Search
  • Follow NativePlanet
Share
» »ದೇವಸ್ಥಾನದಲ್ಲಿ ಮದುವೆಯಾಗಬೇಕೆಂದಿದ್ದೀರಾ? ಹಾಗಾದ್ರೆ ಯಾವ ದೇವಸ್ಥಾನದಲ್ಲಿ ಮದವೆಯಾಗ್ತೀರಾ?

ದೇವಸ್ಥಾನದಲ್ಲಿ ಮದುವೆಯಾಗಬೇಕೆಂದಿದ್ದೀರಾ? ಹಾಗಾದ್ರೆ ಯಾವ ದೇವಸ್ಥಾನದಲ್ಲಿ ಮದವೆಯಾಗ್ತೀರಾ?

ಮದುವೆ ಅನ್ನೋದು ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗ, ಕೆಲವರು ಮದುವೆ ಮಂಟಪದಲ್ಲಿ ಮದುವೆಯಾದರೆ, ಇನ್ನೂ ಕೆಲವರು ದೇವಸ್ಥಾನದಲ್ಲಿ ಮದುವೆಯಾಗೋದನ್ನು ನೀವು ನೋಡಿರುವಿರಿ. ಅದ್ದೂರಿ, ಆಡಂಭರವನ್ನು ಅನೇಕರು ಇಷ್ಟ ಪಡೋದಿಲ್ಲ. ಹಾಗಾಗಿ ಆಧ್ಯಾತ್ಮಿಕ ತಾಣಗಳಾದ ಮಂದಿರಗಳಲ್ಲಿ ಸಿಂಪಲ್ ಆಗಿ ಮದುವೆಯಾಗಲು ಇಚ್ಛಿಸುತ್ತಾರೆ. ದೇವರ ಸನ್ನಿಧಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲು ಬಯಸುತ್ತಾರೆ. ದೇವಸ್ಥಾನದಲ್ಲಿ ವಿವಾಹವಾದರೆ ಒಳ್ಳೆಯದು ಎನ್ನುತ್ತಾರೆ. ಅಂತಹದ್ದೇ ಒಂದು ವಿಶೇಷ ದೇವಸ್ಥಾನದ ಬಗ್ಗೆ ಇಂದು ನಾವು ಹೇಳ ಹೊರಟಿದ್ದೇವೆ. ನೀವು ಕೂಡಾ ದೇವಸ್ಥಾನದಲ್ಲಿ ಮದುವೆಯಾಗಬೇಕೆಂಬ ಆಸೆಯನ್ನು ಹೊಂದಿದ್ದರೆ ಈ ದೇವಸ್ಥಾನಗಳನ್ನು ಮರೆಯುವಂತಿಲ್ಲ.

ಗುರುವಾಯೂರು ದೇವಸ್ಥಾನ, ಕೇರಳ

ಗುರುವಾಯೂರು ದೇವಸ್ಥಾನ, ಕೇರಳ

PC:Kuttix
ಕೇರಳದ ಗುರುವಾಯೂರಿನಲ್ಲಿರುವ ಗುರುವಾಯೂರಪ್ಪ ದೇವಾಲಯವು ಮದುವೆ ಕಾರ್ಯಗಳಿಗೆ ಬಹಳ ಶುಭ ಎನ್ನಲಾಗುತ್ತದೆ. ಹಾಗಾಗಿ ಅಲ್ಲಿ ಪ್ರತಿದಿನ ಸಾಕಷ್ಟು ಮದುವೆಗಳು ನಡೆಯುತ್ತವೆ. ಸಾಕಷ್ಟು ಸೆಲೆಬ್ರಿಟಿಗಳು ಇಲ್ಲಿ ಮದುವೆಯಾಗುತ್ತಾರೆ. ಇಲ್ಲಿ ವಿವಾಹವಾದರೆ ಒಳ್ಳೆಯದು ಅವರ ಸಂಬಂಧ ಗಟ್ಟಿಯಾಗಿರುತ್ತದೆ ಎನ್ನುವ ಅಭಿಪ್ರಾಯ ಜನರದ್ದು, ಇಲ್ಲಿ ಶ್ರೀಕೃಷ್ಣನು ಗುರುವಾಯೂರಪ್ಪ ಎನ್ನುವ ಹೆಸರಿನಲ್ಲಿ ಪೂಜಿಸಲ್ಪಡುತ್ತಾನೆ. ಕೇರಳದ ತ್ರಿಶೂರ್ ಜಿಲ್ಲೆಯಿಂದ 30 ಕಿ.ಮೀ ದೂರದಲ್ಲಿ ಈ ದೇವಸ್ಥಾನವಿದೆ.

ದೆಹಲಿಯ ಇಸ್ಕಾನ್ ಟೆಂಪಲ್

ದೆಹಲಿಯ ಇಸ್ಕಾನ್ ಟೆಂಪಲ್

PC:GourangaUK
ಇಸ್ಕಾನ್ ಟೆಂಪಲ್ ರಾಧಾ ಪಾರ್ಥಸಾರಥಿ ಮಂದಿರ ಎಂದೂ ಕರೆಯಲಾಗುತ್ತದೆ. ಈ ದೇವಸ್ಥಾನದಲ್ಲಿ ರಾಮ, ಸೀತಾ, ಕೃಷ್ಣ, ಹಾಗೂ ರಾಧಾ ವಿರಾಜಮಾನರಾಗಿದ್ದಾರೆ. ಹರೇ ಕೃಷ್ಣ ಬೆಟ್ಟದ ಮೇಲೆ ಇರುವ ಈ ದೇವಸ್ಥಾನವು 90 ಅಡಿ ಎತ್ತರದಲ್ಲಿದೆ. ಈ ದೇವಾಲಯದ ಗೋಡೆಗಳಲ್ಲಿ ಕೃಷ್ಣನ ಚಿತ್ರಗಳನ್ನು ಅಳವಡಿಸಲಾಗಿದೆ. ಈ ಸ್ಥಳವು ವಿವಾಹದಂತಹ ಕಾರ್ಯಕ್ಕೆ ಸೂಕ್ತವಾಗಿದೆ. ಇಲ್ಲಿನ ವಾತಾವರಣವು ಆಧ್ಯಾತ್ಮಿಕತೆಯ ಭಾವವನ್ನು ಮೂಡಿಸುತ್ತದೆ. ಈ ದೇವಸ್ಥಾನವು ದೆಹಲಿಯ ಸಂತ ನಗರ ಮೈನ್‌ ರೋಡ್‌, ಹರೇ ಕೃಷ್ಣ , ಈಸ್ಟ್ ಆಫ್ ಕೈಲಾಶದಲ್ಲಿದೆ.

ತ್ರಿಯುಗಿನಾರಾಯಣ ಮಂದಿರ, ಉತ್ತರಖಂಡ

ತ್ರಿಯುಗಿನಾರಾಯಣ ಮಂದಿರ, ಉತ್ತರಖಂಡ

PC:Shaq774
ಈ ಮಂದಿರದ ವಿಶೇಷತೆ ಏನೆಂದರೆ ಈ ಮಂದಿರದಲ್ಲಿ ಸಾಕ್ಷಾತ್ ಶಿವ-ಪಾರ್ವತಿ ಮದುವೆಯಾಗಿದ್ದಾರಂತೆ. ಈಗ ಇಲ್ಲಿ ಮದುವೆಗಳನ್ನು ನಡೆಸಲಾಗುತ್ತದೆ. ಇಲ್ಲಿ ಮದುವೆಯಾಗುವ ಜೋಡಿಗಳು ಜೀವನ ಚೆನ್ನಾಗಿರುತ್ತದಂತೆ. ಶಿವ-ಪಾರ್ವತಿಯರ ವಿವಾಹ ಇಲ್ಲಿ ನಡೆದಿತ್ತು ಎನ್ನುವುದಕ್ಕೆ ಸಾಕ್ಷ್ಯಾಧಾರಗಳು ಇಂದಿಗೂ ಇಲ್ಲಿವೆಯಂತೆ. ಉತ್ತರಖಂಡದ ರುದ್ರಪ್ರಯಾಗ್ ಜಿಲ್ಲೆಯಲ್ಲಿ ತ್ರಿಯುಗಿನಾರಾಯಣ ಮಂದಿರವಿದೆ. ವಿಷ್ಣು ಹಾಗೂ ಲಕ್ಷ್ಮೀ ದೇವಿಯ ಈ ಮಂದಿರವನ್ನು ಶಿವ-ಪಾರ್ವತಿಯ ಮದುವೆಯಾದ ಮಂದಿರವೆಂದೇ ಪ್ರಸಿದ್ಧಿ ಪಡೆದಿದೆ.

ತಿರುಮಲ ದೇವಸ್ಥಾನ, ಆಂಧ್ರಪ್ರದೇಶ

ತಿರುಮಲ ದೇವಸ್ಥಾನ, ಆಂಧ್ರಪ್ರದೇಶ

PC:Adiseshkashyap
ತಿರುಮಲ ದೇವಸ್ಥಾನವು ತನ್ನ ಶ್ರೀಮಂತಿಕೆಯಿಂದಾಗಿ ಇಡೀ ವಿಶ್ವದಲ್ಲೇ ಪ್ರಸಿದ್ಧಿ ಪಡೆದಿದೆ. ಇಡೀ ವಿಶ್ವದ ಜನರು ಇಲ್ಲಿಗೆ ಪ್ರಾರ್ಥಿಸಲು ಬರುತ್ತಾರೆ. ಯಾವುದೋ ಫೈವ್‌ ಸ್ಟಾರ್‌ ಹೋಟೇಲ್‌ಗಳಲ್ಲಿ ಅದ್ದೂರಿಯಾಗಿ ಮದುವೆಯಾಗುವುದಕ್ಕಿಂತಹ ಇಂತಹ ಆಧ್ಯಾತ್ಮಿಕ ತಾಣದಲ್ಲಿ ಮದುವೆಯಾಗುವುದು ಸೂಕ್ತ. ಆಂದ್ರಪ್ರದೇಶದ ತಿರುಪತಿಯಲ್ಲಿರುವ ಈ ದೇವಸ್ಥಾನದಲ್ಲಿ ಪ್ರತೀ ವರ್ಷ ಸಾಕಷ್ಟು ಮದುವೆಗಳು ನಡೆಯುತ್ತಲೇ ಇರುತ್ತವೆ.

ಮಾತಂಗೇಶ್ವರ ಮಂದಿರ, ಮಧ್ಯಪ್ರದೇಶ

ಮಾತಂಗೇಶ್ವರ ಮಂದಿರ, ಮಧ್ಯಪ್ರದೇಶ

PC: Itsmalay
ಈ ಮಂದಿರವು ಶಿವನಿಗೆ ಸಮರ್ಪಿತವಾದದ್ದು. ಮಾತಂಗೇಶ್ವರ ಮಂದಿರದಲ್ಲಿ ಮದುವೆಯಾಗುವುದೆಂದರೆ ಸಾವಿರಾರು ಹಿಂದಿನ ಇತಿಹಾಸವನ್ನು ಹೊಂದಿರುವ ಈ ದೇವಸ್ಥಾನದ ಪಂಥಗಳನ್ನು ಅಳವಡಿಸಿಕೊಳ್ಳುವುದು ಹಾಗೂ ಅದನ್ನು ಪಾಲನೆ ಮಾಡಿಕೊಂಡು ಹೋಗುವುದು ಎಂದರ್ಥ.

ಪುರಿ, ಒರಿಸ್ಸಾ

ಪುರಿ, ಒರಿಸ್ಸಾ

PC: Sourav.1.maity
ಒರಿಸ್ಸಾದಲ್ಲಿರುವ ಇತಿಹಾಸ ಪ್ರಸಿದ್ಧ ಜಗನ್ನಾಥ ಪುರಿ ದೇವಸ್ಥಾನದಲ್ಲಿ ಸಾಕಷ್ಟು ಮಂದಿ ತಮ್ಮ ವೈವಾಹಿಕ ಜೀವನವನ್ನು ಆರಂಭಿಸುತ್ತಾರೆ.ಈ ಪುಣ್ಯ ಕ್ಷೇತ್ರದ ದರ್ಶನ ಪಡೆಯದಿದ್ದರೆ ತೀರ್ಥಯಾತ್ರೆಗಳು ಪೂರ್ಣಗೊಳ್ಳುವುದಿಲ್ಲ ಎಂಬ ಪ್ರತೀತಿ ಇದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X