Search
  • Follow NativePlanet
Share
ಮುಖಪುಟ » ಸ್ಥಳಗಳು » ಶಬರಿಮಲೆ » ಹವಾಮಾನ

ಶಬರಿಮಲೆ ಹವಾಮಾನ

ಶಬರಿಮಲೆ ಸ್ವಚ್ಛವಾದ ವಾತಾವರಣವನ್ನು ಹೊಂದಿದ್ದು ವರ್ಷಪೂರ್ತಿ ಯಾವ ಕಾಲಕ್ಕೂ ಭೇಟಿ ನೀಡಬಹುದು. ಆದರೆ ಶಬರಿಮಲೆಯ ಭೇಟಿಗೆ ಉತ್ತಮವಾದ ಕಾಲವೆಂದರೆ ಸೆಪ್ಟೆಂಬರ್ ನಿಂದ ಏಪ್ರಿಲ್ ತಿಂಗಳು. ಈ ವೇಳೆಯಲ್ಲಿ ಮುಂಗಾರಿನ ನಂತರದ ಮತ್ತು ಪೂರ್ವ ಬೇಸಿಗೆಯ ಹಸಿರು ತುಂಬಿಕೊಂಡಿರುತ್ತದೆ. ನವೆಂಬರ್ 15 ರಿಂದ ಡಿಸೆಂಬರ್ 26 ರವರೆಗೆ ದೇವಸ್ಥಾನದ ಬಾಗಿಲೂ ಇಡೀ ದಿನವೂ ತೆರೆದಿರುತ್ತದೆ.

ಬೇಸಿಗೆಗಾಲ

ಶಬರಿಮಲೆಯಲ್ಲಿ ಮಾರ್ಚ್ ತಿಂಗಳಿನಿಂದ ಶುರುವಾದ ಬೇಸಿಗೆ ಕಾಲ ಮೇ ತಿಂಗಳ ಕೊನೆಯ ವಾರದವರೆಗೂ ಇರುತ್ತದೆ. ಬೇಸಿಗೆಯಲ್ಲಿ ಶಬರಿಮಲೆಯಲ್ಲಿ ಒಣ ಹವೆಯಿದ್ದು ವಾತಾವರಣದ ಬಿಸಿ 34 ಡಿಗ್ರಿಗಳಷ್ಟು ಏರಿಕೆ ಕಾಣುತ್ತದೆ. ಬೇಸಿಗೆ ಸಂಪೂರ್ಣ ಒಣಹವೆ ಮತ್ತು ಬಿಸಿಯನ್ನು ಹೊಂದಿದ್ದು ಸಹಿಸಲು ಸಾಧ್ಯವಿಲ್ಲ.

ಮಳೆಗಾಲ

ಜೂನ್ ತಿಂಗಳಿನಿಂದ ಸೆಪ್ಟೆಂಬರ್ ತಿಂಗಳವರೆಗೆ ಶಬರಿಮಲೆಯಲ್ಲಿ ಮಳೆಯ ಹನಿಗಳು ಕರುಣೆ ತೋರುತ್ತವೆ. ಹಸಿರು ಹೊದ್ದ ಪರ್ವತ ರಾಶಿಗಳನ್ನು ಮತ್ತು ಬೆಟ್ಟಗಳನ್ನು ಮುತ್ತಿಕ್ಕುವ ಮಳೆಯ ಸೌಂದರ್ಯವನ್ನು ಸೆರೆ ಹಿಡಿಯಲು ಈ ಕಾಲದಲ್ಲಿ ಶಬರಿಮಲೆಗೆ ಬರಬೇಕು. ಶಬರಿಮಲೆ ಅತಿಯಾದ ಮಳೆಯ ಕೃಪೆ ಹೊಂದಿದ್ದು ಇಡೀ ವಾತಾವರಣ ಸ್ವರ್ಗದಂತೆ ಭಾಸವಾಗುತ್ತದೆ.

ಚಳಿಗಾಲ

ಶಬರಿಮಲೆಯಲ್ಲಿ ನವೆಂಬರ್ ನಲ್ಲಿ ಚಳಿಗಾಲದ ರಾಯಭಾರಿಯ ಆಗಮನವಾಗುತ್ತದೆ ಮತ್ತು ಫೇಬ್ರವರಿಯ ಹೊತ್ತಿಗೆ ಚಳಿಗಾಲ ಅಂತ್ಯಗೊಳ್ಳುತ್ತದೆ. ಈ ಕಾಲದಲ್ಲಿ ವಾತಾವರಣ ಮನೋಹರವಾಗಿರುತ್ತದೆ. ಶಬರಿಮಲೆಯ ಪ್ರಮುಖ ಹಬ್ಬಗಳು ಈ ಕಾಲದಲ್ಲಿ ನಡೆಯುತ್ತವೆ. ಹೀಗಾಗಿ ಚಳಿಗಾಲ ಶಬರಿಮಲೆಗೆ ಬರಲು ಸೂಕ್ತವಾದ ಸಮಯ. ಚಳಿಗಾಲದಲ್ಲಿ ವಾತಾವರಣದ ಬಿಸಿ ಗರಿಷ್ಠ 32 ಡಿಗ್ರಯಷ್ಟಾಗುತ್ತದೆ ಮತ್ತು 17 ಡಿಗ್ರಿಯಷ್ಟು ಕುಸಿಯುತ್ತದೆ.