

ಮುರುಗನ್ ದೇವಾಲಯ, ಪಳನಿ

ಇದೊಂದು ಪ್ರಸಿದ್ಧವಾದ ದೇವಾಲಯವಾಗಿದ್ದು, ಇಲ್ಲಿನ ಪ್ರಸಾದವನ್ನು ಪಂಚಾಮೃತ ಎಂದು ಕರೆಯುತ್ತಾರೆ. ಇದನ್ನು 5 ಹಣ್ಣುಗಳು, ಬೆಲ್ಲ ಮತ್ತು ಸಕ್ಕರೆಗಳನ್ನು ಬಳಸಿ ಪ್ರಸಾದವನ್ನು ತಯಾರಿಸಲಾಗುತ್ತದೆ. ಈ ಪ್ರಸಾದವು ಭಕ್ತರಲ್ಲಿ ಹೆಚ್ಚು ಜನಪ್ರಿಯವಾಗಿದ್ದು ಪ್ರತ್ಯೇಕವಾದ ಉತ್ಪಾದಾನಾ ಘಟಕವನ್ನೇ ತೆರೆದಿದೆ. ಭಾರತದಲ್ಲಿ ಈ ದೇವಾಲಯವನ್ನು ಭೇಟಿ ನೀಡಿದಾಗ ಒಮ್ಮೆ ಸಿಹಿ, ರುಚಿಕರವಾದ ಮತ್ತು ಅನನ್ಯವಾದ ಪ್ರಸಾದವನ್ನು ಆನಂದಿಸಿ.

U.S. Department of Agriculture

ಶಬರಿಮಲೆ, ಪಥನಂತಿಟ್ಟಾ

ಶಬರಿಮಲೆ, ಪಥನಂತಿಟ್ಟಾ

ಕೇರಳದ ಪಥನಂತಿಟ್ಟ ಸಮೀಪದಲ್ಲಿರುವ ಶಬರಿಮಲೆ ಅಯ್ಯಪ್ಪ ದೇವಾಲಯವು ರುಚಿಕರವಾದ ಪ್ರಸಾದಕ್ಕೆ ಹೆಸರುವಾಸಿಯಾಗಿದೆ. ಇಲ್ಲಿನ ಅನನ್ಯವಾದ ಪ್ರಸಾದಕ್ಕೆ "ಅಪಾಮ್" ಮತ್ತು "ಅರವನ ಪಾಸಾಮ್" ಎಂದು ಕರೆಯುತ್ತಾರೆ. ಈ ದೇವಾಲಯದ ಪ್ರಸಾದವು ಇತರ ದೇವಾಲಯದಲ್ಲಿ ನೀಡಲಾಗುವ ಪ್ರಸಾದಗಳಿಗಿಂತ ಭಿನ್ನವಾಗಿರುತ್ತದೆ.

ಮಾ ವೈಷ್ಣವಿ ದೇವಿ ದೇವಾಲಯ, ಜಮ್ಮು ಮತ್ತು ಕಾಶ್ಮೀರ

ಮಾ ವೈಷ್ಣವಿ ದೇವಿ ದೇವಾಲಯ, ಜಮ್ಮು ಮತ್ತು ಕಾಶ್ಮೀರ

ಜಮ್ಮು ಮತ್ತು ಕಾಶ್ಮೀರ ಕತ್ರಾದಲ್ಲಿದೆ. ಮಾ ವೈಷ್ಣವಿ ದೇವಿ ದೇವಾಲಯ ಅತ್ಯಂತ ಪ್ರಸಿದ್ಧವಾದ ದೇವಾಲಯಗಳಲ್ಲಿ ಇದು ಕೂಡ ಒಂದಾಗಿದೆ. ಇಲ್ಲಿನ ಪ್ರಸಾದ ಬೇರೆ ದೇವಾಲಯಗಳಿಗಿಂತ ಭಿನ್ನವಾಗಿದ್ದು, ಹೆಸರುವಾಸಿಯಾಗಿದೆ. ದೇವಾಲಯದ ಸಮೀಪದಲ್ಲಿನ ಅಂಗಡಿಗಳಿಂದ ಪ್ರಸಾದವನ್ನು ಖರೀದಿಸಬಹುದು. ಅಲ್ಲಿ ಅಚ್ಚರಿಸಿದ ಅಕ್ಕಿ, ಸಕ್ಕರೆ ಚೆಂಡುಗಳು, ಒಣ ಸೇಬುಗಳು, ಒಣ ತೆಂಗಿನಕಾಯಿ ಇತ್ಯಾದಿಗಳನ್ನು ಒಳಗೊಂಡಿರುತ್ತದೆ.

ತಿರುಪತಿ ವೆಂಕಟೇಶ್ವರ ದೇವಾಲಯ, ತಿರುಪತಿ

ತಿರುಪತಿ ವೆಂಕಟೇಶ್ವರ ದೇವಾಲಯ, ತಿರುಪತಿ

ಯಾವುದೇ ದೇವಾಲಯದ ಪ್ರಸಾದ ಮರೆತರು ತಿರುಪತಿ ತಿಮ್ಮಪ್ಪನ ಪ್ರಸಾದವನ್ನು ಮಾತ್ರ ಯಾರು ಸಹ ಮರೆಯುವುದಿಲ್ಲ. ಅಷ್ಟು ರುಚಿ ರುಚಿಯಾದ ಲಡ್ಡು ಇಲ್ಲಿ ದೊರೆಯುತ್ತದೆ. ಮುಖ್ಯವಾಗಿ ತಿರುಪತಿ ಲಡ್ಡುವಿಗೆ ತಿರುಪತಿ ಹೆಸರುವಾಸಿ ಎಂದೇ ಹೇಳಬಹುದು. ದೇವಾಲಯದಿಂದ ಘಮ-ಘಮಿಸುವ ಲಡ್ಡುಗಳನ್ನು ಖರೀದಿಸಬಹುದು. ಈ ದೇವಾಲಯವು ಭಾರತ ಅತ್ಯಂತ ಶ್ರೀಮಂತ ದೇವಾಲಯಗಳಲ್ಲಿ ಒಂದಾಗಿದೆ. ಈ ದೇವಾಲಯದ ಆದಾಯವೇ ಪ್ರಮುಖ ಮೂಲವಾಗಿದೆ.

ಶ್ರೀ ಕೃಷ್ಣ ದೇವಾಲಯ, ಅಂಬಲಪುಳಾ

ಶ್ರೀ ಕೃಷ್ಣ ದೇವಾಲಯ, ಅಂಬಲಪುಳಾ

ಕೇರಳದ ಅಲೆಪ್ಪುಳ ಜಿಲ್ಲೆಯಲ್ಲಿದೆ ಈ ಕೃಷ್ಣನ ಮಾಹಿಮಾನ್ವಿತವಾದ ದೇವಾಲಯ. ಈ ಅಂಬಲಾಪುಳಾ ದೇವಾಲಯವು ಅತ್ಯಂತ ಜನಪ್ರಿಯವಾದ ದೇವಾಲಯಗಳಲ್ಲಿ ಒಂದಾಗಿದೆ. ಈ ದೇವಾಲಯದಲ್ಲಿ ಅಕ್ಕಿ, ಹಾಲು ಮತ್ತು ಸಕ್ಕರೆಗಳನ್ನು ಹಾಕಿ ತಯಾರಿಸಿದ ರುಚಿಯಾದ ಆಹಾರವನ್ನು ಇಲ್ಲಿ ಪ್ರಸಾದವಾಗಿ ನೀಡುತ್ತಾರೆ.

Vrindavan Lila

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ